​​​​​​​ಭಟ್ಕಳ: ನಿಂತಿದ್ದ ಪ್ಯಾಸೆಂಜರ ಟೆಂಪೋಗೆ ಬಡಿದ ಲಾರಿ:ಓರ್ವ ಸಾವು ಮೂವರು ಗಾಯ,

Source: sonews | By Manju Naik | Published on 5th August 2018, 8:49 PM | Coastal News | Don't Miss |

ಭಟ್ಕಳ: ಮುರ್ಡೇಶ್ವರಕ್ಕೆ ತೆರಳುತ್ತಿದ್ದ ಟೆಂಪೋವೊಂದಕ್ಕೆ ಹಿಂದಿನಿಂದ ಬಂದ ಟ್ರಕ್‌ವೊಂದು ಗುದ್ದಿದ ಪರಿಣಾಮ ಶಿರಾಲಿಯ ಶಾರದಹೊಳೆ ಸೇತುವೆಯ ರಸ್ತೆಯ ಕೆಳಭಾಗಕ್ಕೆ ಟೆಂಪೋ ಉರುಳಿ ಬಿದ್ದು ಓರ್ವ ಮೃತಪಟ್ಟಿದ್ದಾನೆ.

ಶಾರದಹೊಳೆಯ ನಿವಾಸಿ ಭೈರಪ್ಪ ಮಾಸ್ತಿ ನಾಯ್ಕ(58)ಎಂಬುವವರು ಮೃತಪಟ್ಟ ದುರ್ದೈವಿ.ಭಟ್ಕಳದಿಂದ ಹೊರಟ ಟೆಂಪೊ ಶಾರದಹೊಳೆ ಸಮೀಪಿಸುತ್ತಿದ್ದಂತೆ ಟೆಂಪೋಗೆ ಲಾರಿ ಬಡಿದ ವೇಳೆ ಮೃತ ಬೈರಪ್ಪ ನಾಯ್ಕ ಟೆಂಪೋದಿಂದ ಕೆಳಗೆ ಇಳಿಯುತ್ತಿದ್ದ ಟೆಂಪೋ ರಸ್ತೆಯ ಎಡ ಬದಿಯ ಹಳ್ಳಕ್ಕೆ ಉರುಳಿದ್ದು ಈ ವೇಳೆ ಟೆಂಪೋ ಕೆಳಗೆ ಮೃತ ಪ್ರಯಾಣಿಕ ಸಿಲುಕಿ ಮೃತಪಟ್ಟಿರುತ್ತಾನೆ. ಅಪಘಾತದಲ್ಲಿ ಒಟ್ಟು 8ಮಂದಿ ಗಾಯಗೊಂಡಿದ್ದು ಈ ಪೈಕಿ ಗಜಾನನ ನಾಯ್ಕ ಶಾರದಹೊಳೆ, ಆಲು ಮರಾಠಿ ಕುಳವಾಡಿ, ದಿವ್ಯಾ ನಾಯ್ಕ ಮುರ್ಡೇಶ್ವರ, ಗಣೇಶ ನಾಯ್ಕ ಸಾರದಹೊಳೆ, ಅಶೋಕ ಶಾಂತಾರಾಮ ಕುಂದಾಪುರ, ವೀಣಾ ನಾಯ್ಕ ಮುರ್ಡೇಶ್ವರ, ಲಕ್ಷ್ಮೀ ನಾಯ್ಕ ಶಾದರಹೊಳೆ ಹಾಗೂ ಮಾದೇವ ನಾಯ್ಕ ಬಸ್ತಿ ಇವರಿಗೆ ಭುಜಕ್ಕೆ ತೀವ್ರ ಪೆಟ್ಟು ಬಿದ್ದಿದೆ. ಗಾಯಗೊಂಡವರಲ್ಲಿ ಕೆಲವರನ್ನು ಅಂಬ್ಯುಲೆನ್ಸ್ ಮೂಲಕ ಶಿರಾಲಿ ಹಾಗೂ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು,  ಟೆಂಪೋದಲ್ಲಿದ್ದ 10  ಮಂದಿ ಪ್ರಯಾಣಿಕರಲ್ಲಿ ಮೂವರು ಗಾಯಗೊಂಡಿದ್ದಾರೆ.ಗಾಯಗೊಂಡವರನ್ನು 108

ಮೂಲಕ ಕರೆದೊಯ್ದು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದಾರೆ.ಈ ಬಗ್ಗೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read These Next

ಉ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಅರಣ್ಯ ಪರಿಸ್ಥಿತಿ ಕುರಿತ ರಾಜ್ಯ ಮಟ್ಟದ ವಿಚಾರ ಸಂಕೀರಣ

ಭಟ್ಕಳ: ಪರಿಸರ ಪರಿಸ್ಥಿತಿ, ಸಂರಕ್ಷಣೆ, ಸವಾಲು ಹಾಗೂ ಪರಿಹಾರದ ಬಗ್ಗೆ ಹಮ್ಮಿಕೊಂಡಿದ್ದ ಕಾರ್ಯಾಗಾರದಿಂದ ಜನರು ತಮ್ಮಲ್ಲಿನ ಪರಿಸರದ ...

ಹೆದ್ದಾರಿ ಅಗಲಿಕರಣ; 45ಮೀ ವಿಸ್ತರಣೆಗೆ ಆಗ್ರಹಿಸಿ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ

ಭಟ್ಕಳ: ತಾಲೂಕಿನ ಶಿರಾಲಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66 ಅಗಲೀಕರಣವನ್ನು 30 ಮೀಟರ್‍ಗೆ ಸೀಮಿತಗೊಳಿಸುವ ...

ಸದಸ್ಯರ ಪ್ರಶ್ನೆಗೆ ಉತ್ತರಿಸಲಾಗದೆ ಸಭೆಯಿಂದ ಹೊರನಡೆದ ಪಂಚಾಯತ್ ಅಭಿವೃದ್ಧಿ ಅಧಿಕಾರಿ

ಭಟ್ಕಳ: ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಸದಸ್ಯರ ಪ್ರಶ್ನೆಯೊಂದಕ್ಕೆ ಉತ್ತರಿಸಲಾಗದೇ ಗ್ರಾಮ ಪಂಚಾಯತ್  ಪಂಚಾಯತ್ ಅಭಿವೃದ್ದಿ ...