ಮಾವಳ್ಳಿ-2 ಪಂಚಾಯತ ಕಟ್ಟಡವನ್ನು ಮಾವಳ್ಳಿ-1 ಗ್ರಾಪಂ ವ್ಯಾಪ್ತಿಯ ಜಾಗದಲ್ಲಿ ನಿರ್ಮಿಸಲು ವಿರೋಧ

Source: S.O. News Service | By Manju Naik | Published on 12th August 2018, 8:46 PM | Coastal News | Don't Miss |

ಭಟ್ಕಳ: ಇಲ್ಲಿನ ಮಾವಳ್ಳಿ-2 ಗ್ರಾ.ಪಂ. ಕಟ್ಟಡವನ್ನು ಮಾವಳ್ಳಿ-1ರ ಗ್ರಾಮ ಪಂಚಾಯತ್ ವ್ಯಾಪ್ತಿಯ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡಲು ಜಿಲ್ಲಾಧಿಕಾರಿಗಳು ಜುಲೈ 31 ರಂದು ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಆದೇಶ ನೀಡಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳು ಮಾವಳ್ಳಿ-1 ಗ್ರಾಮ ಪಂಚಾಯತದ ಅಧ್ಯಕ್ಷರು,  ಸರ್ವ ಸದಸ್ಯರ ಗಮನಕ್ಕೆ ತರದೇ ಸರ್ವಾಧಿಕಾರಿ ಧೋರಣೆ ಮಾಡಿರುವುದು ಖಂಡನೀಂಯವಾದುದು ಎಂದು ಮಾವಳ್ಳಿ-1 ಗ್ರಾ.ಪಂ. ಸದಸ್ಯ ಕುಮಾರ ನಾಯ್ಕ ಆಗ್ರಹಿಸಿದರು.
ಅವರು ಇಲ್ಲಿನ ಮುರ್ಡೇಶ್ವರದ ಮಾವಳ್ಳಿ-1 ಗ್ರಾಮ ಪಂಚಾಯತ್ ಸಭಾಗೃಹದಲ್ಲಿ ಪತ್ರಕರ್ತರ ಜೊತೆಗೆ ಮಾತನಾಡುತ್ತಿದ್ದರು.
‘ಮಾವಳ್ಳಿ-1 ವ್ಯಾಪ್ತಿಯ ಸರ್ವೇ ನಂ 650/ಅ1ಬ ರಲ್ಲಿನ 2 ಎಕರೆ ಜಾಗವನ್ನು ಮಾವಳ್ಳಿ-1 ಕ್ಕೆ (ಆಟದ ಮೈದಾನಕ್ಕಾಗಿ) ನವಗ್ರಾಮಕ್ಕಾಗಿ ಖಾಯ್ದಿರಿಸಿ ಜಾಗವಾಗಿದ್ದು, ಆ  ಜಾಗದಲ್ಲಿ ಹಿಂದಿನ ಜಿಲ್ಲಾ ಪಂಚಾಯತ ಅನುದಾನದಲ್ಲಿ ಕಟ್ಟಡ ನಿರ್ಮಿಸಿ ಸದ್ಯ ಗ್ರಂಥಾಲಯ ಹಾಗೂ ಉಚಿತ ಕಾನೂನು ಸಲಹಾ ಕೇಂದ್ರ ನಡೆಯುತ್ತಿದ್ದು, ಈ ವೇಳೆಯಲ್ಲಿ ಜಿಲ್ಲಾಧಿಕಾರಿಗಳು ಜುಲೈ 31ರಂದು  ಮಾವಳ್ಳಿ-2 ಪಂಚಾಯತ ಕಛೇರಿಗೆ ಸ್ವಂತ ಕಟ್ಟಡ ಇಲ್ಲದ ಹಿನ್ನೆಲೆ ಮಾವಳ್ಳಿ-1 ಪಂಚಾಯತ ಕಟ್ಟಡ ಉಪಯೋಗಕ್ಕೆ ಅನುಮತಿ ನೀಡಿ ಎಂಬುದಾಗಿ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಆದೇಶ ಮಾಡಿದ್ದಾರೆ. ಆದರೆ ಜಿಲ್ಲಾಧಿಕಾರಿಗಳು ಈ ಬಗ್ಗೆ ಮಾವಳ್ಳಿ-1 ಪಂಚಾಯತ ಅಧ್ಯಕ್ಷರು, ಸದಸ್ಯರ ಹಾಗೂ ಗ್ರಾಮಸ್ಥರ ಗಮನಕ್ಕೆ ತಾರದೇ ಸರ್ವಾಧಿಕಾರ ನಿರ್ಣಯ ಕೈಗೊಂಡಿದ್ದಾರೆ. ಈ ನಿರ್ಣಯವನ್ನು ಮಾವಳ್ಳಿ-1 ಪಂಚಾಯತ ಅಧ್ಯಕ್ಷರು ಸರ್ವ ಸದಸ್ಯರ ತೀವ್ರ ವಿರೋಧಿಸುತ್ತೇವೆ ಎಂದು ಆಗ್ರಹಿಸಿದರು.
ಮಾವಳ್ಳಿ-1 ಇನ್ನೋರ್ವ ಪಂ.ಸದಸ್ಯ ಕೃಷ್ಣ ನಾಯ್ಕ ಜಮೀನ್ದಾರ ಮಾತನಾಡಿ ‘ಮಾವಳ್ಳಿ-1 & ಮಾವಳ್ಳಿ-2 ಪಂಚಾಯತ ಕಾರ್ಯಲಯವನ್ನು ಒಂದೇ ವ್ಯಾಪ್ತಿಯಲ್ಲಿ ತರುವುದು ಸೂಕ್ತವಲ್ಲ. ಮುರ್ಡೇಶ್ವರವು ವಿಶ್ವ ಮಟ್ಟದಲ್ಲಿ ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿರುವುದರಿಂದ ಈ ಹಿಂದೆಯೇ ರಾಜ್ಯ ಪಂಚಾಯತ ವಿಭಾಗದ ಸಮಿತಿಗೆ ಪಟ್ಟಣ ಪಂಚಾಯತ ಮಾಡಲು ಪಂಚಾಯತ ಸದಸ್ಯರ ಅಭಿಪ್ರಾಯವನ್ನು ಸರ್ವಾನುಮತದಿಂದ ಸಭೆಗೆ ಸೂಚಿಸಿರುತ್ತೇವೆ. ಆದರೆ ಯಾರದ್ದೋ ಒತ್ತಾಸೆಗಾಗಿ ಮಾವಳ್ಳಿ ಗ್ರಾಮ ಪಂಚಾಯತನ್ನು ಇಬ್ಭಾಗ ಮಾಡಿ ನಾಗರಿಕರಿಗೆ ಹಿಂಸೆಯಾಗುವಂತೆ ಮಾಡಿದ್ದಾರೆ. ಇದರ ಬದಲು ಜಿಲ್ಲಾಢಳಿತ ಎರಡು ಗ್ರಾ.ಪಂ.ನ್ನು ಪಟ್ಟಣ ಪಂಚಾಯತ ಆಗಿ ಮೇಲ್ದರ್ಜೇಗೆರಿಸಿ. ಹಾಗೂ ಈ ವಿಷಯದಲ್ಲಿ ಜಿಲ್ಲಾಢಳಿತ ಕ್ರಮ ಕೈಗೊಳ್ಳದಿದ್ದಲ್ಲಿ ಸರ್ವ ಸದಸ್ಯರು ಸಾಮೂಹಿಕ ರಾಜೀನಾಮೆ ನೀಡಿ ಗ್ರಾಮಸ್ಥರ ಜೊತೆ ಸೇರಿ ಉಗ್ರ ಪ್ರತಿಭಟನೆ ಮಾಡಬೇಕೆಂಬ ಎಚ್ಚರಿಕೆಯನ್ನು ನೀಡಿದರು.
ಪಂಚಾಯತ ಸಲ್ಲಿಸಿದ ಠರಾವಿಗೆ ಜಿಲ್ಲಾಢಳಿತದಲ್ಲಿ ಬೆಲೆಯಿಲ್ಲ: ಈ ಹಿಂದೆಇಲ್ಲಿನ ಮಾವಳ್ಳಿ-1 ಸಾಮಾನ್ಯ ಸಭೆಯಲ್ಲಿ ಗ್ರಾಮ ವ್ಯಾಪ್ತಿಯಲ್ಲಿ ಘನತ್ಯಾಜ್ಯಘಟಕ ನಿರ್ಮಾಣಕ್ಕೆ ಜಿಲ್ಲಾಢಳಿತಕ್ಕೆ ಸಭೆಯಲ್ಲಿ ಸದಸ್ಯರು ಒಮ್ಮತ್ತದಿಂದ ಠರಾವು ಮಾಡಿದ್ದರು. ಆದರೆ ಈ ಬಗ್ಗೆ ಜಿಲ್ಲಾಢಳಿತ ಯಾವುದೇ ಕ್ರಮಕ್ಕೆ ಮುಂದಾಗಿಲ್ಲವಾಗಿದೆ. ಹಾಗಿದ್ದರೆ ಸ್ಥಳಿಯ ಪಂಚಾಯತ ಠರಾವಿಗೆ ಬೆಲೆಯಿಲ್ಲವೇ ಎಂದು ಪಂಚಾಯತ ಸದಸ್ಯರ ಒಕ್ಕೊರಲ ಆಗ್ರಹವಾಗಿದೆ. ಶೀಘ್ರದಲ್ಲಿ ಪಟ್ಟಣ ಪಂಚಾಯತ ಮಾಡಿದ್ದಲ್ಲಿ ಸರಕಾರದಿಂದ ಬರದುವ ಅನುದಾನದಿಂದ ವಿಶ್ವ ಪ್ರಸಿದ್ಧ ಮುರ್ಡೇಶ್ವರದ ಬೆಳವಣಿಗೆಗೆ ಪಂಚಾಯತ ಸದಸ್ಯರು ಶ್ರಮಿಸಲಿದ್ದೇವೆ ಎಂಬ ಆಗ್ರಹ ಮಾವಳ್ಳಿ-1 ಪಂಚಾಯತ ಸದಸ್ಯರದ್ದಾಗಿದೆ.  
ಈ ಸಂಧರ್ಭದಲ್ಲಿ ಮಾವಳ್ಳಿ-1 ಪಂಚಾಯತ ಸದಸ್ಯರಾದ ಜಟ್ಟಪ್ಪ ನಾಯ್ಕ, ಜಯಂತ ನಾಯ್ಕ, ರಶಿಯಾ ಶೇಖ್, ಸಬಿಯಾ ಕಾತೂನ್, ಜಾನಕೀ ಹರಿಕಾಂತ, ಮಂಜುಳ ನಾಯ್ಕ, ಪಾರ್ವತಿ ಹರಿಕಾಂತ, ಈಶ್ವರ ನಾಯ್ಕ ಉಳಿದ 10 ಸದಸ್ಯರು ಉಪಸ್ಥಿತರಿದ್ದರು. 

Read These Next

ಸರ್ಕಾರಿ ಆಸ್ಪತ್ರೆಗಳಿಗೆ ಔಷಧಿ ವಿತರಣೆ ಮಾಡುವುದರಲ್ಲಿ ನಿರ್ಲಕ್ಷ್ಯ ವಹಿಸಿದರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ-ಸ್ಪೀಕರ್ ರಮೇಶ್ ಕುಮಾರ್ ಎಚ್ಚರಿಕೆ

ರಾಜಿನಾಮೆಯಿಂದ ಉಂಟಾಗಿರುವ ಬಿಕ್ಕಟ್ಟಿನ ಬೆಳವಣಿಗೆಗಳ ಬಗ್ಗೆ ತೀವ್ರವಾಗಿ ತಲೆ ಕೆಡಿಸಿಕೊಂಡಿದ್ದ ಸ್ಪೀಕರ್ ರಮೇಶ್ ಕುಮಾರ್ ...