ಮುಸ್ಲಿಮರ ಕುರಿತಂತೆ ನಮ್ಮಲ್ಲಿನ ಮನೋಭಾವನೆಗಳನ್ನು ಬದಲಿಸಿಕೊಳ್ಳಬೇಕು-ಜಯಶ್ರೀ ಮೊಗೇರ್

Source: sonews | By sub editor | Published on 17th July 2018, 6:08 PM | Coastal News | Don't Miss |

ಭಟ್ಕಳ: ಮುಸ್ಲಿಮರ ಕುರಿತಂತೆ ನಮ್ಮಲ್ಲಿನ ಮನೋಭಾವನೆಗಳನ್ನು ಬದಲಿಸಿಕೊಳ್ಳಬೇಕೆಂದು ಉತ್ತರಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಮೊಗೇರ್ ಕರೆ ನೀಡಿದರು. 

ಅವರು ಮಂಗಳವಾರ ಮುರುಡೇಶ್ವರದ ಹ್ಯೂಮನ್ ವೆಲ್ಫೇರ್ ಟ್ರಸ್ಟ್ ವತಿಯಿಂದ ಬ್ಲಾಂಕೇಟ್ ವಿತರಣೆ ಮಾಡಿ ಮಾತನಾಡುತ್ತಿದ್ದರು. 

ಹಿಂದೂ-ಮುಸ್ಲಿಮ್ ಮಹಿಳೆಯರು ಸ್ವಸಹಾಯ ಸಂಘಗಳ ಮೂಲಕ ಪರಸ್ಪರ ಬೆರೆತುಕೊಂಡು ಉತ್ತಮ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದಾರೆ. ಬಹುತೇಕ ಹಿಂದೂಗಳಲ್ಲಿ ಮುಸ್ಲಿಮರ ಕುರಿತಂತೆ ಬಹಳಷ್ಟು ತಪ್ಪು ಕಲ್ಪನೆಗಳಿದ್ದು ಮಹಿಳೆಯರು ಕೂಡ ಇದಕ್ಕೆ ಹೊರತಾಗಿಲ್ಲಿ. ಈ ನಿಟ್ಟಿನಲ್ಲಿ ನಾವು ನಮ್ಮ ಮನೋಭಾವನೆಗಳನ್ನು ಬದಲಾಯಿಸಿಕೊಂಡು ಎಲ್ಲರೊಂದಿಗೆ ಬೆರೆತು ಸೌಹಾರ್ದ ಸಮಾಜ ನಿರ್ಮಾಣ ಮಾಡಬೇಕು ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪತ್ರಕರ್ತ ಎಂ.ಆರ್.ಮಾನ್ವಿ, ಹಿಂದೂ-ಮುಸ್ಲಿಮ ಎಂಬ ನೆಲೆಯಲ್ಲಿ ದೇಶವನ್ನು ಛಿದ್ರಗೊಳಿಸುವ ಷಡ್ಯಂತ್ರವು ಬಹಳ ವ್ಯವಸ್ಥಿತವಾಗಿ ನಡೆಯುತ್ತಿದ್ದು ಇದಕ್ಕೆ ಉತ್ತರವಾಗಿ ನಾವು ಸಹೋದರತೆ, ಮಾನವೀಯತೆ, ಬ್ರಾತೃತ್ವವನ್ನು ಬೆಳೆಸಲು ಪ್ರತಿ ತಂತ್ರ ರೂಪಿಸಬೇಕು ಎಂದರು. ಕೇವಲ ಟೊಪ್ಪಿ, ಜುಬ್ಬಾ ಉಡುಗೆಯೊಂದೆ ಧರ್ಮವಲ್ಲ ಮನುಷ್ಯರ ಸೇವೆ, ಸಮಾಜಿಕ ಕಳಕಳಿಯು ಕೂಡ ಧರ್ಮದ ಭಾಗವೇ ಅಗಿದೆ, ಇಸ್ಲಾಮ್ ಯಾವತ್ತು ಧರ್ಮ,ಜಾತಿ-ಬೇಧಗಳಿಗೆ ಆಸ್ಪದನೆ ನೀಡಿಲ್ಲ. ಎಲ್ಲ ಮನುಷ್ಯರ ಸೇವೆಯೇ ಅದರ ಪ್ರಮುಖ ಗುರಿಯಾಗಿದೆ ಎಂದರು.
ನೀನಾದ ಸಂಸ್ಥೆಯ ಉಮೇಶ ನಾಯ್ಕ ಮುಂಡಳ್ಳಿ ಮಾತನಾಡಿ, ಬೆಳಕಿನ ಮೂಲ ಯಾವುದೇ ಇರಬಹುದು ಆದರ ಅದು ಕತ್ತಲೆಯನ್ನು ಹೊಡೆದೋಡಿಸಿ ಬೆಳಕನ್ನು ನೀಡುತ್ತದೆ. ಸೇವೆಯಿಂದ ತೃಪ್ತಿ ಸಿಗುತ್ತದೆ ಎಂದರು. 

ಜಮಾಅತೆ ಇಸ್ಲಾಮಿ ಹಿಂದ್ ಉತ್ತರಕನ್ನಡ ಜಿಲ್ಲಾ ಸಂಚಾಲಕ ತಲ್ಹಾ ಸಿದ್ದಿಬಾಪ ಮಾತನಾಡಿ, ಓರ್ವ ಮುಸ್ಲಿಮನಾದವನು ತನ್ನ ಚಾರಿತ್ರ್ಯವನ್ನು ಹೇಗೆ ಬೆಳೆಸಿಕೊಳ್ಳಬೇಕೆಂಬುದು ಕುರಾನ್ ಹೇಳಿಕೊಟ್ಟಿದೆ. ಪರಸ್ಪರರೊಂದಿಗೆ ಪ್ರೀತಿ,ಸ್ನೇಹದಿಂದ ಜೀವಿಸುವುದೆ ನಮ್ಮ ಗುರಿಯಾಗಬೇಕು ಎಂದರು. ಜಿ.ಪಂ.ಸದ್ಯಸ್ಯೆ ಸಿಂಧೂ ಭಾಸ್ಕರ್ ನಾಯ್ಕ, ವೆಲ್ಫೇರ್ ಟ್ರಸ್ಟ್ ನ ಕ್ರಾಫ್ಟ್ ಶಿಕ್ಷಕಿ ನಯನಾ ನಾಯ್ಕ, ಮಾತನಾಡಿದರು.

ಹ್ಯೂಮನ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಡಾ.ಅಮೀನುದ್ದೀನ್ ಗೌಡ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶಿಕ್ಷಕ ಇಮ್ತಿಯಾಝ್ ಮುಲ್ಲಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ವೇದಿಕೆಯಲ್ಲಿ ತನ್ವಿರುಲ್ ಇಸ್ಲಾಮ್ ಶಿಕ್ಷಣ ಸಂಸ್ಥೆಯ ಝುಬೇರ್ ಮನ್ನಾ, ಗೋಪಾಲ್ ನಾಯ್ಕ,  ಉಪಸ್ಥಿತರಿದ್ದರು. 

Read These Next

ವಂಚನೆಗೊಳಗಾದ ಸಾವಿರಾರು ಅಗ್ರಿಗೋಲ್ಡ್ ಗ್ರಾಹಕರಿಗೆ ಸರ್ಕಾರ ನ್ಯಾಯ ಒದಗಿಸಬೇಕು-ರಮೇಶ

ಭಟ್ಕಳ: ಅಗ್ರಿಗೋಲ್ಡ್ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿದ್ದ ಗ್ರಾಹಕರಿಗೆ ನ್ಯಾಯ ವದಗಿಸುವ ದೃಷ್ಟಿಯಿಂದ ಅಗ್ರಿಗೋಲ್ಡ್ ಗ್ರೂಫ್ ಆಫ್ ...

ಮುರ್ಡೇಶ್ವರದ ಆರ್.ಎನ್.ಎಸ್.ಪ್ರಥಮ ದರ್ಜೆ ಕಾಲೇಜಿನಲ್ಲಿ ಪೂಲ್ ಕ್ಯಾಂಪಸ್ ಸಂದರ್ಶನ

ಭಟ್ಕಳ: ಗ್ರೀಟ್ ಟೆಕ್ನಾಲಜಿಸ್ ಪ್ರೈವೇಟ್ ಲಿಮಿಟೆಡ್ (ಟ್ಯಾಲಿ ಸಾಪ್ಟವೇರ್ ಗ್ರೂಪ್) ಬೆಂಗಳೂರು ಕಂಪನಿಯಲ್ಲಿ ಕೆಲಸ ನಿರ್ವಹಿಸಲು 100 ಜನ ...

ರಾ.ಹೆ.ಅಗಲೀಕರಣ;೩೦ರ ಬದಲು ೪೫ಮೀಟರ್ ಮಾಡುವಂತೆ ಆಗ್ರಹಿಸಿ ಗ್ರಾಮಸ್ಥರಿಂದ ಬೃಹತ್ ಪ್ರತಿಭಟನೆ

ಭಟ್ಕಳ: ಇಲ್ಲಿನ ಶಿರಾಲಿ ಪಂಚಾಯತ ವ್ಯಾಪ್ತಿಯಲ್ಲಿ ಹೆದ್ದಾರಿ ಅಗಲೀಕರಣ ವಿಚಾರವಾಗಿ ಸುಮಾರು 700 ಮೀಟರವರೆಗೆ ರಸ್ತೆ ಅಗಲೀಕರಣವನ್ನು 45 ...