ಪ್ರಧಾನಿ ಮೋದಿಗೆ 'ಅಪರಿಚಿತ ಬೆದರಿಕೆ': ಸಚಿವರು, ಅಧಿಕಾರಿಗಳೂ ಹತ್ತಿರ ಬರುವಂತಿಲ್ಲ!

Source: sonews | By sub editor | Published on 26th June 2018, 10:49 PM | National News | Don't Miss |

ಹೊಸದಿಲ್ಲಿ: ಪ್ರಧಾನಿ ಮೋದಿ ಅವರಿಗೆ ಸಾರ್ವಕಾಲಿಕ ತೀವ್ರ ಬೆದರಿಕೆಯಿರುವ ಹಿನ್ನೆಲೆಯಲ್ಲಿ ರಾಜ್ಯಗಳಿಗೆ ನೂತನ ಭದ್ರತಾ ಮಾರ್ಗಸೂಚಿಯನ್ನು ಹೊರಡಿಸಿರುವ ಕೇಂದ್ರ ಗೃಹ ಸಚಿವಾಲಯವು,ವಿಶೇಷ ರಕ್ಷಣಾ ದಳ(ಎಸ್‌ಪಿಜಿ)ವು ಅನುಮತಿ ನೀಡದ ಹೊರತು ಸಚಿವರು ಮತ್ತು ಅಧಿಕಾರಿಗಳು ಸಹ ಪ್ರಧಾನಿಯವರ ಸಮೀಪ ಬರುವಂತಿಲ್ಲ ಎಂದು ಮೋದಿಯವರಿಗೆ ‘ಅಪರಿಚಿತ ಬೆದರಿಕೆ’ಯನ್ನು ಉಲ್ಲೇಖಿಸಿ ತಾಕೀತು ಮಾಡಿದೆ.

ಪ್ರಧಾನಿಯವರಿಗೆ ಈ ಹಿಂದೆಂದೂ ಇರದಷ್ಟು ತೀವ್ರ ಬೆದರಿಕೆಯಿದ್ದು,2019ರ ಲೋಕಸಭಾ ಚುನಾವಣೆಗಳಿಗೆ ಮುನ್ನ ಅವರು ಶತ್ರುಗಳಿಗೆ ‘ಅತ್ಯಂತ ಬೆಲೆಬಾಳುವ ಗುರಿ’ಯಾಗಿದ್ದಾರೆ ಎಂದು ಅದು ಹೇಳಿದೆ.

ಹೆಚ್ಚು ಅಪಾಯಕಾರಿಯಾಗಿರುವ ರೋಡ್ ಶೋಗಳನ್ನು ಕಡಿಮೆ ಮಾಡುವಂತೆ ಮತ್ತು ಅವುಗಳ ಬದಲಾಗಿ ಬಹಿರಂಗ ಸಭೆಗಳಲ್ಲಿ ಮಾತನಾಡುವಂತೆ ಎಸ್‌ಪಿಜಿ ಪ್ರಧಾನಿಯವರಿಗೆ ಸಲಹೆ ನೀಡಿದೆ ಎನ್ನಲಾಗಿದೆ. ಬಹಿರಂಗ ಸಭೆಗಳಲ್ಲಿ ಭದ್ರತೆಯನ್ನು ಕಾಯ್ದುಕೊಳ್ಳುವುದು ಸುಲಭ ಎಂದು ಅದರ ಅಭಿಪ್ರಾಯವಾಗಿದೆ.

ಪ್ರಧಾನಿಯವರ ಭದ್ರತೆಯ ನಿಕಟ ರಕ್ಷಣಾ ತಂಡ(ಸಿಪಿಟಿ)ಕ್ಕೆ ನೂತನ ಮಾರ್ಗಸೂಚಿಗಳು ಮತ್ತು ಬೆದರಿಕೆಗಳ ಬಗ್ಗೆ ತಿಳಿಸಲಾಗಿದ್ದು,ಅಗತ್ಯವಾದರೆ ಸಚಿವರು ಮತ್ತು ಅಧಿಕಾರಿಗಳನ್ನೂ ಮೈದಡವಿ ತಪಾಸಣೆಗೊಳಪಡಿಸುವಂತೆ ಸೂಚಿಸಲಾಗಿದೆ.

ನಿಷೇಧಿತ ಸಿಪಿಐ(ಮಾವೋವಾದಿ) ಜೊತೆ ಸಂಪರ್ಕ ಹೊಂದಿದ್ದ ಆರೋಪದಲ್ಲಿ ತಾವು ಬಂಧಿಸಿರುವ ಐವರ ಪೈಕಿ ಓರ್ವನ ದಿಲ್ಲಿ ನಿವಾಸದಿಂದ ತಾವು ಪತ್ರವೊಂದನ್ನು ವಶಪಡಿಸಿಕೊಂಡಿದ್ದು, ಅದರಲ್ಲಿ ರಾಜೀವ್ ಗಾಂಧಿಯವರ ಹತ್ಯೆ ಮಾದರಿಯಲ್ಲಿ ಮೋದಿಯವರ ಕೊಲೆಗೆ ಸಂಚನ್ನು ಉಲ್ಲೇಖಿಸಲಾಗಿತ್ತು ಎಂದು ಪುಣೆ ಪೊಲೀಸರು ಜೂ.7ರಂದು ನ್ಯಾಯಾಲಯಕ್ಕೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಧಾನಿಯವರ ರಕ್ಷಣಾ ವ್ಯವಸ್ಥೆಯನ್ನು ಎಳೆಎಳೆಯಾಗಿ ಪುನರ್‌ಪರಿಶೀಲಿಸಲಾಗಿದೆ.

ಅಲ್ಲದೆ ಮೋದಿಯವರು ಇತ್ತೀಚಿಗೆ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ವ್ಯಕ್ತಿಯೋರ್ವ ಆರು ಸುತ್ತುಗಳ ಭದ್ರತೆಯನ್ನು ಭೇದಿಸಿ ಒಳನುಗ್ಗಿ ಅವರ ಪಾದಗಳನ್ನು ಸ್ಪರ್ಶಿಸಿದ್ದ. ಈ ಘಟನೆ ಭದ್ರತಾ ಏಜೆನ್ಸಿಗಳ ಅಧಿಕಾರಿಗಳನ್ನು ಕಕ್ಕಾಬಿಕ್ಕಿಗೊಳಿಸಿತ್ತು.

ಇವೆರಡು ಬೆಳವಣಿಗೆಗಳ ಹಿನ್ನೆಲೆಯಲ್ಲಿ ಗೃಹಸಚಿವ ರಾಜನಾಥ ಸಿಂಗ್ ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ ದೋವಲ್,ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ ಗಾಬಾ ಮತ್ತು ಗುಪ್ತಚರ ಸಂಸ್ಥೆಯ ನಿರ್ದೇಶಕ ರಾಜೀವ ಅವರೊಂದಿಗೆ ಸಭೆ ನಡೆಸಿ ಪ್ರಧಾನಿಯವರ ಭದ್ರತಾ ವ್ಯವಸ್ಥೆಯನ್ನು ಪುನರ್‌ಪರಿಶೀಲಿಸಿದ್ದರು.

ಪ್ರಧಾನಿಯವರು ತಮ್ಮ ರಾಜ್ಯಗಳಿಗ ಭೇಟಿ ನೀಡಿದಾಗ ಹೆಚ್ಚುವರಿ ಕಾಳಜಿಎಚ್ಚರಿಕೆಯನ್ನು ವಹಿಸುವಂತೆ ಛತ್ತೀಸಗಡ, ಜಾರ್ಖಂಡ್, ಮಧ್ಯಪ್ರದೇಶ, ಒಡಿಶಾ,ಪ.ಬಂಗಾಳದಂತಹ ನಕ್ಸಲ ಪೀಡಿತ ರಾಜ್ಯಗಳ ಪೊಲೀಸ್ ಮುಖ್ಯಸ್ಥರಿಗೆ ನಿರ್ದೇಶ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

Read These Next

ಪಿ.ಯು.ಕಾಲೇಜ್ ಸಹಪಠ್ಯ ಚಟುವಟಿಕೆ; ಇಂಗ್ಲಿಷ್ ಚರ್ಚಾ ಸ್ಪರ್ಧೆಯಲ್ಲಿ ಶಿಹಾಬುದ್ದೀನ್ ಪ್ರಥಮ

ಭಟ್ಕಳ: ಪದವಿ ಪೂರ್ವ ಶಿಕ್ಷಣ ಇಲಾಖೆ ಹಮ್ಮಿಕೊಂಡ ತಾಲೂಕಾ ಮಟ್ಟದ ಸಾಂಸ್ಕತಿಕ ಸಹ ಪಠ್ಯೇತರ ಚಟುವಟಿಕೆಗಳ ಸ್ಪರ್ಧೆಗಳಲ್ಲಿ ದಿ.ನ್ಯೂ ...