ರಾಯಲ್ಪಾಡು: ಗಳಿಸಿದ್ದರಲ್ಲಿ ಕೊಂಚ ದಾನವೆಂದ ಸತ್ಕಾರ್ಯದಲ್ಲಿ ಬಳಸಿದಾಗ ನೆಮ್ಮದಿ ದೊರಕುತ್ತದೆ-ಗಂಗಾಧರ್

Source: shabbir | By Arshad Koppa | Published on 27th August 2017, 9:04 AM | State News | Guest Editorial |

ರಾಯಲ್ಪಾಡು, ಆ ೨೭:ತಾನು ಕಷ್ಟಬಿದ್ದು ಮಾಡಿದ ಸಂಪಾದನೆಯಲ್ಲಿನ ಒಂದಿಷ್ಟು ಭಾಗವನ್ನು ಧಾನಧರ್ಮ ಎಂಬ ಸತ್ಕಕಾರ್ಯಕ್ಕೆ ಬಳಿಸಿದಾಗ ಆತ್ಮತೃಪ್ತಿ ಸಿಗುತ್ತದೆ ಎಂದು ಗ್ರಾ. ಪಂ ಸದಸ್ಯ ಆರ್.ಗಂಗಾದರ್ ಅಭಿಪ್ರಾಯಪಟ್ಟರು.


ರಾಯಲ್ಪಾಡಿನ ಕಾಲೋನಿಗಳಲ್ಲಿ, ಯಂಡ್ರಕಾಯಿಲಕುಂಟ ಗ್ರಾಮದಲ್ಲಿನ ಬಡಜನತೆಗೆ ಗೌರಿಗಣೇಶ ಹಬ್ಬದ ಸಲುವಾಗಿ ಉಚಿತವಾಗಿ ನೂತನ ವಸ್ತ್ರಗಳನ್ನು ವಿತರಿಸಿ ಮಾತನಾಡಿದರು.
ಹಿಂದಿನ ಕಾಲದಲ್ಲಿ ಉಳ್ಳವರು ಧರ್ಮಛತ್ರಗಳನ್ನು ಕಟ್ಟಿಸುವ, ಕೆರೆಕುಂಟೆಗಳನ್ನು ನಿರ್ಮಿಸುವ , ಸಾಲು ಮರಗಳನ್ನು ನೆಡುವ, ಗೋಕುಂಟೆಗಳನ್ನು ಕಟ್ಟಿಸುವಂತಹ ಕಾರ್ಯಗಳು ಉಳ್ಳವರಿಂದ ನಡೆಯುತ್ತಿತ್ತು.
ಆದರೆ ಇತ್ತೀಚಿನ ದಿನಗಳಲ್ಲಿ ಮಾನವ ಸ್ವಾರ್ಥಜೀವನದತ್ತಾ ಮಾರಿಹೋಗಿ ಪರಿಸರದ ಮೇಲೆ ಹಾಗು ನೈಸರ್ಗಿಕ ಸಂಪತ್ತಿನ ಮೇಲೆ ದಾಳಿಮಾಡುತ್ತಿದ್ದು ಇದು ವಿಷಾದನೀಯ ಸಂಗತಿ , ಆದ್ದರಿಂದ ಮಾನವ ಸ್ವಾರ್ಥ ಜೀವನವನ್ನು ಬಿಟ್ಟು. ಪ್ರತಿಯೊಬ್ಬರು ತನ್ನಿಂದಾಗುವ ಸಹಾಯವನ್ನು ದೇಶಕ್ಕಾಗಿ ಹಾಗು ಕಷ್ಟದಲ್ಲಿರುವವರಿಗೆ ಸಹಾಯ ಮಾಡಿದಾಗ ಆತ್ಮತೃಪ್ತಿ ಸಿಗುತ್ತದೆ ಎಂದರು. 
ಈ ಸಮಯದಲ್ಲಿ ಗ್ರಾಮದ ಮುಖಂಡರಾದ ಎನ್.ಶಿವನ್, ಸಾಯಿರಾಂಗೋಪಾಲಕೃಷ್ಣ, ಸಾರಥಿ, ರಾಜಣ್ಣ, ಪೆದ್ದನಾರಾಯಣಸ್ವಾಮಿ ಇತರಿದ್ದರು.

ರಾಯಲ್ಪಾಡಿನ ಕಾಲೋನಿಗಳಲ್ಲಿ, ಯಂಡ್ರಕಾಯಿಲಕುಂಟ ಗ್ರಾಮದಲ್ಲಿನ ಬಡಜನತೆಗೆ ಗೌರಿಗಣೇಶ ಹಬ್ಬದ ಸಲುವಾಗಿ ಉಚಿತವಾಗಿ ನೂತನ ವಸ್ತ್ರಗಳನ್ನು ಗಣ್ಯರು ವಿತರಿಸಿದರು. 


ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ

Read These Next

ಬಿಜೆಪಿ ಹಿಂದುಳಿದವರನ್ನು ತುಳಿಯುವ ಸಂಚು ರೂಪಿಸಿದೆ, ಭಟ್ಕಳದಲ್ಲಿ ಬಿಜೆಪಿ ವಿರುದ್ಧ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ

ಬಿಜೆಪಿ ಮೇಲ್ನೋಟಕ್ಕೆ ಅಲ್ಪಸಂಖ್ಯಾತರನ್ನು ವಿರೋಧಿಸುವ ಪಕ್ಷವಾಗಿ ಮೇಲ್ನೋಟಕ್ಕೆ ಕರೆಯಿಸಿಕೊಳ್ಳುತ್ತಿದೆಯಾದರೂ, ವಾಸ್ತವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...