ರಾಯಲ್ಪಾಡು: ಸರ್ಕಾರದಿಂದ ಬಿಡುಗಡೆಯಾಗುವ ಎಲ್ಲಾ ಸವಲತ್ತುಗಳನ್ನು ಸದ್ಭಳಕೆಯ ಏರ್‍ಪಾಡು-ರಮೇಶ್‍ಕುಮಾರ್ ಭರವಸೆ

Source: shabbir ahmed | By Arshad Koppa | Published on 22nd February 2017, 8:17 AM | State News |

ರಾಯಲ್ಪಾಡು ಫೆ ೨೨: ರಾಜ್ಯದ ಗಡಿಭಾಗದಲ್ಲಿರುವ ಮುದಿಮಡುಗು ಪಂಚಾಯಿತಿಯಗೆ ಸರ್ಕಾರದಿಂದ ಬಿಡುಗಡೆಯಾಗುವ ಎಲ್ಲಾ ಸವಲತ್ತುಗಳನ್ನು ಸದ್ಭಳಕೆಗೆ ಬೇಕಾದ ವ್ಯವಸ್ಥೆಮಾಡುವುದಾಗಿ ಉಸ್ತವಾರಿ ಸಚಿವರಾದ ಕೆ.ಆರ್.ರಮೇಶ್‍ಕುಮಾರ್ ಭರವಸೆ ನೀಡಿದರು .
ಮುದಿಮಡುಗು ಚನ್ನರಾಯಸ್ವಾಮಿ ದೇವಾಲಯದ ಆವರಣದಲ್ಲಿ ನಡೆದ ಕುಂದುಕೊರತೆ ಸಭೆಯಲ್ಲಿ ಮಾತನಾಡುತ್ತಾ 
ಗಡಿಭಾಗದಲ್ಲಿರುವ ಈ ಪಂಚಾಯಿತಿ ಬೆಟ್ಟಗುಡ್ಡಗಳಿಂದ ಕೂಡಿದ್ದು , ಅಲ್ಪಸ್ವಲ್ಪ ಬೀಳುವ ಮಳೆಯು ಆಂದ್ರದತ್ತಾ ಹರಿದುಹೋಗುತ್ತಿರುವ ಬಗ್ಗೆ ನಾಗರೀಕರು ಮನವಿ ಸಲ್ಲಿಸಿದಾಗ ಸಮಸ್ಯೆಯನ್ನು ಸ್ವೀಕರಸಿ ಬೆಟ್ಟಗುಡ್ಡಗಳ ತಪ್ಪಲಲ್ಲಿ ಚೆಕ್‍ಡ್ಯಾಂ ನಿರ್ವಹಿಸಲು ಬೇಕಾದ ವ್ಯವಸ್ಥೆ ಮಾಡಿಸಿಕೊಡುವುದಾಗಿ ತಿಳಿಸದರು.
ಬೇಸಿಗೆ ಕಾಲವಾದ್ದರಿಂದ ಕೆಲ ಕಿಡಿಗೇಡಿಗಳು ಅರಣ್ಯ ಬೆಂಕಿಯನ್ನು ಇಡುತ್ತಿದ್ದು , ಅರಣ್ಯ ಇಲಾಖೆಯ ನಿರ್ಲಕ್ಷದಿಂದ ಬೆಟ್ಟದಲ್ಲಿನ ಪ್ರಾಣ ಪಕ್ಷಿಗಳು ಬೆಂಕಿಗೆ ಆಹುತಿಯಾಗುತ್ತಿದೆ ಎಂದು ಇಲಾಖಾಧಿಕಾರಿಗಳ ವಿರುದ್ದ ನಾಗರೀಕರು ಆರೋಪಿಸಿದರು . ಸಭೆಯಲ್ಲಿಯೇ ಇದ್ದ ಅಧಿಕಾರಿಗಳಿಗೆ ಇಂತಹ ಅನಾಹುತಗಳ ಬಗ್ಗೆ ಎಚ್ಚರವರಿಸುವಂತೆ ಎಚ್ಚರಿಸಿದರು .
ಸಚಿವರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಯಾವುದೇ ಕಾರಣಕ್ಕೂ ಔಷದಿಗಳ ಹೊರ ಔಷದಿ ಅಂಗಡಿಗಳಿಗೆ ಚೀಟಿ ಬರೆಯಬಾರದು ಎಂದು ತಿಳಿಸಿದ್ದರೂ , ಚೀಟಿಗಳನ್ನು ಬರೆದುಕೊಡುತ್ತಿದ್ದಾರೆಂದು ನಾಗರೀಕರು ಆರೋಪಿಸಿರುವ ಹಿನ್ನೆಲೆಯಲ್ಲಿ ಔಷದಿಯ ಕೊರತೆಯನ್ನು ಪರಿಹರಿಸುವಂತೆ ಇಲಾಖಾಧಿಕಾರಿಗಳಿಗೆ ತಿಳಿಸಿದರು.
ಹತ್ತನೇ ತರಗತಿ ಪರೀಕ್ಷೆ ಹತ್ತಿರ ಬರುತ್ತಿದ್ದು , ರಾತ್ರಿ ವೇಳೆಯಲ್ಲಿ ಬೆಸ್ಕಾಂ ಇಲಾಖೆಯ ನಿರ್ಲಕ್ಷದಿಂದ ವಿದ್ಯುತ್ ವ್ಯಥಯದಿಂದ ವಿದ್ಯಾರ್ಥಿಗಳು  ಪರದಾಡುವಂತಾಗಿದೆ ಎಂದು ವಿದ್ಯಾರ್ಥಿಗಳ ಪಾಲಕರು ಇಲಾಖಾಧಿಕಾರಿಗಳ ವಿರುದ್ದ ಕಿಡಿಕಾರಿದರು .ಇದಲ್ಲದೆ ಇಲಾಖೆಯ ಬಿಲ್‍ಕಲೆಕ್ಟರ್ ಹೆಚ್ಚಿನ ವಿದ್ಯುತ್ ಬಿಲ್‍ನ್ನು  ವಸೂಲಿಮಾಡುತ್ತಿರುವುದರ ಬಗ್ಗೆಯೂ ನಾಗರೀಕರು ಸಚಿವರ ಗಮನಹರಿಸಿ ಸಮಸ್ಯೆಗಳನ್ನು ಪರಿಹರಿಸಿಕೊಡುವಂತೆ ತಿಳಿಸದರು .
ರಾಯಲ್ಪಾಡಿನಿಂದ ಮುದಿಮಡಗು ಗ್ರಾಮದವರೆಗೂ ಡಾಂಬರು ರಸ್ತೆ ಕಾಮಗಾರಿಗಾಗಿ ಟೆಂಡರ್ ಕರೆದಿದ್ದು ಕೆಲವೆ ದಿನಗಳಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು . ವಿಶೇಷವಾಗಿ ಗ್ರಾಮೀಣ ಮಹಿಳೆಯರ ಕುಟುಂಬಗಳು ಅರ್ಥಿಕವಾಗಿ ಸಭಲರಾಗುವ ನಿಟ್ಟಿನಲ್ಲಿ ಡಿಸಿಸಿ ಬ್ಯಾಂಕ್‍ವತಿಯಿಂದ ಸಾಲವನ್ನು ಕೊಡಿಸುವುದರಿಂದ ಸ್ತ್ರೀಸಂಘಗಳನ್ನು ನಿರ್ಮಿಸಿಕೊಳ್ಳಲು ಮಹಿಳೆಯರಿಗೆ ಮನವಿ ಮಾಡಿದರು .
ಮುದಿಮಡುಗು ಗ್ರಾಮದ ಬಳಿ ಇರುವ ಊರುಮಾದಿಗಪಲ್ಲಿ ಗ್ರಾಮವನ್ನು ಗ್ರಾಮದ ನಾಗರೀಕರ ಒತ್ತಾಯದ ಮೇರೆಗೆ “ರಾಮಪುರ” ಎಂಬ ಹೆಸರನ್ನು ಬದಲಾಯಿಸಿಕೊಡಲು ಸರ್ಕಾರಕ್ಕೆ ಅಧಿಕಾರಿಗಳ ಮುಖಾಂತರ ಮಾಹಿತಿ ರವಾನಿಸಲಾಗುವುದು ಎಂದರು .    
ಪಂಚಾಯಿತಿಗೆ ಸಂಬಂದಿಸಿದ ಎಲ್ಲಾ ಗ್ರಾಮಗಳಲ್ಲಿನ ಮುಖಂಡರು ವಸತಿರಹಿತರಿಗೆ ವಸತಿ ಹಾಗು  ರಸ್ತೆ , ನೀರು ,ಪಡಿತರ ಚೀಟಿ , ಸಮುದಾಯಭವನಗಳ ಬಗ್ಗೆ ತಿಳಿಸಿದ್ದು , ಹಂತಹಂತವಾಗಿ ಕಾರ್ಯ ನಿರ್ವಹಿಸುವುದಾಗಿ ಭರವಸೆ ನೀಡಿದರು.
ಈ ಸಮಯದಲ್ಲಿ ಆರೋಗ್ಯ ಇಲಾಖೆಯ ಸಚಿವರ ಆಪ್ತಕಾರ್ಯದರ್ಶಿಗಳಾದ ಡಾ. ರೂಪಶ್ರೀ , ರಾಯಲ್ಪಾಡು ಜಿ.ಪಂ.ಸದಸ್ಯ ಮ್ಯಾಕಲನಾರಾಯಣಸ್ವಾಮಿ , ಯಲ್ದೂರು ಜಿ.ಪಂ.ಸದಸ್ಯ ಗೋವಿಂದಸ್ವಾಮಿ , ತಹಸಿಲ್ದಾರ್ ವೈ .ರವಿ , ತಾ.ಪಂ. ಅಧ್ಯಕ್ಷೆ ಸುಗುಣರಾಮಚಂದ್ರ , ತಾ .ಪಂ. ಇಓ ಟಿ.ನಾರಾಯಣಸ್ವಾಮಿ , ಗ್ರಾ .ಪಂ ಅಧ್ಯಕ್ಷೆ ವೆಂಕಟನಾಗರತ್ನಮ್ಮ , ಸ್ಥಳೀಯ ಮುಖಂಡರಾದ ರಾಮಸ್ವಾಮಿಶೆಟ್ಟಿ , ಬಗ್ಗಲಘಟ್ಟ ಶ್ರೀನಿವಾಸರೆಡ್ಡಿ , ಲಕ್ಷಣ್ಣ , ಕೃಷ್ಣಾರೆಡ್ಡಿ , ಎಪಿಎಮ್‍ಸಿ ಸದಸ್ಯ ಪೆದ್ದಿರೆಡ್ಡಿ , ಚನ್ನಕೇಶವ , ಅಮರನಾರಾಯಣ ,ಸುದಾಕರ್ , ಅಡ್ಡಗಲ್ ಶ್ರೀನಿವಾಸ್‍ರಾವ್ , ಮಂಜುನಾಥ್ ,ಅಂತ್ರಪ್ಪ , ಗ್ರಾಮಪಂಚಾಯಿತಿ ಸದಸ್ಯರು ಹಾಗು ತಾಲೂಕಿಗೆ ಸಂಬಂದಿಸಿದ 26 ಇಲಾಖೆಯ ಅಧಿಕಾರಿಗಳು ಇದ್ದರು . 

ಶ್ರೀನಿವಾಸಪುರ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಮಾತನಾಡಿದರು.
 
ಪಟ್ಟಣದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ಪಟ್ಟಣದ ಹೃದಯ ಭಾಗದಲ್ಲಿರುವ ಬಸ್‍ನಿಲ್ದಾಣ ಸಾರ್ವಜನಿಕ ಹಿತದೃಷ್ಠಿಯಿಂದ ಇಲ್ಲಿಯೇ ಇರಲಿ ಮತ್ತು ಹೊಸ ಬಸ್ ನಿಲ್ದಾಣ ಅದು ಇರಲಿ. ಹಾಲಿ ಬಸ್‍ನಿಲ್ದಾಣದಲಿ ನಿರ್ಮಿಸಲಾಗುತ್ತಿರುವ ರಂಗಮಂದಿರವನ್ನು ಹಳೆಯ ಸಾರ್ವಜನಿಕ ಆಸ್ಪತ್ರಯ ಒಂದು ಭಾಗದಲ್ಲಿ ನಿರ್ಮಿಸಲಿ ಎಂದು ಹೇಳಿದರು.

ಸರ್ಕಾರದ ಯೋಜನೆಯಾಗಿರುವ ಕೆಸಿ ವ್ಯಾಲಿ ಜಿಲ್ಲೆಯ ಕೆರೆಗಳಿಗೆ ನೀರನ್ನು ಶುದ್ದೀಕರಿಸಿ ಜಿಲ್ಲೆಯ ಕೆರೆಗಳಿಗೆ ಹರಿಸಬೇಕು ಇಲ್ಲದಿದ್ದರೇ ಜಿಲ್ಲೆಯ ಕೆರೆಗಳು ಕಲುಶಿತಗೊಂಡು ನಾಶವಾಗುತ್ತದೆ ಎಂದು ತಿಳಿಸದಿದರು. ಎತ್ತಿನಹೊಳೆ ಯೋಜನೆ ಕಾಮಗಾರಿ ಕೋಟ್ಯಾಂತರ ರೂಗಳಲ್ಲಿ ಸರ್ಕಾರ ಈ ಯೋಜನೆ ಹಮ್ಮಿಕೊಂಡಿದೆ. ಕೇವಲ ಪ್ರಚಾರಕ್ಕೆ ಮಾತ್ರ ಸೀಮಿತವಾಗಿದ್ದು ಸರ್ಕಾರದ ಕೋಟ್ಯಾಂತರ ರೂಗಳು ದುರುಪಯೋಗವಾಗುತ್ತಿದೆ. ಇದರ ವಿರದ್ದ ಸಿಬಿಐ ತನಿಕೆ ನಡೆಸಬೇಕೆಂದು ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಆರ್.ನಾರಾಯಣಸ್ವಾಮಿ, ಮುಖಂಡರಾದ ಗಣೇಶ್, ಶಿವಾರೆಡ್ಡಿ, ಚಿನ್ನಪರೆಡ್ಡಿ, ಸುಬ್ಬಿರೆಡ್ಡಿ, ಮಹಬೂಬ್ ಶರೀಫ್, ವೇಣುಗೋಪಾಲ್, ಬದ್ರಿ, ಚಂದ್ರಾರೆಡ್ಡಿ ಮತ್ತಿತರು ಉಪಸ್ಥಿತರಿದ್ದರು.

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಕೋಲಾರ ಕ್ಷೇತ್ರಕ್ಕೆ ಏಪ್ರಿಲ್ 26 ಕ್ಕೆ ಮತದಾನ, ಜೂನ್ 4ಕ್ಕೆ ಫಲಿತಾಂಶ, ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ

ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ...