ಸೂಫಿ ಹಾಡುಗಾರ ಇಬ್ರಾಹೀಮ್ ಸುತಾರ ಸೇರಿದಂತೆ ೮೫ ಮಂದಿಗೆ ಪದ್ಮಪುರಸ್ಕಾರ

Source: sonews | By Staff Correspondent | Published on 25th January 2018, 10:59 PM | National News | Don't Miss |

ಹೊಸದಿಲ್ಲಿ: ಕರ್ನಾಟಕದ ಸೂಫಿ ಹಾಡುಗಾರ ಇಬ್ರಾಹಿಂ ಸುತರ್,  ಸೂಲಗಿತ್ತಿ ನರಸಮ್ಮ, ಮಹಿಳಾ ಸಶಕ್ತೀಕರಣದ ಸೀತವ್ವ ಜೋಡ್ಡತ್ತಿ ಗೆ ಪದ್ಮಶ್ರೀ ಪ್ರಶಸ್ತಿ ಸೇರಿದಂತೆ ಒಟ್ಟು 85 ಮಂದಿಗೆ ಕೇಂದ್ರ ಸರಕಾರ ಗುರುವಾರ ಪದ್ಮ ಪ್ರಶಸ್ತಿಗಳನ್ನು ಘೋಷಿಸಿದೆ.

ಸೂಲಗಿತ್ತಿ ನರಸಮ್ಮ 

ಇದರಲ್ಲಿ ಮೂವರು ಪದ್ಮವಿಭೂಷಣ, 9 ಮಂದಿ ಪದ್ಮಭೂಷಣ ಹಾಗೂ 73 ಮಂದಿ ಪದ್ಮಶ್ರೀ ಪ್ರಶಸ್ತಿಗೆ ಬಾಜನರಾಗಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಪದ್ಮವಿಭೂಷಣ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಪದ್ಮಶ್ರೀ ಪ್ರಶಸ್ತಿ ಪಡೆದವರಲ್ಲಿ ವೈಜ್ಞಾನಿಕ ಆಟಿಕೆಗಳ ತಯಾರಕ ಅರವಿಂದ ಗುಪ್ತಾ, ನಾಟಿ ವೈದ್ಯೆ ಲಕ್ಷ್ಮೀಕುಟ್ಟಿ, ಗೊಂಡ ಕಲಾವಿದ ಭಜ್ಜು ಶ್ಯಾಮ್, 98ರ ಹರೆಯದ ಸಾಮಾಜಿಕ ಕಾರ್ಯಕರ್ತ ಸುಧಾಂಶು ಬಿಸ್ವಾಸ್ ಹಾಗೂ ಭಾರತದ ಉಪಶಾಮಕ ಆರೈಕೆಯ ಪಿತ ಎಂ.ಆರ್. ರಾಜಗೋಪಾಲ್ ಸೇರಿದ್ದಾರೆ.

ಅಲ್ಲದೆ ಸಾಮಾಜಿಕ ಹೋರಾಟಗಾರ್ತಿ ರಾಣಿ ಹಾಗೂ ಅಭಯ್ ಬಾಂಗ್, ಸಾಮಾಜಿಕ ಕಾರ್ಯಕರ್ತ ಲೆಂಟಿನಾ ಆವೊ ಥಕ್ಕರ್, ವನ್ಯಜೀವಿ ಸಂರಕ್ಷಕ ರೋಮುಲಸ್ ವಿಟ್ಕರ್, ಸಂಪತ್ ರಾಮ್ ಟೆಕೆ, ಸಂದುಕ್ ಕೂಡ ಸೇರಿದ್ದಾರೆ.

ಭಾರತದ ಮೊದಲ ಪ್ಯಾರಾ ಒಲಿಂಪಿಕ್ ನಲ್ಲಿ ಚಿನ್ನದ ಪದಕ ಪಡೆದ ಮುರಳಿಕಾಂತ್ ಪೆಟ್ಕರ್, ಪ್ಲಾಸ್ಟಿಕ್ ರಸ್ತೆ ನಿರ್ಮಿಸಿದ ರಾಜಗೋಪಾಲನ್ ವಾಸುದೇವನ್, ಬಡವರಿಗಾಗಿ ಆಸ್ಪತ್ರೆ ನಿರ್ಮಿಸಿದ ಸುಭಾಷಿಣಿ ಮಿಸ್ತ್ರಿ, ತಮಿಳು ಜಾನಪದ ಕಲಾವಿದೆ ವಿಜಯಲಕ್ಷ್ಮೀ, ಬೌದ್ಧ ವೈದ್ಯ ಯೆಶಿ ಧೋಡೆನ್ ಪದ್ಮ ಶ್ರೀ ಪ್ರಶಸ್ತಿಗೆ ಆಯ್ಕೆಯಾದವರಲ್ಲಿ ಸೇರಿದ್ದಾರೆ.

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...