ಹೆದ್ದಾರಿ ಅಗಲೀಕರಣ; ಶಿರಾಲಿಯಲ್ಲಿ ತುರ್ತು ಸಭೆ; ಅಧಿಕಾರಿಗಳ ಗೈರು; ಸಾರ್ವಜನಿಕರಿಂದ ತೀವ್ರ ಆಕ್ರೋಶ

Source: sonews | By Staff Correspondent | Published on 19th September 2018, 6:40 PM | Coastal News | Don't Miss |

ಭಟ್ಕಳ: ತಾಲೂಕಿನ ಶಿರಾಲಿ ಗ್ರಾ.ಪಂ. ವ್ಯಾಪ್ತಿಯ ರಾ.ಹೆ.66 ರ ಅಗಲೀಕರಣ ವಿಷಯಕ್ಕೆ ಸಂಬಂಧಿಸಿದಂತೆ ಸೋಮವಾರದಂದು ನಡೆದ ತುರ್ತು ಸಭೆಗೆ ಸಹಾಯಕ ಆಯುಕ್ತರು ಹಾಗೂ ತಹಸಿಲ್ದಾರರ ಗೈರಾಗಿದ್ದನ್ನು ಗಂಭೀರವಾಗಿ ತೆಗೆದುಕೊಂಡಿರುವ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು. 

ಸಭೆಯ ಆರಂಭದಲ್ಲಿ ಶಿರಾಲಿಯ ಸಾರ್ವಜನಿಕರು ಸಭೆಗೆ ಸಹಾಯಕ ಆಯುಕ್ತರ ಹಾಗೂ ತಹಸೀಲ್ದಾರ ಬಾರದೇ ಇರುವ ಬಗ್ಗೆ ಉಪಸ್ಥಿತರಿದ್ದ ಶಿರಾಲಿ ಪಂಚಾಯತ ಅಧ್ಯಕ್ಷ ವೆಂಕಟೇಶ ನಾಯ್ಕ ಬಳಿ ಪ್ರಶ್ನಿಸಿದ್ದು, ಜಿಲ್ಲಾಧಿಕಾರಿಗಳ ಸೂಚನೆಯಂತೆ ಚುನಾವಣೆ ನಿಮಿತ್ತ ಕಾರವಾರಕ್ಕೆ ತೆರಳಿದ್ದಾರೆಂದು ತಿಳಿಸಿದರು. 

ನಂತರ ಸಭೆಗೆ ಅಧಿಕಾರಿಗಳ ವರ್ಗ ಹೆದ್ದಾರಿ ಅಗಲೀಕರಣದ ವಿಚಾರದಲ್ಲಿ ನುಣುಚಿಕೊಳ್ಳಲು ಪ್ರಯತ್ನಿಸುತ್ತಿರುವ ಹಾಗೇ ಕಂಡು ಬರುತ್ತಿದೆ. ಅಧಿಕಾರಿಗಳಾಗಲಿ ಅಥವಾ ಹೆದ್ದಾರಿ ಪ್ರಾಧಿಕಾರವಾಗಲಿ ಅಗಲೀಕರಣದ ವಿಚಾರದಲ್ಲಿ ಜನರಿಗೆ ಸ್ವಷ್ಟ ನಿಲುವು ಇಲ್ಲದೇ ಕಾರ್ಯ ಮಾಡುತ್ತಿದ್ದಾರೆ. ಜನಪ್ರತಿನಿಧಿಗಳಿಗೆ ಸಭೆಯ ಬಗ್ಗೆ ಪತ್ರ ತಿಳಿಸಿದ್ದರು ಸಹ ಸಭೆಗೆ ಹಾಜರಾಗದ ಹಿನ್ನೆಲೆ ಮುಂಬರಲಿರುವ ಲೋಕಸಭಾ ಚುನಾವಣೆ ಬಹಿಷ್ಕರಿಸಲಾಗುವುದು ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ಮುಂದಿನ ದಿನದಲ್ಲಿ ಪಟ್ಟಣ ಪಂಚಾಯತ ಆಗಿ ಮೇಲ್ದರ್ಜೇಗೆರಲಿರುವ ಶಿರಾಲಿಯ ಅಭಿವೃದ್ಧಿಗೆ ಪೆಟ್ಟು ಬೀಳುವಂತೆ ಮಾಡಿದ್ದಾರೆ ಎಂದು ಮಾಜಿ ಗ್ರಾ.ಪಂ. ಸದಸ್ಯ ರಾಮಚಂದ್ರ ನಾಯ್ಕ ಆಗ್ರಹಿಸಿದರು.  

ಈ ಬಗ್ಗೆ ಶಿರಾಲಿ ಪಂ.ಅಧ್ಯಕ್ಷ ವೆಂಕಟೇಶ ನಾಯ್ಕ ಮಾತನಾಡಿದ್ದು 'ನ್ಯಾಯಯುತವಾಗಿ ಶಾಂತಿಪ್ರಿಯ ಶಿರಾಲಿಗರು ಹೆದ್ದಾರಿಯ ಕೆಲಸಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಈ ಮೂಲಕ ಜನರು 45ಮೀ. ಅಗಲೀಕರಣಕ್ಕೆ ಸಹಮತವನ್ನು ನೀಡಲಿದ್ದು ಒಂದು ವೇಳೆ 30 ಮೀ. ಅಗಲೀಕರಣ ಮಾಡಲು ಮುಂದಾಗಿದ್ದಲ್ಲಿ ಉಗ್ರ ಹೋರಾಟಕ್ಕೆ ಅಣಿಯಾಗಬೇಕಗುತ್ತದೆ. ಮುಂದಿನ ಒಂದು ತಿಂಗಳ ಅವಧಿಯಲ್ಲಿ 30ಮೀ. ರಸ್ತೆ ಅಗಲೀಕರಣ ವಿಚಾರ ಕೈಬಿಡದಿದ್ದರೆ ಶಿರಾಲಿ ಪಂಚಾಯತ ಜನಪ್ರತಿನಿಧಿಗಳು ಸಾಮೂಹಿಕವಾಗಿ ರಾಜೀನಾಮೆ ನೀಡಿ ರಸ್ತೆಗಿಳಿದು ಪ್ರತಿಭಟನೆ ನಡೆಸಲಿದ್ದೇವೆ. ಸಾಕಷ್ಟು ಬಾರಿ ಜಿಲ್ಲಾಧಿಕಾರಿಗಳ ಬಳಿ ತೆರಳಿ ಮನವಿ ಸಲ್ಲಿಸಿದ್ದರು ಜನರ ಬೇಡಿಕೆಗೆ ಅಧಿಕಾರಿಗಳ ವರ್ಗ ಸ್ಪಂದಿಸುತ್ತಿಲ್ಲವಾಗಿದೆ ಎಂದು ಹೇಳಿದರು.

ನಂತರ ಸಾರ್ವಜನಿಕರು ಸಭೆಯಲ್ಲಿ ಉಪಸ್ಥಿತರಿದ್ದ ಹೆದ್ದಾರಿ ಪ್ರಾಧಿಕಾರ ಅಧಿಕಾರಿ ನವೀನಕುಮಾರ ಅವರನ್ನು 30ಮೀ. ರಸ್ತೆ ಅಗಲೀಕರಣಕ್ಕೆ ಮುಂದಾಗಿರುವುದಕ್ಕೆ ತರಾಟೆಗೆ ತೆಗೆದುಕೊಂಡರು. ಹಾಗೂ ಅಗಲೀಕರಣದ ರೂಪುರೇಷೆಯ ಬಗ್ಗೆ ವಿವರಿಸುವಂತೆ ತಿಳಿಸಿದರು. 
30 ಮೀ.ರಸ್ತೆ ಅಗಲೀಕರಣದಲ್ಲಿ 7.5ಮೀ. ಹೆದ್ದಾರಿಗೆ, 3.5ಮೀ ಶಿರಾಲಿ ಹಾಗೂ ಸ್ಥಳಿಯ ವಾಹನಗಳ ಓಡಾಟಕ್ಕೆ, 1.5ಮೀ.ಪಾದಚಾರಿಗಳ ಓಡಾಟಕ್ಕೆ ಪುಟಪಾತ ನಿರ್ಮಾಣ, ಇನ್ನುಳಿದ 2.5ಮೀ. ಚರಂಡ ನಿರ್ಮಾಣವಾಗಲಿರುವ ಬಗ್ಗೆ ಹೆದ್ದಾರಿ ಪ್ರಾಧಿಕಾರ ಅಧಿಕಾರಿ ನವೀನಕುಮಾರ ಸಾರ್ವಜನಿಕರಿಗೆ ವಿವರಿಸಿದರು. ಇಲ್ಲಿನ ಸ್ಥಳಿಯ ಆಟೋರಿಕ್ಷಾ, ಟೆಂಪೋಗಳ ನಿಲುಗಡೆ ಎಲ್ಲಿ ಮಾಡಬೇಕೆಂಬ ಬಗ್ಗೆ ಪ್ರಶ್ನಿಸಿದ್ದು ಈ ಹಿಂದೆ 45ಮೀ. ರಸ್ತೆ ಅಗಲೀಕರಣದ ಸರ್ವೇ ಕಾರ್ಯ ಮಾಡಿ ಏಕಾಏಕಿ ಸ್ಥಳಿಯರಿಗಾಗಲಿ ಅಥವಾ ಸಾರ್ವಜನಿಕರಿಗಾಗಲಿ ಮಾಹಿತಿ ತಿಳಿಸದೇ 30ಮೀ.ಗೆ ಕಾಮಗಾರಿ ನಡೆಸಲು ಮುಂದಾಗಿದ್ದರ ಬಗ್ಗೆ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗೆ ಪ್ರಶ್ನಿಸಿದರು. ಈಗ ರಾಜ್ಯ ಸರಕಾರ ಜಾಗ ನೀಡಲು ಹಿಂದೆ ಸರಿದ ಹಿನ್ನೆಲೆ 30 ಮೀ.ಗೆ ಇಳಿಸಿದ್ದೇವೆ ಈ ಬಗ್ಗೆ ರಾಜ್ಯ ಸರಕಾರವನ್ನು ಕೇಳಿ ಎಂಬ ಉಢಾಫೆಯ ಉತ್ತರವನ್ನು ಅಧಿಕಾರಿ ನೀಡಿದರು.

ಈ ಮಧ್ಯೆ ಸಬೆಯಲ್ಲಿ ಭಾರಿ ಕೋಲಾಹಲವೇ ಸೃಷ್ಠಿಯಾಗಿದ್ದು, ಸಾರ್ವಜನಿಕ ನಾಗೇಶ ಫಕ್ಕಿ ಎಂಬುವವರು ಶಿರಾಲಿಯಲ್ಲಿ ಹೆದ್ದಾರಿ ವಿಚಾರದಲ್ಲಿ ಸಮಸ್ಯೆ ಉಂಟಾಗಲು ಇಲ್ಲಿನ ಅಧಿಕಾರಿಗಳ ವರ್ಗ, ಇಲಾಖೆ ಸರಕಾರಕ್ಕೆ ಸರಿಯಾದ ಮಾಹಿತಿ ನೀಡದೇ ಇರುವುದು ಇಷ್ಟೇಲ್ಲ ಸಮಸ್ಯೆಗೆ ಕಾರಣವಾಗಿದೆ. ಈಗಾಗಲೇ ಇಲ್ಲಿನ ವಾಣಿಜ್ಯ ಮಳಿಗೆದಾರರಿಗೆ ಪರಿಹಾರದ ಮೊತ್ತ ಸಿಕ್ಕಿದ್ದರು ತೆರವಾಗದ ಜಾಗದಲ್ಲೇ ಮತ್ತೆ ಕಟ್ಟಡ ನಿರ್ಮಾಣಕ್ಕೆ ಕೈಹಾಕಿರುವ ಬಗ್ಗೆ ಪ್ರಶ್ನಿಸಿದ್ದು ಅವೆಲ್ಲವನ್ನು ನೆಲಸಮ ಮಾಡಲಿಕ್ಕೆ ಆಗ್ರಹಿಸಿದರು.

ಸಭೆಯ ಅಂತ್ಯದಲ್ಲಿ ಇಲ್ಲಿನ 9 ಮಂದಿ ಪಟ್ಟಬದ್ಧಹಿತಾಸಕ್ತಿಗರು 30 ಮೀ. ರಸ್ತೆ ಅಗಲೀಕರಣಕ್ಕೆ ಬೇಡಿಕೆ ಇಟ್ಟಿರುವದು ಮುಖ್ಯವೋ ಅಥವಾ ಇಲ್ಲಿನ ಸಾರ್ವಜನಿಕರ ಬೇಡಿಕೆ ಪ್ರಮುಖವೋ ಎಂಬ ಬಗ್ಗೆ ಅಧಿಕಾರಿಗಳು ಆಲೋಚಿಸಬೇಕೆಂದು ಆಗ್ರಹಿಸಿದರು. ಈಗಾಗಲೇ ಹೆದ್ದಾರಿ ಪ್ರಾಧಿಕಾರದಿಂದ ಕೇಂದ್ರ ಸರಕಾರಕ್ಕೆ 30 ಮೀ.ರಸ್ತೆ ಅಗಲೀಕರಣದ ಬದಲು 45ಮೀ. ಮಾಡಿ ಎಂದು ಮನವಿಪತ್ರವನ್ನು ಸಲ್ಲಿಸಿದ್ದು ಈ ಬಗ್ಗೆ ಸರಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲವಾಗಿದೆ. ನಡೆದ ಸಭೆಯ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಮೇಲಾಧಿಕಾರಿಗಳ ಗಮನಕ್ಕೆ ತರುವಂತಹ ಕಾರ್ಯ ಮಾಡಲಿದ್ದೇವೆಂದು ಎಂದು ಸಭೆಗೆ ತಿಳಿಸಿದರು. ಸಭೆಯ ಬಳಿಕ ಹೆದಾರಿ ಪ್ರಾಧಿಕಾರದ ಅಧಿಕಾರಿಗಳು,ಪಂಚಾಯತ್ ಅಧ್ಯಕ್ಷರನ್ನೊಳಗೊಂಡಂತೆ ಸಾರ್ವಜನಿಕರು ರಸ್ತೆ ಅಗಲೀಕರಣದ ವೀಕ್ಷಣೆಗೆ ತೆರಳಿದರು. 

ಈ ಸಂಧರ್ಭದಲ್ಲಿ ಮಾವಳ್ಳಿ ಸೂಸಗಡಿ ಉಪತಹಸೀಲ್ದಾರ ಮೈತ್ರಿ, ಮಲ್ಲಿಕಾರ್ಜುನ ಐಆರ್‍ಬಿ ಅಧಿಕಾರಿ ಸೇರಿದಂತೆ ಶಿರಾಲಿ ಸಾರ್ವಜನಿಕರು ಇದ್ದರು.
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ ಪ್ರಶ್ನೆ

ಬಾಳೆಹೊನ್ನೂರು: ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಮಲೆನಾಡಿನ ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ...