ಟ್ರೋಲ್ ಪೇಜ್ ಗಳನ್ನು ಮುಟ್ಟದೇ, ವಾರ್ತಾಭಾರತಿಯ ಪೇಜನ್ನು ಅಮಾನತುಗೊಳಿಸಿದ ಫೇಸ್ಬುಕ್: ರವೀಶ್ ಕುಮಾರ್ -

Source: sonews | By sub editor | Published on 27th June 2017, 10:58 PM | Coastal News | State News | National News | Gulf News | Special Report | Don't Miss |

ಸದ್ಯದ ಆಡಳಿತದಡಿಯಲ್ಲಿ ಮಾಧ್ಯಮದವರು ಭಯದಿಂದ ಜೀವಿಸುತ್ತಿದ್ದಾರೆ ಎಂದು ಎನ್.ಡಿ.ಟಿ.ವಿಯ ರವೀಶ್ ಕುಮಾರ್ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಹೇಳಿದರು. ಕರ್ನಾಟಕದಲ್ಲಿ 15 ವರ್ಷಗಳಿಂದಲೂ ನೇರ ನಿಖರ ಸುದ್ದಿಗಳನ್ನು ಪ್ರಕಟಿಸುತ್ತಿರುವ ವಾರ್ತಾಭಾರತಿ ಪತ್ರಿಕೆಯನ್ನು ಕೆಲವು ಟ್ರೋಲ್ ಪೇಜ್ ಗಳು ರಿಪೋರ್ಟ್ ಮಾಡಿಸಿತ್ತು. ವಿನಾಕಾರಣ ಮಾನಹಾನಿ ಮಾಡುವ ಟ್ರೋಲ್ ಪೇಜ್ ಗಳನ್ನು ಮುಟ್ಟದೇ ಫೇಸ್ ಬುಕ್ ನವರು ವಾರ್ತಾಭಾರತಿ ಪತ್ರಿಕೆಯ ಫೇಸ್ ಬುಕ್ ಪೇಜನ್ನು ಅಮಾನತು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಕರ್ನಾಟಕದ ಮಾಧ್ಯಮಗಳ ಕುರಿತು ಉಲ್ಲೇಖಿಸಿದ ಅವರು. ಕರ್ನಾಟಕದಲ್ಲಿ ಓರ್ವ ಕಾಂಗ್ರೆಸ್ ಮತ್ತು ಓರ್ವ ಬಿಜೆಪಿ ಮುಖಂಡನ ಕುರಿತು ಬರೆದಿದ್ದಕ್ಕಾಗಿ ಹಾಯ್ ಬೆಂಗಳೂರು ಮತ್ತು ವಾಯ್ಸ್ ಆಫ್ ಯಲಹಂಕ ಪತ್ರಿಕೆಯ ಸಂಪಾದಕರಿಗೆ ಒಂದುವರ್ಷ ಜೈಲುಶಿಕ್ಷೆ ನೀಡಲಾಗಿದೆ. ಈ ಎಲ್ಲಾ ಪ್ರಕರಣಗಳಿಂದ ಮಾಧ್ಯಮದವರು ಭಯದಿಂದ ಜೀವಿಸುವಂತಹ ಸನ್ನಿವೇಶ ಬಂದೊದಗಿದೆ ಎಂದಿದ್ದಾರೆ.

ಕೃಪೆ: ನ್ಯೂಸ್ ಕನ್ನಡ

Read These Next

ಪಿ.ಯು.ಕಾಲೇಜ್ ಸಹಪಠ್ಯ ಚಟುವಟಿಕೆ; ಇಂಗ್ಲಿಷ್ ಚರ್ಚಾ ಸ್ಪರ್ಧೆಯಲ್ಲಿ ಶಿಹಾಬುದ್ದೀನ್ ಪ್ರಥಮ

ಭಟ್ಕಳ: ಪದವಿ ಪೂರ್ವ ಶಿಕ್ಷಣ ಇಲಾಖೆ ಹಮ್ಮಿಕೊಂಡ ತಾಲೂಕಾ ಮಟ್ಟದ ಸಾಂಸ್ಕತಿಕ ಸಹ ಪಠ್ಯೇತರ ಚಟುವಟಿಕೆಗಳ ಸ್ಪರ್ಧೆಗಳಲ್ಲಿ ದಿ.ನ್ಯೂ ...

ಭಟ್ಕಳ-ಹೊನ್ನಾವರ ವಿಧಾನಸಭಾ ಚುನಾವಣೆ; ಕಾಂಗ್ರೇಸ್ ಬೆಂಬಲಕ್ಕೆ ನಿಂತ ಕೆನರಾ ಕಲೀಝ್ ಕೌನ್ಸಿಲ್

ಭಟ್ಕಳ: ಕರಾವಳಿಯ ಶರಾವತಿ ನದೀ ತೀರದ ಸುಮಾರು 29ಕ್ಕೂ ಹೆಚ್ಚು ಜಮಾಅತ್ ಗಳ ಒಕ್ಕೂಟವಾಗಿರುವ ಗಲ್ಫ್‍ನಲ್ಲಿ ಸ್ಥಾಪಿತ ಕೆನರಾ ಮುಸ್ಲಿಮ್ ...

ಪಿ.ಯು.ಕಾಲೇಜ್ ಸಹಪಠ್ಯ ಚಟುವಟಿಕೆ; ಇಂಗ್ಲಿಷ್ ಚರ್ಚಾ ಸ್ಪರ್ಧೆಯಲ್ಲಿ ಶಿಹಾಬುದ್ದೀನ್ ಪ್ರಥಮ

ಭಟ್ಕಳ: ಪದವಿ ಪೂರ್ವ ಶಿಕ್ಷಣ ಇಲಾಖೆ ಹಮ್ಮಿಕೊಂಡ ತಾಲೂಕಾ ಮಟ್ಟದ ಸಾಂಸ್ಕತಿಕ ಸಹ ಪಠ್ಯೇತರ ಚಟುವಟಿಕೆಗಳ ಸ್ಪರ್ಧೆಗಳಲ್ಲಿ ದಿ.ನ್ಯೂ ...