ಫ್ರಾನ್: ಮುಸ್ಲಿಮ್ ಗ್ರಾಹಕರಿಗೆ ಸೇವೆ ಸಲ್ಲಿಸಲು ರೆಸ್ಟೋರೆಂಟ್ ಮಾಲಿಕ ನಕಾರ - ಎಲ್ಲಾ ಮುಸ್ಲಿಮರು ಭಯೋತ್ಪಾದಕರೆಂಬ ಕಾರಣ

Source: bbc | By Arshad Koppa | Published on 30th August 2016, 8:38 AM | Global News | Incidents |

ಪ್ಯಾರಿಸ್, ಆ. ೨೯: ಪ್ಯಾರಿಸ್‌ನ ಉಪನಗರವೊಂದರಲ್ಲಿನ ರೆಸ್ಟೋರೆಂಟೊಂದು ಇಬ್ಬರು ಮುಸ್ಲಿಮ್ ಮಹಿಳೆಯರಿಗೆ ಆತಿಥ್ಯ ನೀಡಲು ನಿರಾಕರಿಸಿದ್ದು, ಫ್ರಾನ್ಸ್‌ನಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಬಿಬಿಸಿ ರವಿವಾರ ವರದಿ ಮಾಡಿದೆ. ಸಾಮಾಜಿಕ ಮಾಧ್ಯಮದಲ್ಲಿ ವೇಗವಾಗಿ ಹರಡುತ್ತಿರುವ ವೀಡಿಯೊವೊಂದರಲ್ಲಿ ಆಘಾತಕಾರಿ ಸಂಗತಿ ದಾಖಲಾಗಿದೆ. ವೀಡಿಯೊದಲ್ಲಿ ರೆಸ್ಟೋರೆಂಟ್ ಮಾಲಕ ಹಿಜಾಬ್‌ಧಾರಿ ಮಹಿಳೆಯರಿಗೆ ಹೀಗೆ ಹೇಳುತ್ತಾನೆ: “ಎಲ್ಲ ಭಯೋತ್ಪಾದಕರು ಮುಸ್ಲಿಮರು ಮತ್ತು ಎಲ್ಲ ಮುಸ್ಲಿಮರು ಭಯೋತ್ಪಾದಕರು". ಟ್ರೆಂಬ್ಲೆ ಎನ್ ಫ್ರಾನ್ಸ್‌ ಎಂಬಲ್ಲಿ ಲೆ ಸೆನಾಕಲ್ ರೆಸ್ಟೋರೆಂಟ್‌ನಲ್ಲಿ ಶನಿವಾರ ಈ ಘಟನೆ ನಡೆದಿದೆ. ಈ ಘಟನೆಗೆ ಪ್ರತಿಕ್ರಿಯೆಯಾಗಿ ರೆಸ್ಟೋರೆಂಟ್‌ನ ಹೊರಗೆ ಸೇರಿದ ಗುಂಪಿನೊಂದಿಗೆ ಹೊಟೇಲ್ ಮಾಲಕ ಕ್ಷಮೆ ಯಾಚಿಸಿದ್ದಾನೆ.


ಫ್ರಾನ್ಸ್‌ನ ಬೀಚ್‌ಗಳಲ್ಲಿ ಬುರ್ಕಿನಿ ಧರಿಸುವುದಕ್ಕೆ ಸಂಬಂಧಿಸಿದ ವಿಷಯದಲ್ಲಿ ಸೃಷ್ಟಿಯಾಗಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ತಾನು ತಾಳ್ಮೆ ಕಳೆದುಕೊಂಡಿದ್ದೇನೆ. ಅದೂ ಅಲ್ಲದೆ, ಕಳೆದ ನವೆಂಬರ್‌ನಲ್ಲಿ ಬಟಕ್ಲಾನ್ ಸಂಗೀತ ಕಚೇರಿ ಮೇಲೆ ನಡೆದ ದಾಳಿಯಲ್ಲಿ ತಾನು ಒಬ್ಬ ಸ್ನೇಹಿತನನ್ನೂ ಕಳೆದುಕೊಂಡಿದ್ದೇನೆ ಎಂದು ರೆಸ್ಟೋರೆಂಟ್ ಮಾಲಕ ಮುಸ್ಲಿಮ್ ಮಹಿಳೆಯರಿಗೆ ಹೇಳುವುದು ವೀಡಿಯೊದಲ್ಲಿ ದಾಖಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಮಹಿಳೆಯರು, “ಹಾಗಾದರೆ, ನಮಗೆ ಜನಾಂಗೀಯವಾದಿಗಳ ಆತಿಥ್ಯ ಬೇಡ" ಎಂದು ಹೇಳಿದರು. ಅದಕ್ಕೆ ಉತ್ತರಿಸಿದ ಮಾಲಕ, “ಜನಾಂಗೀಯವಾದಿಗಳು ಜನರನ್ನು ಕೊಲ್ಲುವುದಿಲ್ಲ" ಎಂದನು. ಮುಂದುವರಿದ ಆತ, “ನಿಮ್ಮಂಥ ಜನರು ನನ್ನ ರೆಸ್ಟೋರೆಂಟ್ ನಲ್ಲಿ ಇರುವುದನ್ನು ನಾನು ಬಯಸುವುದಿಲ್ಲ. ಇನ್ನು ವಾದ ಬೇಡ" ಎಂದು ಹೇಳಿದನು.

Read These Next

ಗಾಝಾದ ಅಲ್-ಶಿಫಾ ಆಸ್ಪತ್ರೆಯನ್ನು 'ಸಾವಿನ ವಲಯ'ವೆಂದು ಘೋಷಿಸಿದ ವಿಶ್ವಸಂಸ್ಥೆ ಪ್ರವೇಶದ್ವಾರದಲ್ಲಿ ಸಾಮೂಹಿಕ ಸಮಾಧಿ: ವಿಶ್ವ ಆರೋಗ್ಯ ಸಂಸ್ಥೆ

ಹಮಾಸ್ ನಿಯಂತ್ರಣದ ಗಾಝಾ ಪಟ್ಟಿಯಲ್ಲಿ ಇಸ್ರೇಲ್‌ನ ವೈಮಾನಿಕ ದಾಳಿಯ ಬಳಿಕ ನೆಲೆಸಿರುವ ಭೀಕರ ಪರಿಸ್ಥಿತಿಯನ್ನು ಅವಲೋಕಿಸಲು ಈ ...