ರಾಯಲ್ಪಾಡು: ಮಹಾಶಿವರಾತ್ರಿಯ ಪ್ರಯುಕ್ತವಾಗಿ ಸ್ವಾಮಿಗೆ ಮಹನ್ಯಾಸಪೂರ್ವಕ ರುದ್ರಾಭಿಷೇಕ 

Source: shabbir ahmed | By Arshad Koppa | Published on 25th February 2017, 11:20 PM | State News |

ರಾಯಲ್ಪಾಡು  : ಗ್ರಾಮದ ಶ್ರೀಕಾಶಿವಿಶ್ವೇಶ್ವರಸ್ವಾಮಿ ದೇವಾಲಯದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತವಾಗಿ ಸ್ವಾಮಿಗೆ ಮಹನ್ಯಾಸಪೂರ್ವಕ ರುದ್ರಾಭಿಷೇಕ ಪಂಚಸೂಕ್ತಗಳೊಂದಿಗೆ ಪಂಚಾಮೃತ ಅಭಿಷೇಕ ವಿಶೇಷಅಲಂಕಾರದೊಂದಿಗೆ ಮಹಾಮಂಗಳಾರತಿ ತೀರ್ಥಪ್ರಸಾದವು ನಡೆಯಿತು.ರಾತ್ರಿ ನಾಲ್ಕು ಯಾಮಗಳ ರುದ್ರಾಭಿಷೇಕದೊಂದಿಗೆ ಪೂಜೆಗಳನ್ನು ಹಮ್ಮಿಕೊಳ್ಳಲಾಗಿದೆ.
ಪೂಜಾಕಾರ್ಯಕ್ರಮಗಳನ್ನು ವೆಲ್ಲಾಲ ಸತ್ಯನಾರಾಯಣಶಾಸ್ತ್ರೀ , ಸುಬ್ಬಕೃಷ್ಣಶರ್ಮ , ನಂಗಲಿಅರಣ್‍ಕುಮಾರ್ ನೆರವೇರಿಸಿದರು.
ಈ ಕಾರ್ಯಕ್ರಮದಲ್ಲಿ ಸಾರಥಿ , ಮೋಹನಯ್ಯಶೆಟ್ಟಿ , ಅಪ್ಪೋರೊಳ್ಳರಾಜಣ್ಣ , ಕೋಲಾರದ ಶಿವಣ್ಣ , ಮಹೇಶ್ , ವೇಮನ್ನ , ರಾಮಿರೆಡ್ಡಿ , ತುಮ್ಮಲಪಲ್ಲಿ ಗೋಪಾಲರೆಡ್ಡಿ , ರಮಣಾರೆಡ್ಡಿ  ,  ರಾಯಲ್ಪಾಡು ಗ್ರಾಮಸ್ಥರು ಹಾಗು ರಾಜ್ಯ ಹಾಗು ನೆರೆಯ ರಾಜ್ಯಗಳಿಂದಲೂ ಭಕ್ತರು ಬಂದು ಸ್ವಾಮಿಯ ದರ್ಶನ ಪಡೆದರು.
ಇದೇ ರೀತಿಯಾಗಿ ರಾಯಲ್ಪಾಡು ಹೋಬಳಿಗೆ ಸಂಬಂದಿಸಿದ ಈಶ್ವರ ದೇವಾಲಯಗಳಾದ ಗೌನಿಪಲ್ಲಿ ಕಾಶಿವಿಶ್ವೇಶ್ವರ ದೇವಾಲಯ , ಮಲ್ಲಿರೆಡ್ಡಿಕೊಮ್ಮಲು ಬೀಮಲಿಂಗೇಶ್ವರ ದೇವಾಲಯಗಳಲ್ಲಿ ಪಂಚಾಮೃತಾಭಿಷೇಕ ಮಹಾಗಣಪತಿ , ನವಗ್ರಹ , ರುದ್ರಹೋಮ ಹಾಗು ಅಲಂಕಾರ ಮಹಾಪ್ರಸಾದಗಳ ಸೇವೆಗಳು ನಡೆಯಿತು.

 

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...