ತಾಲೂಕ ಆಸ್ಪತ್ರೆಯಲ್ಲಿ  ಎನ್.ಆರ್.ಸಿ ಕೇಂದ್ರ ಪ್ರಾರಂಭ

Source: sonews | By Staff Correspondent | Published on 7th February 2019, 12:32 AM | Coastal News | Don't Miss |

ಮುಂಡಗೋಡ : ಅಪೌಷ್ಠಿಕತೆಯಿಂದ ಬಳಲುವ ಐದುವರ್ಷದ ಮಕ್ಕಳಿಗೆ ತಾಲೂಕ ಆಸ್ಪತ್ರೆಯಲ್ಲಿ ಮಕ್ಕಳ ಆರೋಗ್ಯ ಪುನಃಶ್ಚೇತನ(ಎನ್.ಆರ್.ಸಿ) ಕೇಂದ್ರವನ್ನು ಆರಂಭಗೊಂಡಿದೆ. ಇದರಿಂದ 5 ವರ್ಷದ ಒಳಗಿನ ಮಕ್ಕಳ ಮರಣದ ಪ್ರಮಾಣವನ್ನು ಕಡಿಮೆ ಮಾಡಲು ಹಾಗೂ ರೋಗ ನಿರೋಧನ ಶಕ್ತಿಯನ್ನು ಹೆಚ್ಚಿಸುವುದು ಮುಖ್ಯ ಉದ್ದೇಶ ಆರೋಗ್ಯ ಇಲಾಖೆಯದಾಗಿದೆ.

ತಾಲೂಕ ಆಸ್ಪತ್ರೆಯಲ್ಲಿ ಉದ್ಘಾಟನಾ ಕಾರ್ಯಕ್ರಮವನ್ನು ತಾ.ಪಂ ಕಾರ್ಯನಿರ್ವಣಾಧಿಕಾರಿ ಮಂಜುನಾಥ ಸಾಳೊಂಕೆ, ಆಸ್ಪತ್ರೆಯ  ಆಡಳಿತಾಧಿಕಾರಿ ಡಾ.ಎಚ್.ಎಫ್.ಇಂಗಳೆ, ಹಾಗೂ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಬೈಲ್‍ಪತ್ತಾರ ಜಂಟಿಯಾಗಿ ಉದ್ಘಾಟಿಸಿದರು.

ವಯಸ್ಸಿಗೆ ತಕ್ಕಂತೆ ಎತ್ತರ ತೂಕ ಕಡಿಮೆ ಅಲ್ಲದೆ ಎತ್ತರಕ್ಕೆ ತಕ್ಕಂತೆ ತೂಕ ಇಲ್ಲದಿರುವುದು ಅಪೌಷ್ಠಿಕತೆ ಲಕ್ಷಣ ಎಂದು ಗುರುತಿಸಬಹುದಾಗಿದೆ. ಇಂತಹ ಮಕ್ಕಳನ್ನು ಗುರುತಿಸಿ ಅವರ ಅಪೌಷ್ಟಿತೆ ಹೋಗಲಾಡಿಸಿ ತೂಕ ಹಾಗೂ ಎತ್ತರ ಹೆಚ್ಚಿಸುವುದು ಎನ್‍ಆರ್‍ಸಿಯ ಮೂಲ ಉದ್ದೇಶದಿಂದ ಆರೋಗ್ಯ ಇಲಾಖೆಯವರು ಕೇಂದ್ರ ಕಾರ್ಯಾರಂಭಕ್ಕೆ ಚಾಲನೆ ನೀಡಿದರು.

ಕಾರ್ಯ ವಿಧಾನ: ಅಪೌಷ್ಡಿಕತೆಯಿಂದ ಬಳಲುವ ಮಗುವನ್ನು ಗುರುತಿಸಿ ಎನ್.ಆರ್.ಸಿ ಕೇಂದ್ರಕ್ಕೆ ದಾಖಲಿಸಲು ನಂತರ ಎರಡು ವಾರಗಳ ಕಾಲ ಪೌಷ್ಟಿಕಾಂಶಯುಕ್ತ ಆಹಾರ ಕಬ್ಬಿಣಾಂಶ ವಿಟಮಿನ್ ‘ಎ’ ನೀಡಲಾಗುತ್ತದೆ. ಮಗು ಎನ್‍ಆರ್‍ಸಿಗೆ ದಾಖಲಾದ ದಿನದ  ತೂಕಕ್ಕಿಂತ 15% ರಷ್ಟು ಹೆಚ್ಚಿದಾಗ ಮಗುವನ್ನು ಕಳುಹಿಸಲಾಗುತ್ತದೆ, ಮಾತ್ರೆ ಟಾನಿಕ್‍ಗಳ ಜೊತೆಗೆ ಔಷಧಿ ಕೊಡುವ ವಿಧಾನ ಆಸ್ಪತ್ರೆಗೆ ಮರು ಭೇಟಿ ಇನ್ನಿತರ ವಿಷಯಗಳನ್ನು ತಾಯಿಗೆ ತಿಳಿಸಲಾಗುತ್ತದೆ.

ಅಪೌಷ್ಟಿಕತೆಯಿಂದ ಬಳಲುತ್ತಿರುವ ಒಟ್ಟು 25 ಮಕ್ಕಳನ್ನು ತಾಲೂಕಿನ ಅಂಗನವಾಡಿಯಲ್ಲಿ ಗುರುತಿಸಲಾಗಿದೆ  ಎನ್‍ಆರ್‍ಸಿ ಗೆ ದಾಖಲಾದ ಮಕ್ಕಳ ತಾಯಿಂದರಿಗೆ ಮನೆಯಲ್ಲಿ ಪೋಷಕಾಂಶಯುಕ್ತ ಅಡುಗೆ ತಯಾರಿಸುವ ವಿಧಾನವನ್ನು ತಿಳಿಸಿಕೊಡಲಾಗುತ್ತದೆ, ಮಗುವನ್ನು ಆಟ ಹಾಗೂ ಇತರೆ ಚಟುವಟಿಕೆಯಲ್ಲಿ ತೊಡಗಿಸಲಾಗುವುದು. 5 ವರ್ಷದ ಒಳಗಿನ ಮಕ್ಕಳ ಮರಣದ ಪ್ರಮಾಣವನ್ನು ಕಡಿಮೆ ಮಾಡಲು ಹಾಗೂ ರೋಗ ನಿರೋಧನ ಶಕ್ತಿಯನ್ನು ಹೆಚ್ಚಿಸುವುದು ಮುಖ್ಯ ಉದ್ದೇಶವೆಂದು ಆರೋಗ್ಯ ಇಲಾಖೆಯ ಆಡಳಿತಧಿಕಾರಿ ತಿಳಿಸಿದರು. 

ಇಲ್ಲಿನ ಆಸ್ಪತ್ರೇಯಲ್ಲಿ ಪ್ರತ್ಯೇಕ ಕೊಠಡಿಯನ್ನು ಮಾಡಲಾಗಿದ್ದು 5 ಹಾಸಿಗೆಯನ್ನು ವ್ಯವಸ್ಥೆ ಮಾಡಲಾಗಿದೆ ಮಗು ಹಾಗೂ ತಾಯಿಗೆ ಅಡುಗೆ ಮಾಡಲು ಸಿಬ್ಬಂಧಿಗಳನ್ನು ನೇಮಿಸಲಾಗುತ್ತೆ ಹಾಗೂ ಮಕ್ಕಳಿಗೆ ಆಟಿಕೆ ಸಾಮಾನು ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ, ತಲಾ 5 ಮಕ್ಕಳು ಒಂದೊಂದು ತಂಡಕ್ಕೆ ಚಿಕಿತ್ಸೆ ನೀಡಲಾಗುವುದು ದುಡ್ಡಿಮೆ ಬಿಟ್ಟು ಬರುವ ತಾಯಿಗೆ ದಿನಕ್ಕೆ ರೂ,172 ರಂತೆ ನೀಡಲಾಗುವುದು ಎಂದರು ಹಾಗೂ ಉದ್ಘಾಟನೆಯಾದ ಇಂದು ಅಪೌಸ್ಟಿಕತೆ ಲಕ್ಷ್ಯಣ ಕಂಡು ಬಂದ ಮೂರು ಮಕ್ಕಳನ್ನು ದಾಖಲಿಸಲಾಗಿದೆ.

ಈ ಸಂದರ್ಭದಲ್ಲಿ ತಾಲೂಕಾ ಆಡಳಿತ ವೈದ್ಯಾಧಿüಕಾರಿ ಪದ್ಮಪ್ರೀಯಾ ವಾಯ್, ಮಕ್ಕಳ ತಜ್ಞ ಡಾ,ಪ್ರಸನ್ನ, ಡಾ, ಮಲ್ಲಿಕಾರ್ಜುನ, ಡಾ, ಅಶೋಕ, ಶೀಭಾ ಜೇಮ್ಸ್, ಲಕ್ಷ್ಮೀ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಿಕಿಯರು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂಧಿಗಳು ಉಪಸ್ಥಿತರಿದ್ದರು.

 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...