ಮೆಟ್ರಿಕ್-ನಂತರದ ವಿದ್ಯಾರ್ಥಿವೇತನ ಅವಧಿ ವಿಸ್ತರಣೆ

Source: sonews | By Staff Correspondent | Published on 1st November 2018, 12:30 AM | Coastal News |

ಕಾರವಾರ  : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ನೀಡಲಾಗುತ್ತಿರುವ ಮೆಟ್ರಿಕ್-ನಂತರದ ವಿದ್ಯಾರ್ಥಿವೇತನ ಶುಲ್ಕ ವಿನಾಯಿತಿ, ವಿದ್ಯಾಸಿರಿಊಟ ಮತ್ತು ವಸತಿ ಸಹಾಯ ಯೋಜನೆ ಮತ್ತು ನರ್ಸಿಂಗ್ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಸೌಲಭ್ಯಕ್ಕಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಧಿಯನ್ನು ನವ್ಹಂಬರ 5 ರವರೆಗೆ ವಿಸ್ತರಿಸಲಾಗಿದೆ.

ಅರ್ಜಿ ಸಲ್ಲಿಸಬೇಕಾದ ವೆಬ್‍ಸೈಟ್ ವಿಳಾಸ: www.karepass.cgg.gov.inಹಾಗೂ www.backwardclasses.kar.nic.in ನೋಡಬಹುದು.  

ಕಾರ್ಯಕ್ರಮಗಳ ವಿವರ, ಅರ್ಹತೆ, ಸಲ್ಲಿಸಬೇಕಾದ ದಾಖಲೆಗಳು ಹಾಗೂ ವಿದ್ಯಾರ್ಥಿವೇತನಕ್ಕೆ ಸಂಬಂಧಿಸಿದ ಸರ್ಕಾರಿ ಆದೇಶಗಳ ಬಗ್ಗೆ ಮಾಹಿತಿ ಪಡೆಯಲು ಇಲಾಖಾ ವೆಬ್‍ಸೈಟ್ www.backwardclasses.kar.nic.in ನ್ನು ನೋಡಬಹುದು. ಹೆಚ್ಚಿನ ಮಾಹಿತಿಗಾಗಿ ದೂ.ಸಂ: 08382-226588 ನ್ನು ಸಂಪರ್ಕಿಸಬಹುದೆಂದು ಜಿಲ್ಲಾ  ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಫಸಲ ಬಿಮಾ ವಿಮಾ ಸೌಲಭ್ಯ ಮುಂದುವರಿಕೆ.
ಕಾರವಾರ:  ಜಿಲ್ಲೆಯಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರದಾನಮಂತ್ರಿ ಫಸಲ್ (ವಿಮಾ) ಯೋಜನೆಯನ್ನು 2018-19ನೇ  ಸಾಲಿನ ಹಿಂಗಾರು ಹಾಗೂ ಬೇಸಿಗೆ ಹಂಗಾಮಿನಲ್ಲಿ ಮಳೆಯಾಶ್ರಿತ ಶೇಂಗಾ, ಹೆಸರು, ಹುರುಳಿ ಮತ್ತು ನೀರಾವರಿ ಭತ್ತ ಬೆಳೆಗಳಿಗೆ ಮಾತ್ರ ವಿಮಾ ಸೌಲಭ್ಯವನ್ನು ಮುಂದುವರಿಸಲಾಗಿದೆ. 

ಮಳೆಯಾಶ್ರಿತ  ನೆಲೆಗಡಲೆ/ಶೇಂಗಾ) ಸಾಮಾನ್ಯ ವಿಮೆಗೆ ಪ್ರತಿ ಹೆಕ್ಟೇರ ಗೆ ವಿಮಾ ಮೊತ್ತ 46000.00 ರೂ ಹಾಗೂ ವಿಮಾ ಕಂತು 690.00 ರೂ. ಭತ್ತ (ನೀರಾವರಿ) ವಿಮಾ ಮೊತ್ತ 86000.00 ರೂ ಮತ್ತು ವಿಮಾ ಕಂತು 1290.00 ರೂ. ಮಳೆಯಾಶ್ರಿತ ಹೆಸರು  ವಿಮಾ ಮೊತ್ತ 29000.00 ರೂ ಮತ್ತು ವಿಮಾ ಕಂತು 435.00 ರೂ, ಹುರುಳಿ ವಿಮಾ ಮೊತ್ತ 18000.00 ರೂ ಮತ್ತು ವಿಮಾ ಕಂತು 270 ರೂ ಅನ್ವಯಿಸುತ್ತದೆ. 
         
ಈ ಯೋಜನೆಯಡಿಯಲ್ಲಿ ಬೆಳೆ ಸಾಲ ಪಡೆಯುವ ಮತ್ತು ಪಡೆಯದ ರೈತರು ಬ್ಯಾಂಕುಗಳಿಗೆ ಹಿಂಗಾರು ಹಂಗಾಮಿಗಾಗಿ ಡಿಸೆಂಬರ 31 ರೋಳಗೆ ಮತ್ತು ಬೇಸಿಗೆ ಹಂಗಾಮಿಗಾಗಿ 28-2-2019 ರೊಳಗೆ ನಿಗದಿಪಡಿಸಿದ ವಿಮಾ ಕಂತನ್ನು ಕಟ್ಟಿ ನೊಂದಾಯಿಸಿಕೊಳ್ಳಬಹುದು, ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ , ಸಹಾಯಕ ಕೃಷಿ ನಿರ್ದೇಶಕರ ಕಛೇರಿ ಅಥವಾ ಜಂಟಿ ನಿರ್ದೇಶಕರ ಕಛೇರಿ ಸಂಪರ್ಕಿಸಲು ತಿಳಿಸಲಾಗಿದೆ.

            
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...