ಅನಧಿಕೃತ ಒಳಚರಂಡಿ ಜೋಡಣೆ ಸಕ್ರಮಗೊಳಿಸಲು ಸೂಚನೆ

Source: sonews | By sub editor | Published on 7th September 2018, 11:23 PM | Don't Miss |


ಕಾರವಾರ: ಕಾರವಾರ ನಗರಸಭೆಯ ವ್ಯಾಪ್ತಿಯಲ್ಲಿ ಬರುವ ಅಪಾರ್ಟಮೆಂಟಗಳು, ವಾಣಿಜ್ಯ ಕಟ್ಟಡಗಳು ಹಾಗೂ ವಾಸ್ತವ್ಯದ ಮನೆಗಳ ತಾಜ್ಯ ನೀರನ್ನು ಅನಧಿಕೃತವಾಗಿ ಒಳಚರಂಡಿಗೆ ಸಂಪರ್ಕ ಮಾಡಿಕೊಂಡಿರುವುದು ಹಾಗೂ ನಗರಸಭೆಯ ತೆರೆದ ಚರಂಡಿಗಳಿಗೆ ಬಿಡುತ್ತಿರುವುದು ಗಮನಕ್ಕೆ ಬಂದಿದ್ದು, ಅನಧಿಕೃತ ಒಳಚರಂಡಿ ಜೋಡಣೆಗಳಿದ್ದಲ್ಲಿ ಈ ಪ್ರಕಟಣೆ ಹೊರಡಿಸಿದ 3 ದಿನದೊಳಗಾಗಿ ನಿಗದಿಪಡಿಸಿದ ಶುಲ್ಕ ಮತ್ತು ದಂಡವನ್ನು ನಗರಸಭೆಗೆ ಪಾವತಿಸಿ ಒಳಚರಂಡಿ ಸಂಪರ್ಕವನ್ನು ಸಕ್ರಮಾತಿ ಮಾಡಿಕೊಳ್ಳಬೇಕು ಹಾಗೂ ತೆರೆದ ಚರಂಡಿಗೆ ತಾಜ್ಯ ನೀರು ಬಿಡುವುದು ಸಂಪೂರ್ಣವಾಗಿ ನಿಲ್ಲಿಸತಕ್ಕದ್ದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. 
 

ತಪ್ಪಿದಲ್ಲಿ ಅಂತಹ ಅನಧಿಕೃತ ಒಳಚರಂಡಿ ಸಂಪರ್ಕವನ್ನು ಯಾವುದೇ ಮುನ್ಸೂಚನೆ ಇಲ್ಲದೇ ಖುಲ್ಲಾಪಡಿಸಲಾಗುವುದು ಇದಕ್ಕೆ ಸಾರ್ವಜಿಕರು ಸಹಕರಿಸಬೇಕೆಂದು ಅವರು ಹೇಳಿದ್ದಾರೆ.
 

Read These Next