ನವದೆಹಲಿ: ಈಗ ಎರಡು ಸಾವಿರ ನಗದನ್ನು ಮನೆಗೇ ತಲುಪಿಸಲಿದೆ ಸ್ನಾಪ್ ಡೀಲ್

Source: so english | By Arshad Koppa | Published on 23rd December 2016, 1:38 PM | National News | Special Report |

ನವದೆಹಲಿ, ಡಿ ೨೨: ಇ - ಕಾಮರ್ಸ್ ಕಂಪನಿ ಸ್ನಾಪ್ಡೀಲ್ ಇಂದು 'ಕ್ಯಾಶ್ ಅಟ್ ಹೋಮ್’  ಎಂಬ ಸೇವೆಯ ಮೂಲಕ ಬಳಕೆದಾರರು ನಗದು 2,000 ರೂಪಾಯಿಗಳನ್ನು ಮನೆಯಲ್ಲಿಯೇ ಪಡೆದುಕೊಳ್ಳುವ ನೂತನ ವಿಧಾನವನ್ನು ಘೋಷಿಸಿತು.

"ನೋಟು ಅಮಾನ್ಯಗೊಂಡ ಬಳಿಕ ಹೊಸ ನೋಟುಗಳ ಲಭ್ಯತೆ ತುಂಬಾ ಕಷ್ಟವಾದುದರಿಂದ ದೈನಂದಿನ ಅಗತ್ಯಗಳಿಗೆ ಹಣ ಹೊಂದಿಸುವುದು ತುಂಬಾ ಕಷ್ಟವಾಗಿದ್ದು ಈ ಕೊರತೆಯನ್ನು ನೀಗಿಸುವಲ್ಲಿ ನೂತನ ವಿಧಾನವನ್ನು ಬಿಡುಗಡೆಗೊಳಿಸಲಾಗಿದೆ" ಎಂದು ಸ್ನಾಪ್ಡೀಲ್ ಸಹ ಸಂಸ್ಥಾಪಕ ರೋಹಿತ್ ಬನ್ಸಾಲ್ ತಿಳಿಸಿದ್ದಾರೆ.

ಸ್ನಾಪ್ಡೀಲ್ ಈ ಸೌಲಭ್ಯ ಕಾರ್ಯನಿರ್ವಹಿಸಲು ಇದು ವಿತರಣೆ (ಕಾಡ್) ಮೇಲೆ ನಗದು ಮೂಲಕ ಪಡೆದುಕೊಳ್ಳುವ ನಗದು ಬಳಸಿ ಮಾಡಲಾಗುತ್ತದೆ.

ಸ್ನಾಪ್ಡೀಲ್ ನ ಈ ಸೇವೆಯನ್ನು ಪಡೆಯಲು ಬುಕಿಂಗ್ ಸಮಯದಲ್ಲಿ ಫ್ರೀಚಾರ್ಜ್ ಮೂಲಕ ಅಥವಾ ಡೆಬಿಟ್ ಕಾರ್ಡ್ ಮೂಲಕ ಪಾವತಿ ಮಾಡಬೇಕಾಗುತ್ತದೆ. ಈ ಸೇವೆಗಾಗಿ ಕೇವಲ ಒಂದು ರೂಪಾಯಿ ಅಧಿಕ ಪಾವತಿಸಬೇಕಾಗುತ್ತದೆ. 

ನಗದು ವಿಲೇವಾರಿ ಮಾಡುವ ಸಮಯದಲ್ಲಿ ಗ್ರಾಹಕರು ತಮ್ಮ ಕಾರ್ಡ್ ಅನ್ನು ಪಿ.ಒ.ಎಸ್. ಅಥವಾ ಪಾಯಿಂಟ್ ಆಫ್ ಸೇಲ್ಸ್ ಉಪಕರಣದಲ್ಲಿ ಸ್ವೈಪ್ ಮಾಡಬೇಕಾಗುತ್ತದೆ. ಟ್ರಾನ್ಸಾಕ್ಷನ್ ಯಶಸ್ವಿಗೊಂಡ ಬಳಿಕ ಕೊರಿಯರ್ ಸಿಬ್ಬಂದಿ ಎರಡು ಸಾವಿರ ನಗದು ಹಣವನ್ನು ಗ್ರಾಹಕರಿಗೆ ನೀಡಲಿದ್ದಾರೆ. 

ಸ್ನಾಪ್ ಡೀಲ್ ನಲ್ಲಿ ಕ್ಯಾಶ್ ಆನ್ ಡೆಲಿವರಿ ಮೂಲಕ ಖರೀದಿಸುವ ಗ್ರಾಹಕರಿಂದ ನಗದು ಹಣವನ್ನು ಪಡೆಯುವುದರಿಂದ ಈ ನಗದನ್ನು ಅಗತ್ಯವುಳ್ಳ ಇತರ ಗ್ರಾಹಕರಿಗೆ ನೀಡಲು ಈ ಕ್ರಮ ಅನುಸರಿಸಲಾಗಿದೆ. 

Read These Next

ರಿಲಯನ್ಸ್ ಜೊತೆ ನಂಟು ಹೊಂದಿರುವ ಕಂಪೆನಿಯಿಂದ ಬಿಜೆಪಿಗೆ 375 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್

ರಿಲಯನ್ಸ್ ಗುಂಪಿನೊಂದಿಗೆ ನಂಟು ಹೊಂದಿರುವ, ಆದರೆ ಹೊರಜಗತ್ತಿಗೆ ಅಪರಿಚಿತವಾಗಿರುವ ಕಂಪೆನಿ ಕ್ವಿಕ್ ಸಪ್ಪೆ ಚೇನ್ ಪ್ರೈವೇಟ್ ...

ಲೋಕಸಭಾ ಚುನಾವಣೆ; ಕಾಂಗ್ರೇಸ್ ನ ಎರಡನೇ ಪಟ್ಟಿ ಬಿಡುಗಡೆ; ಉ.ಕ ಕ್ಷೇತ್ರಕ್ಕೆ ಅಂಜಲಿ ನಿಂಬಾಳ್ಕರ್

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಕರ್ನಾಟಕದ 17, ಅರುಣಾಚಲ ...

ಸಿಎಎ ನಿಯಮಾವಳಿಗಳಿಗೆ ತಡೆ ಕೋರುವ ಅರ್ಜಿಗಳ ವಿಚಾರಣೆ ; ಸು.ಕೋರ್ಟ್‌ನಿಂದ ಕೇಂದ್ರಕ್ಕೆ ನೋಟಿಸ್

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ನಿಯಮಗಳಿಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಮಂಗಳವಾರ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...