ನ್ಯೂಯಾರ್ಕ್:ನೀತಾ ಅಂಬಾನಿಯವರಿಗೆ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್‍ ಗೌರವ ಪ್ರಶಸ್ತಿ

Source: so english | By Arshad Koppa | Published on 26th January 2017, 12:36 AM | Global News |

ನ್ಯೂಯಾರ್ಕ್, ಜನವರಿ 24, 2017: ಶ್ರೀಮತಿ ನೀತಾ ಅಂಬಾನಿ, ಸಂಸ್ಥಾಪಕರು ಮತ್ತು ಅಧ್ಯಕ್ಷರು, ರಿಲಯನ್ಸ್ ಫೌಂಡೇಶನ್, ಅವರನ್ನು ಪ್ರತಿಷ್ಠಿತ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್ (ದಿ ಮೆಟ್) ನ್ಯೂಯಾರ್ಕ್‍ನಲ್ಲಿ ಗೌರವಿಸಿದೆ. ಶಿಕ್ಷಣ, ಕ್ರೀಡೆ, ಆರೋಗ್ಯಸೇವೆ, ಗ್ರಾಮೀಣ ರೂಪಾಂತರ, ನಗರ ನವೀಕರಣ, ವಿಪತ್ತು ನಿರ್ವಹಣೆ, ಮಹಿಳಾ ಸಬಲೀಕರಣ ಮತ್ತು ಕಲೆಗೆ ಉತ್ತೇಜನದ ಕ್ಷೇತ್ರಗಳಲ್ಲಿ ಶ್ರೀಮತಿ ಅಂಬಾನಿಯವರ ವಿಸ್ತಾರವಾದ ಪರೋಪಕಾರಿ ಕಾರ್ಯಗಳನ್ನು ಗುರುತಿಸಿ ಈ ವಿಶೇಷ ಗೌರವ ನೀಡಲಾಗಿದೆ.  ಈ ವಿಶೇಷ ಗೌರವವನ್ನು ಸ್ವೀಕರಿಸುತ್ತಿರುವ ದಕ್ಷಿಣ ಏಷ್ಯಾದ ಮೊದಲ ವ್ಯಕ್ತಿ ಇವರು ಎಂಬುದು ಹೆಗ್ಗಳಿಕೆಯಾಗಿದೆ.


ಶ್ರೀಮತಿ ಅಂಬಾನಿಯವರ ನೇತೃತ್ವದ ರಿಲಯನ್ಸ್ ಫೌಂಡೇಶನ್ ನಡೆಸುತ್ತಿರುವ ವ್ಯಾಪಕ ಹಾಗೂ ಬೃಹತ್ ಪ್ರಮಾಣದ ಕಾರ್ಯದಿಂದ ದಿ ಮೆಟ್ ಪ್ರಭಾವಿತಗೊಂಡಿದೆ. ರಿಲಯನ್ಸ್ ಫೌಂಡೇಶನ್ 10 ಮಿಲಿಯನ್ ಭಾರತೀಯರಿಗೆ ಅನುಕೂಲ ಕಲ್ಪಿಸಿದೆ, 10,500ಕ್ಕೂ ಹೆಚ್ಚು ನಗರ ಹಾಗೂ ಗ್ರಾಮೀಣ ಪ್ರದೇಶಗಳ ಜನರನ್ನು ತಲುಪಿದೆ.
 
ಈ ಗೌರವ ಸ್ವೀಕರಿಸಿ ಮಾತನಾಡಿದ ಶ್ರೀಮತಿ ಅಂಬಾನಿಯವರು, ``ರಿಲಯನ್ಸ್ ಫೌಂಡೇಶನ್‍ನಲ್ಲಿನ ನಮ್ಮ ಕಾರ್ಯಕ್ಕೆ ನೀಡಲಾದ ಈ ಗೌರವ ನನಗೆ ಖುಷಿ ತಂದಿದೆ ಮತ್ತು ವಿನೀತಳಾಗಿದ್ದೇನೆ. ಇದು ಶಿಕ್ಷಣ, ಕ್ರೀಡೆ, ಆರೋಗ್ಯ ಮತ್ತು ಗ್ರಾಮೀಣ ರೂಪಾಂತರದ ಮೂಲಕ ಲಕ್ಷಾಂತರ ಜನರ ಮುಖದಲ್ಲಿ ನಗು ಮೂಡಿಸುವ ನಮ್ಮ ಪ್ರಯತ್ನಕ್ಕೆ ಸಂದ ನಿಜವಾದ ಪ್ರತಿಫಲವಾಗಿದೆ. ದಿ ಮೆಟ್‍ನಂತಹ ಪ್ರತಿಷ್ಠಿತ ಜಾಗತಿಕ ಸಂಸ್ಥೆಯಿಂದ ದೊರಕುತ್ತಿರುವ ಈ ಗೌರವವು ಸುಸ್ಥಿರ ಅಭಿವೃದ್ಧಿ ಹಾಗೂ ಸಾಮಾಜಿಕ ಸಬಲೀಕರಣದತ್ತ ನಮ್ಮ ಬದ್ಧತೆಯನ್ನು ಗಟ್ಟಿಗೊಳಿಸಲಿದೆ ಮತ್ತು ರಿಲಯನ್ಸ್ ಫೌಂಡೇಶನ್‍ನಲ್ಲಿನ ಪ್ರತಿಯೊಬ್ಬರಿಗೂ ಮುಂದಿನ ಪೀಳಿಗೆಗಾಗಿ ಉತ್ತಮ ಕಾರ್ಯ ಮಾಡಲು ಸ್ಫೂರ್ತಿ ನೀಡಲಿದೆ'' ಎಂದರು.

ರಿಲಯನ್ಸ್ ಫೌಂಡೇಶನ್‍ನ ಸಂಸ್ಥಾಪಕರು ಮತ್ತು ಅಧ್ಯಕ್ಷರಾದ ಶ್ರೀಮತಿ ನೀತಾ ಅಂಬಾನಿ ಅವರು ತಮ್ಮ ಪರೋಪಕಾರಿ ಕಾರ್ಯಕ್ಕಾಗಿ ಗೌರವ ಟ್ರೋಫಿಯನ್ನು ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್, ನ್ಯೂಯಾರ್ಕ್‍ನ ಸಿಇಒ ಮತ್ತು ನಿರ್ದೇಶಕರಾದ ಟಾಮ್ ಕ್ಯಾಂಪ್‍ಬೆಲ್ ಅವರಿಂದ ಸ್ವೀಕರಿಸಿದರು.

Read These Next