ಉತ್ತರಪ್ರದೇಶದಲ್ಲಿ ವಿರೋಧ ಪಕ್ಷಗಳ ಚುನಾವಣಾ ರಣತಂತ್ರಉತ್ತರಪ್ರದೇಶದಲ್ಲಿ ವಿರೋಧ ಪಕ್ಷಗಳ ಚುನಾವಣಾ ರಣತಂತ್ರ

Source: sonews | By Staff Correspondent | Published on 4th February 2019, 6:25 PM | Special Report | Don't Miss |

ಉತ್ತರಪ್ರದೇಶದಲ್ಲಿ ತನ್ನ ಚುನಾವಣಾ ಪ್ರತ್ಯೇಕತೆಯನ್ನು ಪ್ರತಿಪಾದಿಸುತ್ತಿರುವ ಕಾಂಗ್ರೆಸ್ಸಿನ ನಡೆಯು ಅದರ ರಾಜಕೀಯ ಆದ್ಯತೆಗಳಲ್ಲಿರುವ ಗೊಂದಲಗಲನ್ನು ತೋರಿಸುತ್ತದೆ.

ಇತ್ತೀಚೆಗೆ ಉತ್ತರಪ್ರದೇಶದಲ್ಲಿ ನಡೆದ ಬೆಳವಣಿಗೆಗಳು ಕೇಂದ್ರದಲ್ಲಿ ಹಾಲೀ ಅಧಿಕಾರದಲ್ಲಿರುವ ಪಕ್ಷದ ಆಳ್ವಿಕೆಯ ವಿರುದ್ಧ ವಿರೋಧಪಕ್ಷಗಳ ಶಕ್ತಿಯನ್ನು ಗಮನಾರ್ಹವಾಗಿ ಸಧೃಡಗೊಳಿಸಬಲ್ಲ ಸಾಧ್ಯತೆಯನ್ನು ಹೊಂದಿದೆ. ಬಹುಜನ್ ಸಮಾಜ್ ಪಾರ್ಟಿ (ಬಿಎಸ್ಪಿ) ಮತ್ತು ಸಮಾಜವಾದಿ ಪಾರ್ಟಿ (ಎಸ್ಪಿ)ಗಳನಡುವೆ ಏರ್ಪಟ್ಟಿರುವ ಮೈತ್ರಿಯು ಉತ್ತರಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷದ ಚುನಾವಣಾ ಸಾಧನೆಯ ಮೇಲೆ ಗಣನೀಯವಾದ ಹಾನಿ ಮಾಡುವ ಸಾಮಾಜಿಕ ಮತ್ತು ಚುನಾವಣಾ ಮೈತ್ರಿಯಾಗಬಲ್ಲ ಭರವಸೆಯನ್ನು ನೀಡಿದೆ. ಅದರ ಜೊತೆಜೊತೆಗೆ ಪ್ರಿಯಾಂಗ ಗಾಂಧಿ ವಾದ್ರಾ ಅವರನ್ನು ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿಯಾಗಿ ನೇಮಕ ಮಾಡಿ ಪೂರ್ವ ಉತ್ತರ ಪ್ರದೇಶದ ಉಸ್ತುವಾರಿಯನ್ನಾಗಿ ನೇಮಿಸಿರುವುದು ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಚುನಾವಣಾ ಸಾಧನೆಯನ್ನು ಉತ್ತಮಪಡಿಸಿಕೊಳ್ಳುವ ಪ್ರಯತ್ನವೇ ಆಗಿದೆ. ಬಿಜೆಪಿಯು ಉತ್ತರಪ್ರದೇಶದಲ್ಲಿ ಉತ್ತಮವಾದ ಚುನಾವಣಾ ಸಾಧನೆಯನ್ನು ತೋರುವುದು ಅತ್ಯಗತ್ಯವಾಗಿದೆ. ಏಕೆಂದರೆ ಅದು ಯಾವಾಗೆಲ್ಲಾ ಕೇಂದ್ರzಲ್ಲಿ ಅಧಿಕಾರ ಹಿಡಿದಿದೆಯೋ ಆಗೆಲ್ಲಾ ಅದರ ಒಟ್ಟಾರೆ ಸ್ಥಾನಬಲದ ಕಾಲು ಭಾಗದಷ್ಟು ಅಥವಾ ಮೂರನೇ ಎರಡು ಭಾಗದಷ್ಟು ಸ್ಥಾನಗಳನ್ನು ಉತ್ತರಪ್ರದೇಶದಿಂದಲೇ ಪಡೆದುಕೊಂಡಿದೆ. ಹೀಗಾಗಿ ಉತ್ತರಪ್ರದೇಶದಲ್ಲಿ ಅದರ ಚುನಾವಣಾ ಸಾಧನೆಗಳಲ್ಲಾಗುವ ಏರುಪೇರುಗಳು ಬರುವ ಸಾರ್ವತ್ರಿಕ ಚುನಾವಣೆಗಳಲ್ಲಿ ಅದಕ್ಕೆ ಸೋಲುಣಿಸಬಹುದಾದ ಸಾಧ್ಯತೆಯೂ ಸಹ ದಟ್ಟವಾಗಿದೆ.

ಉತ್ತರಪ್ರದೇಶದಲ್ಲಿ ಬಿಜೆಪಿಯನ್ನು ಸೋಲಿಸಬೇಕೆಂದರೆ ರಾಜ್ಯದಲ್ಲಿ ಬಲವಾದ ಮತ್ತು ಸಧೃಡೀಕರಣಗೊಂಡ ಸಾಮಾಜಿಕ ತಳಹದಿಯನ್ನು ಹೊಂದಿರುವ ಬಿಎಸ್ಪಿ ಮತ್ತು ಎಸ್ಪಿಗಳ ಕ್ರೂಢೀಕೃತ ಶಕ್ತಿಯಿಂದ ಮಾತ್ರ ಸಾಧ್ಯವೆಂಬುದು ಒಂದು ಸಾಮಾನ್ಯ ಜ್ನಾನ. ಎರಡೂ ಪಕ್ಷಗಳ ಜೊತೆ ಗುರುತಿಸಿಕೊಂಡಿರುವ ಸಾಮಾಜಿಕ ಗುಂಪುಗಳ ನಡುವೆ ಇರುವ ಸಾಮಾಜಿಕ ವೈಷಮ್ಯಗಳ ಕಾರಣವನ್ನು ಒಳಗೊಂಡಂತೆ ಹಲವಾರು ಇತರ ಕಾರಣಗಳಿಂದಾಗಿಯೂ ತನ್ನೆರಡೂ ಪಕ್ಷಗಳ ನಡುವೆ ದೀರ್ಘಕಾಲದಿಂದ ಏರ್ಪಟ್ಟಿದ್ದ  ವೈಷ್ಯಮ್ಯವನ್ನು ಮೀರಿಬಂದು ಈಗ  ಅವೆರಡೂ ಪಕ್ಷಗಳು ಚುನಾವಣಾ ಮೈತ್ರಿಯನ್ನು ಮಾಡಿಕೊಂಡಿವೆ. ಯೋಗಿ ಆದಿತ್ಯನಾಥ ಪ್ರತಿನಿಧಿಸುವ ಮೇಲ್ಜಾತಿ ಅಹಂಕಾರ ಮತ್ತು ಆಕ್ರಮಣಗಳೆದಿರು ಎರಡೂ ಪಕ್ಷಗಳ ನಡುವೆ ಇದ್ದ ವೈರುಧ್ಯಗಳು ತಣ್ಣಗಾಗಿವೆ ಅಥವಾ ನೇಪಥ್ಯಕ್ಕೆ ಸರಿದಿವೆ. ಹೀಗಾಗಿ ಬಿಎಸ್ಪಿ ಮತ್ತು ಎಸ್ಪಿಗಳ ಮೈತ್ರಿಯು ಕೇವಲ ರಾಜಕೀಯ ಆಕಾಂಕ್ಷೆ ಮತ್ತು ತುರ್ತಿನಿಂದ ಮಾತ್ರ ಆಗಿದ್ದಲ್ಲ. ಬದಲಿಗೆ ಎರಡು ಪಕ್ಷಗಳ ಸಾಮಾಜಿಕ ನೆಲೆಗಳಾಗಿರುವ ಸಮುದಾಯಗಳು ಮೇಲ್ಜಾತಿ ಆಕ್ರಮಣಗಳ ವಿರುದ್ಧ ಒಂದಾಗಲು ತಳಮಟ್ಟದಿಂದ ಸೃಷ್ಟಿಸಿದ ಒತ್ತಡದ ಕಾರಣಕ್ಕಾಗಿಯೇ ೨೫ ವರ್ಷಗಳ ನಂತರ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಳ್ಳಲೇ ಬೇಕಾಯಿತು. ಮೈತ್ರಿಗೆ ಪೂರಕವಾಗಿ ಇತರ ಪಕ್ಷಗಳನ್ನು ಜೊತೆಗೂಡಿಸಿಕೊಂಡರೆ ಮೈತ್ರಿಕೂಟದ ಅಂಕಗಣಿತವು ಇನ್ನು ಬಲಿಷ್ಠವಾಗುತ್ತದಲ್ಲದೆ, ಹಾಲೀ ಸರ್ಕಾರದ ಜೊತೆ ಗುರುತಿಸಿಕೊಳ್ಳಲಾಗದ ಎಲ್ಲಾ ಮತದಾರರು ಒಂದುಗೂಡಬಹುದಾದ ಒಂದು ಧೃವವಾಗಬಲ್ಲದು. ರಾಷ್ಟ್ರೀಯ ಲೋಕ ದಳ ಮತ್ತು ನಿಷಾದ್ (ನಿರ್ಬಲ್ ಇಂಡಿಯನ್ ಶೋಷಿತ್ ಹಮಾರ ಆಮ್ ದಲ್)ನಂಥ  ಸಣ್ಣಪುಟ್ಟ ಪಕ್ಷಗಳು ಮೈತ್ರಿಕೂಟದಲ್ಲಿ ಸೇರಿಕೊಳ್ಳಲು ಮುಂದಾಗಿದ್ದರೂ ಕಾಂಗ್ರೆಸ್ ಪಕ್ಷ ಮೈತ್ರಿಕೂಟದ ಭಾಗವಾಗಿಲ್ಲ. ಪರಿಸ್ಥಿತಿಗೆ ಮೈತ್ರಿಕೂಟದ ಪ್ರಧಾನ ಪಕ್ಷಗಳಿಗೆ ಪೂರಕವಾದ ಪಾತ್ರವನ್ನು ಮಾತ್ರ ವಹಿಸುತ್ತಾ ಕೇವಲ ಬೆರಳೆಣಿಕೆಯಷ್ಟು ಸ್ಥಾನಗಳಲ್ಲಿ ಮಾತ್ರ ಸ್ಪರ್ಧಿಸಬೇಕಾದ ಹೊಂದಾಣಿಕೆಗೆ ಕಾಂಗ್ರೆಸ್ ಸಿದ್ಧವಿರದಿರುವುದೇ ಕಾರಣವಿರಬೇಕು. ಅಖಿಲ ಭಾರತ ಮಟ್ಟದಲ್ಲಿ ತನಗಿರುವ ಪ್ರಧಾನ ಪಾತ್ರದ ಹಿನ್ನೆಲೆಯಲ್ಲಿ ಬಗೆಯ ಹೊಂದಾಣಿಕೆಯು ರಾಜಿ ಕಬೂಲಿಯಾಗಿ ಎಂದು ಕಾಣಬಹುದೆಂಬ ಸಂದೇಹ ಕಾಂಗ್ರೆಸ್ಗಿರಬಹುದು. ಪ್ರಿಯಾಂಕ ಗಾಂಧಿಯನ್ನು ಕಣಕ್ಕಿಳಿಸಿ ಉತ್ತರಪ್ರದೇಶದಲ್ಲಿ ಪಕ್ಷದ ಸ್ಥಿತಿಯನ್ನು ಉತ್ತಮಪಡಿಸಿಕೊಳ್ಳುವ ನಡೆಯೂ ಸಹ ಪ್ರಯತ್ನದ ಭಾಗವೇ ಆಗಿದೆ

ಪ್ರಿಯಾಂಕ ಗಾಂಧಿಯ ಪ್ರವೇಶದ ಸುತ್ತಾ ಪ್ರಾರಾಂಭದಲ್ಲಿ ಸಾಕಷ್ಟು ಉತ್ಸಾಹ-ಉನ್ಮಾದಗಳು ಕಂಡುಬಭಿತು. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ದುರ್ಬಲ ಸಂಘಟನಾ ಸ್ಥಿತಿಯನ್ನು ಗಮನಿಸಿದರೆ ಅದು ಚುನಾವಣೆಯಲ್ಲಿ ಮೂರನೇ ಧೃವವಾಗಿಯೋ ಅಥವಾ ಒಂದು ಪ್ರಧಾನ ಸವಾಲಾಗಿಯೋ ಮೂಡುವುದು ಕಷ್ಟಸಾಧ್ಯ. ಒಂದು ದೃಷ್ಟಿಕೋನದ ಪ್ರಕಾರ ಕಾಂಗ್ರೆಸ್ ರೀತಿ ಬಲವರ್ಧನೆಗೊಳ್ಳುವುದರ ಮೂಲಕ ಅದು ಬಿಜೆಪಿಯ ಓಟ್ಬ್ಯಾಂಕಿಗೆ ಕನ್ನ ಹಾಕಿ ಅದರ ಪರಿಸ್ಥಿತಿಯನ್ನು ಮತ್ತಷ್ಟು ಶೋಚನೀಯಗೊಳಿಸಲಿದೆ. ಏಕೆಂದರೆ ಬಿಎಸ್ಪಿ-ಎಸ್ಪಿ ಮೈತ್ರಿಕೂಟಕ್ಕೆ ಮತಹಾಕಬಯಸದ ಮೇಲ್ಜಾತಿಗಳ ಮತವನ್ನು ಕಾಂಗ್ರೆಸ್ ತನ್ನತ್ತ ಸೆಳೆಯಲಿದೆ. ಆದರೆ ಅಂಥಾ ವಿಶ್ಲೇಷಣೆಗಳು ಕೆಳಜಾತಿಗಳ ಒಂದು ಸಧೃಢವಾದ ಸವಾಲಿಗೆದುರಾಗಿ ಮೇಲ್ಜಾತಿಗಳು ಇಡಬಹುದಾದ ಜಾಣತಂತ್ರದ ನಡೆಯನ್ನು ಮತ್ತು ವಿರೋಧಿ ಓಟುಗಳಲ್ಲಿ ಆಗಬಹುದಾದ ಸಣ್ಣ ವ್ಯತ್ಯಯಗಳೂ ಸಹ ಮಾಡಬಹುದಾದ ಪರಿಣಾಮಗಳ ಬಗ್ಗೆ ಕೆಳಾಂದಾಜು ಮಾಡುತ್ತವೆ. ತನ್ನ ಪ್ರತ್ಯೇಕ ಅಸ್ಥಿತ್ವವನ್ನು ಸಾರುವ ಸಲುವಾಗಿ ಬಿಜೆಪಿ ವಿರೋಧಿ ಮತಗಳಲ್ಲಿ ಬರಬಹುದಾದ ಒಡಕಿನ ಅಪಾಯವನ್ನು ಲೆಕ್ಕಕ್ಕೆ ತೆಗೆದುಕೊಳ್ಳದ ಕಾಂಗ್ರೆಸ್ ಪಕ್ಷದ ನಡೆ ಪಕ್ಷದ ರಾಜಕೀಯ ಆದ್ಯತೆಗಳಲ್ಲಿರುವ ಗೊಂದಲವನ್ನು ಸೂಚಿಸುತ್ತದೆ.

ಸಾರ್ವತ್ರಿಕ ಚುನಾವಣೆಗಳ ಹಿನ್ನೆಲೆಯಲ್ಲಿ ಒಂದು ಪ್ರಧಾನ ವಿರೋಧ ಪಕ್ಷವಾಗಿ ಕಾಂಗ್ರೆಸ್ ಪಕ್ಷವು ತನ್ನೆದುರು ಮೂರು ಗುರಿಗಳನ್ನು ಇಟ್ಟುಕೊಳ್ಳಬಹುದಾಗಿದೆ. ಮೊದಲನೆಯದಾಗಿ ಜನರ ಜೀವಗಳಿಗೆ ಮತ್ತು ಜೀವನೋಪಾಯಗಳಿಗೆ ಬೆದರಿಕೆಯೊಡ್ಡುತ್ತಾ ದೇಶದ ಸಾಮಾಜಿಕ ಸಂರಚನೆಗೆ ಧಕ್ಕೆ ತಂದಿರುವ ಹಾಲಿ ಸರ್ಕಾರವನ್ನು ಕಿತ್ತೊಗೆಯುವುದು; ಎರಡನೆಯದು, ತನ್ನ ಸಂಘಟನೆಯನ್ನು ಪುನರ್ರಚಿಸಿಕೊಂಡು ತನ್ನ ಸ್ವತಂತ್ರ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು; ಮತ್ತು ಮೂರನೆಯದಾಗಿ ಚುನಾವಣೆಯ ನಂತರ ಕಾಂಗ್ರೆಸ್ ಪಕ್ಷದ ವ್ಯಕ್ತಿಯೇ ಪ್ರಧಾನ ಮಂತ್ರಿ ಅಧಿಕಾರ ಪಡೆದುಕೊಳ್ಳುವಂತೆ ಮಾಡುವುದು. ಮೇಲುನೋಟಕ್ಕೆ ಹೇಳುವುದಾದರೆ ಮೂರು ಗುರಿಗಳು ಪರಸ್ಪರ ವಿರುದ್ಧವಾಗೇನೂ ಇರಬೇಕಿಲ್ಲ. ಆದರೆ ಪಕ್ಷದ ಇಂದಿನ ಪರಿಸ್ಥಿತಿ ಮತ್ತು ಪ್ರಾದೇಶಿಕ ಮಟ್ಟದಲ್ಲಿ ವಿವಿಧ ರಾಜಕೀಯ ಶಕ್ತಿಗಳ ನಡುವಿನ ಹೊಂದಾಣಿಕೆಗಳು ಮೂರರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವ ಅಥವಾ ಆದ್ಯತೆ ಮಾಡಿಕೊಳ್ಳುವ ಅನಿವಾರ್ಯತೆಯನ್ನು ಕಾಂಗ್ರೆಸ್ ಮುಂದಿಟ್ಟಿದೆ. ಕಾಂಗ್ರೆಸ್ ಪಕ್ಷವು ಸಹಜವಾಗಿಯೇ ತನ್ನ ಆದ್ಯತೆ ಮೊದಲನೆಯದೆಂದೇ ಹೇಳುತ್ತದೆ. ಗುರಿಯನ್ನು ಸಾಧಿಸಿಕೊಳ್ಳಬೇಕೆಂದರೆ ಎಲ್ಲಾ ಬಿಜೆಪಿಯೇತರ ಮತಗಳನ್ನು ಕ್ರೂಢೀಕರಿಸಬೇಕು. ಮತ್ತು ಅದನ್ನು, ವಿರೋಧಿ ಪಾಳಯದಲ್ಲಿರುವ ಹಿರಿಯ ನಾಯಕರು ಹೇಳುತ್ತಿರುವಂತೆ, ಆಯಾ ರಾಜ್ಯಗಳಲ್ಲಿರುವ ಪ್ರಬಲವಾದ ವಿರೋಧಿ ಶಕ್ತಿಯ ಸುತ್ತಾ ಇತರ ಎಲ್ಲಾ ವಿರೋಧಿ ಶಕ್ತಿಗಳು ಅಣಿನೆರೆಸುವ ಮೂಲಕ ಮಾತ್ರ ಸಾಧಿಸಲು ಸಾಧ್ಯ. ಇದರ ತಾರ್ಕಿಕ ಅರ್ಥವೇನೆಂದರೆ ಕಾಂಗ್ರೆಸ್ ತನ್ನ ಸ್ವತಂತ್ರ ಶಕ್ತಿಯನ್ನು ಬೆಳೆಸಿಕೊಳ್ಳಬೇಕೆಂಬ ತನ್ನ ಎರಡನೇ ಆದ್ಯತೆಯನ್ನು (ಮತ್ತು ಕಾಂಗ್ರೆಸ್ ಬಲವಾಗಿರುವ ರಾಜ್ಯಗಳಲ್ಲಿ ಇತರ ವಿರೋಧಿ ಪಕ್ಷಗಳು ಸಹ ತಮ್ಮ ಬಗೆಯ ಆದ್ಯತೆಗಳನ್ನು) ಕೈಬಿಡಬೇಕು. ಬಗೆಯ ತೀರ್ಮಾನಕ್ಕೆ ಬರಲು ಸಿದ್ಧವಿಲ್ಲದಿರುವುದರಿಂದಲೇ ಕಾಂಗ್ರೆಸ್ ಪಕ್ಷವು ಸ್ವತಂತ್ರವಾಗಿ ಸ್ಪರ್ಧಿಸುವ ನಿರ್ಧಾರವನ್ನು ಘೋಷಿಸಿ ರಾಜ್ಯದಲ್ಲಿ ತ್ರಿಕೋನ ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟಿದೆ. ತನ್ನ ನಡೆಯನ್ನು ಮುಂಚೂಣಿಯಲ್ಲಿ ನಿಂತು ಸೆಣೆಸುವ ತಂತ್ರವೆಂದು ಅದು ಬಣ್ಣಿಸಿಕೊಳ್ಳಬಹುದು. ಆದರೆ ಅದು ಏಕಕಾಲದಲ್ಲಿ ಬೇರೆಯದೇ ಆದ ಗುರಿಯನ್ನು ಈಡೇರಿಸಿಕೊಳ್ಳುವತ್ತ ಹೆಜ್ಜೆಹಾಕುತ್ತಿದೆಯೆಂಬುದನ್ನು ತೋರಿಸುತ್ತದೆ.

ಹೇಗೆ ಎಸ್ಪಿ-ಬಿಎಸ್ಪಿಗಳ ನಡುವಿನ ಮೈತ್ರಿಯು ಕೇವಲ ವ್ಯಾವಹಾರಿಕ ಅನಿವಾರ್ಯತೆಯಿಂದಲ್ಲದೆ ತಳಮಟ್ಟದ ಸಾಮಾಜಿಕ ಶಕ್ತಿಗಳ ಒತ್ತಡದ ಪರಿಣಾಮವಾಗಿ ಮೂಡಿಬಂದಿತೋ, ಅದೇ ರೀತಿ ರಾಜ್ಯವಾರು ನಿರ್ದಿಷ್ಟತೆಯುಳ್ಳ ಮೈತ್ರಿಗಳನ್ನು ರಚಿಸುವ ಅಗತ್ಯವೂ ಕೇವಲ ಒಂದು ರಣತಂತ್ರದ ಪ್ರಶ್ನೆಯಲ್ಲ. ಅದರ ಬೇರುಗಳೂ ಸಹ ದೇಶದ ವೈವಿಧ್ಯಮಯ ಮತ್ತು ಅಸಮಾನ ಸಮಾಜೋರಾಜಕೀಯ ವಾಸ್ತವಗಳಲ್ಲಿದೆ. ಬಿಜೆಪಿ ಮತ್ತು ಸಂಘಪರಿವಾರವು ತನ್ನ ಏಕರೂಪಿಕರಣದ ಮತ್ತು ಸರ್ವಾಧಿಕಾರದ ರಾಜಕೀಯ ಯೋಜನೆಯ ಭಾಗವಾಗಿ ಭಿನ್ನತೆಗಳನ್ನು ಅಳಿಸಿಹಾಕುವ ಮತ್ತು ದಮನ ಮಾಡುವ ಪ್ರಯತ್ನಗಳನ್ನು ಮಾಡುತ್ತದೆ ಮತ್ತು ಅದೇ ಅದರ ಮುಳಿವಿಗೂ ಕಾರಣವಾಗಲಿದೆ.

ಇಂಥಾ ಒಂದು ರಾಜಕೀಯ ಯೋಜನೆಯನ್ನು ಪ್ರತಿರೋಧಿಸಲು ಹೊರಟಿರುವ ಒಂದು ರಾಜಕೀಯ ಯೋಜನೆಯಲ್ಲಿ ಭಾರತದ ಅಸಮಾನ ಮತ್ತು ವೈವಿಧ್ಯಮಯ ರಾಜಕೀಯ ವಾಸ್ತವವು ಸಂಘಟನಾ ಸ್ವರೂಪದಲ್ಲೂ ಮತ್ತು ರಾಜಕೀಯ ಸಾರದಲ್ಲೂ ಅಭಿವ್ಯಕ್ತಗೊಳ್ಳಬೇಕು. ಆದರೆ ವಾಸ್ತವವನ್ನು ಅರ್ಥಮಾಡಿಕೊಳ್ಳದೆ ಭಾರತದ ಸಾಮಾಜಿಕ ವಾಸ್ತವದ ನಿಜವಾದ ಪ್ರತಿನಿಧಿ ತಾನು ಮಾತ್ರ ಆಗಲು ಸಾಧ್ಯ ಎಂಬ ಕಾಂಗ್ರೆಸ್ ರಾಜಕೀಯ ಧೋರಣೆಗಳೇ ಒಂದು ಪರ್ಯಾಯವನ್ನು ನಿರ್ಮಿಸುವ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ಗಿರುವ ವೇಗವರ್ಧಕ ಪಾತ್ರವನ್ನು ವಹಿಸದಂತೆ ತಡೆಗಟ್ಟುತ್ತಿದೆ. ಒಂದು ಬಹುದೊಡ್ಡ ಬಿಜೆಪಿಯೇತರ ಪಕ್ಷವಾಗಿರುವುದರಿಂದ ಸಹಜವಾಗಿಯೇ ಕಾಂಗ್ರೆಸ್ಸಿಗೆ ನಾಯಕತ್ವದ ಸ್ಥಾನ ದಕ್ಕುತ್ತದೆ. ಆದರೆ ಅದು ತನ್ನ ವ್ಯಕ್ತಿಗತ ಆಕಾಂಕ್ಷೆಗಳನ್ನು ಬದಿಗಿಟ್ಟು ಇತರ ರಾಜಕೀಯ ಶಕ್ತಿಗಳ ಆಶೋತ್ತರಗಳನ್ನು ಪರಿಗಣನೆಗೇ ತೆಗೆದುಕೊಳ್ಳುವ ಮೂಲಕ ಮಾತ್ರ ಅಂಥ ಸ್ಥಾನವನ್ನು ಗಳಿಸಿಕೊಳ್ಳಬೇಕು. ದೇಶದ ಅತಿ ದೊಡ್ಡ ರಾಜ್ಯವೊಂದರದಲ್ಲಿ ಕಾಂಗ್ರೆಸ್ ಪಕ್ಷ ಇಡುತ್ತಿರುವ ನಡೆಗಳನ್ನು ಗಮನಿಸಿದಾಗ ನಿಟ್ಟಿನಲ್ಲಿ ಅದಿನ್ನೂ ಸಾಕಷ್ಟು ಕಲಿಯಲಿಕ್ಕಿದೆ ಎಂಬುದು ಅರ್ಥವಾಗುತ್ತದೆ.

ಕೃಪೆ: Economic and Political Weekly ಅನು: ಶಿವಸುಂದರ್ 

           

Read These Next

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...