ಭಟಕಳ ಅರ್ಬನ್ ಬ್ಯಾಂಕಿಗೆ ಆನಂದಾಶ್ರಮ ಪಿಯು ಕಾಲೇಜ್ ಕಾಮರ್ಸ ವಿದ್ಯಾರ್ಥಿಗಳ ಭೇಟಿ 

Source: sonews | By Staff Correspondent | Published on 20th December 2018, 6:16 PM | Coastal News | Don't Miss |

ಭಟ್ಕಳ: ಇಲ್ಲಿನ ಆನಂದಾಶ್ರಮ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಕಾಮರ್ಸ ವಿದ್ಯಾರ್ಥಿಗಳು ಗುರುವಾರ ಭಟಕಳ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಗೆ ಭೇಟಿ ನೀಡಿ ಬ್ಯಾಂಕಿಂಗ್ ಮೆನೆಜಮೆಂಟ್, ಇನವೆಸ್ಟಮೆಂಟ್ ಹಾಗೂ ಸೇವಿಂಗ್ಸ್ ಬ್ಯಾಂಕ್ ಕುರಿತು ಮಾಹಿತಿಯನ್ನು ಪಡೆದರು.  

ಪ್ರಾಸ್ತಾವಿಕವಾಗಿ ಬ್ಯಾಂಕಿನ ಕುರಿತು ಮಾತನಾಡಿದ ಸಹಾಯಕ ಪ್ರಧಾನ ಕಾರ್ಯನಿರ್ವಾಹಕ ಸುಭಾಷ ಎಮ್. ಶೆಟ್ಟಿ ಬ್ಯಾಂಕು ಬೆಳೆದು ಬಂದ ಕುರಿತು ಹಾಗೂ ಬ್ಯಾಂಕಿಂಗ್ ಸೇವೆಯಲ್ಲಿ ತಮ್ಮ ಬ್ಯಾಂಕು ಮಂಚೂಣಿಯಲ್ಲಿರುವ ಕುರಿತು ವಿವರಿಸಿದರು.  ಬ್ಯಾಂಕಿಂಗ್ ಮೆನೆಜಮೆಂಟ್ ಹಾಗೂ ಸೇವಿಂಗ್ಸ್ ಬ್ಯಾಂಕ್ ಡಿಪಾಜಿಟ್ ಕುರಿತು ಬ್ಯಾಂಕಿನ ಸಿಬ್ಬಂದಿ ರೇಖಾ ಕಾಮತ ಹಾಗೂ ವಿದ್ಯಾ ಭಟ್ಟ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.  ಆನಂದಾಶ್ರಮ ಪಿಯು ಕಾಲೇಜಿನ ಉಪನ್ಯಾಸಕಿ ಸಿಸ್ಟರ್ ಮೋಲಿ ಹಾಗೂ ಶಹನಾ ಬೇಗಂ ವಿದ್ಯಾರ್ಥಿಗಳೊಂದಿಗೆ ಇದ್ದು ಸಹಕರಿಸಿದರು.   ಬ್ಯಾಂಕಿನ ಹಿರಿಯ ವ್ಯವಸ್ಥಾಪಕರುಗಳಾದ ಎಮ್.ಎಮ್. ಲೀಮಾ, ವಿ.ಎಸ್.ಶಾಸ್ತ್ರಿ ಹಾಗೂ ಬ್ಯಾಂಕಿಂಗ್ ಸಲಹೆಗಾರ ವಿ.ಬಿ.ಭಟಕಳಕರರವರು ಉಪಸ್ಥಿತರಿದ್ದರು.  ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಬ್ಯಾಂಕಿಂಗ್ ಕುರಿತು ವಿವಿಧ ಪ್ರಶ್ನೆಗಳನ್ನು ಕೇಳುವು ಮೂಲಕ ಮಾಹಿತಿ ಪಡೆದುಕೊಂಡರು.   

 

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...