ನಮ್ಮ ವ್ಯಕ್ತಿತ್ವವನ್ನು ಬಾಳೆಗಿಡದಂತಿರಬೇಕು : ನಾಗರತ್ನ ಶೆಟ್ಟಿ

Source: sonews | By Staff Correspondent | Published on 19th March 2019, 10:45 PM | Coastal News |

ಮುಂಡಗೋಡ : ನಮ್ಮ ಮಿದುಳಿಗೆ ಹಾಗೂ ಬಾಯಿಯ  ಮಧ್ಯ ಫಿಲ್ಟರ(ಶುದ್ದಿಕರಣ) ಇದ್ದಾಗ ಮಾತ್ರ ನಮ್ಮ ವ್ಯಕ್ತಿತ್ವ   ಘನತೆಗೆ ಏರಲು ಬರಲು ಸಾಧ್ಯ  ಎಂದು ಸ.ಪ.ಪೂ ಕಾಲೇಜಿನ ಪ್ರಥಮ ದರ್ಜೆ ಸಹಾಯಕಿ  ನಾಗರತ್ನ ಶೆಟ್ಟಿ ಹೇಳಿದರು.

ಅವರು ಮಂಗಳವಾರಇಲ್ಲಿನ ಸ.ಪ.ಪೂ. ಕಾಲೇಜಿನ ಆವರಣದಲ್ಲಿ ನಡೆದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಉದ್ಘಾಟನೆ ಮತ್ತು ಹತ್ತನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಉಪನ್ಯಾಸ ನೀಡಿದರು.

ಗುರುಗಳು ಮತ್ತು ಬದುಕನ್ನು ಪೌರಾಣಿಕವಾಗಿ ಅಧ್ಯಯನ ಮಾಡಿದಾಗ ನಮಗೆ ತಿಳಿಯುವುದು ಏನೆಂದರೆ ಬದುಕು ಬಹಳ ಕಷ್ಟ, ಗುರುಗಳು ಬಹಳ ಸುಲಭ. ಗುರುಗಳು ಮೊದಲು ಪಾಠ ಮಾಡಿ ನಂತರ ಪರೀಕ್ಷೆ ಮಾಡುತ್ತಾರೆ. ಬದುಕು ಹಾಗಲ್ಲ ಮೊದಲು ಪರೀಕ್ಷೆ ಆಮೇಲೆ ಪಾಠ ಕಲಿಸುತ್ತದೆ ಅಕ್ಕಮಹಾದೇವಿ ಹೇಳಿದ ಹಾಗೆ ನಮ್ಮ ವ್ಯಕ್ತಿತ್ವವನ್ನು ಬಾಳೆಗಿಡದಂತಿರಬೇಕು ಬಾಳೆಎತ್ತರಕ್ಕೆ ಬೆಳೆದಂತೆ ಬಾಗುತ್ತಾ ಸಾಗುತ್ತದೆ  ಬಿಗುತ್ತಾ ನಡೆಯುವುದಿಲ್ಲಾ ಹಾಗೇ ನಾವು ಎಷ್ಟೇ ಎತ್ತರಕ್ಕೆ ಬೆಳೆದರು ನಯ ವಿನಯ ವರ್ತಿಸಬೇಕು. ಬಿತ್ತಿ ಬೆಳೆಯುವ ಬೀಜಗಳಾಗಬೇಕೇ ಹೊರತು ಬೀಜ ತುಂಬುವ ಗೋಣಿ ಚೀಲಗಳಾಗಬಾರದು ಎಂದರು
ನಮ್ಮ ಜೀವನ ಒಂದು ಹಂತಕ್ಕೆ ತಲುಪಿದಾಗ ನಮ್ಮ ಹೆಗಲಿಗೆ ಹೆಗಲು ಕೊಟ್ಟು ತಿದ್ದಿ ಬುದ್ದಿ ಹೇಳಿ ಸಮಾಜದಲ್ಲಿ ಹೇಗೆ ಬದುಕಬೇಕು ಎಂದು ಹೇಳಿಕೊಟ್ಟ ಗುರುಗಳಿಗೆ ಎಂದೂ ಮರೆಯಬಾರದು ಎಂದರು          

ಜೀವನದಲ್ಲಿ ಮುಂದೆ ಸಾಗಿ ಎಂದು ಹೇಳುವವರು ಗುರುವೃಂದ ಮಾತ್ರ.  ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ  ನಮ್ಮ ಕಾಲು ಹಿಡಿದು ಎಳೆಯುವವರೇ ಜಾಸ್ತಿ. ಆದ್ದರಿಂದ  ಬದುಕನ್ನು ಎದುರಿಸುವ ಶಕ್ತಿಯನ್ನು ಈಗಿನಿಂದಲೇ ನೀವು ಬೆಳೆಸಿಕೊಳ್ಳಬೇಕು. 

ರಾಷ್ಟ್ರೀಯ ಸೇವಾ ಯೋಜನೆಯು ರಾಷ್ಟ್ರೀಯ ಪರಿಕಲ್ಪನೆಯನ್ನು, ದೇಶ ಪ್ರೇಮವನ್ನು, ಸಮರ್ಪಣಾ ಭಾವನೆಯ ಸಂಘಟನೆಯನ್ನು ಪರಿಚಯಿಸುತ್ತದೆ. ಪ್ರಪಂಚದಾದ್ಯಂತ ನಾಗರೀಕತೆಯ ಭವ್ಯ ಪರಂಪರೆಯನ್ನು ಹಾಕಿಕೊಟ್ಟ ಮಾತೃ ಭೂಮಿ ನಮ್ಮ ಭರತ ಭೂಮಿ ಎಂದರು.

ಶಿರಸಿ ಶೈಕ್ಷಣಿಕ ಜಿಲ್ಲೆಯ ಮುಂಡಗೋಡ ಸರಕಾರಿ ಪದವಿ ಪೂರ್ವ ಕಾಲೇಜ ಪ್ರೌಢ ಶಾಲಾ ವಿಭಾಗದ ಎನ್ ಎಸ್. ಎಸ್ ಘಟಕವನ್ನು  ಬಿಇಒ ಡಿ.ಎಂ. ಬಸವರಾಜಪ್ಪ ಉದ್ಘಾಟಿಸಿದರು. ಉಪ ಪ್ರಾಂಶುಪಾಲೆ ತನುಜಾ ನಾಯ್ಕ, ಎನ್.ಎಸ್.ಎಸ್. ಅಧಿಕಾರಿ ದೀಪಕ ಲೋಕಣ್ಣವರ, ಶಿಕ್ಷಕರಾದ ಸತೀಶ ಮಡಿವಾಳ, ಶಾಂತಾರಾಮ ಗುನಗಾ, ಎನ್.ಪಿ. ಲಮಾಣಿ, ಪರಶುರಾಮ ಕೇಶಪ್ಪನಟ್ಟಿ, ಮಹಾಂತೇಶ ತಿಪ್ಪಣ್ಣನವರ, ಪ್ರಶಾಂತ ಹೊಸಮನಿ ಸುಶೀಲಾ ಭಟ್ಟ, ಸುಜಾತಾ ವೆರ್ಣೇಕರ, ಲಕ್ಷ್ಮೀ ಮಡಗಾಂವ ಇದ್ದರು. ಶಿಕ್ಷಕಿ ವಾಣಿಶ್ರೀ ಕುಲಕರ್ಣಿ ಕಾರ್ಯಕ್ರಮ  ನಿರೂಪಿಸಿದರು. ಹತ್ತನೆ ತರಗತಿ ಕೆಲ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು ಪರಿಕ್ಷೇಯಲ್ಲಿ ಉತ್ತಮ ದರ್ಜೆಯಲ್ಲಿ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿಪಾಸಾಗಿ ಶಾಲೆಗೆ ಕೀರ್ತಿತರುತ್ತೇವೆ ಎಂದರು
ಇದೇ ಸಂದರ್ಭದಲ್ಲಿ ಎನ್.ಎಸ್.ಎಸ್. ಘಟಕದ ವತಿಯಿಂದ 25ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. 
         

Read These Next