ನ್ಯೂ ಶಮ್ಸ್ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಈದ್ ಸ್ನೇಹಾಕೂಟ

Source: sonews | By Staff Correspondent | Published on 24th June 2018, 7:02 PM | Coastal News | Don't Miss |

ಭಟ್ಕಳ: ಇಲ್ಲಿನ ಹೆಬಳೆ ಗ್ರಾ.ಪಂ ವ್ಯಾಪ್ತಿಯ ನ್ಯೂಶಮ್ಸ್ ಸ್ಕೂಲ್ ವಿದ್ಯಾರ್ಥಿಗಳಿಂದ ಈದುಲ್ ಫಿತ್ರ್ ಅಂಗವಾಗಿ ಈದ್ ಸ್ನೇಹಕೂಟ ಕಾರ್ಯಕ್ರಮ ಶಾಲಾಸಭಾಂಗಣದಲ್ಲಿ ಜರಗಿತು. 

ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಶರಾವತಿ ಕೌನ್ಸಿಲ್‍ನ ಪ್ರಧಾನ ಕಾರ್ಯದರ್ಶಿ ಮುಝಪ್ಫರ್ ಶೇಖ್ ಮಾತನಾಡಿ, ಹಬ್ಬಗಳಿಂದಾಗಿ ಬದುಕಿನಲ್ಲಿ ಸಂತೋಷ ಉಂಟಾಗುತ್ತದೆ. ನಾವು ಪ್ರತಿ ಸಂದರ್ಭದಲ್ಲಿ ದೇವನನ್ನು ಸ್ಮರಿಸುತ್ತ ಬದುಕಬೇಕು. ನಮ್ಮ ನೆರೆಹೊರೆಯವರನ್ನು ಪ್ರೀತಿಸುವಂತೆ ಪ್ರವಾದಿ ಮುಹಮ್ಮದ್ ಪೈಗಂಬರರು ಕರೆನೀಡಿದ್ದರು ಅದರಂತೆ ಪ್ರತಿಯೊಬ್ಬರು ತಮ್ಮ ಬದುಕನ್ನು ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು. 

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಮ್ಸ್ ಸ್ಕೂಲ್ ಬೋರ್ಡ್ ಕಾರ್ಯದರ್ಶಿ ಮುಹಮ್ಮದ್ ತಲ್ಹಾ ಸಿದ್ದಿಬಾಪಾ, ನಾವು ಸಂತೋಷದಲ್ಲಿ ಬಡವರನ್ನು, ನಿರ್ಗತಿಕರನ್ನು ಸ್ಮರಿಸಬೇಕು ಅವರು ಕೂಡ ನಮ್ಮ ಖುಷಿಯಲ್ಲಿ ಪಾಲ್ಗೊಳ್ಳುವಂತಾಗಬೇಕು. ಮಾನವೀಯ ಮೌಲ್ಯಗಳೇ ನಮ್ಮನ್ನು ಉತ್ತುಂಗಕ್ಕೆ ಕೊಂಡೊಯ್ಯಬಲ್ಲದು ಎಂದರು. 

ಶಮ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಮುಹಮ್ಮದ್ ರಝಾ ಮಾನ್ವಿ, ಶರಾವತಿ ಕೌನ್ಸಿಲ್ ನ ಸದಸ್ಯರಾದ ಸಮೀರ್ ಖಾನ್, ಇಂಜಿನೀಯರ್ ಆಸಿಫ್, ಹುಸೈನ್ ಶೇಖ್ ಉಪಸ್ಥಿತರಿದ್ದರು. 

ಸ್ಟೂಡೆಂಟ್ಸ್ ಕೌನ್ಸಿಲ್ ಸದಸ್ಯ ಫಾರಖಲಿತ್ ರಿದಾ ಮಾನ್ವಿ ಮಾತನಾಡಿದರು. ವಿದ್ಯಾರ್ಥಿ ನಾಯಕ ಮುಹಮ್ಮದ್ ಧನ್ಯವಾದ ಅರ್ಪಿಸಿದರು. ಕೌನ್ಸಿಲ್ ಸದಸ್ಯ ಅಬುಲ್ ಖೈರ್ ಕಾರ್ಯಕ್ರಮ ನಿರೂಪಿಸಿದರು. 

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...