ಸಮಗ್ರ ದೃಷ್ಟಿಯಿಲ್ಲದ ಹಣದುಬ್ಬರ ನಿಗ್ರಹ ಕ್ರಮಗಳು

Source: sonews | By Staff Correspondent | Published on 20th August 2018, 11:22 PM | National News | Special Report | Don't Miss |

ಭಾರತೀಯ ರಿಸರ್ವ್ ಬ್ಯಾಂಕಿನ ಹಣಕಾಸು ನಿರ್ವಹಣಾ ಕ್ರಮಗಳು ಕೇವಲ ಗ್ರಾಹಕ ದರ ಸೂಚ್ಯಂಕದ ಉಬ್ಬರವನ್ನು ತಡೆಗಟ್ಟುವುದನ್ನು ಮಾತ್ರ ಗುರಿಯಾಗಿರಿಸಿಕೊಂಡಿದೆ.

ಭಾರತೀಯ ರಿಸರ್ವ್ ಬ್ಯಾಂಕು (ಆರ್ಬಿಐ) ಸಂಭವನೀಯ ಹಣದುಬ್ಬರ ದರಗಳನ್ನು ನಿಯಂತ್ರಿಸಲು ಹಿಂದಿನಿಂದಲೂ ಪಾಲಿಸಿಕೊಂಡು ಬಂದಿರುವ  ಬಂದಿರುವ ಕೆಲವು ಶಾಸ್ತ್ರಿಯ ಕ್ರಮಗಳನ್ನು ಕೈಗೊಂಡಿದೆ. ಅದು ಆರ್ಥಿಕತೆಯಲ್ಲಿ ಹಣದ ಹರಿದಾಟವನ್ನು ಬಿಗಿಗೊಳಿಸುವ ಉದ್ದೇಶದಿಂದ ತನ್ನ ಪಾಲಿಸಿ ದರಗಳನ್ನು ಶೇ. ರಿಂದ ಶೇ..೫ಕ್ಕೆ ಏರಿಸಿದೆ. ಅದರ ಜೊತೆಜೊತೆಗೆ ರಿವರ್ಸ್ ರಿಪೊ ದರ (ವಾಣಿಜ್ಯ ಬ್ಯಾಂಕುಗಳಿಂದ ಪಡೆದುಕೊಳ್ಳುವ ಹಣಕ್ಕೆ ರಿಸರ್ವ್ ಬ್ಯಾಂಕ್ ತೆರುವ ಬಡ್ಡಿದರ-ಸಂ), ಮಾರ್ಜಿನಲ್ ಸ್ಟಾಂಡಿಂಗ್ ಫೆಸಿಲಿಟಿ ರೇಟ್ (ಸರ್ಕಾರದ ಬಾಂಡುಗಳನ್ನು ಸಲ್ಲಿಸಿ ಬ್ಯಾಂಕುಗಳು  ಆರ್ಬಿಐ ಇಂದ ಪಡೆದುಕೊಳ್ಳುವ ದಿಡೀರ್ ಮತ್ತು ಅಲ್ಪಕಾಲೀನ ಹಣಕಾಸಿಗೆ ಆರ್ಬಿಐ ವಿಧಿಸುವ ದರ- ಸಂ), ಮತ್ತು ಬ್ಯಾಂಕು ದರ (ಬ್ಯಾಂಕುಗಳು ಆರ್ಬಿಐ ನಿಂದ ಪಡೆದುಕೊಳ್ಳುವ ಹಣಕಾಸಿಗೆ ಆರ್ಬಿಐ ವಿಧಿಸುವ ದರ-ಸಂ)ಗಳನ್ನು ಶೇ..೨೫ರಷ್ಟು ಏರಿಸಿದೆ. ಆರ್ಬಿಐ ಒದಗಿಸುವ ನಗದು ಹಣವನ್ನು ಪಡೆದುಕೊಳ್ಳಲು ತಗಲುವ ವೆಚ್ಚವನ್ನು ಹೆಚ್ಚುಮಾಡುವುದು, ಮತ್ತು ಮೂಲಕ ಬ್ಯಾಂಕುಗಳಿಂದ ಸಾಲ ಪಡೆಯುವುದನ್ನು ತುಟ್ಟಿಗೊಳಿಸಿ ಹಣಕಾಸಿನ ಹರಿದಾಟವನ್ನು ನಿಯಂತ್ರಣಕ್ಕೆ ತರುವುದರ ಮೂಲಕ ಹಣದುಬ್ಬರವನ್ನು ನಿಗದಿತವಾದ ವಲಯದಲ್ಲೇ ಇರುವಂತೆ ಸ್ಥಿರಗೊಳಿಸುವುದು ಇದರ ಹಿಂದಿನ ಉದ್ದೇಶವಾಗಿದೆ.

ದುರಂತವೆಂದರೆ ಭಾರತದ ಆರ್ಥಿಕತೆಯನ್ನು ನಿಯಂತ್ರಿಸುವ ಎರಡು ಪ್ರಧಾನ ಸಾರ್ವಜನಿಕ ನೀತಿಗಳಾದ ವಿತ್ತ ನೀತಿ ಮತ್ತು ಹಣಕಾಸು ನೀತಿಗಳೆರಡೂ ಸಹ ನವ ಉದಾರವಾದಿ ಚೌಕಟ್ಟಿನೊಳಗೆ ಸಿಲುಕಿಕೊಂಡಿವೆ. ಮತ್ತು ಕಾರಣದಿಂದಾಗಿಯೇ ಎರಡೂ ನೀತಿ ಚೌಕಟ್ಟುಗಳಿಗೆ ಆರ್ಥಿಕತೆಯಲ್ಲಿ ಹೆಚ್ಚಿನ ಅಭಿವೃದ್ಧಿ ದರವನ್ನು ಸಾಧಿಸುವ, ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸುವ ಮತ್ತು ಸಾಮಾಜಿಕ ಅಸಮಾನತೆಗಳನ್ನು ಕಡಿತಗೊಳಿಸುವ ಉದ್ದೇಶಗಳೇ ಇಲ್ಲದಂತಾಗಿದೆ. ವಿತ್ತೀಯ ಸುಧಾರಣ ಮತ್ತು ಸಧೃಢೀಕರಣ ನೀತಿಗಳಿಂದಾಗಿ ಭಾರತದ ಸಾಮಾಜಿಕ ರಂಗಕ್ಕೆ ದೊರಕಬೇಕಾದ ಸಾರ್ವಜನಿಕ ನಿಧಿಯ ಪಾಲು ಕಡಿಮೆಯಾಗುತ್ತಾ ಹೋಗುತ್ತಿದೆ. ಹೀಗಾಗಿ ಹಲವಾರು ಸಾಮಾಜಿಕ ಸೂಚ್ಯಂಕಗಳಲ್ಲಿ ಭಾರತವು ತನ್ನ ರೀತಿಯೇ ಇರುವ ಹಲವು ದೇಶಗಳಿಗಿಂತ ಹಿಂದೆ ಬಿದ್ದಿದೆ. ಇದರ ಪರಿಣಾಮದಿಂದ ವ್ಯವಸ್ಥೆಯಲ್ಲಿ ಈಗಾಗಲೇ ಅಸ್ಥಿತ್ವದಲ್ಲಿರುವ ಅಸಮಾನತೆಗಳು ಇನ್ನಷ್ಟು ಹೆಚ್ಚಾಗುತ್ತಿವೆ.

ಆರ್ಬಿಐನ ಹಣಕಾಸು ನೀತಿಗಳು ಹಣದುಬ್ಬರವನ್ನು ಶೇ.೪ರ ಆಸುಪಾಸಿನಲ್ಲಿ- ಕಡಿಮೆ ಅಂದರೆ ಶೇ. ಮತ್ತು ಹೆಚ್ಚೆಂದರೆ ಶೇ.೬ರ ಡುವೆ-ಇರುವಂತೆ ನೋಡಿಕೊಳ್ಳುವ ತನ್ನ  ಶಾಸನಾತ್ಮಕ ಹೊಣೆಗಾರಿಕೆಯನ್ನು ನಿಭಾಯಿಸಲು ಬ್ಯಾಂಕುಗಳಲ್ಲಿರುವ ನಗದು ಹಣದ ಹರಿವನ್ನು ಏಕ ಬಡ್ಡಿ ದರದ ಮೂಲಕ ನಿಯಂತ್ರಿಸುವ ಕ್ರಮಗಳಿಗೆ ಮಾತ್ರ ತನ್ನನ್ನು ಸೀಮಿತಗೊಳಿಸಿಕೊಂಡುಬಿಟ್ಟಿವೆ. ಆರ್ಬಿಐನಂತ ಒಂದು ಕೇಂದ್ರೀಯ ಬ್ಯಾಂಕು ರೀತಿ ಹಣದುಬ್ಬರದ ನಿಯಂತ್ರಣಕ್ಕೆ ಮಾತ್ರ ಹೆಚ್ಚು ಒತ್ತುಕೊಟ್ಟು ಸೀಮಿತಗೊಳಿಸಿಕೊಳ್ಳುವುದರಿಂದ ಅದರ ಮುಂದಿರುವ ಇತರ ಮತ್ತು ಒಟ್ಟಾರೆ ಆರ್ಥಿಕ ಅಭಿವೃದ್ಧಿಯ ಕಡೆಗಿನ ಗಮನ ತಪ್ಪುತ್ತದೆ ಎಂದು ಆರ್ಬಿಐನ ಬಹುಪಾಲು ನಿವೃತ್ತ ಗವರ್ನರುಗಳು ಅಭಿಪ್ರಾಯ ಪಟ್ಟಿದ್ದಾರೆ. ಭಾರತದಲ್ಲಿ ಹಣದುಬ್ಬರವು ಸಂಭವಿಸುವುದು ಹೆಚ್ಚಾಗಿ ಆರ್ಥಿಕತೆಯ ಸರಬರಾಜು ವಲಯದ ಏರುಪೇರುಗಳ ಕಾರಣಕ್ಕೆ. ಅದರ ಮೇಲೆ ಆರ್ಬಿಐಗೆ ಹೆಚ್ಚಿನ ನಿಯಂತ್ರಣವೇನೂ ಇಲ್ಲ. ಅಲ್ಲದೆ ಹಣಕಾಸು ಹರಿವಿನ ಮೇಲೆ ನಿಯಂತ್ರಣ ವಿಧಿಸುವ ಕ್ರಮಗಳು ವಲಯದ ಮೇಲೆ ಹೆಚ್ಚಿನ ಪ್ರಭಾವನ್ನೇನೂ ಬೀರುವುದಿಲ್ಲ. ಅಷ್ಟು ಮಾತ್ರವಲ್ಲದೆ ತನ್ನ ರೆಪೋ ದರದ ಬದಲಾವಣೆಗಳಿಂದಾಗಿ ಹಣದುಬ್ಬರದ ದರಗಳಲ್ಲಿ ಬದಲಾವಣೆಯನ್ನು ತರಲಾಗಿದೆಯೆಂಬ ಆರ್ಬಿಐನ ಪ್ರತಿಪಾದನೆಗಳನ್ನು ಸಹ ಹಲವಾರು ಸ್ವತಂತ್ರ ಅಧ್ಯಯನಗಳು ಪ್ರಶ್ನೆಗೊಳಪಡಿಸಿವೆ.

ಅದಲ್ಲದೆ ಹಣದುಬ್ಬರವನ್ನು ಅಳೆಯಲು ಭಿನ್ನ ಭಿನ್ನ ಮಾಪನಗಳಿವೆ. ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ), ಸಗಟು ಬೆಲೆ ಸೂಚ್ಯಂಕ ಮತ್ತು ಜಿಡಿಪಿ ಡಿಫ್ಲೇಟರ್ (ಆರ್ಥಿಕತೆಯಲ್ಲಿ ಹೊಸದಾಗಿ ಉತ್ಪಾದಿತವಾದ ಸರಕು ಮತ್ತು ಸೇವೆಗಳ ಬೆಲೆಗಳು-ಸಂ) ಗಳೆಂಬ ಸೂಚ್ಯಂಕಗಳು ಬೇರೆಬೇರೆ ರೀತಿಗಳಲ್ಲಿ ಉತ್ಪಾದಕರೊಡನೆ ಮತ್ತು ಗ್ರ್ರಾಹಕರೊಡನೆ ಸಂಬಂಧ ಹೊಂದಿರುತ್ತವೆ. ಗುಜರಾತಿನಲ್ಲಿ ನಡೆದ ಹೈನು ಕ್ರಾಂತಿಯು ಇದಕ್ಕೆ ಒಂದು ದೊಡ್ಡ ಉದಾಹರಣೆ. ಒಂದು ಅಭಿವೃದ್ಧಿಶೀಲ ದೇಶದಲ್ಲಿ ಉತ್ಪನ್ನಗಳ ಬೆಲೆ ಏರಿಕೆಯು ಉತ್ಪಾದನೆಯನ್ನು ಹೆಚ್ಚಿಸಲು ಉತ್ಪಾದಕರಿಗೆ ಪ್ರೇರಣೆಯನ್ನು ನೀಡುತ್ತದೆ ಎಂಬುದನ್ನು ಅದು ಸಾಬೀತುಪಡಿಸಿದೆ. ವಿವಿಧ ಸರಕು ಮತ್ತು ಸೇವೆಗಳ ಬೆಲೆ ಏರಿಳಿವುಗಳ ಚಲನೆಯು ಭಿನ್ನಭಿನ್ನವಾಗಿರುತ್ತದೆ. ಆದ್ದರಿಂದ  ಗ್ರಾಹಕ ಬೆಲೆ ಸೂಚ್ಯಂಕವನ್ನು ಆಧರಿಸಿ ನಿಗದಿಯಾಗಿರುವ ಶೇ. ಹಣದುಬ್ಬರ ದರದ ಮಿತಿಯು ಅತ್ಯಂತ ಕಡಿಮೆಯಾಗಿದೆ. ಹಣದುಬ್ಬರ ದರದ ಲೆಕ್ಕಾಚಾರದಲ್ಲಿ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಪರಿಗಣಿಸುವ ಸರಕು ಸೇವೆಗಳ ಬೆಲೆಯನ್ನು ಆಧರಿಸಿರುವ ಹೆಡ್ಲೈನ್ ಹಣದುಬ್ಬರದ ಲೆಕ್ಕಾಚಾರ ಒಂದು ರೀತಿಯಿದ್ದರೆ ಸಿಪಿಐ ಪರಿಗಣಿಸದ ಇತರ ಸರಕು ಮತ್ತು ಸೇವೆಗಳ ಬೆಲೆಗಳನ್ನು ಆಧರಿಸಿದ ಕೋರ್ ಹಣದುಬ್ಬರದ ಲೆಕ್ಕಾಚಾರ ಬೇರೇ ರೀತಿಯಲ್ಲಿರುತ್ತದೆ. ಆದರೆ ಆರ್ಬಿಐ ಗವರ್ನರ್ ಅರು ತಮ್ಮ ಇತ್ತೀಚಿನ ಪತ್ರಿಕಾ ಗೋಷ್ಟಿಯಲ್ಲಿ ಶಾಸನವಿರುವುದು ಗ್ರಾಹಕ ಬೆಲೆ ಸೂಚ್ಯಂಕದ ಹೆಡ್ಲೈನ್ ಹಣದುಬ್ಬರ ದರವನ್ನು ನಿಯಂತ್ರಿಸುವುದರ ಕುರಿತು. ಆದ್ದರಿಂದ ನಮ್ಮ ನೀತಿಗಳು ಅದನ್ನು ಶೇ.೪ರ ಆಸುಪಾಸಿನಲ್ಲಿ ನಿಯಂತ್ರಿಸುವ ದಿಕ್ಕಿನಲ್ಲಿವೆ. ಎಂದು ಹೇಳಿದ್ದಾರೆ.

ಹೀಗಾಗಿ ಹಣದುಬ್ಬರವನ್ನು ನಿಯಂತ್ರಿಸುವ ಶಾಸನಾತ್ಮಕ ಗುರಿಗಳು ಮತ್ತು ಸಮಗ್ರವಾದ  ಅಭಿವೃದ್ಧಿ ನಿರ್ವಹಣೆಗಳ ನಡುವೆ ಒಂದನ್ನು ಆಯ್ಕೆ ಮಾಡಿಕೊಳ್ಳಲೇ ಬೇಕಾದ ಕಾಲ ಸರ್ಕಾರ ಮತ್ತು ಆರ್ಬಿಐ ಗಳೆರಡಕ್ಕೂ ಬಂದಾಗಿದೆ. ಇಂದು ಆರ್ಥಿಕತೆಯಲ್ಲಿ ತುರ್ತು ಅಗತ್ಯವಾಗಿರುವ ಹಣಕಾಸು ಉಳಿತಾಯವನ್ನು ಉತ್ತೇಜಿಸುವುದು ಆರ್ಬಿಐನ ಗುರಿಯಾಗಿರಬೇಕು: ಇದಕ್ಕಾಗಿ ಅದು ಬ್ಯಾಂಕುಗಳಲ್ಲಿ ಹಣವನ್ನು ನಿಯೀಜಿಸಿರುವ ಖಾತೆದಾರರಿಗೆ ಒಂದು ಸಕಾರಾತ್ಮಕ ಮತ್ತು ನೈಜ ಬಡ್ಡಿ ದರವನ್ನು ನೀಡಬೇಕು, ಏಕೆಂದರೆ ಈಗಲೂ ಜನಸಮುದಾಯಗಳು ಸುಲಭವಾಗಿ ಹಣವನ್ನು ಉಳಿತಾಯ ಮಾಡಬಹುದಾದ ಮಾರ್ಗ ಅದೊಂದೇ ಆಗಿದೆ; ಹಣಕಾಸು ಉಳಿತಾಯ ಮಾಡುವವರಲ್ಲಿ ಪ್ರಧಾನವಾದವರು ಸಣ್ಣ ಉಳಿತಾಯದಾರರೇ ಆದರೂ ವಿತ್ತೀಯ ಉತ್ತೇಜನಗಳನ್ನು ಘೋಷಿಸುವಾಗ ಸಣ್ಣ ಉಳಿತಾಯದಾರರನ್ನು ಸಾಮಾನ್ಯವಾಗಿ ಪರಿಗಣಿಸುವುದಿಲ್ಲ. ಹೀಗಾಗಿ ಸಣ್ಣ ಉಳಿತಾಯದಾರರಿಗೆ ದಕ್ಕುವಂತ ವಿತ್ತೀಯ ಉತ್ತೇಜನ ಯೋಜನೆಗಳನ್ನು ರೂಪಿಸಬೇಕು. ಇದರರ್ಥ ಹಿಂದಿನ ಕಠಿಣ ಬಡ್ಡಿದರ ನಿಯಂತ್ರಣ ವ್ಯವಸ್ಥೆಗೆ ಹಿಂತಿರುಗಬೇಕಂತಲ್ಲ. ಬದಲಿಗೆ ಒಂದು ವರ್ಷದ ತನಕ ಹಣವನ್ನು ಹೂಡಿಕೆ ಮಾಡುವ ಉಳಿತಾಯದಾರರಿಗೆ ಏನಿಲ್ಲವೆಂದರೂ ಹಿಂದಿನ ವರ್ಷದ ಗ್ರಾಹಕ ಬೆಲೆ ಸೂಚ್ಯಂಕದ ಹಣದುಬ್ಬರ ದರಮೇಲೆ ಮೇಲೆ ಶೇ.೨ರಷ್ಟು ಬಡ್ಡಿ ದರವನ್ನು ಕೊಡುವಂಥ ಏಕಸೂತ್ರವನ್ನಾದರೂ ಅನುಸರಿಸುವಂತಾಗಬೇಕು. ಇನ್ನುಳಿದ ಉಳಿತಾಯ ಹೂಡಿಕೆ ಬಡ್ಡಿ ದರ, ಪೋಸ್ಟಲ್ ಉಳಿತಾಯ ದರಗಳು ಕ್ರಮೇಣವಾಗಿ ಇದೇ ಮಾರ್ಗವನ್ನು ಅನುಸರಿಸುತ್ತವೆ. ಇದರಿಂದ ಬ್ಯಾಂಕುಗಳ ನಿಧಿಗಳ ಮೇಲಿನ ಹೆಚ್ಚಿನ ಹೊರೆಯು ಬಿದ್ದರೂ ಅದನ್ನು ಇಂಥಾ ನಿಧಿಗಳ ನಿರ್ವಹಣೆಯ ವೆಚ್ಚಕ್ಕೆಂದೇ ಬ್ಯಾಂಕುಗಳಿಗೆ ನಿಗದಿಯಾಗಲ್ಪಟ್ಟ ಕೋಶದಿಂದ ಒದಗಿಸಬಹುದು.

ಬ್ಯಾಂಕುಗಳು ಕ್ರೂಡೀಕರಿಸಿರುವ ಉಳಿತಾಯ  ಮೊತ್ತವನ್ನು ಅಭಿವೃದ್ಧಿ ಯೋಜನೆಗಳಿಗೆ ವ್ಯಯ ಮಾಡುವ ವಿಷಯದಲ್ಲಿ ಬ್ಯಾಂಕುಗಳ ಆಡಳಿತ ವರ್ಗ ದೊಡ್ಡ  ಮೊತ್ತದ ಸಾಲಗಳನ್ನು ಪಡೆದುಕೊಂಡು ವಾಪಸ್ ಮಾಡದ ದೊಡ್ಡ ಕಾರ್ಪೊರೇಟ್ ಕಂಪನಿಗಳಿಂದ ಉಂಟಾಗಿರುವ ವಸೂಲಾಗದ ಸಾಲದ ಸಮಸ್ಯೆಯಿಂದ (ನಾನ್ ಪರ್ಫಾರ್ಮಿಂಗ್ ಅಸೆಟ್ಸ್-ಎನ್ಪಿಎ) ಆತಂಕಕ್ಕೊಳಗಾಗಿದ್ದಾರೆ. ಮತ್ತೊಂದೆಡೆ ಭಾರತದ ಆರ್ಥಿಕತೆಯಲ್ಲಿ ಪ್ರಧಾನವಾಗಿರುವ ಅಸಂಘಟಿತ ಕ್ಷೇತ್ರವನ್ನು ಬ್ಯಾಂಕುಗಳು ಕಡೆಗಣಿಸಿವೆ. ಭಾರತೀಯ ಬ್ಯಾಂಕುಗಳು ಲಕ್ಷಾಂತರ ಸಂಖ್ಯೆಯಲ್ಲಿರುವ ಅಸಂಘಟಿತ ಕ್ಷೇತ್ರದ ಸಾಧ್ಯತೆಗಳನ್ನು ಪೂರ್ಣ ಬಳಕೆ ಮಾಡಿಕೊಂಡಿಲ್ಲ. ಹೀಗಾಗಿಯೇ ಭಾರತದ ಜಿಡಿಪಿ ಮತ್ತು ಬ್ಯಾಂಕುಗಳ ಖಾಸಗಿ ಸಾಲದ ಅನುಪಾತವು ಶೇ.೫೨ರಷ್ಟು ಕಡಿಮೆ ಇದೆ. ಆದರೆ ಉಳಿದ ದೇಶಗಳಲ್ಲಿ ಅದು ಶೇ.೧೧೦ರಷ್ಟಿವೆ. ಇಂತಹ ದೊಡ್ಡ ಕ್ಷೇತ್ರದ ಸಾಧ್ಯತೆಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಬ್ಯಾಂಕುಗಳು ಯಾವ ಉಪಕರಣಗಳನ್ನು ಬಳಸಬೇಕು ಮತ್ತು ಯಾವ ಸಂಘಟನಾ ರಚನೆಗಳನ್ನು ರೂಪಿಸಿಕೊಳ್ಳಬೇಕೆಂಬ ಬಗ್ಗೆ ಅರ್ಥಪೂರ್ಣವಾದ ಚಿಂತನೆಗಳು ನಡೆಯಬೇಕಿವೆ. ಹಲವಾರು ಕೈಗಾರಿಕಾ ಅಭಿವೃದ್ಧಿ ಬ್ಯಾಂಕುಗಳು ಮುಚ್ಚಿಕೊಂಡಿರುವುದರಿಂದ ಮತ್ತು ಜಾಗದಲ್ಲಿ ಯಾವ ಬಗೆಯ ಹಣಕಾಸು ಸಂಸ್ಥೆಗಳು ಸ್ಥಾಪಿಸಬಹುದೆಂಬ ಬಗ್ಗೆ ಆರ್ಬಿಐ ಒಂದೂವರೆ ವರ್ಷದ ಹಿಂದೆ ಕೊಟ್ಟಿರುವ ಶಿಫಾರಸ್ಸುಗಳು ಇನ್ನೂ ಜಾರಿಗೆ ಬರದಿರುವುದರಿಂದಲೂ ದೇಶದ ಕೈಗಾರಿಕಾ ಅಭಿವೃದ್ಧಿ ಕುಂಠಿತವಾಗಿದೆ. ಏಕೆ ಹೀಗಾಯಿತೆಂದು ಕಂಡುಹಿಡಿದುಕೊಳ್ಳಲು ಈವರೆಗೆ ಯಾವ ಪ್ರಯತ್ನಗಳೂ ನಡೆದಿಲ್ಲ. ಆರ್ಬಿಐ ಮಾಡಿರುವ ಹೊಸ ಪ್ರಸ್ತಾಪದಲ್ಲಿರುವ ದೊಡ್ಡ ಸೈದ್ಧಾಂತಿಕ ತೊಂದರೆಯೇನೆಂದರೆ ಅದು ಸಂಪೂರ್ಣವಾಗಿ ಖಾಸಗಿ ಕ್ಷೇತ್ರವು ಮುನ್ನಡೆಸುವ ನಾನ್ ಬ್ಯಾಂಕಿಂಗ್ ಹಣಕಾಸು ಕಂಪನಿಗಳನು ಅವಲಂಬಿಸುವ ಸಲಹೆ ಮಾಡಿದೆ. ಆದರೆ ಸಾರ್ವಜನಿಕ ಕ್ಷೇತ್ರದ ಬೆಂಬಲವಿಲ್ಲದೆ ಇಂತಾ ಸಂಸ್ಥೆಗಳು ಕೈಗಾರಿಕೆಗಳಿಗೆ ಬೇಕಾಗುವ ದೀರ್ಘಕಾಲೀನ ಹಣಕಾಸನ್ನು ಕ್ರೂಢೀಕರಿಸುವುದು ಸಾಧ್ಯವೇ ಇಲ್ಲ.

ಹೀಗೆ ದೇಶದ ಅಭಿವೃದ್ಧಿಯ ಹಂತದಲ್ಲಿ ಒಟ್ಟಾರೆ ಆರ್ಥಿಕತೆಯ ಅಭಿವೃದ್ಧಿಗೆ ಸಂಬಂಧಪಟ್ಟಿರುವ ಹಲವಾರು ವಿಷಯಗಳ ಬಗ್ಗೆ  ಸರ್ಕಾರ ಮತ್ತು ಆರ್ಬಿಐ ವಿಶೇಷ ಗಮನವಹಿಸಬೇಕಾದ ಅಗತ್ಯವಿರುವುದರಿಂದ ಎಲ್ಲಾ ವಿಷಯಗಳನ್ನು ಕೂಲಂಕಷವಾಗಿ ಪರಿಗಣಿಸಿ ಸೂಕ್ತವಾದ ಸಲಹೆಗಳನ್ನು ಮತ್ತು ಶಿಫಾರಸ್ಸುಗಳನ್ನು ಮಾಡಲು ಒಂದು ಉನ್ನತ ಮಟ್ಟದ ಅಧಿಕಾರವುಳ್ಳ ಅಯೋಗವನ್ನು ನೇಮಕ ಮಾಡುವುದು ಅತ್ಯಂತ ಅಗತ್ಯವಾಗಿದೆ.

ಕೃಪೆ: Economic and Political Weekly    ಅನು: ಶಿವಸುಂದರ್ 

         

Read These Next

ಮೋದಿ ಸರ್ಕಾರ ಅವಧಿಯಲ್ಲಿ ’ಬೀಫ್’ ರಪ್ತು ಪ್ರಮಾಣದಲ್ಲಿ ಗರಿಷ್ಠ ಏರಿಕೆ; 2014-15ರಲ್ಲಿ 14.8 ಲಕ್ಷ ಮೆಟ್ರಿಕ್ ಟನ್ ಬೀಫ್ ರಫ್ತು

2014ರಲ್ಲಿ ಮೋದಿ ಸರಕಾರ ಅಧಿಕಾರ ವಹಿಸಿದಂದಿನಿಂದ ಎಮ್ಮೆ ಮಾಂಸದ ರಫ್ತು ಗಣನೀಯಾಗಿ ಹೆಚ್ಚಾಗಿದೆ. 2014-15ರಲ್ಲಿ 14.8 ಲಕ್ಷ ಮೆಟ್ರಿಕ್ ಟನ್ ...

ಹೊಸದಿಲ್ಲಿ:ಬಿಜೆಪಿ ರಾಷ್ಟ್ರೀಯ ಪ್ರ. ಸಂಘಟನಾ ಕಾರ್ಯದರ್ಶಿಯಾಗಿ ಕರ್ನಾಟಕ ಮೂಲದ ಬಿ.ಎಲ್ ಸಂತೋಷ್ ನೇಮಕ

ಹೊಸದಿಲ್ಲಿ: ಕಳೆದ 13 ವರ್ಷಗಳಿಂದ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿದ್ದ ರಾಮಲಾಲ್ ಹುದ್ದೆ ತೊರೆದ ಹಿನ್ನೆಲೆಯಲ್ಲಿ ತೆರವಾದ ...

ವಂಚನೆಯ ಮತ್ತೊಂದು ಮಾರ್ಗ

ಸಾಮಾಜಿಕ-ಆರ್ಥಿಕ ಆಡಳಿತ ನಿರ್ವಹಣೆಯಲ್ಲಿ ಅತ್ಯಂತ ಹೀನಾಯವಾದ ಕಾರ್ಯನಿರ್ವಹಣೆ ತೋರಿದ ಸರ್ಕಾರವೊಂದು ಹಿಂದಿಗಿಂತಲೂ ಹೆಚ್ಚಿನ ...

ತಡೆಗಟ್ಟಬಹುದಾದ ಸಾವುಗಳು

ಕಳೆದ ತಿಂಗಳು ಬಿಹಾರದ ಮುಝಫರ್‌ಪುರ್  ಜಿಲ್ಲೆಯಲ್ಲಿ ತೀವ್ರ ಮೆದುಳು ಜ್ವರಕ್ಕೆ ಬಲಿಯಾಗಿ ಪ್ರಾಣ ತೆತ್ತಿರುವ ೧೫೩ ಮಕ್ಕಳ ಸಾವುಗಳು ...

ಮೋದಿ ಸರ್ಕಾರ ಅವಧಿಯಲ್ಲಿ ’ಬೀಫ್’ ರಪ್ತು ಪ್ರಮಾಣದಲ್ಲಿ ಗರಿಷ್ಠ ಏರಿಕೆ; 2014-15ರಲ್ಲಿ 14.8 ಲಕ್ಷ ಮೆಟ್ರಿಕ್ ಟನ್ ಬೀಫ್ ರಫ್ತು

2014ರಲ್ಲಿ ಮೋದಿ ಸರಕಾರ ಅಧಿಕಾರ ವಹಿಸಿದಂದಿನಿಂದ ಎಮ್ಮೆ ಮಾಂಸದ ರಫ್ತು ಗಣನೀಯಾಗಿ ಹೆಚ್ಚಾಗಿದೆ. 2014-15ರಲ್ಲಿ 14.8 ಲಕ್ಷ ಮೆಟ್ರಿಕ್ ಟನ್ ...

ವಂಚನೆಯ ಮತ್ತೊಂದು ಮಾರ್ಗ

ಸಾಮಾಜಿಕ-ಆರ್ಥಿಕ ಆಡಳಿತ ನಿರ್ವಹಣೆಯಲ್ಲಿ ಅತ್ಯಂತ ಹೀನಾಯವಾದ ಕಾರ್ಯನಿರ್ವಹಣೆ ತೋರಿದ ಸರ್ಕಾರವೊಂದು ಹಿಂದಿಗಿಂತಲೂ ಹೆಚ್ಚಿನ ...

ತಡೆಗಟ್ಟಬಹುದಾದ ಸಾವುಗಳು

ಕಳೆದ ತಿಂಗಳು ಬಿಹಾರದ ಮುಝಫರ್‌ಪುರ್  ಜಿಲ್ಲೆಯಲ್ಲಿ ತೀವ್ರ ಮೆದುಳು ಜ್ವರಕ್ಕೆ ಬಲಿಯಾಗಿ ಪ್ರಾಣ ತೆತ್ತಿರುವ ೧೫೩ ಮಕ್ಕಳ ಸಾವುಗಳು ...

ಒಣಗು ವರ್ತಮಾನ, ಕರಕಲು ಭವಿಷ್ಯ?

ಈ ಜಲ ಬಿಕ್ಕಟ್ಟು ಪ್ರದೇಶ, ಜಾತಿ ಮತ್ತು ಲಿಂಗಾಧಾರಿತ ಅಸಮಾನತೆಗಳನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಪಾರಂಪರಿಕವಾಗಿ ನೀರನ್ನು ...

ಸಾರ್ವಜನಿಕ ಸಂಸ್ಥೆಗಳ ಘನತೆ

ಒಂದು ಪ್ರಭುತ್ವದ ಪ್ರಜಾತಾಂತ್ರಿಕ ಸಾರ ಮತ್ತು ಗಣರಾಜ್ಯ ಸ್ವಭಾವಗಳೆಲ್ಲವನ್ನೂ ನಾಶಗೊಳಿಸಿ ಒಂದು ಸಾರ್ವಜನಿಕ ಸಂಸ್ಥೆಯು ...

ಸರ್ಕಾರಿ ಆಸ್ಪತ್ರೆಗಳಿಗೆ ಔಷಧಿ ವಿತರಣೆ ಮಾಡುವುದರಲ್ಲಿ ನಿರ್ಲಕ್ಷ್ಯ ವಹಿಸಿದರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ-ಸ್ಪೀಕರ್ ರಮೇಶ್ ಕುಮಾರ್ ಎಚ್ಚರಿಕೆ

ರಾಜಿನಾಮೆಯಿಂದ ಉಂಟಾಗಿರುವ ಬಿಕ್ಕಟ್ಟಿನ ಬೆಳವಣಿಗೆಗಳ ಬಗ್ಗೆ ತೀವ್ರವಾಗಿ ತಲೆ ಕೆಡಿಸಿಕೊಂಡಿದ್ದ ಸ್ಪೀಕರ್ ರಮೇಶ್ ಕುಮಾರ್ ...