ಕೋಲಾರ: ಗ್ರಾಮೀಣ ಪ್ರತಿಭೆಗಳಿಗೆ ಪ್ರೋತ್ಸಾಹ ಹಾಗೂ ಆರ್ಥಿಕ ಸಹಕಾರದಿಂದ ಉತ್ತಮ ಸಾಧನೆ ನಿರೀಕ್ಷಿಸಬಹುದು=ಜಯರಾಮ್

Source: shabbir | By Arshad Koppa | Published on 5th August 2017, 1:52 PM | State News | Guest Editorial |

ರಾಯಲ್ಪಾಡು  : ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪಠ್ಯ ಹಾಗು ಪಠ್ಯೇತರ ಚಟುವಟಿಕೆಗಳಲ್ಲಿ ನಗರ ಪ್ರದೇಶದ ವಿದ್ಯಾರ್ಥಿಗಳಿಗಿಂತ ಹೆಚ್ಚಿನ ಪ್ರತಿಭೆಗಳಿದ್ದು ಅವರಿಗೆ ಪ್ರೋತ್ಸಾಹ ಹಾಗು ಅರ್ಥಿಕವಾಗಿ ಸಹಕರಿಸಿದರೆ ಅತ್ಯುತ್ತಮ ಸಾಧನೆಯನ್ನು ಸಾಧಿಸಲು ಸಾಧ್ಯ ಎಂದು ಬೆಂಗಳೂರಿನ ರಾಮನಾಗ್ ಪೌಡೇಶನ್‍ನ ಮುಖ್ಯಸ್ಥ ಎನ್.ಜಯರಾಮ್ ತಿಳಿಸಿದರು.
ರಾಯಲ್ಪಾಡಿನ ಪ್ರೌಡಶಾಲೆಯ ವಿದ್ಯಾರ್ಥಿಗಳಿಗೆ ಮೌಲ್ಯ ಶಿಕ್ಷಣದ ಬಗ್ಗೆ ಮಾಹಿತಿಯನ್ನು ನೀಡಿ ಮಾತನಾಡಿದರು.
ವಿದ್ಯಾರ್ಥಿಯ ಜೀವನ ತನ್ನ ಗುರಿ ಕಡೆಗೆ ಇರಬೇಕು . ಇಟ್ಟುಕೊಂಡ ಗುರಿ ತಲುಪಲು ನಿರಂತರ ಪ್ರಯತ್ನ  ಮತ್ತು ಶ್ರದ್ದೆ , ಭಕ್ತಿಯಿಂದ ಅಧ್ಯಯನ ಮಾಡಬೇಕು . ಆಗ ಮಾತ್ರ ತಾನು ಅಂದುಕೊಂಡದ್ದನ್ನು ಸಾಧಿಸಬಹದು . ಇಲ್ಲದಿದ್ದರೆ ಯಾವುದನ್ನು ಸಾಧಿಸಲು ಸಾಧ್ಯವಾಗದು . ಆದ್ದರಿಂದ ವಿದ್ಯಾರ್ಥಿಯು ಇಂದಿನ ಸ್ಫರ್ಧಾತ್ಮಕ ಜೀವನದ ಮೌಲ್ಯ ಅಥೈಸಿಕೊಂಡಾಗ ಮತ್ತು ಅವನು ನಿಜವಾದ ವಿದ್ಯಾರ್ಥಿಯಾಗುತ್ತಾನೆ ಎಂದು ತಿಳಿಸಿದರು. 
ಹತ್ತನೇ ತರಗತಿಯ ವಿದ್ಯಾರ್ಥಿಗಳು ಪ್ರಾರಂಭದ ದಿನಗಳಿಂದಲೇ ವಿದ್ಯಾರ್ಥಿಗಳ ಮದ್ಯೆ ಸ್ಫರ್ದೆ ಏರ್ಪಟ್ಟು ಉತ್ತಮ ಸಾದನೆಯನ್ನು ಸಾದಿಸುವ ಸಲುವಾಗಿ ಮದ್ಯವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಹಣವನ್ನು ನೀಡುವುದಾಗಿ ಭರವಸೆ ನೀಡಿದರು.
ಈ ಸಮಯದಲ್ಲಿ ಶಾಲೆಯ ಮುಖ್ಯಶಿಕ್ಷಕ ವಿ.ಆರ್.ಹೊನ್ನಾಕಟ್ಟಿ, ಉಪನ್ಯಾಸಕರಾದ ಎ.ಎಸ್.ರಾಮಮೂರ್ತಿ, ವಿ.ವೆಂಕಟರಮಣ, ಶಶಿಕುಮಾರ್, ರಾಮಮೂರ್ತಿ, ಶಿಕ್ಷಕರಾದ ದಿನಕರಪ್ಪ, ಅಶೋಕ್, ಜಿ.ಎಸ್.ನಾರಾಯಣಸ್ವಾಮಿ, ಶ್ಯಾಮಲ, ಶ್ರೀಶೈಲಹರವಾರ್, ನರಸಿಂಹಪ್ಪ, ಮಾರಪ್ಪ, ರಾಜೇಶ್ ಇದ್ದರು.

 


ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...