ಭ್ರಷ್ಟಾಚಾರ ನಿಗ್ರಹದಳದ ಇನ್ಸ್‍ಪೆಕ್ಟರ್ ಅಧಿಕಾರಿಗಳಿಗೆ ಲೈಪ್ಟ್ ರೈಟ್

Source: sonews | By Staff Correspondent | Published on 27th July 2018, 9:56 PM | State News | Don't Miss |

ಶ್ರೀನಿವಾಸಪುರ: ಅಧಿಕಾರಿಗಳಾದ ನೀವು ಸಾರ್ವಜನಿಕ ಕೆಲಸಕಾರ್ಯಗಳಿಗೆ ಸ್ಪಂದಿಸಬೇಕಾದ ಜವಾಬ್ದಾರಿ ನಿಮದಾಗಿದ್ದು ನೀವು ಸಾರ್ವಜನಿಕರನ್ನು ವಿನಾಕಾರಣ ಕಛೇರಿಗಳಿಗೆ ಅಲೆದಾಡಿಸದೇ ನ್ಯಾಯಯುತವಾಗಿ ಅವರ ಕೆಲಸಗಳನ್ನು ಮಾಡಿ ಕೊಡಬೇಕೆಂದು ಭ್ರಷ್ಟಾಚಾರ ನಿಗ್ರಹದಳದ ಇನ್ಸ್‍ಪೆಕ್ಟರ್ ವೈ.ಆರ್. ರಂಗಸ್ವಾಮಿ ತಿಳಿಸಿದರು.
     
ಪಟ್ಟಣದ ತಾಲ್ಲೂಕು ಪಂಚಾಯಿತಿ ಕಾರ್ಯಲಯದಲ್ಲಿ ನೆರವೇರಿಸಿದ್ದ ಸಾರ್ವಜನಿಕರ ಕುಂದುಕೊರತೆಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿ ಸಾರ್ವಜನಿಕರು ಯಾವುದೇ ಅಹವಾಲನ್ನು ನಿಮ್ಮ ಕಛೇರಿಗಳಿಗೆ ಬಂದ ಸಂದರ್ಭದಲ್ಲಿ ಅವರನ್ನು ಸೌಜನ್ಯದಿಂದ ಮಾತನಾಡಿ ಅವರ ಕೆಲಸಗಳನ್ನು ವಿನಯವಾಗಿ ಮಾಡಿಕೊಟ್ಟರೆ ಯಾವುದೇ ದೂರುಗಳು ಬರುವುದಿಲ್ಲಾ ಅಲ್ಲಿಯೇ ಇತ್ಯಾರ್ಥವಾಗುತ್ತವೆ ಎಲ್ಲಾ ಸಮಸ್ಯೆಗಳೂ ಪರಿಹಾರ ವಾಗುತ್ತವೆ ಇನ್ನೂ ಅದಕ್ಕೂ ಮೀರಿ ಹೆಚ್ಚಿನ ಸಮಸ್ಯೆಗಳ ದೂರುಗಳು ಬಂದಿದ್ದಲ್ಲಿ ನೀವು ನಿಮ್ಮ ಮೇಲಧಿಕಾರಿಗಳೋಂದಿಗೆ ಚರ್ಚಿಸಿ ಅವರ ಸಮಸ್ಯೆಗಳನ್ನು ಬಗೆಹರಿಸಿ ಎಂದರು.
    
ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ಎ.ಸಿ.ಬಿ ಅಧಿಕಾರಿಗಳ ದೂರವಾಣಿಸಂಖ್ಯೆವುಳ್ಳ ಬೋರ್ಡಗಳನ್ನು ನಾಮಪಲಕಗಳಲ್ಲಿ ಕಡ್ಡಾಯವಾಗಿ ಹಾಕಬೇಕು, ಯಾವುದೇ ರೀತಿಯ ಬ್ರಷ್ಠಾಚಾರವನ್ನು ಸಹಿಸಲು ಸಾದ್ಯವಿಲ್ಲಾ ಸಾರ್ವಜನಿಕರಿಂದ ಇನ್ನು ಮುಂದೆ ದೂರುಗಳು ಬಂದರೆ ಯಾವ ಮುಲಾಜು ಇಲ್ಲದೇ ಕಾನೂನು ಪ್ರಾಕಾರ ಶಿಸ್ತು ಕ್ರಮ ತೆಗೆದು ಕೊಳ್ಳಲಾಗುವುದು, ಆದ್ದರಿಂದ ಅಧಿಕಾರಿಗಳು ಬಹಳ ಎಚ್ಚರ ದಿಂದ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ನಿರ್ವಹಿಸಬೇಕು ಎಂದರು.
    
ಇದೇ ಸಂದರ್ಭದಲ್ಲಿ ಸಾರ್ವಜನಿಕರಿಂದ ಒಟ್ಟು 4 ಅಹವಾಲುಗಳು, ಇವುಗಳಲ್ಲಿ ಕಂದಾಯ ಇಲಾಖೆ-2, ಭೂ ಇಲಾಖೆ-1 ಗ್ರಾಮ ಪಂಚಾಯಿತಿಗೆ-1 ಅರ್ಜಿಗಳನ್ನು ಸ್ವೀಕರಿಸಿದರು
   
ಈ ಸಂದರ್ಭದಲ್ಲಿ ತಾಲ್ಲೂಕು ದಂಡಾಧಿಗಳಾದ ವೈ.ರವಿ, ಆರಕ್ಷಕ ವೃತ್ತ ನಿರೀಕ್ಷಕರಾದ ವೆಂಕಟರವಣಪ್ಪ, ನರೇಗ ಸಹಾಯಕ ನಿರ್ದೇಶಕರಾದ ರವಿಚಂದ್ರ, ಎಸಿಬಿ ಕಛೇರಿ ಸಿಬ್ಬಂದಿಯಾದ ಕೃಷ್ಣೇಗೌಡ, ಮದುಸೂದನ್, ತಾಲ್ಲೂಕು ಪಂಚಾಯಿತಿಯ ವ್ಯವಸ್ಥಾಪಕರಾದ ಪರಮೇಶ್, ಪ್ರಥಮದರ್ಜೆ ಸಹಾಯಕರಾದ ಆನಂದಾಚಾರಿ, ಲೆಕ್ಕಾಧೀಕಾರಿ ಮಂಜುನಾಥ್, ಹಾಗು ತಾಲ್ಲೂಕು ಮಟ್ಟದ ಎಲ್ಲಾ ಇಲಾಖಾಧೀಕಾರಿಗಳು ಹಾಗು ಸಾರ್ವಜನಿಕರು ಹಾಜರಿದ್ದರು.

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...