ರಾಯಲ್ಪಾಡು: ಪ್ರೌಡಶಾಲೆಗಳ ನೆಲವಂಕಿ ಹೋಬಳಿ ಮಟ್ಟದ ಕ್ರೀಡಾಕೂಟ ಉದ್ಘಾಟನೆ

Source: shabbir | By Arshad Koppa | Published on 2nd August 2017, 8:26 AM | State News | Guest Editorial |

ರಾಯಲ್ಪಾಡು 1 : ವಿದ್ಯಾರ್ಥಿಗಳಿಗೆ ಆಟಗಳು ದೈಹಿಕ, ಮಾನಸಿಕವಾಗಿ ಧೈರ್ಯ,ಸ್ಥೈರ್ಯ ಹಾಗು ಜೀವರಕ್ಷಣಾ ಕೌಶಲ್ಯಗಳ ಜತೆ ಕ್ರೀಡೆಗಳಿಂದ ಮಕ್ಕಳಲ್ಲಿ ಏಕಾಗ್ರತೆ ಬೆಳೆಯಲು ಸಹಕಾರಿಯಾಗುತ್ತದೆ ಎಂದು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ಮುನಿರೆಡ್ಡಿ ತಿಳಿಸಿದರು.
ಲಕ್ಷ್ಮೀಪುರ ಗ್ರಾಮದ ಸರ್ಕಾರಿ ಪ್ರೌಡಶಾಲಾವರಣದಲ್ಲಿ ಪ್ರೌಡಶಾಲೆಗಳ ನೆಲವಂಕಿ ಹೋಬಳಿ ಮಟ್ಟದ ಕ್ರೀಡಾಕೂಟವನ್ನು ಉದ್ಗಾಟಿಸಿ ಮಾತನಾಡುತ್ತಾ
ಇಂದಿನ ಯುವ ಜನತೆಯಲ್ಲಿ ಮಾನಸಿಕ ಹಾಗು ದೈಹಿಕವಾಗಿ ಉತ್ಸಾಹ ತುಂಬಿದರೆ , ಭವಿಷ್ಯದಲ್ಲಿ ಆರೋಗ್ಯವಂತ ಸಮಾಜ ಕಟ್ಟಲು ಸ್ಪೂರ್ತಿ ತುಂಬಲಿದೆ.
ಲಕ್ಷ್ಮೀಪುರ ಶಾಲೆಯ ಮುಖ್ಯ ಶಿಕ್ಷಕ ಎಮ್.ಕೆ.ವೆಂಕಟರಮಣ ಮಾತನಾಡುತ್ತಾ ಕ್ರೀಡೆಗಳಲ್ಲಿ ದ್ವೇಷ, ಅಸೂಯೆ, ಸೇಡು ಎಂಬುವುದೇ ಇಲ್ಲ, ಬದಲಾಗಿ ಪರಸ್ಪರ ಪ್ರೀತಿ , ಒಗ್ಗಟಿನ ಬಲ ,ಏಕಾಗ್ರತೆ ,ಕ್ರೀಯಾಶೀಲತೆ , ಬುದ್ದಿವಂತಿಕೆಯನ್ನು ಚುರುಕುಗೊಳಿಸುವಂತಹ ಶಕ್ತಿ ತುಂಬಿವೆ ಎಂದರು. 
ಈ ಕ್ರೀಡಾಕೂಟದಲ್ಲಿ ಸರ್ಕಾರಿ ಪ್ರೌಡಶಾಲೆಗಳಾದ ಲಕ್ಷ್ಮೀಪುರ, ಪುಲಗೂರಕೋಟೆ, ತಾಡಿಗೋಳ್, ಖಾಸಗಿ ಪ್ರೌಡಶಾಲೆಗಳಾದ ವಿಎಸ್‍ಆರ್, ಮಿನರ್ವ, ಭಗವಾನ್‍ಬುದ್ದ ಶಾಲೆಗಳ ವಿದ್ಯಾರ್ಥಿಗಳು ಹಾಗು ಉಪನ್ಯಾಸಕರಾ ಶೇಷಗಿರಿ ,ಶಿಕ್ಷಕರಾದ ಕೆ.ಆರ್.ಶ್ರೀನಿವಾಸಲು, ಎಲ್.ಆರ್.ರೆಡ್ಡಪ್ಪ, ಅಶೋಕ್, ಅರುಣಾ.ಜಿ, ಡಿ.ಎನ್.ಸತೀಶ್‍ರೆಡ್ಡಿ, ಯುಗಂದರ್ ಮುಖ್ಯಶಿಕ್ಷಕರು ಹಾಗು ದೈಹಿಕಶಿಕ್ಷಕರು ಬಾಗವಹಿಸಿದ್ದರು.   
ಪೋಟು 1 : ಲಕ್ಷ್ಮೀಪುರ ಗ್ರಾಮದ ಸರ್ಕಾರಿ ಪ್ರೌಡಶಾಲಾವರಣದಲ್ಲಿ ಪ್ರೌಡಶಾಲೆಗಳ ನೆಲವಂಕಿ ಹೋಬಳಿ ಮಟ್ಟದ ಕ್ರೀಡಾಕೂಟವನ್ನು ಗಣ್ಯರು ಉದ್ಗಾಟಿಸಿದರು.

ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...