ರಾಯಲ್ಪಾಡು:ವಿದ್ಯಾರ್ಥಿಗಳು ಪಠ್ಯ ಹಾಗು ಪಠ್ಯೇತರ ಚಟುವಟಿಕೆಗಳಲ್ಲೂ ಸಾಧಿಸಿ ಪ್ರಗತಿಗೆ ನೆರವಾಗಲು ಸಂಜಯ್ ರೆಡ್ಡಿ ಕರೆ

Source: shabbir | By Arshad Koppa | Published on 17th August 2017, 8:43 AM | State News | Guest Editorial |

ರಾಯಲ್ಪಾಡು, ಆ ೧೬: ವಿದ್ಯಾರ್ಥಿಗಳು ಪಠ್ಯ ಹಾಗು ಪಠ್ಯೇತರ ಚಟುವಟಿಕೆಗಳಲ್ಲಿ ಉತ್ತಮ ಸಾದನೆಯನ್ನು ಸಾಧಿಸಿ ದೇಶದ ಪ್ರಗತಿಗೆ ಕಾರಣರಾಗಬೇಕಾಗಿದೆ ಎಂದು ರಾಜ್ಯಯೋಜನಾ ಆಯೋಗದ ಸದಸ್ಯ ಸಂಜಯ್‍ರೆಡ್ಡಿ ತಿಳಿಸಿದರು.


ಏರಿಸ್ ಆಗ್ರೋ ಲಿಮಿಟೆಡ್ ಮುಂಬಯಿ . ಇವರ ಸಹಯೋಗದಲ್ಲಿ 71ನೇ ಸ್ವಾತಂತ್ರೋತ್ಸವದ ಅಂಗವಾಗಿ ಬೈರಗಾನಪಲ್ಲಿ ಸರ್ಕಾರಿ ಪ್ರೌಡಶಾಲೆಯಲ್ಲಿನ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ಹಾಗು ಲೇಖನಿ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದರು. 
ಬ್ರಿಟಷರು 350ವರ್ಷಗಳ ಕಾಲ ದೇಶದಲ್ಲಿನ ಸಂಪತ್ತನ್ನು ಲೋಟಿ ಹೊಡೆದುಹೋದರು, ಇದರಿಂದ ನಮ್ಮ ದೇಶವು ಬರಡಾಗಿದೆ. ಆದರೆ  ನಮ್ಮ ದೇಶದಲ್ಲಿ  ಜ್ಞಾನವಂತರಿಗೆ ಮಿತಿಯಿಲ್ಲ, ಎಷ್ಟೋ ಜನ ಜ್ಞಾನವಂತ ಮಹನೀಯರು ಪ್ರಪಂಚಕ್ಕೆ  ಮಾದರಿಯಾಗಿದ್ದಾರೆ.   
ದೇಶ ನನ್ನದೇ , ಸಮಾಜ ನನ್ನದೇ ! ಇದು ಸರ್ಕಾರದಲ್ಲ ಎಂದು ನೆನಪಿಸಿಕೊಳ್ಳಬೇಕಾದ ಅವಶ್ಯಕತೆ ಇಂದು ಖಂಡಿತಾ ಇದೆ . ದೇಶ ಭಕ್ತಿ ಹೊಂದಿದ ಹಾಗೂ ಶಿಸ್ತನ್ನುಳ ಪ್ರಜೆಗಳಿಂದ ಮಾತ್ರ ಯಾವುದೇ ದೇಶದ ಅಭಿವೃದ್ದಿ ಸಾಧ್ಯವೆಂಬುದು ಹಲವು ಅಭಿವೃದ್ದಿ ಹೊಂದಿರುವ ದೇಶಗಳು ಕಂಡಿರುವ ಸತ್ಯ . 
ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳನ್ನು ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ಏರಿಸ್ ಆಗ್ರೋ ಲಿಮಿಟೆಡ್ ಕಂಪನಿಯ ಕಾರ್ಯಕ್ರಮವನ್ನು ಶ್ಲಾಘಿಸಿದರು. 
ಈ ಸಮಯದಲ್ಲಿ ಪ್ರೌಡಶಾಲೆಯ ಮುಖ್ಯ ಶಿಕ್ಷಕ ಕೆ.ಎನ್.ರಾಮಚಂದ್ರ, ಏರಿಸ್ ಆಗ್ರೋ ಲಿಮಿಟೆಡ್ ಕಂಪನಿಯ ವ್ಯವಸ್ಥಾಪಕರಾದ ಹನುಮಂತನಾಯ್ಕ್ , ಗ್ರಾಮದ ಮುಖಂಡರಾದ  ವೆಂಕಟರಾಮಿರೆಡ್ಡಿ,  ನಾಗೇಶ್ , ವೆಂಕಟರಮಣಾರೆಡ್ಡಿ,  ಕೆ.ಆರ್.ಸಂಜಯ್‍ಕುಮಾರ್, ಗೋವಿಂದರೆಡ್ಡಿ ಹಾಗು ಶಾಲೆಯ ಶಿಕ್ಷಕರಾದ ವೆಂಕಟೇಶಪ್ಪ, ಕೃಷ್ಣಯ್ಯ, ಪೂಣ ್ಮ, ತುಳಸಿಮಾಲಾ,  ರುದ್ರೇಶ್, ನಾರಾಯಣಸ್ವಾಮಿ ಇದ್ದರು.
ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ

Read These Next

ಕೂರ್ಮಗಡ ದೋಣಿ ದುರಂತ; ಇದುವರೆಗೆ ೧೪ ಮೃತದೇಹ ಪತ್ತೆ;  ೧೯ ಜನರ ರಕ್ಷಣೆ; ಇಬ್ಬರ ಮೃತದೇಹಕ್ಕಾಗಿ ಶೋಧ

ಕಾರವಾರ: ೨೦೧೯ನೇ ವರ್ಷದ ಆರಂಭದಲ್ಲೇ ಉತ್ತರಕನ್ನಡ ಜಿಲ್ಲೆಯ ಕೂರ್ಮಗಡ ದೋಣಿ ದುರಂತ ಅತ್ಯಂತ ಭಯಾನಕವಾಗಿದ್ದು ೧೬ಮಂದಿಯನ್ನು ...

ಶಿರಾಲಿ ಹೆದ್ದಾರಿ ಅಗಲಿಕರಣ;ಸಾರ್ವಜನಿಕರ ಬೇಡಿಯಂತೆ 30 ರ ಬದಲು 45ಮೀಟರ್ ವಿಸ್ತರಣೆ-ಕೇಂದ್ರ ಸಚಿವ ಅನಂತ್ ಭರವಸೆ

ಭಟ್ಕಳ: ಶಿರಾಲಿ ಭಾಗದ ಗ್ರಾಮಸ್ಥರ ಬೇಡಿಕೆಯಂತೆ ರಾ.ಹೆ.66 ರ ಅಗಲೀಕರಣವನ್ನು 30ಮೀಟರ್ ಬದಲು 45ಮೀಟರ್ ಗೆ ವಿಸ್ತರಿಸಲು ಅಗತ್ಯ ಕ್ರಮಗಳನ್ನು ...

ಮಾನವೀಯತೆಯ ಸೌಧದಡಿ ಸಮಾನತೆಯ ಸಮಾಜ ಕಟ್ಟಿದ ಕಾಯಕ ಯೋಗಿ ಡಾ.ಶಿವಕುಮಾರ ಸ್ವಾಮೀಜಿ ಇನ್ನಿಲ್ಲ

ತುಮಕೂರು: ಪದ್ಮಭೂಷಣ, ಕರ್ನಾಟಕ ರತ್ನ, ಕಾಯಕ ಯೋಗಿ, ಶತಾಯುಷಿ ಶ್ರೀ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರು ಸೋಮವಾರ ಬೆಳಗ್ಗೆ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...