ರಾಜ್ಯದ ಎಲ್ಲಾ ನ್ಯಾಯಾಲಯಗಳಿಗೆ ಸ್ವಂತ ಕಟ್ಟಡ:ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ

Source: S.O. News Service | By Manju Naik | Published on 12th August 2018, 9:43 PM | State News | Don't Miss |

ಹುಬ್ಬಳ್ಳಿ:ರಾಜ್ಯದಲ್ಲಿ ೨೩೦ ರಿಂದ ೨೪೦ ವಿವಿಧ ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿವೆ. ಅವುಗಳಲ್ಲಿ ೧೩ ರಿಂದ ೧೪ ನ್ಯಾಯಾಲಯಗಳು ಮಾತ್ರ ಬಾಡಿಗೆ ಕಟ್ಟಡದಲ್ಲಿವೆ. ಎಲ್ಲಾ ನ್ಯಾಯಾಲಯಗಳಿಗೂ ಸ್ವಂತ ಕಟ್ಟಡ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು. 
ಹುಬ್ಬಳ್ಳಿ ನೂತನ ನ್ಯಾಯಾಲಯಗಳ ಸಂಕೀರ್ಣ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಗಂಡು ಮೆಟ್ಟಿನ ನೆಲ ಎನಿಸಿರುವ ಹುಬ್ಬಳ್ಳಿಯಲ್ಲಿ ಹೊಸ ಸುಸಜ್ಜಿತ ನ್ಯಾಯಾಲಯ ಸಂಕೀರ್ಣ ನಿರ್ಮಾಣವಾಗಿರುವುದು ಸಂತಸ ತಂದಿದೆ. ತಾಲೂಕು ಕೇಂದ್ರವೊಂದರಲ್ಲಿ  ಏಷ್ಯಾದಲ್ಲಿಯೇ ಅತ್ಯಂತ ದೊಡ್ಡ ಮತ್ತು ಸುಸಜ್ಜಿತ ನ್ಯಾಯಾಲಯ ಕಟ್ಟಡ ಇದಾಗಿದೆ.  ಈ ಭಾಗದ ಜನರಿಗೆ ಶೀಘ್ರ ನ್ಯಾಯ ನೀಡಿ ಅವರ ಬದುಕಿಗೆ ನೆಮ್ಮದಿ ತರುವ ಕಟ್ಟಡ ಇದಾಗಲಿದೆ. ಈ ಹಿಂದೆ ೨೦೦೬ ರಿಂದ ೨೦೦೮ ಅವಧಿಯಲ್ಲಿ ಸಮ್ಮಿಶ್ರ ಸರ್ಕಾರವು ಕಲಬುರ್ಗಿ ಹಾಗೂ ಧಾರವಾಡ ನಗರಗಳಲ್ಲಿ ಕೇವಲ ೯ ತಿಂಗಳ ಅವಧಿಯಲ್ಲಿ ಸುಸಜ್ಜಿತ ಹೈಕೋರ್ಟ ಪೀಠಗಳ ಕಟ್ಟಡಗಳನ್ನು ನಿರ್ಮಿಸಿತ್ತು. 
ಇತ್ತಿಚೆಗೆ ಹೈಕೋರ್ಟಗಳ ನ್ಯಾಯಮೂರ್ತಿಗಳು ಸ್ವಯಂಪ್ರೆÃರಿತವಾಗಿ ಅನೇಕ ಜನಪರ ತೀರ್ಪು ಹಾಗೂ ನಿರ್ದೇಶನಗಳನ್ನು ನೀಡುತ್ತಿರುವುದು ಆಡಳಿತದಲ್ಲಿ ಚುರುಕು ಬರಲು ಸಾಧ್ಯವಾಗಿದೆ. ನ್ಯಾಯಾಲಯದ ಸೂಚನೆಗಳನ್ನು ಅಧಿಕಾರಶಾಹಿ ಗಂಭೀರವಾಗಿ ಅನುಷ್ಠಾನಗೊಳಿಸುತ್ತದೆ. ಕಲ್ಯಾಣ ರಾಜ್ಯ ಸ್ಥಾಪನೆಗೆ ನ್ಯಾಯಾಂಗದ ಸಹಕಾರ ಬೇಕು. ಧ್ವನಿ ಇಲ್ಲದವರಿಗೆ ನ್ಯಾಯಕೊಡಲು ಕಾರ್ಯಾಂಗ ಎಡವಿದ ಸಂದರ್ಭಗಳಲ್ಲಿ ನ್ಯಾಯಾಂಗವು ಮಧ್ಯಪ್ರವೇಶಿಸಿ ಸಂವಿಧಾನ ಮತ್ತು ಜನತೆಯ ಹಿತವನ್ನು ರಕ್ಷಿಸುತ್ತಿದೆ ಎಂದರು. 

 

Read These Next