ಪಿಣರಾಯಿ ತಲೆಗೆ ಕೋ.ರೂ.ಘೋಷಿಸಿದ್ದ ಚಂದ್ರಾವತ್ ಆರೆಸ್ಸೆಸ್‌ನಿಂದ ವಜಾ

Source: S O News service | By Staff Correspondent | Published on 4th March 2017, 12:30 AM | National News |

ಹೊಸದಿಲ್ಲಿ: ಮಧ್ಯಪ್ರದೇಶದ ಉಜ್ಜೈನ್‌ನಲ್ಲಿ ಸಾರ್ವಜನಿಕ ಸಭೆಯಲ್ಲಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ತಲೆಗೆ ಒಂದು ಕೋರೂ. ಬಹುಮಾನವನ್ನು ಘೋಷಿಸಿದ್ದ ಸಹ ಪ್ರಚಾರ ಪ್ರಮುಖ ಚಂದನ್ ಚಂದ್ರಾವತ್‌ರನ್ನು ಆರೆಸ್ಸೆಸ್ ಶುಕ್ರವಾರ ಉಚ್ಚಾಟಿಸಿದೆ. ಈ ಘೋಷಣೆಯ ಜೊತೆಗೆ ಚಂದ್ರಾವತ್ ಗುರುವಾರ 2002ರ ಗುಜರಾತ್ ಕೋಮು ಗಲಭೆ ಕುರಿತಂತೆ ಅತ್ಯಂತ ವಿಭಜನಕಾರಿ ಹೇಳಿಕೆಯನ್ನೂ ನೀಡಿದ್ದು, ಇದಕ್ಕೆ ಆರೆಸ್ಸೆಸ್ ಸೇರಿದಂತೆ ಎಲ್ಲ ವರ್ಗಗಳಿಂದ ವ್ಯಾಪಕ ಖಂಡನೆಗಳು ವ್ಯಕ್ತವಾಗಿದ್ದವು.

 

ಚಂದ್ರಾವತ್‌ರನ್ನು ಸಂಘದಲ್ಲಿಯ ಎಲ್ಲ ಹೊಣೆಗಾರಿಕೆಗಳಿಂದ ಮುಕ್ತಗೊಳಿಸಲಾಗಿದೆ ಮತ್ತು ತಾನು ಹಿಂಸೆಯಲ್ಲಿ ನಂಬಿಕೆಯನ್ನು ಹೊಂದಿಲ್ಲ ಎಂದು ಆರೆಸ್ಸೆಸ್ ಹೇಳಿಕೆಯಲ್ಲಿ ತಿಳಿಸಿದೆ. ಇದಕ್ಕೂ ಮುನ್ನ ತನ್ನ ಹೇಳಿಕೆಯನ್ನು ಹಿಂದೆಗೆದುಕೊಂಡಿದ್ದ ಚಂದ್ರಾವತ್ ಅದಕ್ಕಾಗಿ ವಿಷಾದ ವ್ಯಕ್ತಪಡಿಸಿದ್ದರು.

ಅತ್ತ ಪಿಣರಾಯಿ ವಿಜಯನ್ ಅವರು ತನಗೆ ಬೆದರಿಕೆಯನ್ನು ತಳ್ಳಿಹಾಕಿದ್ದು, ಯಾವುದೇ ಬೆದರಿಕೆಯು ದೇಶದಲ್ಲಿ ಪ್ರವಾಸ ಮಾಡದಂತೆ ತನ್ನನ್ನು ತಡೆಯುವುದಿಲ್ಲ ಎಂದ ಹೇಳಿದ್ದಾರೆ.

Read These Next

ರಿಲಯನ್ಸ್ ಜೊತೆ ನಂಟು ಹೊಂದಿರುವ ಕಂಪೆನಿಯಿಂದ ಬಿಜೆಪಿಗೆ 375 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್

ರಿಲಯನ್ಸ್ ಗುಂಪಿನೊಂದಿಗೆ ನಂಟು ಹೊಂದಿರುವ, ಆದರೆ ಹೊರಜಗತ್ತಿಗೆ ಅಪರಿಚಿತವಾಗಿರುವ ಕಂಪೆನಿ ಕ್ವಿಕ್ ಸಪ್ಪೆ ಚೇನ್ ಪ್ರೈವೇಟ್ ...

ಲೋಕಸಭಾ ಚುನಾವಣೆ; ಕಾಂಗ್ರೇಸ್ ನ ಎರಡನೇ ಪಟ್ಟಿ ಬಿಡುಗಡೆ; ಉ.ಕ ಕ್ಷೇತ್ರಕ್ಕೆ ಅಂಜಲಿ ನಿಂಬಾಳ್ಕರ್

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಕರ್ನಾಟಕದ 17, ಅರುಣಾಚಲ ...

ಸಿಎಎ ನಿಯಮಾವಳಿಗಳಿಗೆ ತಡೆ ಕೋರುವ ಅರ್ಜಿಗಳ ವಿಚಾರಣೆ ; ಸು.ಕೋರ್ಟ್‌ನಿಂದ ಕೇಂದ್ರಕ್ಕೆ ನೋಟಿಸ್

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ನಿಯಮಗಳಿಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಮಂಗಳವಾರ ...