ಜಾಮಿಯಾ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಶತಾಯುಷಿ ಡಾ.ಅಲಿ ಮಲ್ಪಾ ನಿಧನ

Source: sonews | By sub editor | Published on 1st September 2017, 11:45 PM | Coastal News | State News | Gulf News | Special Report | Don't Miss |

ಭಟ್ಕಳ: ದಕ್ಷಿಣಭಾರತದ ಪ್ರಮುಖ ಧಾರ್ಮಿಕ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ, ಅಧ್ಯಕ್ಷ ಹಾಗೂ ತಂಝೀಮ್ ಸಂಸ್ಥೇಯ ಪೋಷಕ ಡಾ.ಅಲಿ ಮಲ್ಪಾ ಸಾಹೇಬ್(೧೦೦) ಶುಕ್ರವಾರ ರಾತ್ರಿ ತಮ್ಮ ಸ್ವಗೃಹದಲ್ಲಿ ನಿಧರಾದರು. ಇವರು ಐದು ಪುತ್ರರು, ಐದು ಪುತ್ರಿಯರು ಹಾಗೂ ಅಪಾರ ಬಂಧುಬಳಗನವನ್ನು ಅಗಲಿದ್ದಾರೆ.
ಒಂದು ಶತಮಾನಗಳ ಕಾಲ ಬಾಳಿ ಬದುಕಿದ ತಮ್ಮ ಜೀವನದುದ್ದಕ್ಕೂ ಶಿಕ್ಷಣ ಹಾಗೂ ಸಮುದಾಯದ ಅಭಿವೃದ್ಧಿಗಾಗಿ ಶ್ರಮಿಸಿದ ಡಾ. ಅಲಿ ಮಲ್ಪಾ ಇಂದು ಇಹಲೋಕಕ್ಕೆ ವಿದಾಯ ಹೇಳುವುದರ ಮೂಲಕ ದೀರ್ಘವಿಶ್ರಾಂತಿಗೆ ಜಾರಿಕೊಂಡರು. 
ಇವರಿಗೆ ಕೆಲವು ದಿನಗಳಿಂದ ಅನಾರೋಗ್ಯ ಬಾಧಿಸುತ್ತಿತ್ತು. ಮಂಗಳೂರಿನಲ್ಲಿ ಚಿಕಿತ್ಸೆಯನ್ನು ನೀಡಲಾಗಿತ್ತಾದರೂ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಾಣದೆ ಶುಕ್ರವಾರ ರಾತ್ರಿ ನಿಧರಾದರೆಂದು ಅವರ ಕುಟುಂಬ ಮೂಲಗಳು ದೃಡೀಕರಿವೆ. ಶನಿವಾರ ಝಹರ್ ನಮಾಝ್ ನಂತರ ನವಾಯತ್ ಕಾಲೋನಿ ಜಾಮಿಯಾ ಮಸಿದಿಯಲ್ಲಿ ಜನಾಝ ನಮಾಝ್ ನಿರ್ವಹಿಸಿ ಸಮೀಪದ ಖಬಸ್ಥಾನದಲ್ಲಿ ಧಫನ ಮಾಡಲಾಗುವುದು ಎಂದು ತಿಳಿದುಬಂದಿದೆ. 
ಇವರ ನಿಧನ ಸುದ್ದಿ ತಿಳಿಯುತ್ತಲೆ ನವಾಯತ್ ಕಾಲೋನಿಯಲ್ಲಿರುವ ಇವರ ಮನೆಗೆ ಜನರು ತಂಡೋಪತಂಡವಾಗಿ ಧಾವಿಸಿ ಬಂದು ಮೃತರ ದರ್ಶನ ಪಡೆದರು.ತಂಝೀಮ್ ಅಧ್ಯಕ್ಷ ಮುಝಮ್ಮಿಲ್ ಕಾಜಿಯಾ, ಉಪಾಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಪ್ರಧಾನ ಕಾರ್ಯದರ್ಶಿ ಮುಹಿದ್ದೀನ್ ಅಲ್ತಾಫ್ ಖರೂರಿ, ಕಾರ್ಯದರ್ಶಿ ಮೌಲಾನ ಸೈಯ್ಯದ್ ಯಾಸಿರ್ ಬರ್ಮಾವರ್ ನದ್ವಿ ಸೇರಿದಂತೆ ಹಲವು ಗಣ್ಯರು ಅವರ ಅಂತಿಮ ದರ್ಶನ ಪಡೆದು ಮೃತರ ಮಗ್ಫಿರತ್ ಗಾಗಿ ಪ್ರಾರ್ಥಿಸಿದರು. ಇವರ ನಿಧನಕ್ಕಾಗಿ ಹಲವು ಶಿಕ್ಷಣ ಸಂಸ್ಥೆಗಳು, ವಿವಿಧ ಸಂಘಟನೆ, ಜಮಾ‌ಅತ್ ಮುಖಂಡರು ಶೋಕವನ್ನು ವ್ಯಕ್ತಪಡಿಸಿದ್ದು ಮೃತರಿಗಾಗಿ ಪ್ರಾರ್ಥಿಸಿದ್ದಾರೆ. 
ಈ ಸಂದರ್ಭದಲ್ಲಿ ತಂಝೀಮ್ ಮುಖಂಡರು ಭಟ್ಕಳದ ಎಲ್ಲ ಮುಸ್ಲಿಮರಲ್ಲಿ ಅಂತಿಮ ಸಂಸ್ಕಾರದ ವರೆಗೆ ತಮ್ಮ ಅಂಗಡಿಮುಂಗಟ್ಟುಗಳನ್ನು ತೆರೆಯಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ. 

Read These Next

ಜಿಲ್ಲಾ ಮಟ್ಟದ ಕ್ರೀಡಾಕೂಟ;ದಿ ನ್ಯೂ ಇಂಗ್ಲೀಷ ಪಿಯು ಕಾಲೇಜಿನ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ

ಭಟ್ಕಳ; ಯಲ್ಲಾಪುರ ತಾಲೂಕಾ ಕ್ರಿಡಾಂಗಣದಲ್ಲಿ ನಡೆದ ಪದವಿ ಪೂರ್ವ ಕಾಲೇಜು ವಿದ್ಯಾರ್ಥೀಗಳ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಟ್ಕಳದ ...

ಉತ್ತರ ಕನ್ನಡ ಜಿಲ್ಲೆಯ ಅರ್ಬನ್ ಬ್ಯಾಂಕುಗಳಲ್ಲಿಯೇ ಅತ್ಯದಿಕ ಲಾಭ ಗಳಿಸಿದ ಭಟಕಳ ಅರ್ಬನ್ ಬ್ಯಾಂಕ್

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಅರ್ಬನ್ ಬ್ಯಾಂಕುಗಳಲ್ಲಿಯೇ ಅತ್ಯಧಿಕ ಲಾಭ ಗಳಿಸಿದ ಭಟಕಳ ಅರ್ಬನ್ ಬ್ಯಾಂಕ್ ಅತ್ಯುನ್ನತ ಗ್ರಾಹಕ ...

ದಿನ ನಿತ್ಯದ ಅಗತ್ಯ ವಸ್ತುಗಳನ್ನು ಜಿಎಸ್ಟಿ ವ್ಯಾಪ್ತಿಗೆ ತರುವಂತೆ ಆಗ್ರಹಿಸಿ ರೈತಸಂಘದಿಂದ ಪ್ರತಿಭಟನೆ

ಕೋಲಾರ: ಜನ ಸಾಮಾನ್ಯರ ದಿನ ನಿತ್ಯದ ಅಗತ್ಯ ವಸ್ತುಗಳಾದ ಡೀಜಲ್, ಪೆಟ್ರೋಲ್, ಗ್ಯಾಸ್‍ನ್ನು ಜಿ.ಎಸ್.ಟಿ ವ್ಯಾಪ್ತಿಗೆ ತರಬೇಕೆಂದು ...

ಭಟ್ಕಳ-ಹೊನ್ನಾವರ ವಿಧಾನಸಭಾ ಚುನಾವಣೆ; ಕಾಂಗ್ರೇಸ್ ಬೆಂಬಲಕ್ಕೆ ನಿಂತ ಕೆನರಾ ಕಲೀಝ್ ಕೌನ್ಸಿಲ್

ಭಟ್ಕಳ: ಕರಾವಳಿಯ ಶರಾವತಿ ನದೀ ತೀರದ ಸುಮಾರು 29ಕ್ಕೂ ಹೆಚ್ಚು ಜಮಾಅತ್ ಗಳ ಒಕ್ಕೂಟವಾಗಿರುವ ಗಲ್ಫ್‍ನಲ್ಲಿ ಸ್ಥಾಪಿತ ಕೆನರಾ ಮುಸ್ಲಿಮ್ ...

ಶಾರ್ಜಾ: ಕರ್ನಾಟಕ ಸಂಘ ಶಾರ್ಜಾದ 15ನೇ ವಾರ್ಷಿಕೋತ್ಸವ, 62ನೇ ಕರ್ನಾಟಕ ರಾಜ್ಯೋತ್ಸವ ಮತ್ತು ಮಯೂರ ಪ್ರಶಸ್ತಿ ಪ್ರದಾನ ಸಮಾರಂಭ

2017ನೇ ಸಾಲಿನ ಪ್ರತಿಷ್ಠಿತ "ಮಯೂರ- ವಿಶ್ವ ಕನ್ನಡಿಗ ಪ್ರಶಸ್ತಿ" ಶ್ರೀ ಸರ್ವೋತ್ತಮ ಶೆಟ್ಟಿಯವರಿಗೆ ಪ್ರದಾನ

ಪಟ್ಟಣದವಾಸಿಗಳೆ ಎಚ್ಚರ  ಬೀದಿಯಲ್ಲಿ ಬೌ ಬೌ ಸದ್ದು ಎಚ್ಚರ ತಪ್ಪಿದರೂ ನಾಯಿ ಕಡಿತ. ಕೈಕಟ್ಟಿ ಕುಳಿತಿರುವ ಪುರಸಭೆ ಅಧಿಕಾರಿಗಳು

ಶ್ರೀನಿವಾಸಪುರ: ಪಟ್ಟಣದವಾಸಿಗಳೆ ಎಚ್ಚರ  ಪಟ್ಟಣದ ಹಾದಿ ಬೀದಿಯಲ್ಲಿ ಈಗ ಬೌ ಬೌ ಸದ್ದು. ಸ್ವಲ್ಪ ಎಚ್ಚರ ತಪ್ಪಿದರೂ ನಾಯಿ ಕಡಿತ ...