ರೈತರ ಪ್ರತಿಭಟನೆಯನ್ನು  ಅಸಮರ್ಥ ರೀತಿಯಿಂದ ನಿರ್ವಹಿಸಿದ ಸರಕಾರದ ಕ್ರಮ ಖಂಡನೀಯ -ಜಮಾಅತೆ ಇಸ್ಲಾಮೀ ಹಿಂದ್

Source: sonews | By sub editor | Published on 8th June 2017, 8:23 PM | National News | Don't Miss |

ಹೊಸದಿಲ್ಲಿ: ರೈತರ ಪ್ರತಿಭಟನೆಯನ್ನು  ಅಸಮರ್ಥ ರೀತಿಯಿಂದ ನಿರ್ವಹಿಸಿದ ಸರಕಾರದ ಕ್ರಮವನ್ನು  ಜಮಾಅತೆ ಇಸ್ಲಾಮೀ ಹಿಂದ್ ಪ್ರಧಾನ ಕಾರ್ಯದರ್ಶಿ ಇಂಜಿನಿಯರ್ ಸಲೀಮ್ ಅಹ್ಮದ್ ತೀವ್ರವಾಗಿ ಖಂಡಿಸಿದ್ದು,
ರೈತರ ಕಾನೂನುಬದ್ಧ ಬೇಡಿಕೆಗಳನ್ನು ಶೀಘ್ರವೇ ಪೂರೈಸಬೇಕೆಂದು  ಒತ್ತಾಯಿಸಿದ್ದಾರೆ. 
ಬಿಜೆಪಿ ಆಡಳಿತ ರಾಜ್ಯಗಳಾದ ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಹರಿಯಾಣದಲ್ಲಿ ರೈತರ ಆಂದೋಲನವನ್ನು ನಿಭಾಯಿಸುವ ರೀತಿಯಿಂದ ನಾವು ಕಳವಳಗೊಂಡಿದ್ದೇವೆ. ಮಂಡ್ಸರ್ (ಮಧ್ಯಪ್ರದೇಶ) ನಲ್ಲಿ ಪೊಲೀಸ್ ಗೋಲಿಬಾರ್ ನಿಂದ  5 ರೈತರ ಸಾವು ಸಂಭವಿಸಿದ್ದು ಖಂಡನೀಯವಾಗಿದೆ.

ಈ ರಾಜ್ಯಗಳಲ್ಲಿನ ಸರ್ಕಾರಗಳು
ರೈತರ ದೀರ್ಘಕಾಲೀನ ಸಮಸ್ಯೆಗಳು ಮತ್ತು ಇತರ ಪ್ರಮುಖ ಸಮಸ್ಯೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದು, ತಮ್ಮ ವಿಭಜನೆ ಮತ್ತು ಧ್ರುವೀಕರಣದ ಕಾರ್ಯಸೂಚಿಯನ್ನು ಅನುಷ್ಠಾನಗೊಳಿಸಲು ಕಾರ್ಯನಿರತವಾಗಿವೆ ಎಂದು ತೋರುತ್ತದೆ ಎಂದು ಜಮಾತ್ ಹೊರಡಿಸಿದ ಪತ್ರಿಕಾ ಹೇಳಿಕೆಯಲ್ಲಿ ಪ್ರಧಾನ ಕಾರ್ಯದರ್ಶಿ ಹೇಳಿದ್ದಾರೆ.

ಎರಡು ವರ್ಷಗಳ ಸತತ ಬರಗಾಲದ ನಂತರ, ಕಳೆದ ವರ್ಷ ಮಳೆಯಿಂದಾಗಿ  ಫಸಲು ಉಂಟಾಗಿದೆ. ಆಮದು ನೀತಿಯಿಂದಾಗಿ ರೈತರು ತಮ್ಮ ಬೆಲೆಗಳಿಗೆ ಸೂಕ್ತ ಬೆಲೆ   (MSP) ಪಡೆಯುವಲ್ಲಿ ವಿಫಲರಾಗಿದ್ದಾರೆ. ಅಮಾನ್ಯೀಕರಣದಿಂದ  ಮಾರುಕಟ್ಟೆಯಲ್ಲಿ  ಹಣವಿಲ್ಲದ ಕಾರಣ ರೈತರು ಸಂಕಷ್ಟದಲ್ಲಿದ್ದು ಸರ್ಕಾರವು  ಉತ್ಪನ್ನಗಳನ್ನು ಸಮಂಜಸವಾದ ಬೆಲೆಗೆ ಖರೀದಿಸಲು ಸಿದ್ಧವಾಗಿರಲಿಲ್ಲ. ಹೀಗಾಗಿ ರೈತರು ಆಯ್ಕೆ ಇಲ್ಲದೆ ಸರ್ಕಾರದ ನೀತಿಯ ವಿರುದ್ಧ ಪ್ರತಿಭಟಿಸಲು ಬೀದಿಗಿಳಿದರು ಎಂದರು.

ಜಮಾತ್ ಯಾವಾಗಲೂ ರೈತರಿಗೆ ಬಡ್ಡಿ ರಹಿತ ಸಾಲವನ್ನು ನೀಡುವ ಬಗ್ಗೆ ಹೇಳುತ್ತಿದೆ. ಸರ್ಕಾರವು ಈ ಬೇಡಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಅಲ್ಪಾವಧಿಗೆ, ರೈತರ ವೆಚ್ಚಕ್ಕಿಂತ ಶೇ.50% ರಷ್ಟು ಎಮ್ಎಸ್ಪಿಯನ್ನು ಹೆಚ್ಚಿಸಬೇಕು. ಭಾಗಶಃ ಅಥವಾ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ದುರ್ಬಲ ಮಾನ್ಸೂನ್ನ ಬದಲಾವಣೆಯನ್ನು ಜಯಿಸಲು ರೈತರಿಗೆ ದೀರ್ಘಕಾಲೀನ ನೀರಾವರಿ ಯೋಜನೆಗಳನ್ನು ಮಾಡಬೇಕು. ವೇರ್ಹೌಸ್ ಮತ್ತು ಶೇಖರಣಾ ಸೌಲಭ್ಯಗಳನ್ನು ವಿಸ್ತರಿಸಬೇಕು. ರೈತರನ್ನು ಮಧ್ಯವರ್ತಿಗಳಿಂದ ಪಾರು ಮಾಡಿ, ಅವರು ನೇರವಾಗಿ ಗ್ರಾಹಕರನ್ನು ತಲಪುವ ವ್ಯವಸ್ಥೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Read These Next

ಆಂಧ್ರಪ್ರದೇಶದಲ್ಲಿ ಹಿಂಸಾಚಾರಕ್ಕೆ ತಿರುಗಿದ ಚುನಾವಣೆ: ಟಿಡಿಪಿ, ವೈಎಸ್​ಆರ್​ ಪಕ್ಷಗಳ ಇಬ್ಬರು ಕಾರ್ಯಕರ್ತರ ಸಾವು

ಆಂಧ್ರಪ್ರದೇಶದಲ್ಲಿ ಹಿಂಸಾಚಾರಕ್ಕೆ ತಿರುಗಿದ ಚುನಾವಣೆ: ಟಿಡಿಪಿ, ವೈಎಸ್​ಆರ್​ ಪಕ್ಷಗಳ ಇಬ್ಬರು ಕಾರ್ಯಕರ್ತರ ಸಾವು