ಕೋಲಾರ : ಅಜ್ಞಾತ ಕಲಾವಿದರಿಗೆ ಕಾರ್ಯಕ್ರಮ ಆಯೋಜಿಸುವುದು ಅನ್ಯಾಯವಾಗಿದೆ; ಜನ್ನಘಟ್ಟ ಕೃಷ್ಣಮೂರ್ತಿ

Source: S.O. News Service | By Mohammed Ismail | Published on 12th June 2018, 7:00 PM | State News |

ಕೋಲಾರ : ಕಷ್ಠದ ಪರಿಸ್ಥಿತಿಯಲ್ಲಿರುವ 58 ವರ್ಷ ಮೀರಿರುವ ಎಲ್ಲಾ ಕಲಾವಿದರಿಗೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ನೀಡುವ ಮಾಶಾಸನವನ್ನು 1500 ನೀಡುತ್ತಿದ್ದು ನೂತನ ಸಮ್ಮಿಶ್ರ ಸರ್ಕಾರ ಕಲಾವಿದರ ಮಾಶಾಸನ 5000ಕ್ಕೆ ಏರಿಸಿ, ವೃದ್ಧ ಕಲಾವಿದರ ಜೀವನಕ್ಕೆ ಆಧಾರವಾಗಬೇಕೆಂದು ಕನ್ನಡ ಜಾನಪದ ಕಲಾ ಸಂಘದ ಅಧ್ಯಕ್ಷ ಜನ್ನಘಟ್ಟ ಕೃಷ್ಣಮೂರ್ತಿ ತಿಳಿಸಿದರು.

ಕನ್ನಡ ಜಾನಪದ ಕಲಾ ಸಂಘ ಜನ್ನಘಟ್ಟ, ಮಾನವ ಹಕ್ಕುಗಳ ಜಾಗೃತಿ ಸಮಿತಿ, ಕೋಲಾರ, ತೇಜಸ್ವಿನಿ ಸಾಂಸ್ಕøತಿಕ ಕಲಾ ಸಂಘ, ಎಸ್.ಜಿ.ಕೋಟೆ ಇವರ ವತಿಯಿಂದ ಹಮ್ಮಿಕೊಂಡಿದ್ದ ‘ಗಡಿನಾಡು ಸಾಂಸ್ಕøತಿಕ ಉತ್ಸವ’ ಕಾರ್ಯಕ್ರಮವನ್ನು ಕೆಜಿಎಫ್ ತಾಲ್ಲೂಕು ಕ್ಯಾಸಂಬಳ್ಳಿ ಹೋಬಳಿ, ಕಣ್ಣೂರು ಗ್ರಾಮದ ಶ್ರೀ ತಿಮ್ಮರಾಯಸ್ವಾಮಿ ದೇವಾಲಯದ ಆವಣದಲ್ಲಿ ಜ್ಯೋತಿ ಬೆಳಸಿಗಿ ಮಾತನಾಡಿದರು.

 ಗಡಿನಾಡ ಪ್ರದೇಶದಲ್ಲಿ ತೆಲುಗು, ತಮಿಳು ಭಾಷೆಗಳ ಮಧ್ಯೆ ಕನ್ನಡವು ನಲಿಗಿ ಹೋಗುತ್ತಿದ್ದು, ಗ್ರಾಮೀಣ ಪ್ರದೇಶದಲ್ಲಿ ಕನ್ನಡ ಭಾಷೆ, ಜನಪದ ಹಾಡು, ತತ್ವಪದ, ಬಜನೆ, ತಮಟೆ, ಕೋಲಾಟ, ಭರತನಾಟ್ಯ, ಹರಿಕಥೆ, ಕಲೆಗಳೆಲ್ಲವೂ ಸಹ ಮಾಯವಾಗುತ್ತಿದ್ದು, ಇವುಗಳನ್ನು ಉಳಿಸಿ ಬೆಳೆಸಬೇಕಾಗಿದೆ. ಕರ್ನಾಟಕ ಸರ್ಕಾರ ಕಲಾವಿದರನ್ನು ಗುರ್ತಿಸಿ, ಅವರಲ್ಲಿರುವ ಕೆಲೆಗೆ ಪ್ರೋತ್ಸಾಹ ನೀಡಬೇಕು. ಅವರು ನುಡಿಸುವ ವಾದ್ಯಗಳನ್ನು ಇಲಾಖೆಯಿಂದ ಗುರ್ತಿಸಿ ಪ್ರೋತ್ಸಾಹಿಸಬೇಕಾಗಿದೆÉ. ಕಲೆಯ ಗಂಧವೇ ಗೊತ್ತಿಲ್ಲದವರಿಗೆ ಕಾರ್ಯಕ್ರಮಗಳನ್ನು ನೀಡಿ ನಿಜವಾದ ಕಲಾವಿದರಿಗೆ ಅನ್ಯಾಯ ಮಾಡುತ್ತಿರುವುದು ವಿಷಾದನೀಯ. ಮುಂದಿನ ದಿನಗಳಲ್ಲಿ ಇಲಾಖೆಯು ಎಚ್ಚೆತ್ತುಕೊಳ್ಳದಿದ್ದರೆ, ಇಲಾಖೆಯ ಮುಂದೆ ಧರಣಿ ನಡೆಸಿ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನಿವೃತ್ತ ಉಪ ಪ್ರಾಂಶುಪಾಲ ಪಿ. ಕೃಷ್ಣಪ್ಪ ಮಾತನಾಡಿ ಅದ್ಯಾತ್ಮಿಕ ಚಿಂತನೆ ಮತ್ತು ಗಡಿ ನಾಡು ಕನ್ನಡದ ಬಗ್ಗೆ ವಿಶ್ಲೇಷಿಸಿದರು.

ತೇಜಸ್ವಿನಿ ಸಾಂಸ್ಕøತಿಕ ಕಲಾ ಸಂಘದ ಅಧ್ಯಕ್ಷರಾದ ಬಿ.ಕೆ. ರೇಣುಕಾ ಮಾತನಾಡಿ ಕಲಾವಿದರೆಲ್ಲರೂ ಒಗ್ಗೂಡಿ ಸಂಘಟಿತರಾಗಿ ನಿಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಬೇಕಾದ ಅನಿವಾರ್ಯ ಉಂಟಾಗಿದ್ದು, ಈ ನಿಟ್ಟಿನಲ್ಲಿ ಪ್ರತಿ ತಿಂಗಳು ಎಲ್ಲಾ ಕಲಾವಿದರು ಒಂದೆಡೆ ಸೇರಿ ತಮ್ಮಲ್ಲಿರುವ ಪ್ರತಿಭೆಯನ್ನು ಹೊರಹೊಮ್ಮಿ ಇಲಾಖೆಯಿಂದ ಸಿಗುವ ಸೌಲತ್ತುಗಳನ್ನು ಪಡೆದು ತಮ್ಮ ಕಲೆಗಳನ್ನು ಮುಂದುವರೆಸಿ ಮುಂದಿನ ಪಿಳಿಗೆಗೂ ಕಲೆಯನ್ನು ಕಲಿಸಿ ಬೆಳೆಸಬೇಕಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಭರತನಾಟ್ಯ ನಡೆಸಿಕೊಟ್ಟ ತೇಜುಶ್ರೀ ತಂಡದವರಿಗೆ ಹಾಗೂ ಕಣ್ಣೂರು ಸುರೇಶ್, ಹಾಮ್ಮೋನಿಯಂ ಶ್ರೀರಾಮಪ್ಪ, ತಬಲ ಕಂಗಾಂಡ್ಲಹಳ್ಳಿ ವೆಂಕಟರಾಮಪ್ಪ, ಎನ್.ಜಿ. ಹುಲ್ಕೂರ್ ತಿಪ್ಪಣ್ಣ, ತಿರುಮಲ ಮೂರ್ತಿ, ಕಣ್ಣೂರು ನಾಗರಾಜ್ ರವರುಗಳನ್ನು ಸನ್ಮಾನಿಸಲಾಯಿತು. ಭಜನೆ ಕಾರ್ಯಕ್ರಮವನ್ನು ಗೊಲ್ಲ ಗುರುವೇನಹಳ್ಳಿ ಜಿ.ವಿ. ಮುನಿರತ್ನಂರೆಡ್ಡಿ, ಸುಗಮ ಸಂಗೀತ ಕಾರ್ಯಕ್ರಮವನ್ನು ಹೆಚ್.ರೇಣುಕಾದೇವಿ, ಸೌಮ್ಯ, ಎಸ್. ಪವಿತ್ರ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಎನ್.ಜಿ. ಹುಲ್ಕೂರು ಮುನಿಸ್ವಾಮಿ, ವೆಂಕಟರಾಮಪ್ಪ, ದೇವರಾಜು, ಶ್ರೀರಾಮಪ್ಪ, ವೆಂಕಟೇಶಪ್ಪ, ಸುಬ್ಬಯ್ಯ, ತಿಪ್ಪೇ ನಾಯ್ಡು ಮುಂತಾದವರು ಹಾಜರಿದ್ದು, ಕಣ್ಣೂರು ಸುರೇಶ್ ಸ್ವಾಗತಿಸಿ ವಂದಿಸಿದರು.
 

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!