ವಿದ್ಯಾರ್ಥಿನಿಯರ ಮೇಲೆ ಲಾಠಿ ಚಾರ್ಜ್; ಭೇಟಿ ಬಚಾವೊ, ಭೇಟಿ ಪಡಾವೊ ಆಂದೋಲನದ ಬಿಜೆಪಿ ಆವೃತ್ತಿ: ರಾಹುಲ್ ವ್ಯಂಗ್ಯ

Source: ಪ್ರಜಾವಾಣಿ ವಾರ್ತೆ | By I.G. Bhatkali | Published on 25th September 2017, 1:22 AM | National News | Don't Miss |

ಬನಾರಸ್: ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಪ್ರತಿಭಟನಾ ನಿರತ ವಿದ್ಯಾರ್ಥಿನಿಯರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ಬಿಎಚ್‍ಯುನಲ್ಲಿ ಭೇಟಿ ಬಚಾವೋ  ಭೇಟಿ ಪಡಾವೊ ಆಂದೋಲನದ ಬಿಜೆಪಿ ಆವೃತ್ತಿ ನಡೆಯುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.

ಬಿಎಚ್‍ಯುವಿನ ಉಪ ಕುಲಪತಿಯವರ ಮನೆಯ ಮುಂದೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದಾಗ ಅವರನ್ನು ಚದುರಿಸಲು ಶನಿವಾರ ರಾತ್ರಿ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದರು. ಈ ಲಾಠಿ ಚಾರ್ಜ್‍ನಲ್ಲಿ ಹಲವಾರು ವಿದ್ಯಾರ್ಥಿನಿಯರಿಗೆ ಗಾಯಗಳಾಗಿವೆ ಎಂದು ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳು ದೂರಿದ್ದಾರೆ.

ಪ್ರತಿಭಟನೆಯಲ್ಲಿ ನಿರತರಾಗಿದ್ದ ಹುಡುಗರ ಮೇಲೆ ಲಾಠಿ ಚಾರ್ಜ್ ಮಾಡಿದ್ದಲ್ಲದೆ, ಪೊಲೀಸರು ಹುಡುಗಿಯರನ್ನೂ ಬಿಟ್ಟಿಲ್ಲ.ನಮ್ಮ ಮೇಲೆ ದೌರ್ಜನ್ಯ ನಡೆಸಲಾಗಿದೆ ಎಂದು ವಿದ್ಯಾರ್ಥಿಯೊಬ್ಬಳು ಹೇಳಿರುವುದಾಗಿ ಎಎನ್‍ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಏನಿದು ಪ್ರಕರಣ?
ಬನಾರಸ್ ಹಿಂದೂ ವಿಶ್ವವಿದ್ಯಾಲಯದ ತ್ರಿವೇಣಿ ಹಾಸ್ಟೆಲ್ ವಿದ್ಯಾರ್ಥಿನಿಯೊಬ್ಬಳು ಗುರುವಾರ ಸಂಜೆ 6 ಗಂಟೆಗೆ ಹಾಸ್ಟೆಲ್‍ಗೆ ಮರಳುತ್ತಿದ್ದ ವೇಳೆ ಕಲಾ ಭವನ್ ಬಳಿ ಬೈಕ್‍ನಲ್ಲಿ ಆಗಮಿಸಿದ ಮೂವರು ಪುಂಡರು ಆಕೆಯೊಂದಿಗೆ ಅಸಭ್ಯ ರೀತಿಯಲ್ಲಿ ವರ್ತಿಸಿದ್ದಾರೆ. ಆ ವೇಳೆ ವಿದ್ಯಾರ್ಥಿನಿ ಸಹಾಯಕ್ಕಾಗಿ ಅಂಗಾಲಾಚಿದರೂ ಹಾಸ್ಟೆಲ್ ಕಾವಲುಗಾರ ಸಹಾಯಕ್ಕೆ ಬರಲಿಲ್ಲ. ಈ ಬಗ್ಗೆ ವಿದ್ಯಾರ್ಥಿನಿ ವಾರ್ಡನ್‍ಗೆ ದೂರು ನೀಡಿದಾಗ, ಆಕೆಗೆ ಸಹಾಯ ನೀಡುವ ಬದಲು ಕಾಲೇಜು ಅಧಿಕೃತರು ಆಕೆಯನ್ನು ಅವಹೇಳನ ಮಾಡಿದ್ದಾರೆ.

ವಿದ್ಯಾರ್ಥಿನಿಯನ್ನು ಅವಹೇಳನ ಮಾಡಿದ ವಿವಿ ಅಧಿಕೃತರ ವಿರುದ್ಧ ಹಾಸ್ಟೆಲ್‍ನ ವಿದ್ಯಾರ್ಥಿನಿಯರು ಶುಕ್ರವಾರದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಲೈಂಗಿಕ ದೌರ್ಜನ್ಯಕ್ಕೊಳಗಾಗಿರುವ ವಿದ್ಯಾರ್ಥಿನಿಯನ್ನು ಅವಹೇಳನ ಮಾಡಿದ ಹಾಸ್ಟೆಲ್ ಅಧಿಕೃತರು ಮತ್ತು ವಿಶ್ವವಿದ್ಯಾಲಯದ ಆಡಳಿತ ವರ್ಗದವರ ವಿರುದ್ಧ ಈ ಪ್ರತಿಭಟನೆ ನಡೆದಿದೆ.

Read These Next

ಪಿ.ಯು.ಕಾಲೇಜ್ ಸಹಪಠ್ಯ ಚಟುವಟಿಕೆ; ಇಂಗ್ಲಿಷ್ ಚರ್ಚಾ ಸ್ಪರ್ಧೆಯಲ್ಲಿ ಶಿಹಾಬುದ್ದೀನ್ ಪ್ರಥಮ

ಭಟ್ಕಳ: ಪದವಿ ಪೂರ್ವ ಶಿಕ್ಷಣ ಇಲಾಖೆ ಹಮ್ಮಿಕೊಂಡ ತಾಲೂಕಾ ಮಟ್ಟದ ಸಾಂಸ್ಕತಿಕ ಸಹ ಪಠ್ಯೇತರ ಚಟುವಟಿಕೆಗಳ ಸ್ಪರ್ಧೆಗಳಲ್ಲಿ ದಿ.ನ್ಯೂ ...