ಹಣಕ್ಕಾಗಿ ಕೇಸರಿವಾದಕ್ಕೆ ಮಣೆ: ಮಾಧ್ಯಮಗಳ ಹುನ್ನಾರ

Source: sonews | By Staff Correspondent | Published on 26th May 2018, 12:01 AM | National News | Special Report | Don't Miss |

►ಕೋಬ್ರಾ ಪೋಸ್ಟ್ ಕುಟುಕು ಕಾರ್ಯಾಚರಣೆ

► ತಮ್ಮ ‘ಶುಲ್ಕ’ವನ್ನು ಕಪ್ಪುಹಣದ ಮೂಲಕ ಪಡೆಯಲು ಒಪ್ಪಿಕೊಂಡ ಪ್ರತಿಷ್ಠಿತ ಸುದ್ದಿಸಂಸ್ಥೆ

 

ಹೊಸದಿಲ್ಲಿ: ಸಂಘಪರಿವಾರದ ಹಿಂದುತ್ವ ಎಜೆಂಡಾವನ್ನು ಪ್ರೋತ್ಸಾಹಿಸಲು ಹಾಗೂ 2019ರ ಲೋಕಸಭಾ ಚುನಾವಣೆಯಲ್ಲಿ ನಿರ್ದಿಷ್ಟ ರಾಜಕೀಯ ಪಕ್ಷವೊಂದರ ಪರವಾಗಿ ಮತದಾರರನ್ನು ಸೆಳೆಯುವಂತೆ ಮಾಡಲು ‘ಟೈಮ್ಸ್‌ಗ್ರೂಪ್’, ‘ಇಂಡಿಯಾ ಟುಡೇ’ ಸೇರಿದಂತೆ 24ಕ್ಕೂ ಅಧಿಕ ಕೆಲವು ಪ್ರತಿಷ್ಠಿತ ಮಾಧ್ಯಮಸಂಸ್ಥೆಗಳು ಡೀಲ್‌ಗೆ ಸಿದ್ಧರಿರುವುದನ್ನು ಬಯಲಿಗೆಳೆದ ಆಪರೇಶನ್ 136 ಕುಟುಕು ಕಾರ್ಯಾಚರಣೆಯ ಎರಡನೆ ಕಂತಿನ ವೀಡಿಯೋವನ್ನು 'ಕೋಬ್ರಾ ಪೋಸ್ಟ್' ಶುಕ್ರವಾರ ಬಹಿರಂಗಪಡಿಸಿದೆ.

ದೇಶದಲ್ಲಿ ಕೋಮು ಸೌಹಾರ್ದತೆಯನ್ನು ಕೆಡಿಸಲು ಹಾಗೂ ಜನತೆಯ ಒಲವು ಬಿಜೆಪಿ ಪರವಾಗಿ ವಾಲುವಂತೆ ಮಾಡಲು ಸಾಧ್ಯವಾಗುವ ಅಭಿಯಾನವನ್ನು ನಡೆಸಲು ಟೈಮ್ಸ್ ಆಫ್ ಇಂಡಿಯಾ, ಇಂಡಿಯಾಟುಡೇ, ಹಿಂದೂಸ್ತಾನ್ ಟೈಮ್ಸ್, ಝೀ ನ್ಯೂಸ್, ನೆಟ್‌ವರ್ಕ್ 18, ಸ್ಟಾರ್ ಇಂಡಿಯಾ, ಎಬಿಪಿ ನ್ಯೂಸ್, ದೈನಿಕ್ ಜಾಗರಣ್, ರೇಡಿಯೋ ಓನ್, ರೆಡ್ ಎಫ್‌ಎಂ, ಲೋಕಮತ್, ಎಬಿಎನ್ ಆಂಧ್ರ ಜ್ಯೋತಿ, ಟಿವಿ 5, ದಿನಮಲರ್, ಬಿಗ್ ಎಫ್‌ಎಂ, ಕೆ ನ್ಯೂಸ್, ಇಂಡಿಯಾ ವಾಯ್ಸೋ, ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್, ಎವಿಟಿವಿ ಹಾಗೂ ಓಪನ್ ಮ್ಯಾಗಝಿನ್ ಸೇರಿದಂತೆ 25 ಮಾಧ್ಯಮಸಂಸ್ಥೆಗಳ ಉನ್ನತ ವ್ಯಕ್ತಿಗಳು ಸಿದ್ಧರಿದ್ದಾರೆಂಬುದನ್ನು ಎರಡನೆ ಹಂತದ ಆಪರೇಶನ್ 136 ಕುಟುಕು ಕಾರ್ಯಾಚರಣೆ ಬಯಲಿಗೆಳೆದಿದೆ.

ಈ ವೀಡಿಯೋದಲ್ಲಿ ಮಾರುವೇಷದ ವರದಿಗಾರರೊಬ್ಬರು ಸುಮಾರು ಎರಡು ಡಜನ್‌ಗೂ ಅಧಿಕ ದೇಶದ ಪ್ರತಿಷ್ಠಿತ ದಿನಪತ್ರಿಕೆಗಳು ಹಾಗೂ ಟಿವಿ ಚಾನೆಲ್‌ಗಳ ಮಾಲಕರು ಹಾಗೂ ಮ್ಯಾನೇಜರ್‌ಗಳು ದೇಶದ ನಾಗರಿಕರ ನಡುವೆ ಕೋಮುಸೌಹಾರ್ದತೆಯನ್ನು ಕದಡಲು ಹಾಗೂ ಚುನಾವಣಾ ಫಲಿತಾಂಶವು ಒಂದು ನಿರ್ದಿಷ್ಟ ರಾಜಕೀಯ ಪಕ್ಷದ ಪರವಾಗಿ ವಾಲುವಂತೆ ಮಾಡಲು ಕಾರ್ಯತಂತ್ರಗಳನ್ನು ರೂಪಿಸಲು ಸಿದ್ಧರಿರುವುದನ್ನು ‘ಕೋಬ್ರಾಪೋಸ್ಟ್’ ಇಂದು ಪ್ರಸಾರ ಮಾಡಿದ ವೀಡಿಯೋ ಬಯಲಿಗೆಳೆದಿದೆ.

‘ಟೈಮ್ಸ್ ಗ್ರೂಪ್‌’ನ ವಿನೀತ್ ಜೈನ್ ಅವರಂತಹ ಬೃಹತ್ ಮಾಧ್ಯಮಸಂಸ್ಥೆಗಳ ಉದ್ಯಮಿಗಳು ಕಪ್ಪುಹಣದ ಮೂಲಕ ಈ ಕೋಟ್ಯಂತರ ಡೀಲನ್ನು ನಡೆಸಲು ಸಿದ್ಧರಿದ್ದಾರೆಂಬುದನ್ನು ಮಾರುವೇಷದ ವರದಿಗಾರರೊಬ್ಬರು ಈ ಕುಟುಕು ಕಾರ್ಯಾಚರಣೆಯಲ್ಲಿ ಬಯಲಿಗೆಳೆದಿದ್ದಾರೆ.

‘ಕೋಬ್ರಾ ಪೋಸ್ಟ್’ ತನ್ನ ಪತ್ರಕರ್ತ ಪುಷ್ಪ್ ಶರ್ಮಾ ಅವರನ್ನು ಅಚಾರ್ಯ ಅಟಲ್ ಎಂಬ ಹೆಸರಿನಲ್ಲಿ ಬಲಪಂಥೀಯ ಸಂಘಟನೆಯೊಂದರ ಪ್ರತಿನಿಧಿಯ ಸೋಗಿನಲ್ಲಿ ಈ ಕಾರ್ಯಾಚರಣೆಯನ್ನು ನಡೆಸಿತ್ತು.

‘ಟೈಮ್ಸ್ ಗ್ರೂಪ್‌’ನ ಮಾಲಕ ಹಾಗೂ ಆಡಳಿತ ನಿರ್ದೇಶಕ ವಿನೀತ್ ಜೈನ್ ಹಾಗೂ ಗ್ರೂಪ್‌ನ ಕಾರ್ಯಕಾರಿ ಅಧ್ಯಕ್ಷ ಸಂಜೀವ್ ಶಾ ಜೊತೆಗೆ ‘ಆಚಾರ್ಯ ಅಟಲ್’ಈ ಪ್ರಸ್ತಾಪಿತ ಡೀಲ್ ಬಗ್ಗೆ ಚರ್ಚಿಸುವುದನ್ನು ಕೂಡಾ ವೀಡಿಯೋದಲ್ಲಿ ತೋರಿಸಲಾಗಿದೆ. ಈ ವಿಡಿಯೋದಲ್ಲಿ ‘ಆಚಾರ್ಯ ಅಟಲ್ ’ ಅವರು ಕೃಷ್ಣ ಹಾಗೂ ಭಗವದ್ಗೀತೆಯ ಕುರಿತ ಕಾರ್ಯಕ್ರಮಗಳು ಹಾಗೂ ಪ್ರಚಾರ ಲೇಖನಗಳನ್ನು ಮುಖವಾಡವಾಗಿ ಬಳಸಿಕೊಂಡು ಹಿಂದುತ್ವವಾದವನ್ನು ಹಾಗೂ ಅದರ ರಾಜಕೀಯ ಕಾರ್ಯಸೂಚಿಯನ್ನು ಪ್ರಚಾರ ಪಡಿಸಲು ಬಳಸಿಕೊಳ್ಳಬೇಕೆಂದು ಹೇಳುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ಇದಕ್ಕಾಗಿ 500 ಕೋಟಿ ರೂ.ಗಳನ್ನು ಪಾವತಿಸುವುದಾಗಿಯೂ ಅವರು ವಿಡಿಯೋದಲ್ಲಿ ವಿನೀತ್ ಜೈನ್ ಅವರಿಗೆ ಅಮಿಷವೊಡ್ಡುವುದನ್ನು ತೋರಿಸಲಾಗಿದೆ.

ಇನ್ನೊಂದು ವಿಡಿಯೋದಲ್ಲಿ ಜೈನ್ ಹಾಗೂ ಶಾ ಅವರು ಈ ಹಣವನ್ನು ಯಾವ ರೀತಿಯಾಗಿ ಪಾವತಿಸಬೇಕೆಂದು ಮಾರುವೇಷದ ಪತ್ರಕರ್ತನಿಗೆ ಮಾರ್ಗದರ್ಶನ ನೀಡುವುದನ್ನು ಕೂಡಾ ತೋರಿಸಲಾಗಿದೆ.

ವೀಡಿಯೋದಲ್ಲಿ ವಿನೀತ್ ಜೈನ್ ಅವರು ‘‘ ಔರ್ ಬಿ ಬ್ಯುಸಿನೆಸ್‌ಮ್ಯಾನ್ ಹೋಂಗೆ ಜೊ ಹಮೆ ಚೆಕ್ ದೇಂಗೆ ಅಪ್ ಉನೆ ಕ್ಯಾಶ್ ದೆ ದೋ ( ಹಣ ಪಡೆದು ನಮಗೆ ಚೆಕ್ ನೀಡುವ ಉದ್ಯಮಿಗಳಿದ್ದಾರೆ. ನೀವು ಅವರಿಗೆ ನಗದನ್ನು ನೀಡಬಹುದಾಗಿದೆ) ಎಂದು ಹೇಳುವುದನ್ನು ವಿಡಿಯೋ ತೋರಿಸಿದೆ.

ಆಪರೇಶನ್ 136 ಎಂಬ ಕುಟುಕು ಕಾರ್ಯಾಚರಣೆ ನಡೆಸಿದ್ದ ‘ಕೋಬ್ರಾಪೋಸ್ಟ್’, ಹೇಗೆ ಭಾರತೀಯ ಮಾಧ್ಯಮಗಳು ಹಣಕ್ಕಾಗಿ ರಾಜಕೀಯ ಪಕ್ಷಗಳ ಜೊತೆ ಕೈಜೋಡಿಸಿ ವಿರೋಧ ಪಕ್ಷಗಳ ನಾಯಕರನ್ನು ಹಣಿಯುವ, ಒಂದು ರಾಜಕೀಯ ಪಕ್ಷದ ಸಿದ್ಧಾಂತವನ್ನು ಹರಡುವ, ಮತಗಳನ್ನು ಧ್ರುವೀಕರಿಸುವ ಮತ್ತು ಕೋಮು ಭಾವನೆಯನ್ನು ಜನರಲ್ಲಿ ಮೂಡಿಸುವ ಕೆಲಸ ಮಾಡುತ್ತಿವೆ ಎಂಬುದನ್ನು ಮಾರ್ಚ್ 26ರಂದು ಬಿಡುಗಡೆ ಮಾಡಿದ ಆಪರೇಶನ್ 136ನ ಮೊದಲ ಕಂತಿನಲ್ಲಿ ಬಹಿರಂಗಪಡಿಸಿತ್ತು. ಮೊದಲ ಕಂತಿನಲ್ಲಿ ‘ಕೋಬ್ರಾಪೋಸ್ಟ್’ ಹದಿನೇಳು ಭಾರತೀಯ ಮಾಧ್ಯಮಗಳ ಸಂಚನ್ನು ಬಯಲುಗೊಳಿಸಿತ್ತು.

ಕೆಲವು ಮಾಧ್ಯಮ ಸಂಸ್ಥೆಗಳು ಬಿಜೆಪಿ ನಾಯಕರು, ಕೇಂದ್ರ ಸಚಿವರು ಮತ್ತು ಆಡಳಿತ ಪಕ್ಷದ ಮಿತ್ರಪಕ್ಷದ ನಾಯಕರ ವಿರುದ್ಧ ಕಟ್ಟುಕತೆ ಸೃಷ್ಟಿಸಲು, ರಾಜಕೀಯ ಷಡ್ಯಂತ್ರವನ್ನು ರೂಪಿಸಲು ಮತ್ತು ಒಳಜಗಳದ ವರದಿಗಳನ್ನು ರಚಿಸಲು ಹಣವನ್ನು ಪಡೆದಿರುವುದಾಗಿಯೂ ‘ಕೋಬ್ರಾಪೋಸ್ಟ್’ ಕಾರ್ಯಾಚರಣೆ ಆರೋಪಿಸಿದೆ.

 ಪೇಟಿಎಂ ಬಳಕೆದಾರರ ಖಾಸಗಿ ಮಾಹಿತಿ ಕೇಳಿದ್ದ ಪ್ರಧಾನಿ ಕಾರ್ಯಾಲಯ

 ಜಮ್ಮುಕಾಶ್ಮೀರದಲ್ಲಿ ಕಲ್ಲೆಸೆತದ ಪ್ರತಿಭಟನೆಗಳು ನಡೆದ ಸಮಯದಲ್ಲಿ ಪ್ರಧಾನಿ ಕಾರ್ಯಾಲಯದ ಕೋರಿಕೆಯಂತೆ ಮೊಬೈಲ್ ಹಣಪಾವತಿ ಕಂಪೆನಿ ಪೇಟಿಎಂ ತನ್ನ ಬಳಕೆದಾರರ ಖಾಸಗಿ ಮಾಹಿತಿಗಳನ್ನು ರಾಜಕೀಯ ಪಕ್ಷವೊಂದಕ್ಕೆ ಒದಗಿಸಿರುವುದನ್ನು ಕೂಡಾ ಕೋಬ್ರಾಪೋಸ್ಟ್ ನಡೆಸಿದ ಕುಟುಕು ಕಾರ್ಯಾಚರಣೆಯೊಂದು ಬಯಲಿಗೆಳೆದಿದೆ.

ಕಳೆದ ವರ್ಷ ಕಾಶ್ಮೀರದಲ್ಲಿ ನಡೆದ ಪ್ರತಿಭಟನೆಗಳ ವೇಳೆ ಕಲ್ಲೆಸೆತವನ್ನು ನಡೆಸಿದವರು ಪೇಟಿಎಂ ಬಳಕೆದಾರರೇ ಎಂಬುದನ್ನು ಪತ್ತೆಹಚ್ಚಲು, ಪೇಟಿಎಂ ಬಳಕೆದಾರರ ಖಾಸಗಿ ಮಾಹಿತಿಗಳನ್ನು ನೀಡುವಂತೆ ಪ್ರಧಾನಿ ಕಾರ್ಯಾಲಯ ತನ್ನನ್ನು ಕೋರಿತ್ತೆಂದು ಪೇಟಿಎಂ ಕಂಪೆನಿಯ ಹಿರಿಯ ಉಪಾಧ್ಯಕ್ಷ ಅಜಯ್ ಶೇಖರ್ ಕುಟುಕು ಕಾರ್ಯಾಚರಣೆಯೊಂದರಲ್ಲಿ ಹೇಳಿದ್ದರೆನ್ನಲಾದ ವೀಡಿಯೋವನ್ನು ಕೋಬ್ರಾ ಪೋಸ್ಟ್ ಪ್ರಸಾರ ಮಾಡಿದೆ.

 ಕರ್ನಾಟಕ ಚುನಾವಣೆಯಲ್ಲಿ ಪ್ರಭಾವ ಬೀರುವ ಕೊಡುಗೆ !

‘ಆಪರೇಶನ್ 136’ ಕುಟುಕು ಕಾರ್ಯಾಚರಣೆಯಲ್ಲಿ ಆಂಧ್ರಜ್ಯೋತಿ ಮಾಧ್ಯಮಸಂಸ್ಥೆಯ ಮಾರ್ಕೆಟಿಂಗ್ ಮ್ಯಾನೇಜರ್ ಶಶಿಧರ್ ಅವರು ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶದ ಮೇಲೆ ಪ್ರಭಾವವನ್ನು ಬೀರುವಂತಹ ಸಾಮರ್ಥ್ಯವನ್ನು ತನ್ನ ಪತ್ರಿಕೆ ಹೊಂದಿರುವುದಾಗಿಯೂ ಹೇಳಿದ್ದರು.

 ಮಾಧ್ಯಮಗಳ ಪಡಸಾಲೆಯಲ್ಲಿ ಆರೆಸ್ಸೆಸ್

ಆರೆಸ್ಸೆಸ್ ಹಾಗೂ ಅದು ಪ್ರತಿಪಾದಿಸುವ ಹಿಂದುತ್ವವಾದವು ಭಾರತೀಯ ಮಾಧ್ಯಮ ಸಂಸ್ಥೆಗಳ ಸುದ್ದಿ ಕೊಠಡಿಗಳಲ್ಲಿ ಹಾಗೂ ಆಡಳಿತಮಂಡಳಿಗಳಲ್ಲಿ ಪ್ರವೇಶಿಸುವಲ್ಲಿ ಸಫಲವಾಗಿರುವುದನ್ನು ಕೂಡಾ ಈ ಕುಟುಕು ಕಾರ್ಯಾಚರಣೆ ಬಹಿರಂಗಪಡಿಸಿದೆಯೆಂದು ಕೋಬ್ರಾಪೋಸ್ಟ್ ಹೇಳಿದೆ.

ಖಾಸಗಿ ರೇಡಿಯೋ ಸಂಸ್ಥೆ ಬಿಗ್‌ಎಫ್‌ಎಂ ಹಾಗೂ ಕೇಂದ್ರದ ಅಧಿಕಾರರೂಢ ಪಕ್ಷದ ನಡುವೆ ‘ಉತ್ತಮ ಬಾಂಧವ್ಯ’ವಿದೆಯೆಂದು ಬಿಗ್‌ಎಫ್‌ಎಂನ ಹಿರಿಯ ಉದ್ಯಮ ಪಾಲುದಾರ ಅಮಿತ್ ಚೌಧುರಿ ಹೇಳಿದ್ದಾರೆ ಎನ್ನಲಾಗಿದೆ.

ಕೃಪೆ: vbnesonline

 

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...