ಭಟ್ಕಳದಲ್ಲಿ ಮುಸ್ಲಿಮರ ಪವಿತ್ರ ರಮಜಾನ್ ಹಬ್ಬದ ಶಾಂತಿ ಆಚರಣೆಗೆ ಸಹಾಯಕ ಆಯುಕ್ತರು ಕರೆ.

Source: so news | By MV Bhatkal | Published on 14th June 2018, 4:49 PM | Coastal News | Don't Miss |

ಭಟ್ಕಳ ನೂತನ ಸಹಾಯಕ ಆಯುಕ್ತ ಶಾಸಿದ ಅಹ್ಮದ್ ಮುಲ್ಲಾ ಅವರು ಬುಧವಾರದಂದು ಇಲ್ಲಿನ ಪ್ರವಾಸಿ ಬಂಗ್ಲೆಯಲ್ಲಿ ಪೊಲೀಸ್ ಇಲಾಖೆ ಹಾಗೂ ತಾಲೂಕಾಢಳಿತ ವತಿಯಿಂದ ಕರೆಯಲಾದ ಮುಸ್ಲಿಮರ ಪವಿತ್ರ ರಮಜಾನ್ ಹಬ್ಬದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಹಾಯಕ ಆಯುಕ್ತ ಶಾಸಿದ ಅಹ್ಮದ್ ಮುಲ್ಲಾ‘ಹಬ್ಬಗಳು ಸಂತೋಷ ಸಡಗರದಿಂದ ಆಚರಿಸಲ್ಪಡುವಂತಾಗಬೇಕು. 1993ರಲ್ಲಿ ನಡೆದ ಅಹಿತಕರ ಘಟನೆ ಅಲ್ಲಿಗೆ ಮುಗಿದಿದ್ದು, ಅದನ್ನು ಅಲ್ಲಿಯೇ ಮರೆತು ಮುನ್ನಡೆಯಬೇಕು. ಒಂದೊಂದು ಸಂಧರ್ಭಕ್ಕೆ ಒಂದೊಂದು ಘಟನೆಯ ನಡೆಯಲಿದ್ದು, ಈ ಹಿನ್ನೆಲೆಯಲ್ಲಿಯೇ ಸಭೆಯನ್ನು ನಡೆಸಿಲ್ಲವಾಗಿದೆ. ಹೊಸದಾಗಿ ಭಟ್ಕಳಕ್ಕೆ ವರ್ಗಾವಣೆಗೊಂಡು ಬಂದಿದ್ದು, ಸೂಕ್ಷ್ಮವಾಗಿ ಗ್ರಹಿಸಿದಾಗ ಭಟ್ಕಳ ಸುಂದರ ಊರಾಗಿದೆ. ಪವಿತ್ರ ರಮಜಾನ್ ಹಬ್ಬವನ್ನು ಶಾಂತಿಯುತವಾಗಿ, ಶ್ರದ್ದಾ ಭಕ್ತಿಯಿಂದ ವಿಜೃಂಭಣೆಯಿಂದ ಎಲ್ಲರು ಆಚರಿಸಿ ಎಂದು ಕರೆಕೊಟ್ಟರು.
ಸಭೆಯಲ್ಲಿ ಭಟ್ಕಳ ಡಿವೈಎಸ್‍ಪಿ ವೆಲೆಂಟೈನ ಡಿಸೋಜಾ ಉಪಸ್ಥಿತರಿದ್ದು ಮಾತನಾಡಿದ ಅವರು ‘ಕಳೆದ 20ವರ್ಷದ ಹಿಂದೆ ಭಟ್ಕಳದಲ್ಲಿ ಕಾರ್ಯನಿರ್ವಹಿಸಿದ ವೇಳೆ ಇಲ್ಲಿನ ಸಾರ್ವಜನಿಕರು ಒಳ್ಳೆಯ ಸಹಕಾರ ನೀಡಿದ್ದು, ಈ ಬಾರಿಯೂ ಸಾರ್ವಜನಿಕರು ಅದೇ ಸಹಕಾರ ನೀಡಬೇಕೆಂದು ಮನವಿ ಮಾಡಿಕೊಂಡರು. ರಮಜಾನ್ ಹಬ್ಬದ ಪ್ರಯುಕ್ತ ಇಲ್ಲಿನ ಪೇಟೆಯಲ್ಲಿ ಹಗಲು ರಾತ್ರಿಯೆನ್ನದೇ ಪೊಲೀಸರನ್ನು ಗಸ್ತು ಹಾಕಲಾಗಿದ್ದು, 5 ಪೊಲೀಸ್ ವಾಹನಗಳನ್ನು ರೌಂಡ್ಸಗಳಿಗೆ ಹಾಕಲಾಗಿದೆ. ಜನರ ಭದ್ರತೆಗಾಗಿ ರಾತ್ರಿ ಹೊತ್ತು ಪೊಲೀಸ ವಾಹನವನ್ನು ರೌಂಡ್ಸಗೆ ತೆರಳುವಂತೆ ವ್ಯವಸ್ಥೆ ಮಾಡಲಾಗಿದೆ. ಹಬ್ಬವನ್ನು ಶಾಂತಿಯುತವಾಗಿ ಸಂಭ್ರಮದಿಂದ ಆಚರಿಸಿ ಎಂದು ಹೇಳಿದರು.  
ನಂತರ ಸಭೆಯಲ್ಲಿ ಕಾಂಗ್ರೆಸ ಪಕ್ಷದ ಮುಖಂಡ ನಾರಾಯಣ ಬಡಿಯಾ ನಾಯ್ಕ ರಮಜಾನ್ ಹಬ್ಬದ ವೇಳೆ ಹೆಸ್ಕಾಂ ಪದೇ ಪದೇ ವಿದ್ಯುತ್ ಕಡಿತಗೊಳಿಸುತ್ತಿದ್ದಾರೆ. ಇದರಿಂದ ರಮಜಾನ್ ಪೇಟೆಯಲ್ಲಿ ಕಿಡಿಗೇಡಿಗಳು ಇದನ್ನೇ ಉಪಯೋಗಿಸಿ ಶಾಂತತೆಗೆ ತೊಡಕಾಗುತ್ತದೆ. ಈ ಹಿನ್ನೆಲೆಯಲ್ಲಿ 10 ಮಂದಿ ಪೊಲೀಸ್ ಸಿಬ್ಬಂದಿಗಳನ್ನು ಮಫ್ತಿಯಲ್ಲಿ ಕಾರ್ಯನಿರ್ವಹಣೆಗೆ ಹಾಕಿ ಆ ಮೂಲಕ ಗಸ್ತು ತಿರುಗುವಂತೆ ಸೂಚನೆ ನೀಡಬೇಕೆಂದು ಹೇಳಿದರು.
ಈ ವೇಳೆ ಸಭೆಯಲ್ಲಿ ಮುಸ್ಲಿಂ ಬಾಂಧವರು ಹಬ್ಬದ ಆಚರಣೆಯ ಬಗ್ಗೆ ಮಾತನಾಡಿದರು. ಇದೇ ವೇಳೆ ರಮಜಾನ್ ಪೇಟೆಯಲ್ಲಿ ಭಾರಿ ವಾಹನ ಸಂಚಾರ ಹಾಗೂ ನಿಲುಗಡೆಯನ್ನು ಸ್ಥಗಿತಗೊಳಿಸಿ ಪಾರ್ಕಿಂಗ್‍ಗೆ ಬೇರೆಡೆ ಸ್ಥಳಾವಕಾಶ ಮಾಡಿ ಆಟೋರಿಕ್ಷಾ, ಬೈಕ್ ಸವಾರರಿಗೆ ಹಾಗೂ ಪೇಟೆಗೆ ಬಂದು ಹೋಗುವವರಿಗೆ ಅನೂಕೂಲ ಮಾಡಿಕೊಡಬೇಕು. ಭಾರಿ ವಾಹನದ ಸಂಚಾರದಿಂದ ಈಗಾಗಲೇ ಪೇಟೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗುತ್ತಿದ್ದು, ಸಂಚಾರಕ್ಕೆ ಅನೂಕೂಲ ಮಾಡಿಕೊಡಬೇಕೆಂದು ಆಟೋ ರಿಕ್ಷಾ ಚಾಲಕ ಗಣಪತಿ ನಾಯ್ಕ ಮುಠ್ಠಳ್ಳಿ ಪೊಲೀಸರ ಬಳಿ ಮನವಿ ಮಾಡಿಕೊಂಡರು. 
ಸಭೆಯಲ್ಲಿ ತಹಸೀಲ್ದಾರ್ ವಿ.ಪಿ.ಕೊಟ್ರಳ್ಳಿ, ಸಿಪಿಐ ಕೆ.ಎಲ್.ಗಣೇಶ, ಹಿಂದು ಮತ್ತು ಮುಸ್ಲಿಂ ಮುಖಂಡರು, ವಿವಿಧ ಪಕ್ಷದ ನಾಯಕರು, ಉಪಸ್ಥಿತರಿದ್ದರು. 

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...