ಭಟ್ಕಳದಲ್ಲಿ ಇಲಿಜ್ವರದ ಶಂಕೆ;ಓರ್ವ ಮಹಿಳೆ ಸಾವು

Source: sonews | By Staff Correspondent | Published on 9th September 2018, 3:51 PM | Coastal News | Don't Miss |

ಭಟ್ಕಳ: ಮುಟ್ಟಳ್ಳಿಯನ ಹೂವಿನ ಹಿತ್ಲುವಿನ ಮಹಿಳೆಯೋರ್ವಳು ಜ್ವರಿಂದ ಮೃತ ಪಟ್ಟಿದ್ದು ಇಲಿ ಜ್ವರದ ಶಂಕೆ ವ್ಯಕ್ತವಾಗಿದೆ.  ಮಹಿಳೆಯು ಮೂಕಾಂಬು ಸುರೇಶ ನಾಯ್ಕ (35) ಎನ್ನುವವರಾಗಿದ್ದು ಕಳೆದ ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದು ಈಕೆಗೆ ಸ್ಥಳೀಯ ವೈದ್ಯರಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು.  ಆದರೆ ಕಾಯಿಲೆ ಉಲ್ಬಣಗೊಂಡ ಕಾರಣದಿಂದ ಸೆ.6ರಂದು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು.   ಚಿಕಿತ್ಸೆಯಲ್ಲಿರುವಾಗಲೇ ಮಹಿಳೆಯು ಸೆ.8ರಂದು ಬೆಳಿಗ್ಗೆ ಮೃತ ಪಟ್ಟಿದ್ದು ಇಲಿ ಜ್ವರದ ಶಂಕೆ ವ್ಯಕ್ತವಾಗಿದೆ.  ಮಹಿಳೆಯ ಎರಡೂ ಕಿಡ್ನಿಯು ಡ್ಯಾಮೇಜ್ ಆಗಿದ್ದು ಇದು ಇಲಿ ಜ್ವರದಿಂದಲೇ ಆಗಿದೆಯೇ ಇಲ್ಲ ಬೇರೆ ಕಾರಣ ಇದೆಯೇ ಎನ್ನುವ ಕುರಿತು ಇನ್ನೂ ವರದಿ ಬಂದಿಲ್ಲ ಎನ್ನಲಾಗಿದೆ. 
ಇಲಿಜ್ವರದ ಶಂಕೆ: ಈ ಕುರಿತು ತಾಲೂಕಾ ಆರೋಗ್ಯಾಧಿಕಾರಿ ಡಾ. ಮೂರ್ತಿರಾಜ ಭಟ್ಟ ಅವರನ್ನು ಸಂಪರ್ಕಿಸಿದಾಗ, ಮಹಿಳೆಯ ಮರಣದ ವರದಿಯಲ್ಲಿ ಕಿಡ್ನಿಗಳಿಗೆ ಡ್ಯಾಮೇಜ್ ಆಗಿ ಮೃತ ಪಟ್ಟಿದ್ದು ಇಲಿ ಜ್ವರದಿಂದಲೇ ಆಗಿರುವ ಶಂಕೆಯನ್ನು ವ್ಯಕ್ತಪಡಿಸಲಾಗಿದೆ. ಸಂಪೂರ್ಣ ವರದಿಯನ್ನು ತರಿಸಿಕೊಂಡು ನೋಡದೇ ಇಲಿ ಜ್ವರ ಎಂದು ಹೇಳಲು ಬರುವುದಿಲ್ಲ.  ಆದರೂ ಸಹ ಶನಿವಾರವೇ ಆ ಪ್ರದೇಶಕ್ಕೆ ಆರೋಗ್ಯ ಇಲಾಖೆಯ ಕಾರ್ಯಕರ್ತರು ಹೋಗಿ ಮುಂಜಾಗೃತಾ ಕ್ರಮಕ್ಕೆ ಸೂಚಿಸಿದ್ದಾರೆ. ಸೆ.9ರಂದ ಭಾನುವಾರವೂ ಕೂಡಾ ಆರೋಗ್ಯ ಇಲಾಖೆಯ ವತಿಯಿಂದ ಸಂಪೂರ್ಣ ಮುಂಜಾಗೃತಾ ಕ್ರಮ ಕೈಗೊಳ್ಳಲಾಗುವುದು. ಬಾವಿಗಳ ನೀರಿಗೆ ಕ್ಲೋರಿನೇಶನ್ ಸಹಿತ ಎಲ್ಲಾ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ಜನರು ಚಪ್ಪಲಿ ಇಲ್ಲದೇ ನಡೆಯಬಾರದು, ನೀರನ್ನು ಕಾಯಿಸಿಯೇ ಕುಡಿಯಬೇಕು ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕು ಎಂದೂ ಅವರು ಮನವಿ ಮಾಡಿದ್ದಾರೆ. 
 

Read These Next

ಜಿಲ್ಲೆಯಲ್ಲಿ ಮೇ 7 ರಂದು ಮತದಾನ, ತಕ್ಷಣದಿಂದಲೇ ನೀತಿ ಸಂಹಿತೆ ಜಾರಿ : ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

ಕಾರವಾರ : ಚುನಾವಣಾ ಆಯೋಗದ ನಿರ್ದೇಶನದಂತೆ, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ಮತದಾನ ನಡೆಯಲಿದ್ದು, ಜಿಲ್ಲೆಯಲ್ಲಿ ...

ಭಟ್ಕಳ: ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸೂಕ್ಷ್ಮ ಬೋಧನೆ, ಲಲಿತಕಲೆ ಮತ್ತು ರಂಗಭೂಮಿ ಕಾರ್ಯಾಗಾರ ಮುಕ್ತಾಯ

ಶಿಕ್ಷಕರಾದವರು ವಿದ್ಯಾರ್ಥಿಗಳಿಗೆ ಸಂಸ್ಕಾರ, ಮಾನವೀಯ ಮೌಲ್ಯ, ಪರಸ್ಪರ ಗೌರವ ನೀಡುವುದು ಮತ್ತು ರಾಷ್ಟ್ರಭಕ್ತಿಯನ್ನು ಹೆಚ್ಚಿಸುವ ...