ಆ.28ರಂದು ಬಾಬಾ ಗುರ್ಮೀತ್ ಸಿಂಗ್ ಗೆ ಶಿಕ್ಷೆ ಪ್ರಕಟ

Source: sonews | By sub editor | Published on 26th August 2017, 6:27 PM | National News | Don't Miss |

ಪಂಚಕುಲಾ: ಅತ್ಯಾಚಾರ ಪ್ರಕರಣದ ದೋಷಿ ಡೇರಾ ಸಚ್ಚಾ ಸೌಧದ ಮುಖ್ಯಸ್ಥ ಬಾಬಾ ಗುರ್ಮೀತ್ ಸಿಂಗ್ ಗೆ ಆ.28ರಂದು  ರೋಹ್ಟಕ್ ನ ಸುನಾರಿಯಾ   ಜೈಲಿನ ಆವರಣದಲ್ಲೇ  ಸಿಬಿಐ ವಿಶೇಷ ನ್ಯಾಯಾಲಯದ ನ್ಯಾ. ಜಗದೀಪ್ ಸಿಂಗ್ ಶಿಕ್ಷೆ ಪ್ರಕಟಿಸಲಿದ್ದಾರೆ.

 

ಜೈಲಿನ ಆವರಣದಲ್ಲೇ ಈ ಉದ್ದೇಶಕ್ಕಾಗಿ ಸಿಬಿಐ ವಿಶೇಷ ನ್ಯಾಯಾಲಯದ ವ್ಯವಸ್ಥೆ ಮಾಡಲಾಗಿದೆ. ಪಂಚಕುಲಾ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ನ್ಯಾ. ಜಗದೀಪ್ ಸಿಂಗ್ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲು ರೋಹ್ಟಕ್ ಗೆ ಹೆಲಿಕಾಪ್ಟರ್ ನಲ್ಲಿ ತೆರಳಲಿರುವರು ಎಂದು ಅಧಿಕೃತ ಮೂಲಗಳು ತಿಳಿಸಿವೆ.

Read These Next