ನವದೆಹಲಿ: ಉರಿ ಧಾಳಿ ಸಾವಿನ ಸಂಖ್ಯೆ 18ಕ್ಕೇರಿಕೆ - ವಿಶ್ವಮಟ್ಟದಲ್ಲಿ ಪಾಕಿಸ್ತಾನವನ್ನು ಒಂಟಿಯಾಗಿಸಲು ಪ್ರಧಾನಿ ಆಗ್ರಹ

Source: ians | By Arshad Koppa | Published on 20th September 2016, 8:36 AM | Global News |

ನವದೆಹಲಿ, ಸೆ ೧೯: ಇತ್ತೀಚಿನ ವರ್ಷಗಳಲ್ಲಿಯೇ ಅತ್ಯಂತ ಭೀಕರವಾದ ಧಾಳಿಯಲ್ಲಿ ಭಾನುವಾರ ಹದಿನೇಳು ಯೋಧರು ಹುತಾತ್ಮರಾಗಿ ಹನ್ನೊಂಭತ್ತು ಯೋಧರು ಗಾಯಗೊಂಡಿದ್ದಾರೆ. ಗಾಯಗೊಂಡ ಯೋಧರಲ್ಲಿ ಓರ್ವರು ಭಾನುವಾರ ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು ಸಾವಿನ ಸಂಖ್ಯೆ 18ಕ್ಕೇರಿದೆ. ಈ ಧಾಳಿಯಲ್ಲಿ ನಾಲ್ವರು ಭಯೋತ್ಪಾದಕರೂ ಹತರಾಗಿದ್ದಾರೆ.

ಹತರಾದ ನಾಲ್ವರೂ ಭಯೋತ್ಪಾದಕರ ಮೃತದೇಹದಲ್ಲಿ ಹಲವಾರು ವಸ್ತುಗಳಿದ್ದು ಇವುಗಳಲ್ಲಿ ಪಾಕಿಸ್ತಾನದ ಗುರುತುಗಳಿವೆ. ಮೇಲ್ನೋಟಕ್ಕೆ ಈ ಭಯೋತ್ಪಾದಕರು  ಜೈಶ್ ಎ ಮೊಹಮ್ಮದ್ ತಂಜೀಮ್ ಸಂಘಟನೆಗೆ ಸೇರಿದವರಾಗಿದ್ದಾರೆ, ಈ ವಿಷಯವನ್ನು ಪಾಕಿಸ್ತಾನಾದ ಉನ್ನತ ಮಿಲಿಟರಿ ಅಧಿಕಾರಿ DGMO ರವರಿಗೆ ತಿಳಿಸಿದ್ದೇನೆ ಎಂದು ಭಾರತದ ಸೇನಾಪಡೆಯ ಲೆ. ಜೆನರಲ್ ಸಿಂಗ್ ರವರು ತಿಳಿಸಿದ್ದಾರೆ. 

ನಿನ್ನೆ ಈ ಧಾಳಿಯ ಬಗ್ಗೆ ತಮ್ಮ ಕಳವಳವನ್ನು ತೋರ್ಪಡಿಸಿರುವ ಪ್ರಧಾನಿ ಮೋದಿಯವರು ಉನ್ನತ ಸಚಿವರ ತುರ್ತು ಸಭೆಯನ್ನು ಕರೆದು ಈ ವಿಷಯದಲ್ಲಿ ಸಮಾಲೋಚಿಸಿದರು. ಗೃಹಮಂತ್ರಿ ರಾಜನಾಥ ಸಿಂಗ್, ರಕ್ಷಣಾ ಸಚಿವ ಮನೋಹರ್ ಪರಿಕ್ಕರ್, ವಾಣಿಜ್ಯ ಸಚಿವ ಅರುಣ್ ಜೈಟ್ಲೀ, ರಾಷ್ಟ್ರೀಯ ಸುರಕ್ಷಾ ಸಲಹಾಕಾರ ಅಜಿತ್ ಡೋವಲ್, ಭೂಸೇನಾ ಜನರಲ್ ದಲಬೀರ್ ಸಿಂಗ್ ಸುಹಾಗ್ ಸಹಿತ ಹಲವು ಪ್ರಮುಖ ಅಧಿಕಾರಿಗಳು ಈ ಸಭೆಯಲ್ಲಿ ಉಪಸ್ಥಿತರಿದ್ದರು. 

ಈ ಸಭೆಯಲ್ಲಿ ಪಾಕಿಸ್ತಾನದಿಂದ ನಡೆದ ಧಾಳಿಯನ್ನು ತೀವ್ರವಾಗಿ ಖಂಡಿಸಿರುವ ಪ್ರಧಾನಿಯವರು ಇದಕ್ಕೆ ಕಾರಣವಾದ ಮೂಲನಗರ ಇಸ್ಲಾಮಾಬಾದ್ ಅನ್ನು ವಿಶ್ವಮಟ್ಟದಲ್ಲಿ ಪ್ರತ್ಯೇಕಗೊಳಿಸುವಂತೆ ಕರೆನೀಡಿದರು. 

ಭಾರತೀಯ ಸುರಕ್ಷಾ ಮತ್ತು ಮಾಹಿತಿ ದಳಕ್ಕೆ ಈ ಬಗ್ಗೆ ಸಾಧ್ಯವಾದ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಯೋತ್ಪಾದನೆಗೆ ಆ ದೇಶ ನೀಡುತ್ತಿರುವ ಸಹಕಾರ ಅಥವಾ ಪ್ರೋತ್ಸಾಹದ ಬಗ್ಗೆ ವಿವರಗಳನ್ನು ತಿಳಿಸುವಂತೆ, ತನ್ಮೂಲಕ ಭಯೋತ್ಪಾದನೆಯ ಹಿಂದಿನ ಉದ್ದೇಶಗಳು ಬಯಲಾಗುವಂತೆ ಆದೇಶಿಸಿದ್ದಾರೆ. 

Read These Next

ಗಾಝಾದ ಅಲ್-ಶಿಫಾ ಆಸ್ಪತ್ರೆಯನ್ನು 'ಸಾವಿನ ವಲಯ'ವೆಂದು ಘೋಷಿಸಿದ ವಿಶ್ವಸಂಸ್ಥೆ ಪ್ರವೇಶದ್ವಾರದಲ್ಲಿ ಸಾಮೂಹಿಕ ಸಮಾಧಿ: ವಿಶ್ವ ಆರೋಗ್ಯ ಸಂಸ್ಥೆ

ಹಮಾಸ್ ನಿಯಂತ್ರಣದ ಗಾಝಾ ಪಟ್ಟಿಯಲ್ಲಿ ಇಸ್ರೇಲ್‌ನ ವೈಮಾನಿಕ ದಾಳಿಯ ಬಳಿಕ ನೆಲೆಸಿರುವ ಭೀಕರ ಪರಿಸ್ಥಿತಿಯನ್ನು ಅವಲೋಕಿಸಲು ಈ ...