ನವದೆಹಲಿ: ಏಪ್ರಿಲ್ 1 ರಿಂದ ನಗದು ನೀಡಿ ಖರೀದಿಸುವ ಚಿನ್ನಕ್ಕೆ ಶೇ 1 ರಷ್ಟು ತೆರಿಗೆ

Source: so english | By Arshad Koppa | Published on 20th February 2017, 8:26 AM | National News |

ನವದೆಹಲಿ: ರೂ 2 ಲಕ್ಷಕ್ಕಿಂತ ಹೆಚ್ಚು ನಗದು ನೀಡಿ ಚಿನ್ನದ ಆಭರಣಗಳನ್ನು ಖರೀದಿಸಿದರೆ ಶೇ 1ರಷ್ಟು ತೆರಿಗೆ ವಸೂಲಿ (ಟಿಸಿಎಸ್ ಅಥವಾ ಮೂಲತೆರಿಗೆ‌)  ಸಂಗ್ರಹಿಸುವ ಮಸೂದೆಯನ್ನು ಪ್ರಕಟಿಸಲಾಗಿದ್ದು ಏಪ್ರಿಲ್‌ 1ರಿಂದ ಜಾರಿಗೆ ಬರಲಿದೆ.

2017ರ ಹಣಕಾಸು ಮಸೂದೆ ಅಂಗೀಕಾರವಾದರೆ ಚಿನ್ನದ ಆಭರಣ ಸಾಮಾನ್ಯ ಸರಕುಗಳ ಪಟ್ಟಿಗೆ ಸೇರುತ್ತದೆ. ಆ ಪ್ರಕಾರ ಈ ಪಟ್ಟಿಯಲ್ಲಿರುವ ವಸ್ತುಗಳನ್ನು 2 ಲಕ್ಷಕ್ಕಿಂತ ಹೆಚ್ಚು ನಗದು ನೀಡಿ ಖರೀದಿಸಿದರೆ ಅದಕ್ಕೆ ಶೇ 1ರಷ್ಟು ತೆರಿಗೆ ನೀಡಬೇಕಾಗುತ್ತದೆ.

ಈವರೆಗೆ 5 ಲಕ್ಷಕ್ಕಿಂತ ಹೆಚ್ಚು ಬೆಲೆಯ ಆಭರಣಗಳನ್ನು ನಗದು ನೀಡಿ ಖರೀದಿಸಿದರೆ ಮಾತ್ರ ಶೇ 1ರಷ್ಟು ತೆರಿಗೆ ನೀಡಬೇಕಿತ್ತು.

ಈಗ 3 ಲಕ್ಷಕ್ಕಿಂತ ಹೆಚ್ಚು ನಗದು ವಹಿವಾಟು ನಡೆಸುವುದು ಶಿಕ್ಷಾರ್ಹ ಅಪರಾಧ. ಹಾಗಾಗಿ ಆಭರಣ ಖರೀದಿಯ ನಿಯಮ ಬದಲಾಯಿಸಲಾಗಿದೆ.

Read These Next

ರಿಲಯನ್ಸ್ ಜೊತೆ ನಂಟು ಹೊಂದಿರುವ ಕಂಪೆನಿಯಿಂದ ಬಿಜೆಪಿಗೆ 375 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್

ರಿಲಯನ್ಸ್ ಗುಂಪಿನೊಂದಿಗೆ ನಂಟು ಹೊಂದಿರುವ, ಆದರೆ ಹೊರಜಗತ್ತಿಗೆ ಅಪರಿಚಿತವಾಗಿರುವ ಕಂಪೆನಿ ಕ್ವಿಕ್ ಸಪ್ಪೆ ಚೇನ್ ಪ್ರೈವೇಟ್ ...

ಲೋಕಸಭಾ ಚುನಾವಣೆ; ಕಾಂಗ್ರೇಸ್ ನ ಎರಡನೇ ಪಟ್ಟಿ ಬಿಡುಗಡೆ; ಉ.ಕ ಕ್ಷೇತ್ರಕ್ಕೆ ಅಂಜಲಿ ನಿಂಬಾಳ್ಕರ್

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಕರ್ನಾಟಕದ 17, ಅರುಣಾಚಲ ...

ಸಿಎಎ ನಿಯಮಾವಳಿಗಳಿಗೆ ತಡೆ ಕೋರುವ ಅರ್ಜಿಗಳ ವಿಚಾರಣೆ ; ಸು.ಕೋರ್ಟ್‌ನಿಂದ ಕೇಂದ್ರಕ್ಕೆ ನೋಟಿಸ್

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ನಿಯಮಗಳಿಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಮಂಗಳವಾರ ...