ಕೇಂದ್ರ ಬಜೆಟ್ ವಿರೋಧಿಸಿ 7-2-2019 ರಂದು ರಾಜಭವನ್ ಚಲೋ

Source: sonews | By Staff Correspondent | Published on 2nd February 2019, 6:36 PM | Coastal News | Don't Miss |

ಕೇಂದ್ರ ಬಜೆಟ್ಟಿನಲ್ಲಿ ಬಿಸಿಅಡುಗೆ ನೌಕರರಿಗೆ ಮಹಾದ್ರೋಹ ಖಂಡಿಸಿ ಫೆ. 7 ರಾಜಭವನ್ ಚಲೋ

ಕೇಂದ್ರ ಸರ್ಕಾರದ 2019-20 ರ ಬಜೆಟ್ಟಿನಲ್ಲಿ ಬಿಸಿಯೂಟ ಕೆಲಸಗಾರರಿಗೆ ನಯಾ ಪೈಸೆಯನ್ನೂ ಮೀಸಲಿಡದ ಮಹಿಳಾ ವಿರೋಧಿ ಮೋದಿ ಸರ್ಕಾರದ ಧೋರಣೆಯನ್ನು ನಮ್ಮ ಸಂಘ ಖಂಡಿಸುತ್ತದೆ. ಫೆ. 7 ರಂದು ರಾಜಭವನ್ ಚಲೋ ನಡೆಸಿ ಪ್ರತಿರೋಧ ದಾಖಲಿಸಲು ನಿರ್ಧರಿಸಿದ್ದೇವೆ. ತೋರಿಕೆಗಾಗಿ ಬೇಟಿ ಬಚಾವೋ, ಮಾತೃದೇವೋ ಭವ ಎನ್ನುವ ಬಿಜೆಪಿಯು ಲಕ್ಷಾಂತರ ಮಹಿಳೆಯರ ದುಡಿಮೆಯನ್ನು ಅವರ ಪ್ರಜಾಸತ್ತಾತ್ಮಕ ಹೋರಾಟವನ್ನು ಅವಹೇಳನ ಮಾಡಿದೆ. ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಲ್ಲಿ ಒಂದಾದ ಅಕ್ಷರ ದಾಸೋಹ ಯೋಜನೆಯು 2002 ರಲ್ಲಿ ಪ್ರಾರಂಭವಾಗಿ ಇಂದಿಗೆ  16 ವರ್ಷಗಳಾದರೂ ಯೋಜನೆ ಅಡಿಯಲ್ಲಿ ಕೆಲಸ ಮಾಡುವ ನೌಕರರಿಗೆ  ಕೆಲಸದ ಭದ್ರತೆಯಾಗಲಿ, ಸಮರ್ಪಕ ಕೂಲಿಯಾಗಲಿ ಇಲ್ಲ. ಕೆಲಸ ಖಾಯಂಗೊಳಿಸದೇ  ಈ ದುಡಿಯುವ ಮಹಿಳೆಯರನ್ನು ಶೋಷಣೆ ಮಾಡುತ್ತಲೇ ಬರಲಾಗಿದೆ. ಈ ಯೋಜನೆ ಅಡಿಯಲ್ಲಿ ಕೆಲಸ ಮಾಡುವವರಿಗೆ 7 ವರ್ಷಗಳಿಂದ ಗೌರವಧನವನ್ನು ಹೆಚ್ಚಳ ಮಾಡದೆ ದುಡಿಸಿಕೊಳ್ಳುತ್ತಿರುವುದು, ಖಾಸಗಿಕರಣ ಮಾಡುತ್ತಿರುವುದು ಖಂಡನೀಯವಾಗಿದೆ .

ನಮ್ಮ ರಾಜ್ಯವೊಂದರಲ್ಲೇ 54,839 ಶಾಲೆಗಳಲ್ಲಿ 53,43,501 ಮಕ್ಕಳು ದಿನನಿತ್ಯ ಬಿಸಿಊಟ ಫಲಾನುಭವಿಗಳಾಗಿದ್ದಾರೆ. ಈ ಯೋಜನೆ ಅಡಿಯಲ್ಲಿ ರಾಜ್ಯದಲ್ಲಿ 1,18,130 ಮಹಿಳೆಯರು ದುಡಿಯುತ್ತಿದ್ದಾರೆ. ಉಕ ಜಿಲ್ಲೆಯಲ್ಲಿ 4300 ರಷ್ಟು ನೌಕರರು ಕೆಲಸ ಮಾಡುತ್ತಿದ್ದಾರೆ. ಇವರ ಮಾಸಿಕ ಕೂಲಿ ಕೇಂದ್ರ ಮತ್ತು ರಾಜ್ಯ ಸರಕಾರ ಇವೆರಡೂ ಸೇರಿದರೆ ಈಗ 2600 ಇದ್ದು ಇದರಲ್ಲಿ ರಾಜ್ಯ ಸರಕಾರ 2000 ಕೇಂದ್ರ ಸರ್ಕಾರ 600 ಮಾತ್ರ ಕೊಡುತ್ತಿದೆ . 45ನೇ ಭಾರತೀಯ ಕಾರ್ಮಿಕ ಸಮ್ಮೇಳನ (ILC) ಪ್ರಕಾರ ಇವರನ್ನು "ಕಾರ್ಮಿಕರು " ಎಂದು ಪರಿಗಣಿಸಿ ಕನಿಷ್ಠ ವೇತನ ಜಾರಿ ಮಾಡಬೇಕೆಂದು ಶಿಫಾರಸು ಮಾಡಿ 6 ವರ್ಷಗಳು ಕಳೆದಿದೆ. 7ನೇ ವೇತನ ಆಯೋಗವು 18000  ಸಾವಿರ ಕನಿಷ್ಠ ವೇತನ ಇಲ್ಲದೇ ಯಾರನ್ನೂ ದುಡಿಸತಕ್ಕದ್ದಲ್ಲ ಎಂದು ಶಿಫಾರಸು ಮಾಡಿದರೂ ಕೂಡ ಕೇಂದ್ರ ಸರ್ಕಾರ ಕಿಂಚಿತ್ತೂ ಬೆಲೆ ಕೊಡದೆ  ಈ ಯೋಜನೆಗೆ ಬರುವ ಅರ್ಧದಷ್ಟು ಅನುದಾನವನ್ನು  ಕಡಿತ ಮಾಡಿದೆ. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕೆಂಬ ಸುಪ್ರೀಂಕೋರ್ಟ್ ನಿರ್ಧಾರವನ್ನು ಕಡೆಗಣಿಸಿದೆ. ಸರ್ಕಾರಿ ಶಾಲೆಗಳು ಬೆಳೆಯಲು ಹಾಗೂ ಮಕ್ಕಳ ಹಾಜರಾತಿ ಹೆಚ್ಚಾಗಲು ಯೋಜನೆಯು ಸರ್ಕಾರಕ್ಕೆ ಪ್ರಮುಖವಾಗಿದೆ. ಆದರೆ ಕಳೆದ ನಾಲ್ಕು ಬಜೆಟ್ಟಿನಂತೆಯೇ ಈ ಬಾರಿ 2019-20ರ ಬಜೆಟಿನಲ್ಲಿ ಬಿಸಿಯೂಟ ಯೋಜನೆಗೆ ಅನುದಾನ ನೀಡದೆ ಕೇಂದ್ರದಲ್ಲಿಯ ಮೋದಿ ಸರ್ಕಾರ ಬಿಸಿಯೂಟ ನೌಕರರಿಗೆ ಮಹಾ ದ್ರೋಹ ಮಾಡುತ್ತಿದೆ. ಕೇಂದ್ರ ಸರ್ಕಾರವು ಈ ಕಾರ್ಮಿಕ ವಿರೋಧಿ ನೀತಿಗಳನ್ನು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಉಕ ಜಿಲ್ಲಾ ಸಮಿತಿಯು ಖಂಡಿಸುತ್ತದೆ. ಈ ಮಧ್ಯಂತರ ಬಜೆಟ್ ನ ಮಂಡನೆ ಯ ಮೂಲಕ ಕೇಂದ್ರ ಸರ್ಕಾರ ವಿವಿಧ ಜನಸಮುದಾಯವನ್ನು ದಾರಿತಪ್ಪಿಸುವ ವ್ಯರ್ಥ ಪ್ರಯತ್ನವನ್ನು ನಡೆಸುತ್ತಿದೆ. ಎಂದಿನಂತೆ ಕಾರ್ಪೊರೇಟ್ ಪರವಾದ ನೀತಿಗಳಿಗೆ ಮಣೆಹಾಕಿ ರೈತ ಮತ್ತು ಕಾರ್ಮಿಕ ವಿರೋಧಿ ನೀತಿಗಳನ್ನು ಮೋದಿ ಸರ್ಕಾರ ಅನುಸರಿಸುತ್ತಿದೆ. ಇದಕ್ಕೆ ಸಿಐಟಿಯು ನೇತೃತ್ವದ ನಮ್ಮ ಸಂಘಟನೆಯು ಪ್ರಬಲ ಪ್ರತಿರೋಧವನ್ನು ವ್ಯಕ್ತಪಡಿಸುತ್ತದೆ.

ಉಕ ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಿವಿಧ ರೀತಿಯಲ್ಲಿ ಪ್ರತಿಭಟನೆಯನ್ನು ದಾಖಲಿಸುತ್ತೇವೆ. ಜೊತೆಗೆ 7-2-2019ರಂದು ಬೆಂಗಳೂರು ಚಲೋ ನಡೆಸಲಿದ್ದೇವೆ. ಜಿಲ್ಲೆಯ ಬಿಸಿಯೂಟ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ವಿನಂತಿ.

ಯಮುನಾ ಗಾಂವ್ಕರ ಅಧ್ಯಕ್ಷರು, ಗಂಗಾ ನಾಯ್ಕ ಪ್ರಧಾನ ಕಾರ್ಯದರ್ಶಿ, ಶೈಲಾ ಹರಿಕಂತ್ರ ಖಜಾಂಚಿ

Read These Next

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆ.

ಕಾರವಾರ :12- ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ , ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನವಾದ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆ.

ಕಾರವಾರ :12- ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ , ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನವಾದ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...