ಡಾ.ಸ್ವಮಿನಾಥನ್ ವರದಿ ಜಾರಿಗೆ ಆಗ್ರಹಿಸಿ ರೈತಸಂಘದಿಂದ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ

Source: sonews | By Staff Correspondent | Published on 27th November 2018, 11:51 PM | State News |

ಕೋಲಾರ: ದೇಶದ ರೈತರ ಆತ್ಮಹತ್ಯೆ ತಡೆಗಟ್ಟಲು ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನೀಡಲು ಡಾ|| ಸ್ವಾಮಿನಾಥನ್ ವರದಿ ಜಾರಿ ಮಾಡಲು ಹಾಗೂ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್‍ಗಳ ಸಾಲ ಮನ್ನಾ ಮತ್ತಿತರ ರೈತರ ಜಲ್ವಂತ ಸಮಸ್ಯೆಗಳನ್ನು ಪರಿಸರಿಸುವಲ್ಲಿ ವಿಪಲವಾಗಿರುವ  ಕೇಂದ್ರ ಸರ್ಕಾರದ ವಿರುದ್ದ ದೆಹಲಿಯಲ್ಲಿ ನಡೆಯುವ ರೈತರ ರ್ಯಾಲಿಗೆ ಕೋಲಾರದಿಂದ 300 ಜನ ಪ್ರಯಾಣ ಬೆಳೆಸುವವರು ಎಂದು ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ ರೈತ ಸಂಘದ ಸಭೆಯಲ್ಲಿ ತಿಳಿಸಿದರು.
    
ಸಭೆಯಲ್ಲಿ ಮಾತನಾಡಿದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ದೀನೇ ದೀನೇ ಕೃಷಿಕನ ಬದುಕು ದುಸ್ತರವಾಗುತ್ತಿದೆ. ಬೆಳೆದ ಬೆಳೆಗೆ ಬೆಲೆಯಿಲ್ಲದೆ ಕಂಗಲಾಗಿ ಖಾಸಗಿ ಸಾಲಕ್ಕೆ ಸಿಲುಕಿ ತನ್ನ ಸ್ವಾಭಿಮಾನದ ಬದುಕಿಗೆ ಅಂತ್ಯ ಹೇಳುತ್ತಿದ್ದಾನೆ ಇದುವರೆಗೂ ದೇಶದಲ್ಲಿ 4 ಲಕ್ಷಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಆದರೆ ಇದು ಅನ್ನದಾತನ ಆತ್ಮಹತ್ಯೆಯಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರವೇ ಕೊಲೆ ಮಾಡಿದಂತಾಗಿದೆ ಏಕೆಂದರೆ ರೈತರ ಹೇಸರೇಳಿಕೊಂಡು ಅಧಿಕಾರಕ್ಕೆ ಬರುವ ಸರ್ಕಾರಗಳು ರೈತರ ಮರಣ ಶಾಸನ ಬರೆಯುತ್ತಿವೆ. ಬೆಳೆದ ಬೆಳೆಗೆ ಸೂಕ್ತವಾದ ಮಾರುಕಟ್ಟೆ ಇಲ್ಲ ಮೀಟರ್ ಬಡ್ಡಿದಂದೆಯಂತೆ ಕಮೀಷನ್ ದಂದೆ ಹಾಗೂ ರೈತರಿಗೆ ಅನ್ವಯವಾಗುವ ಪಂಡಿತರ ಸಲಹೆಗಳ ವರದಿಗಳನ್ನು ಜಾರಿ ಮಾಡುವಲ್ಲಿ ಸರ್ಕಾರಗಳು ವಿಪಲವಾಗಿವೆಂದು ಆಕ್ರೋಶ ವ್ಯಕ್ತಪಡಿಸಿದರು.
    
ಜಿಲ್ಲಾದ್ಯಕ್ಷ ಮರಗಲ್ ಶ್ರೀನಿವಾಸ್ ಮಾತನಾಡಿ ರೈತರನ್ನು ನಿರ್ಲಕ್ಷೆ ಮಾಡುತ್ತಿರುವ ಹಾಗೂ ಕೊಟ್ಟ ಮಾತುಗಳನ್ನು ತಪ್ಪುತ್ತಿರುವ ಸರ್ಕಾರಗಳಿಗೆ ಎಚ್ಚರಿಕೆ ನೀಡುವ ಜೊತೆಗೆ ದೇಶದಲ್ಲಿ ರೈತರ ಆತ್ಮಹತ್ಯೆಗಳನ್ನು ತಡೆಗಟ್ಟಲು ಹಾಗೂ ಕೃಷಿ ಬಿಕ್ಕಟ್ಟಿನಿಂದ ಪಾರು ಮಾಡಲು ಡಾ|| ಸ್ವಾಮಿನಾಥನ್ ವರದಿ ಜಾರಿ ಹಾಗೂ ಕೃಷಿ ಕೂಲಿಕಾರ್ಮಿಕರಿಗೆ ಕಡಿಮೆ ಬಡ್ಡಿ ಸಾಲ ಮತ್ತು ರಾಷ್ಟ್ರೀಕೃತ ಬ್ಯಾಂಕ್‍ಗಳ ಸಂಪೂರ್ಣ ಸಾಲ ಮನ್ನಾ ಮತ್ತಿತರ ಬೇಡಿಕೆಗಳನ್ನಿಟ್ಟುಕೊಂಡು ನಿಷ್ಕ್ರೀಯವಾಗಿರುವ ಕೇಂದ್ರ ಸರ್ಕಾರವನ್ನು ಬಡಿದೆಬ್ಬಿಸಲು 200 ಕ್ಕೂ ಹೆಚ್ಚೂ ಸಂಘಟನೆಗಳಿಂದ ದೆಹಲಿಯಲ್ಲಿ ನಡೆಯುತ್ತಿರುವ ರೈತ ಮುಕ್ತಿ ಸಮಾವೇಶಕ್ಕೆ ಕೋಲಾರದಿಂದ 300 ಜನ ರೈತರು ಪಾಲ್ಗೊಳ್ಳುವ ಮೂಲಕ ಕೋಲಾರ ಜಿಲ್ಲೆಯ ಜಲ್ವಂತ ಸಮಸ್ಯೆಗಳ ಬಗ್ಗೆ ದ್ವನಿ ಎತ್ತಲಾಗುವುದೆಂದು ತಿಳಿಸಿದರು.
    
ಈ ಹೋರಾಟದಲ್ಲಿ ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ,  ಮರಗಲ್ ಶ್ರೀನಿವಾಸ್, ಹುಲ್ಕೂರ್ ಹರೀಕುಮಾರ್,  ಮೀಸೆ ವೆಂಕಟೇಶಪ್ಪ, ವಡ್ಡಹಳ್ಳಿ ಮಂಜುನಾಥ್, ಕೋಲಾರ ತಾ.ಅದ್ಯಕ್ಷ ಈಕಂಬಳ್ಳಿ ಮಂಜುನಾಥ್, ಪುರುಷೋತ್ತಮ್, ತೆರ್ನಹಳ್ಳಿ ಆಂಜಿನಪ್ಪ, ವೆಂಕಿ, ಪಾರುಕ್‍ಪಾಷ, ಆನಂದರೆಡ್ಡಿ, ಗಣೇಶ್, ಮಾಲೂರು ತಾ.ಅದ್ಯಕ್ಷ ವೆಂಕಟೇಶ್, ಚಂದ್ರಪ್ಪ, ಶ್ರೀನಾಥ್, ಹರೀಶ್ ಬೂದಿಕೋಟೆ , ನಾಗರಾಜ್, ಅನಿಲ್, ಮುನಿರಾಜು, ಚಲಪತಿ, ನಂದೀಶ್, ದೇವರಾಜ್, ಕೃಷ್ಣಪ್ಪ,  ಪುತ್ತೇರಿ ರಾಜು, ಮುಂತಾದವರಿದ್ದರು.

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...