ಅಗಸ್ಟ 1 ರಿಂದ ಪ್ಲಾಸ್ಟೀಕ್ ಪರಿಣಾಮಕಾರಿ ತಡೆಯಿರಿ : ನ್ಯಾಯಾಧೀಶ ಕಬ್ಬೂರ

Source: sonews | By sub editor | Published on 22nd July 2018, 11:15 PM | Coastal News | Don't Miss |

ಮುಂಡಗೋಡ : . ಅಗಸ್ಟ್ 1 ರಿಂದಲೇ ಈ ಪ್ಲಾಸ್ಟಿಕ್ ನಿಷೇದ ಯೋಜನೆ ಪರಿಣಾಮಕಾರಿಯಾಗಿ ಜಾರಿಯಾಗಬೇಕು ಪರಿಸರ ರಕ್ಷಣೆ ಮಾಡುವುದನ್ನು ನಮ್ಮ ಮನೆಯಿಂದಲೇ ಪ್ರಾರಂಭೀಸಬೇಕು ಎಂದು ಜೆಎಮ್‍ಎಫ್‍ಸಿ ನ್ಯಾಯಾಧೀಶ ಈರನಗೌಡ ಕಬ್ಬೂರ ಹೇಳಿದರು.

ಅವರು ಜೆಎಮ್‍ಎಫ್‍ಸಿ ನ್ಯಾಯಾಲಯದ ಸಭಾಂಗಣದಲ್ಲಿ ಪರಿಸರದಲ್ಲಿ  ಪ್ಲಾಸ್ಟಿಕ್ ಮುಕ್ತಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಆಯೋಜಿಸಲಾಗಿದ್ದ ಹೋಟೆಲ್, ಬೇಕರಿ, ಕಿರಾಣಿ ವರ್ತಕರ ಸಭೆಯನ್ನುದ್ದೇಶಿಮಾತನಾಡಿದರು.
ಪ್ಲಾಸ್ಟೀಕ್ ದಿಂದ ಪರಿಸರದ ಮೇಲೆ ಕೆಟ್ಟಪರಿಣಾಮ ಬೀಳುವುತ್ತಿರುವದರಿಂದ ಲಾಭ ನಷ್ಟವನ್ನು ಮಾತ್ರ ಪರಿಗಣಿಸದೇ ಪರಿಸರ ಹಾಗೂ ಜನರ ಆರೋಗ್ಯ ಹಿತ ದೃಷ್ಟಿಯಿಂದ ಪ್ರತಿಯೊಬ್ಬರು ಅವಶ್ಯವಾಗಿ ಚಿಂತಿಸಬೇಕಿದ್ದು, ಕಿರಾಣಿ ಅಂಗಡಿ, ಹೋಟೆಲ್, ಬೇಕರಿ ಸೇರಿದಂತೆ ಯಾವುದೇ ವ್ಯಾಪಾರಸ್ಥರಿರಲಿ ಪ್ರತಿಯೊಬ್ಬರು ಕೂಡ ಸಂಪೂರ್ಣವಾಗಿ ಪ್ಲಾಸ್ಟಿಕ್ ಮುಕ್ತವಾಗಿ ವ್ಯವಹರಿಸುವಂತೆ ಹೇಳಿದರು

ಪ್ಲಾಸ್ಟೀಕ್‍ಗೆ ಮುಕ್ತಿ ಹಾಡಲು ಪ್ರತಿಯೊಬ್ಬರು ಕೈಜೋಡಿಸಿದರೆ ಇದು ಯಶಸ್ವಿಯಾಗುತ್ತದೆ. ನಮ್ಮ ಲಾಭದ ದೃಷ್ಟಿಯಿಂದ ತಾತ್ಕಾಲಕ್ಕೆ ಪ್ಲಾಸ್ಟಿಕ್ ಬಳಸುವುದರಿಂದ ಪರಿಸರ ಹಾಗೂ ಸಾರ್ವಜನಿಕರ ಮೇಲೆ ಆಗುವ ದುಷ್ಪರಿಣಾಮಕ್ಕೆ ಯಾರು ಹೊಣೆಯಾಗುತ್ತಾರೆ ಎಂದು ಪ್ರಶ್ನಿಸಿದ ಅವರು, ಸಾಮಾಜಿಕ ಕಳಕಳಿಯಿಂದ ನಡೆದುಕೊಳ್ಳುವ ಜವಾಬ್ದಾರಿ ನಮ್ಮೆಲರ ಮೇಲಿದೆ. ಶಾಲಾ ಕಾಲೇಜುಗಳ ಮಕ್ಕಳಿಗೆ ಪ್ಲಾಸ್ಟಿಕ್ ನಿಂದ ಆಗುವ ಹಾನಿ ಹಾಗೂ ಪರಿಸರದ ಬಗ್ಗೆ ವಿಶೇಷ ಉಪನ್ಯಾಸ ನೀಡಿ ಮಕ್ಕಳಲ್ಲಿ ಜಾಗೃತಿ ಮೂಡಿಸುವಂತೆ ಪ್ರತಿಯೊಂದು ಶಾಲಾ ಕಾಲೇಜುಗಳ ಮುಖ್ಯಾಧ್ಯಾಪಕರಿಗೆ ಆದೇಶಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜಪ್ಪ ಅವರಿಗೆ ಸೂಚಿಸಿದರು 
ತಹಸೀಲ್ದಾರ ಅಶೋಕ ಗುರಾಣಿ, ಪ.ಪಂ ಮುಖ್ಯಾಧಿಕಾರಿ ಸಂಗನಬಸಯ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ಬೈಲಪತ್ತಾರ, ಸಮಾಜ ಕಲ್ಯಾಣಾಧಿಕಾರಿ ಅಶೊಕ ಪವಾರ, ಪ.ಪಂ ಇಂಜಿನಿಯರ್ ಶಂಕರ ದಂಡಿನ್, ನ್ಯಾಯವಾದಿ ಸುಜೀತ ಸದಾನಂದ, ಸಲೀಂ ನಂದಿಕಟ್ಟಿ, ಹೊಟೆಲ್ ವ್ಯಾಪರಸ್ಥ ನಾರಾಯಣ ಉಪ್ಪುಂದ, ಉಮೇಶ ರಾಯ್ಕರ, ಸುನೀಲ ಬೈಲೂರ, ರೋಟರಿ ಕ್ಲಬ್ ಅಧ್ಯಕ್ಷ ಪ್ರಕಾಶ ಹುದ್ಮನಿ, ಕಾರ್ಯದರ್ಶಿ ಎಸ್.ಡಿ.ಮುಡೆಣ್ಣವರ ಮುಂತಾದವರು ಉಪಸ್ಥಿತರಿದ್ದರು.
        

Read These Next

ಉತ್ತರ ಕನ್ನಡ ಜಿಲ್ಲೆಯ ಅರ್ಬನ್ ಬ್ಯಾಂಕುಗಳಲ್ಲಿಯೇ ಅತ್ಯದಿಕ ಲಾಭ ಗಳಿಸಿದ ಭಟಕಳ ಅರ್ಬನ್ ಬ್ಯಾಂಕ್

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಅರ್ಬನ್ ಬ್ಯಾಂಕುಗಳಲ್ಲಿಯೇ ಅತ್ಯಧಿಕ ಲಾಭ ಗಳಿಸಿದ ಭಟಕಳ ಅರ್ಬನ್ ಬ್ಯಾಂಕ್ ಅತ್ಯುನ್ನತ ಗ್ರಾಹಕ ...

ಯಲ್ಲಾಪುರದಲ್ಲಿ ಬಾಲಕರ ಮೇಲೆ ಬೀದಿನಾಯಿಗಳಿಂದ ದಾಳಿ;ಕಣ್ಮುಚ್ಚಿಕೊಂಡಿರು ತಾಲೂಕಾಡಳಿತ

ಯಲ್ಲಾಪುರ: ಉತ್ತರಕನ್ನಡ ಜಿಲ್ಲಾದ್ಯಂತ ಬೀದಿನಾಯಿ ಹಾಗೂ ಹುಚ್ಚುನಾಯಿಗಳ ಕಾಟ ದಿನೆ ದಿನೆ ಹೆಚ್ಚಾಗುತ್ತಿದ್ದು ಜಿಲ್ಲಾಡಳಿತ ಇದಕ್ಕೂ ...

ದಿನ ನಿತ್ಯದ ಅಗತ್ಯ ವಸ್ತುಗಳನ್ನು ಜಿಎಸ್ಟಿ ವ್ಯಾಪ್ತಿಗೆ ತರುವಂತೆ ಆಗ್ರಹಿಸಿ ರೈತಸಂಘದಿಂದ ಪ್ರತಿಭಟನೆ

ಕೋಲಾರ: ಜನ ಸಾಮಾನ್ಯರ ದಿನ ನಿತ್ಯದ ಅಗತ್ಯ ವಸ್ತುಗಳಾದ ಡೀಜಲ್, ಪೆಟ್ರೋಲ್, ಗ್ಯಾಸ್‍ನ್ನು ಜಿ.ಎಸ್.ಟಿ ವ್ಯಾಪ್ತಿಗೆ ತರಬೇಕೆಂದು ...

ಅಜರ್‍ಬೈಜಾನ್ ಜೊತೆಗಿನ ದ್ವಿಪಕ್ಷೀಯ ಸಂಬಂಧವನ್ನು ಭಾರತ ಗೌರವಿಸುತ್ತದೆ - ಮುನಿಯಪ್ಪ

ಕೋಲಾರ:  ಭಾರತ ಮತ್ತು ಅಜರ್‍ಬೈಜಾನ್ ನಮ್ಮ ಐತಿಹಾಸಿಕ ಸಂಬಂಧಗಳು ಮತ್ತು ಹಂಚಿಕೆ ಸಂಪ್ರದಾಯಗಳ ಆಧಾರದ ಮೇಲೆ ನಿಕಟ ಮತ್ತು ಸೌಹಾರ್ದಯುತ ...

ಯಲ್ಲಾಪುರದಲ್ಲಿ ಬಾಲಕರ ಮೇಲೆ ಬೀದಿನಾಯಿಗಳಿಂದ ದಾಳಿ;ಕಣ್ಮುಚ್ಚಿಕೊಂಡಿರು ತಾಲೂಕಾಡಳಿತ

ಯಲ್ಲಾಪುರ: ಉತ್ತರಕನ್ನಡ ಜಿಲ್ಲಾದ್ಯಂತ ಬೀದಿನಾಯಿ ಹಾಗೂ ಹುಚ್ಚುನಾಯಿಗಳ ಕಾಟ ದಿನೆ ದಿನೆ ಹೆಚ್ಚಾಗುತ್ತಿದ್ದು ಜಿಲ್ಲಾಡಳಿತ ಇದಕ್ಕೂ ...

ಪಟ್ಟಣದವಾಸಿಗಳೆ ಎಚ್ಚರ  ಬೀದಿಯಲ್ಲಿ ಬೌ ಬೌ ಸದ್ದು ಎಚ್ಚರ ತಪ್ಪಿದರೂ ನಾಯಿ ಕಡಿತ. ಕೈಕಟ್ಟಿ ಕುಳಿತಿರುವ ಪುರಸಭೆ ಅಧಿಕಾರಿಗಳು

ಶ್ರೀನಿವಾಸಪುರ: ಪಟ್ಟಣದವಾಸಿಗಳೆ ಎಚ್ಚರ  ಪಟ್ಟಣದ ಹಾದಿ ಬೀದಿಯಲ್ಲಿ ಈಗ ಬೌ ಬೌ ಸದ್ದು. ಸ್ವಲ್ಪ ಎಚ್ಚರ ತಪ್ಪಿದರೂ ನಾಯಿ ಕಡಿತ ...