ಸಾಮಾಜಿಕ -ರಾಜಕೀಯ ಮತಭೇದಗಳನ್ನು ಮರೆತು ಒಂದಾಗುವಂತೆ ಪ್ರಧಾನಿ ಕರೆ

Source: S O News service | By Staff Correspondent | Published on 13th March 2017, 12:08 AM | National News | Don't Miss |

ಹೊಸದಿಲ್ಲಿ: ಇಲ್ಲಿಯ ಬಿಜೆಪಿ ಕೇಂದ್ರಕಚೇರಿಯಲ್ಲಿ ರವಿವಾರ ವಿಜಯೋತ್ಸವ ಸಂಭ್ರಮದಲ್ಲಿ ಭಾಗಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಬಡವರು ಮತ್ತು ಶೋಷಿತರು ಸಂಪೂರ್ಣ ಸ್ವಾವಲಂಬಿಗಳಾಗಿ ಬದುಕುವ ತನ್ನ ನೂತನ ಭಾರತದ ಕನಸನ್ನು ತೆರೆದಿಟ್ಟರು. 2022ರಲ್ಲಿ ದೇಶವು ತನ್ನ 75ನೇ ಸ್ವಾತಂತ್ರೋತ್ಸವ ಆಚರಿಸುವ ವೇಳೆಗೆ ನೂತನ ಭಾರತವನ್ನು ನಿರ್ಮಿಸುವ ಶಪಥವನ್ನು ಕೈಗೊಳ್ಳುವಂತೆ ಅವರು ದೇಶಬಾಂಧವರಿಗೆ ಕರೆ ನೀಡಿದರು.

 

ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ದುಡಿದ ಪಕ್ಷದ ಕಾರ್ಯಕರ್ತರಿಗೆ ಕೃತಜ್ಞತೆಗಳನ್ನು ಸಲ್ಲಿಸಿದ ಬಳಿಕ ಭಾವಪೂರ್ಣ ಭಾಷಣವನ್ನು ಮಾಡಿದ ಪ್ರಧಾನಿ, ಚುನಾವಣಾ ಫಲಿತಾಂಶಗಳು ತನ್ನ ಮನಸ್ಸಿನಲ್ಲಿ ನೂತನ ಭಾರತದ ಬುನಾದಿಯನ್ನು ಮೂಡಿಸಿವೆ ಎಂದರು.

ಸಾಮಾಜಿಕ -ರಾಜಕೀಯ ಮತಭೇದಗಳನ್ನು ಮರೆತು ಒಂದಾಗುವಂತೆ ಸಮಾಜದ ಎಲ್ಲ ವರ್ಗಗಳಿಗೆ ಮನವಿ ಮಾಡಿಕೊಂಡ ಅವರು,‘ನಾವು ರಚಿಸುವ ಸರಕಾರಗಳು ಎಲ್ಲರ ಏಳಿಗೆಗಾಗಿ ದುಡಿಯಲಿವೆ.ನಮಗೆ ಮತ ನೀಡಿದವರ ಮತ್ತು ಮತ ನೀಡದವರ ಪರವಾಗಿಯೂ ಅವು ಶ್ರಮಿಸಲಿವೆ. ಅವು ನಮ್ಮ ವಿರುದ್ಧವಾಗಿ ನಿಂತವರ ಪರವೂ ಇರುತ್ತವೆ. ಇವರೆಲ್ಲರ ನಡುವೆ ತಾರತಮ್ಯವೆಸಗಲು ಸರಕಾರ ಅಥವಾ ಬಿಜೆಪಿಗೆ ಯಾವುದೇ ಹಕ್ಕು ಇರುವುದಿಲ್ಲ ಎಂದರು.

  ತನ್ನ 35 ನಿಮಿಷಗಳ ಭಾಷಣದ ಹೆಚ್ಚಿನ ಅವಧಿಯನ್ನು ನೂತನ ಭಾರತದ ಚಿತ್ರಣ ನೀಡಲು ಮೀಸಲಿಟ್ಟ ಮೋದಿ, ಭಾರತವು ಘೋಷಣೆಗಳು ಮತ್ತು ವಾಗಾಡಂಬರಗಳನ್ನು ಮೀರಿ ತನ್ನ 1.25 ಶತಕೋಟಿ ಪ್ರಜೆಗಳ ಸಾಮರ್ಥ್ಯವನ್ನು ಬಳಸಿಕೊಂಡು ಬೆಳೆಯಲಿದೆ ಎಂದರು. ಈ 1.25 ಶತಕೋಟಿ ಪ್ರಜೆಗಳಲ್ಲಿ ಶೇ.65ರಷ್ಟು 35 ವರ್ಷಕ್ಕಿಂತ ಕಡಿಮೆ ಪ್ರಾಯದವರಾಗಿದ್ದಾರೆ ಎನ್ನುವದನ್ನು ಅವರು ಬೆಟ್ಟು ಮಾಡಿದರು.

ಪ್ರಗತಿ ಎನ್ನುವುದು ಕಠಿಣ ರಾಜಕೀಯ ವಿಷಯವಾಗಿದೆ. ಪ್ರತಿ ಚುನಾವಣೆ ಯಲ್ಲಿಯೂ ಅಭಿವೃದ್ಧಿ ಕೇಂದ್ರ ವಿಷಯವಾಗಿರುತ್ತದೆ. ಆದರೆ ಈ ಹಿಂದೆ ಅಭಿವೃದ್ಧಿಯನ್ನು ಮುಖ್ಯವಾಗಿಟ್ಟುಕೊಂಡು ಚುನಾವಣೆಗಳಲ್ಲಿ ಹೋರಾಡಲು ರಾಜಕೀಯ ಪಕ್ಷಗಳು ಹಿಂಜರಿಯುತ್ತಿದ್ದವು. ಆದರೆ ನಾವು ಅಭಿವೃದ್ಧಿಯನ್ನೇ ಮುಖ್ಯ ಚುನಾವಣಾ ಭೂಮಿಕೆಯನ್ನಾಗಿಸಿಕೊಂಡು ಹೋರಾಡಿದೆವು ಎಂದರು.

ಬಡವರ ಏಳಿಗೆಗಾಗಿ ದುಡಿಯಲು ಬಿಜೆಪಿ ಬದ್ಧವಾಗಿದೆ ಎಂದ ಅವರು ಅಭಿವೃದ್ಧಿ ಮತ್ತು ಸಾಧನೆಯ ಕುರಿತು ಮಾತನಾಡಿದರು.
ನಮಗೂ ಪ್ರಗತಿ ಹೊಂದಬೇಕಾಗಿದೆ ಮತ್ತು ನಿಮ್ಮಿಂದ ಅವಕಾಶವನ್ನು ಬಯಸುತ್ತಿದ್ದೇವೆ ಎಂದು ಬಡವರು ಹೇಳುತ್ತಿದ್ದಾರೆ. ಇದು ನೂತನ ಭಾರತದ ಬುನಾದಿಯಾಗಿದೆ. ಇದು ನೂತನ ಭಾರತದ ಸಿದ್ಧಾಂತ ಮತ್ತು ವಿಶ್ವಾಸವಾಗಿದೆ ಎಂದರು.

ಮಧ್ಯಮ ವರ್ಗಗಳ ಮೇಲಿನ ಹೊರೆ ತಗ್ಗಬೇಕು,ಇದರಿಂದಾಗಿ ಅವರು ಪ್ರಕಾಶಿಸಲು ಸಾಧ್ಯವಾಗುತ್ತದೆ. ಬಡವರ ಶಕ್ತಿ ಮತ್ತು ಮಧ್ಯಮ ವರ್ಗಗಳ ಆಕಾಂಕ್ಷೆಗಳನ್ನು ನಾವು ಒಂದಾಗಿಸಿದರೆ ನಮ್ಮನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಮೋದಿ ಹೇಳಿದಾಗ ಭಾರತ ಮಾತಾ ಕಿ ಜೈ ಎಂಬ ಘೋಷಣೆಗಳು ಮೊಳಗಿದವು.

ತನ್ನ ನೂತನ ಭಾರತದ ಪರಿಕಲ್ಪನೆಯನ್ನು ವ್ಯಾಖ್ಯಾನಿಸಿದ ಅವರು, ಅದು 35ಕ್ಕಿಂತ ಕೆಳಗಿನ ಹರೆಯದವರ ಕನಸುಗಳಾಗಿರುತ್ತದೆ, ಮಹಿಳೆಯರ ಆಕಾಂಕ್ಷೆಗಳು ಈಡೇರುವ ಮತ್ತು ಬಡವರಿಗೆ ಅವಕಾಶಗಳನ್ನು ಒದಗಿಸುವ ಭಾರತವಾಗಿರುತ್ತದೆ ಎಂದರು.

ಬಿಜೆಪಿಯ ಗೆಲುವನ್ನು ವಿಶ್ಲೇಷಿಸಿದ ಅವರು ರಾಜಕೀಯ ಪಂಡಿತರನ್ನು ಮತ್ತು ವಿಶ್ಲೇಷಕರನ್ನು ನಯವಾಗಿಯೇ ತಿವಿದರು. ಮತದಾನೋತ್ತರ ಸಮೀಕ್ಷೆಗಳನ್ನೂ ಅವರು ಬಿಡಲಿಲ್ಲ. ಗೆಲುವಿಗೆ ಬಹಳಷ್ಟು ಕಾರಣಗಳಿರುತ್ತವೆ. ಆದರೆ ದಾಖಲೆಯ ಪ್ರಮಾಣದಲ್ಲಿ ಮತದಾನದ ಬಳಿಕ ಇಷ್ಟೊಂದು ಭಾರೀ ಗೆಲುವು ಲಭಿಸಿರುವುದು ವಿಶೇಷವಾಗಿದೆ ಮತ್ತು ಪ್ರತಿಯೊಬ್ಬರನ್ನೂ ಚಿಂತನೆಗೆ ಹಚ್ಚಿದೆ. ರಾಜಕೀಯ ಪಂಡಿತರು ಆತ್ಮಶೋಧನೆ ಮಾಡಿಕೊಳ್ಳಬೇಕಾಗಿದೆ ಎಂದರು.

ಇಷ್ಟೊಂದು ದುಡಿಯುವ ಅಗತ್ಯವೇನಿದೆ ಎಂದು ನಮ್ಮ ವಿರೋಧಿಗಳು ಪ್ರಶ್ನಿಸುತ್ತಾರೆ. ಇದು ನಮ್ಮ ಪಾಲಿಗೆ ಅತ್ಯಂತ ದೊಡ್ಡ ಗೌರವವಾಗಿದೆ ಎಂದ ಅವರು, ನಾವು ತಪ್ಪುಗಳನ್ನು ಮಾಡಬಹುದು,ಆದರೆ ನಮ್ಮ ಉದ್ದೇಶಗಳು ಎಂದಿಗೂ ತಪ್ಪಾಗಿರುವುದಿಲ್ಲ ಎಂದರು.
 

Read These Next

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಗುಂಪಿನಿಂದ ಹತ್ಯೆ, ಗೋರಕ್ಷಣೆ ಹೆಸರಿನಲ್ಲಿ ಹಿಂಸಾಚಾರ ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿ; ರಾಜ್ಯಗಳಿಗೆ ಸುಪ್ರೀಂ ಸೂಚನೆ

ಗುಂಪಿನಿಂದ ಥಳಿಸಿ ಹತ್ಯೆ ಮತ್ತು ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರದ ಘಟನೆಗಳನ್ನು ತಡೆಯಲು ಕೈಗೊಂಡಿರುವ ಕ್ರಮಗಳ ಬಗ್ಗೆ ಆರು ...

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆ.

ಕಾರವಾರ :12- ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ , ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನವಾದ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...