ನನ್ನ ಇಸ್ಲಾಮ್ ಸ್ವೀಕಾರಕ್ಕೆ ಯಾರ ಬಲವಂತವಿಲ್ಲ; ಸುಪ್ರೀಮ್ ಕೋರ್ಟನಲ್ಲಿ ಹಾದಿಯಾ

Source: sonews | By sub editor | Published on 20th February 2018, 10:47 PM | National News | Don't Miss |

ಹೊಸದಿಲ್ಲಿ: ಇಸ್ಲಾಂ ಧರ್ಮವನ್ನು ಸ್ವೀಕರಿಸುವಂತೆ ಬಲವಂತಪಡಿಸಲಾಗಿತ್ತು ಎನ್ನುವ ಆರೋಪಗಳನ್ನು ನಿರಾಕರಿಸಿರುವ ಹಾದಿಯಾ ತಾನು ತನ್ನ ಇಚ್ಛೆಯಂತೆ ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದೇನೆ ಹಾಗು ಮುಸ್ಲಿಮ್ ಆಗಿಯೇ ಜೀವಿಸಲು ಇಚ್ಛಿಸಿದ್ದೇನೆ ಎಂದು ಸುಪ್ರೀಂ ಕೋರ್ಟ್ ಗೆ ತಿಳಿಸಿದ್ದಾರೆ.

ಇಸ್ಲಾಂನ ಬೋಧನೆಗಳಿಂದ ತಾನು ಹೇಗೆ ಪ್ರಭಾವಿತಳಾದೆ ಹಾಗು ಇಸ್ಲಾಂ ಧರ್ಮಕ್ಕೆ ಮತಾಂತರವಾದೆ ಎನ್ನುವ ಬಗ್ಗೆ ಹಾದಿಯಾ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿರುವ 26 ಪುಟಗಳ ಅಫಿದಾವಿತ್ ನಲ್ಲಿ ತಿಳಿಸಿದ್ದಾರೆ ಎಂದು ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.

ತಾನು ಮತಾಂತರವಾದ ವಿಚಾರದಲ್ಲಿ ಶಫಿನ್ ಜಹಾನ್ ಪಾತ್ರವಿಲ್ಲ. ತಾನು ಇಸ್ಲಾಂ ಧರ್ಮಕ್ಕೆ ಮತಾಂತರವಾದ ನಂತರ ಶಫಿನ್ ತನ್ನ ಜೀವನಕ್ಕೆ ಬಂದರು ಎಂದು ಹಾದಿಯಾ ವಿವರಿಸಿದ್ದಾರೆ ಎನ್ನಲಾಗಿದೆ.

“ಇಸ್ಲಾಂ ಬಗ್ಗೆ ಅಧ್ಯಯನ ಮಾಡಿದ ಮೇಲೆ ನನ್ನ ಆತ್ಮಸಾಕ್ಷಿಯ ಪ್ರಕಾರ ಇಸ್ಲಾಂ ಧರ್ಮವನ್ನು ಸ್ವೀಕರಿಸಿದೆ ಹಾಗು ನಂತರ ಶಫಿನ್ ಜಹಾನ್ ಎಂಬವರನ್ನು ಮದುವೆಯಾದೆ. ಇದೂ ಕೂಡ ನನ್ನ ಸ್ವಂತ ಆಯ್ಕೆಯಾಗಿತ್ತು. ಕೇರಳ ಹೈಕೋರ್ಟ್ ಗೂ ನಾನು ಈ ವಿಚಾರಗಳನ್ನು ಸಲ್ಲಿಸಿದ್ದರೂ ಅದು ಪರಿಗಣಿಸಲಿಲ್ಲ” ಎಂದು ಹಾದಿಯಾ ಹೇಳಿದ್ದಾರೆ.

“ಶಫಿನ್ ಜಹಾನ್ ನನ್ನ ಪತಿಯಾಗಿದ್ದಾರೆ. ನಾನು ಅವರ ಪತ್ನಿಯಾಗಿ ಜೀವಿಸಲು ಇಚ್ಛಿಸುತ್ತೇನೆ. ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದು ಹಾಗು ಶಫಿನ್ ರನ್ನು ಮದುವೆಯಾಗಿರುವುದು ನನ್ನ ಸ್ವತಂತ್ರ ಆಲೋಚನೆಯಿಂದ. ಪೋಷಕರಾಗಿ ನನ್ನ ಪತಿಯನ್ನೇ ನೇಮಿಸಬೇಕು ಎಂದು ನಾನು ನ್ಯಾಯಾಲಯಕ್ಕೆ ಮನವಿ ಮಾಡುತ್ತೇನೆ. ನಾವಿಬ್ಬರೂ ಪತಿ-ಪತ್ನಿಯರಾಗಿ ಜೀವಿಸಲು ನ್ಯಾಯಾಲಯವು ಅನುಮತಿಸಬೇಕು ಎಂದು ನಾನು ಮನವಿ ಮಾಡುತ್ತೇನೆ”

“ನನ್ನ ತಂದೆಯನ್ನು ಕೆಲವರು ಬಳಸಿಕೊಳ್ಳುತ್ತಿದ್ದಾರೆ. ಅವರು ಕೆಲವರ ಪ್ರಭಾವಕ್ಕೊಳಗಾಗಿದ್ದಾರೆ ಎಂದು ನನಗನಿಸುತ್ತದೆ. ಒಬ್ಬ ನಾಸ್ತಿಕನಾಗಿದ್ದುಕೊಂಡು ನಾನು ಬೇರೆ ಧರ್ಮ ಸ್ವೀಕರಿಸಿದ್ದಕ್ಕೆ ಹಾಗು ಬೇರೆ ಧರ್ಮದವರನ್ನು ಮದುವೆಯಾಗಿದ್ದಕ್ಕೆ ಅವರು ವಿರೋಧಿಸುತ್ತಿರುವುದು ಹೇಗೆ?. ನನ್ನ ಮಾನಸಿಕತೆ ಸರಿಯಿಲ್ಲ ಎಂಬ ತನಿಖಾ ಸಂಸ್ಥೆಯ, ನನ್ನ ತಂದೆಯ ಹಿಂದಿರುವ ಕೆಟ್ಟ ಶಕ್ತಿಗಳ ಆಧಾರವಿಲ್ಲದ ಹಾಗು ದುರುದ್ದೇಶಪೂರಿತ ಆರೋಪಗಳು, ಐಸಿಸ್ ಜೊತೆ ಸಂಪರ್ಕವಿದೆಯೆಂಬ ಆರೋಪಗಳು ಹಾಗು ಮಾಧ್ಯಮಗಳು ನೀಡಿದ ತೀರ್ಪು ವೈದ್ಯೆಯಾಗಿ ನನ್ನ ಭವಿಷ್ಯಕ್ಕೆ ವಿಪರೀತ ಕೆಟ್ಟ ಪರಿಣಾಮವನ್ನು ಬೀರುತ್ತದೆ” ಎಂದು ಹಾದಿಯಾ ಹೇಳಿದ್ದಾರೆ.

Read These Next

ದಿನ ನಿತ್ಯದ ಅಗತ್ಯ ವಸ್ತುಗಳನ್ನು ಜಿಎಸ್ಟಿ ವ್ಯಾಪ್ತಿಗೆ ತರುವಂತೆ ಆಗ್ರಹಿಸಿ ರೈತಸಂಘದಿಂದ ಪ್ರತಿಭಟನೆ

ಕೋಲಾರ: ಜನ ಸಾಮಾನ್ಯರ ದಿನ ನಿತ್ಯದ ಅಗತ್ಯ ವಸ್ತುಗಳಾದ ಡೀಜಲ್, ಪೆಟ್ರೋಲ್, ಗ್ಯಾಸ್‍ನ್ನು ಜಿ.ಎಸ್.ಟಿ ವ್ಯಾಪ್ತಿಗೆ ತರಬೇಕೆಂದು ...

ಅಜರ್‍ಬೈಜಾನ್ ಜೊತೆಗಿನ ದ್ವಿಪಕ್ಷೀಯ ಸಂಬಂಧವನ್ನು ಭಾರತ ಗೌರವಿಸುತ್ತದೆ - ಮುನಿಯಪ್ಪ

ಕೋಲಾರ:  ಭಾರತ ಮತ್ತು ಅಜರ್‍ಬೈಜಾನ್ ನಮ್ಮ ಐತಿಹಾಸಿಕ ಸಂಬಂಧಗಳು ಮತ್ತು ಹಂಚಿಕೆ ಸಂಪ್ರದಾಯಗಳ ಆಧಾರದ ಮೇಲೆ ನಿಕಟ ಮತ್ತು ಸೌಹಾರ್ದಯುತ ...

ಯಲ್ಲಾಪುರದಲ್ಲಿ ಬಾಲಕರ ಮೇಲೆ ಬೀದಿನಾಯಿಗಳಿಂದ ದಾಳಿ;ಕಣ್ಮುಚ್ಚಿಕೊಂಡಿರು ತಾಲೂಕಾಡಳಿತ

ಯಲ್ಲಾಪುರ: ಉತ್ತರಕನ್ನಡ ಜಿಲ್ಲಾದ್ಯಂತ ಬೀದಿನಾಯಿ ಹಾಗೂ ಹುಚ್ಚುನಾಯಿಗಳ ಕಾಟ ದಿನೆ ದಿನೆ ಹೆಚ್ಚಾಗುತ್ತಿದ್ದು ಜಿಲ್ಲಾಡಳಿತ ಇದಕ್ಕೂ ...

ಪಟ್ಟಣದವಾಸಿಗಳೆ ಎಚ್ಚರ  ಬೀದಿಯಲ್ಲಿ ಬೌ ಬೌ ಸದ್ದು ಎಚ್ಚರ ತಪ್ಪಿದರೂ ನಾಯಿ ಕಡಿತ. ಕೈಕಟ್ಟಿ ಕುಳಿತಿರುವ ಪುರಸಭೆ ಅಧಿಕಾರಿಗಳು

ಶ್ರೀನಿವಾಸಪುರ: ಪಟ್ಟಣದವಾಸಿಗಳೆ ಎಚ್ಚರ  ಪಟ್ಟಣದ ಹಾದಿ ಬೀದಿಯಲ್ಲಿ ಈಗ ಬೌ ಬೌ ಸದ್ದು. ಸ್ವಲ್ಪ ಎಚ್ಚರ ತಪ್ಪಿದರೂ ನಾಯಿ ಕಡಿತ ...