ನೆಲಮಂಗಲದಲ್ಲಿ ಯುವತಿ ಮೇಲೆ ಗ್ಯಾಂಗ್‍ರೇಪ್: ಕತ್ತು ಸೀಳಿದ ಕಾಮುಕರು

Source: S O News service | By sub editor | Published on 20th July 2016, 11:21 PM | State News | Incidents | Don't Miss |

ನೆಲಮಂಗಲದಲ್ಲಿ ಯುವತಿ ಮೇಲೆ ಗ್ಯಾಂಗ್‍ರೇಪ್: ಕತ್ತು ಸೀಳಿದ ಕಾಮುಕರು
  

ನೆಲಮಂಗಲ: ಮದ್ಯಪಾನದ ಪಾರ್ಟಿ ನಂತರ ಯುವತಿಯನ್ನ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿದಲ್ಲದೇ ಕಟ್ಟಿಂಗ್ ಪ್ಲೇಯರ್‍ನಿಂದ ದೇಹದ ವಿವಿಧ ಭಾಗಗಳಲ್ಲಿ ಕಟ್ ಮಾಡಿ ಕಾಮುಕ ಕಿರಾತಕರು ರಾಕ್ಷಸ ಕೃತ್ಯವೆಸಗಿದ ಘೋರ ಘಟನೆ ನೆಲಮಂಗಲದಲ್ಲಿ ನಡೆದಿದೆ.

ಬೆಂಗಳೂರು ಹೊರವಲಯ ನೆಲಮಂಗಲದ ಹನುಮಂತಪುರ ಬಳಿಯ, ರಾಷ್ಟ್ರೀಯ ಹೆದ್ದಾರಿ ರಸ್ತೆಯ ಪಕ್ಕದಲ್ಲಿ ಸುಮಾರು 19 ವರ್ಷದ ಅಪರಿಚಿತ ಯುವತಿಯ ದೇಹದ ವಿವಿಧ ಭಾಗಗಳು ಪತ್ತೆಯಾಗಿದ್ದು, ಕಟಿಂಗ್ ಪ್ಲೇಯರ್ ಹಾಗೂ ಪ್ಲಾಸ್ಟಿಕ್ ದಾರದಿಂದ ಬರ್ಬರವಾಗಿ ಕೊಲೆ ಮಾಡಲಾಗಿದೆ. ಇದಕ್ಕೂ ಮುನ್ನ ಯುವತಿಯ ಮೇಲೆ ಅತ್ಯಾಚಾರ ನಡೆದಿರುವ ಶಂಕೆ ವ್ಯಕ್ತವಾಗಿದೆ.

ಯುವತಿಯ ಶವ ನೋಡಿದ ಬೆಂಗಳೂರು ತುಮಕೂರು ರಾಷ್ಟ್ರೀಯ ಹೆದ್ದಾರಿ ಟೋಲ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿಯನ್ನ ನೀಡಿದ್ದರು. ನಂತರ ಸ್ಥಳಕ್ಕೆ ಬಂದ ನೆಲಮಂಗಲ ಡಿವೈಎಸ್‍ಪಿ ರಾಜೇಂದ್ರಕುಮಾರ್ ಹಾಗೂ ಡಾಬಸ್‍ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆಯನ್ನ ನಡೆಸಿದ್ದು, ಹೆಚ್ಚಿನ ವಿಚಾರಣೆಗಾಗಿ ಅಪರಿಚಿತ ಯುವತಿಯ ಶವವನ್ನ ತುಮಕೂರು ಜಿಲ್ಲಾಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ.

ಒಟ್ಟಾರೆ ಮೋಜು ಮಸ್ತಿಯ ಗುಂಡು ಪಾರ್ಟಿ ಮಾಡಿದ ಗುಂಪು, ಇಂತಹ ಹೀನ ಕೃತ್ಯಕ್ಕೆ ಮುಂದಾಗಿರುವುದು ಸ್ಥಳೀಯ ಜನರಲ್ಲಿ ಆತಂಕ ಮೂಡಿಸಿದೆ. ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆಬೀಸಿದ್ದಾರೆ.

ಕೃಪೆ:http://publictv.in/?p=97690

Read These Next

ದಿನ ನಿತ್ಯದ ಅಗತ್ಯ ವಸ್ತುಗಳನ್ನು ಜಿಎಸ್ಟಿ ವ್ಯಾಪ್ತಿಗೆ ತರುವಂತೆ ಆಗ್ರಹಿಸಿ ರೈತಸಂಘದಿಂದ ಪ್ರತಿಭಟನೆ

ಕೋಲಾರ: ಜನ ಸಾಮಾನ್ಯರ ದಿನ ನಿತ್ಯದ ಅಗತ್ಯ ವಸ್ತುಗಳಾದ ಡೀಜಲ್, ಪೆಟ್ರೋಲ್, ಗ್ಯಾಸ್‍ನ್ನು ಜಿ.ಎಸ್.ಟಿ ವ್ಯಾಪ್ತಿಗೆ ತರಬೇಕೆಂದು ...