ಸಾವಿರಾರು ಭಕ್ತರ ಸಮೂಹ ದಲ್ಲಿ ನಡೆದ ನಿಚ್ಛಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವರ ಪಲ್ಲಕಿ ಮಹೋತ್ಸವವೂ

Source: so news | By MV Bhatkal | Published on 14th February 2019, 12:36 AM | Coastal News |

ಭಟ್ಕಳ: ಇಲ್ಲಿನ ಆಸರಕೇರಿಯ ನಿಚ್ಛಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವರ ಪಲ್ಲಕಿ ಮಹೋತ್ಸವವೂ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಅದ್ಧೂರಿಯಾಗಿ ರಥಸಪ್ತಮಿಯ ದಿನವಾದ ಮಂಗಳವಾರದಂದು ಸಹಸ್ರಾರು ಜನರ ಭಕ್ತಿಯ ಭಜನೆಯೊಂದಿಗೆ ನೆರವೇರಿತು.
ಮಂಗಳವಾರದಂದು ಸಂಜೆ ದೇವಸ್ಥಾನದಿಂದ ಹೊರಟ ದೇವರ ಪಾಲಕಿ ಮೆರವಣಿಗೆ ಸಹಸ್ರಾರು ಭಕ್ತರ ಜಯಘೋಷದೊಂದಿಗೆ ಪಟ್ಟಣದ ಮುಖ್ಯ ರಸ್ತೆಯಲ್ಲಿ ಸಂಚರಿಸಿ ಹಳೆ ಬಸ್ ನಿಲ್ದಾಣದಿಂದ ಮಾರಿ ಗುಡಿ, ಚೌಥನಿ ರಸ್ತೆ ಮಾರ್ಗವಾಗಿ ಪುರವರ್ಗಕ್ಕೆ ತೆರಳಿದ್ದು ಅಲ್ಲಿನ ಅರಳಿಕಟ್ಟೆಯಲ್ಲಿ ಸ್ಥಳಿಯರು ಹಣ್ಣು ಕಾಯಿ ಪೂಜೆಯನ್ನು ಸಲ್ಲಿಸಿದರು. ಅಲ್ಲಿನ ಪುರವರ್ಗದ ಕೂಟದವರಿಂದ ವಿಶೇಷ ಸಿಡಿಮದ್ದು ಪ್ರದರ್ಶನ ನಡೆಯಿತು. 
ನಂತರ ಪುನಃ ಅದೇ ಮಾರ್ಗವಾಗಿ ಚೌಥನಿ ಕುದುರೆ ಬೀರಪ್ಪ ದೇವಸ್ಥಾನಕ್ಕೆ ತಲುಪಿದ ಪಲ್ಲಕ್ಕಿ ಅಲ್ಲಿ ಪೂಜೆ ಸಲ್ಲಿಸಿ ಅಲ್ಲಿಂ ಹೂವಿನ ಮಾರ್ಕೇಟ ರಸ್ತೆ ಮಾರ್ಗವಾಗಿ ರಘುನಾಥ ರಸ್ತೆಯಿಂದ ಮಣ್ಕುಳಿ ಮಾರ್ಗವಾಗಿ ಹೊರಟು ಶ್ರೀಧರ ಪದ್ಮಾವತಿ ದೇವಸ್ಥಾನದ ಗದ್ದುಗೆಗೆ ಹೋಗಿ ಅಲ್ಲಿಂದ ಆಸರಕೇರಿಯ ನಿಚ್ಛಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನಕ್ಕೆ ತೆರಳಿ ಸಂಪನ್ನಗೊಂಡಿತು. ಪಲ್ಲಕ್ಕಿ ಉತ್ಸವದ ಮುಂದಾಳತ್ವವನ್ನು ಮುಠ್ಠಳ್ಳಿ ಕೂಟದ ಬಾಂಧವರು ವಹಿಸಿಕೊಂಡಿದ್ದರು. 

ಪಲ್ಲಕ್ಕಿ ಉತ್ಸವದ ನಿಮಿತ್ತ ಭಕ್ತರು ತಮ್ಮ ಮನೆ, ಅಂಗಡಿಗಳ ಮುಂದೆ ರಂಗೋಲಿ ಹಾಕಿ ಸಿಂಗರಿಸಿ ದೇವರಿಗೆ ಭಕ್ತಿಯಿಂದ ಹೂವು ಹಣ್ಣುಕಾಯಿ ಸಮರ್ಪಿಸಿದರು. ಈ ವೇಳೆ ಪಲ್ಲಕ್ಕಿ ಮೆರವಣಿಗೆಯೂದ್ದಕ್ಕು ತಟ್ಟಿರಾಯ, ಕುದುರೆ ವೇಷಧಾರಿಗಳು, ಚಂಡೆ ವಾದ್ಯ, ಟ್ಯಾಬ್ಲೋ ವಿಶೇಷ ಆಕರ್ಷಣೆ ನೀಡಿತ್ತು. ಹಾಗೂ ಮುಂಡಳ್ಳಿ ಮಹಿಳೆಯರಿಂದ ಸಮವಸ್ತ್ರದ ಸೀರೆ ಧರಿಸಿ ಮೆರವಣಿಗೆಯೂದ್ದಕ್ಕೂ ಭಜನೆಯನ್ನು ಕೈಗೊಳ್ಳಲಾಯಿತು. ಹಾಗೂ ಯುವಕರಿಂದ ಭಜನಾ ಕುಣಿತವೂ ಮೆರವಣಿಗೆಯನ್ನು ಇನ್ನಷ್ಟು ಮೆರಗುಗೊಳಿಸಿತು. 

ಪಲ್ಲಕ್ಕಿ ಮಹೋತ್ಸವದಲ್ಲಿ ಶಾಸಕ ಸುನೀಲ್ ನಾಯ್ಕ, ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಎಮ್.ಆರ್.ನಾಯ್ಕ, ಮಾಜಿ ಅಧ್ಯಕ್ಷ ಡಿ. ಬಿ. ನಾಯ್ಕ, ಜೆ.ಎನ್. ನಾಯ್ಕ, ಉಪಾಧ್ಯಕ್ಷ ಮೋಹನ ನಾಯ್ಕ್ಕ, ಪ್ರಧಾನ ಕಾರ್ಯದರ್ಶಿ ರಾಜೇಶ ನಾಯ್ಕ, ಸಮಾಜದ ಪ್ರಮುಖರಾದ ಗೋವಿಂದ ನಾಯ್ಕ, ಈರಪ್ಪ ಗರ್ಡಿಕರ್, ವಿಠ್ಠಲ ನಾಯ್ಕ, ಲಕ್ಷ್ಣಣ ನಾಯ್ಕ ಜಾಲಿ, ಸತೀಶಕುಮಾರ ನಾಯ್ಕ, ಪರಮೇಶ್ವರ ನಾಯ್ಕ, ಸುರೇಶ ನಾಯ್ಕ, ಪ್ರಕಾಶ ನಾಯ್ಕ, ಕೃಷ್ಣ ನಾಯ್ಕ, ವೆಂಕಟೇಶ ನಾಯ್ಕ ಆಸರಕೇರಿ, ಕೃಷ್ಣಾ ನಾಯ್ಕ ಆಸರಕೇರಿ, ರವಿ ನಾಯ್ಕ ಜಾಲಿ, ನಾಮಧಾರಿ ಸಮಾಜದ 18 ಕೂಟದ ಬಾಂಧವರು ಸೇರಿದಂತೆ 4-5 ಸಾವಿರಕ್ಕೂ ಅಧಿಕ ಜನರು ಪಾಲ್ಗೊಂಡಿದ್ದರು. ತಾಲೂಕಿನ ನಾಮಧಾರಿ ಸಮಾಜದ 18 ಕೂಟದ ಎಲ್ಲಾ ಸಮಾಜದ ಬಾಂಧವರು ಅಂಗಡಿ ಮುಗ್ಗಟ್ಟನ್ನು ಬಂದ್ ಮಾಡಿ ಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿತ್ತು. ದೇವಸ್ಥಾನದಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದ ತನಕ ತುಲಾಭಾರ ಸೇವೆ ನಡೆಯಿತು.
 
ಮೆರವಣೆಯೂ ಡಿವೈಎಸ್‍ಪಿ ವೆಲೆಂಟೈನ್ ಡಿಸೋಜಾ ಮಾರ್ಗದರ್ಶನದಲ್ಲಿ ಸಿಪಿಐ ಗಣೇಶ ಕೆ.ಎಲ್. ನೇತೃತ್ವದಲ್ಲಿ ನಗರ ಠಾಣೆ ಪಿಎಸೈ ಕುಸುಮಾಧರ, ಗ್ರಾಮೀಣ ಠಾಣೆ ಪಿಎಸೈ ರವಿ,ಮುರ್ಡೇಶ್ವರ ಠಾಣೆ ಪಿಎಸೈ ಬಸವರಾಜ್ ಹಾಗೂ ಪೊಲೀಸರ ಸಿಬ್ಬಂದಿಗಳು ಬಿಗಿ ಬಂದೋ ಬಸ್ತ ಏರ್ಪಡಿಸಲಾಗಿತ್ತು.

 

 

 

 

 

 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...