ನಕ್ಸಲ್‌ ಕೂಂಬಿಂಗ್‌ ವೇಳೆ ಕುಸಿದು ಪೇದೆ ಸಾವು

Source: so news | Published on 17th June 2018, 12:15 PM | Coastal News | Don't Miss |

ಸುಳ್ಯ,: ಸುಳ್ಯ ತಾಲೂಕಿನ ಹಾಡಿಕಲ್ಲಿನ ಮನೆಯೊಂದಕ್ಕೆ ಶಂಕಿತ ನಕ್ಸಲರು ಭೇಟಿ ನೀಡಿದ್ದ ಹಿನ್ನೆಲೆಯಲ್ಲಿ ಕೂಂಬಿಂಗ್ ಕಾರ್ಯಾಚರಣೆಗೆ ತೆರಳಿದ್ದ ಎಎನ್‌ಎಫ್ ಪಡೆಯ ಯೋಧ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದ ರಂಗಸ್ವಾಮಿ (40) ಕಾಡಿನಲ್ಲಿ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟ ಘಟನೆ ಶನಿವಾರ ನಡೆದಿದೆ.

ದ.ಕ., ಕೊಡಗು ಗಡಿಭಾಗದ ಕಡಮ ಕಲ್ಲು ರಕ್ಷಿತಾರಣ್ಯದ ಕಿಲಾರ್ ಮಲೆ ಮೀಸಲು ಅರಣ್ಯದಲ್ಲಿ ಮಡಪ್ಪಾಡಿ ಗ್ರಾಮದ ಹಾಡಿಕಲ್ಲು ಮನೆಯೊಂದಕ್ಕೆ ಗುರುವಾರ ರಾತ್ರಿ ಶಂಕಿತ ನಕ್ಸಲರು ಭೇಟಿ ನೀಡಿದ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಎಎನ್‌ಎಫ್ ಹಾಗೂ ಎಎನ್‌ಎಸ್ ಪಡೆ ಒಟ್ಟು ನಾಲ್ಕು ತಂಡ ಜಂಟಿಯಾಗಿ ಕೂಂಬಿಂಗ್ ಕಾರ್ಯಚರಣೆ ಆರಂಭಿಸಿತ್ತು. ಕಾರ್ಕಳ ಮತ್ತು ಭಾಗಮಂಡಲ ಘಟಕಗಳ ನಕ್ಸಲ್ ನಿಗ್ರಹ ಪಡೆ ಮತ್ತು ಎಎನ್‌ಎಸ್ ಸಿಬ್ಬಂದಿಗಳ ಒಟ್ಟು ನಾಲ್ಕು ತಂಡ ಶನಿವಾರ ಬೆಳಗ್ಗಿನಿಂದ ಕೂಂಬಿಂಗ್ ಕಾರ್ಯಚರಣೆಗೆ ಇಳಿದಿದ್ದು, ಇದರಲ್ಲಿ ಒಟ್ಟು 70 ಮಂದಿ ಯೋಧರು ಇದ್ದರು. ಅದರ ಒಂದು ತಂಡದಲ್ಲಿ ಇದ್ದ ರಂಗಸ್ವಾಮಿ (40) ಮೃತಪಟ್ಟವರು.

ನಕ್ಸಲರು ಭೇಟಿ ಇತ್ತ ಸ್ಥಳದಿಂದ ಅರಣ್ಯ ಪ್ರದೇಶ ಕೋಟೆಗುಡ್ಡೆಗೆ ಸುಮಾರು 6 ಕಿಮೀ ಇದ್ದು, ಇಲ್ಲಿ ಎಎನ್‌ಎಫ್‌ನ ಒಂದು ತಂಡ ಕೂಂಬಿಂಗ್ ನಡೆಸುತ್ತಿರುವ ವೇಳೆ ತಂಡದ ಮುಖ್ಯ ಪೇದೆ ರಂಗಸ್ವಾಮಿ ಸುಮಾರು 4 ಗಂಟೆಯ ವೇಳೆ ಹೃದಯಾಘಾತದಿಂದ ಅಸ್ವಸ್ಥಗೊಂಡು ಕುಸಿದು ಬಿದ್ದರು. ಬಳಿಕ ಪ್ರಥಮ ಚಿಕಿತ್ಸೆಯನ್ನು ಯೋಧರೇ ನಡೆಸಿದರು. ಆ ಹೊತ್ತಿಗೆ ಅವರು ಕೊನೆಯುಸಿರೆಳೆದ್ದಿದ್ದರೆಂದು ತಿಳಿದು ಬಂದಿದೆ.

ಬಳಿಕ ನಕ್ಸಲ್ ನಿಗ್ರಹದಳದ ಕಮಾಡೆಂಟ್‌ಗೆ ತಿಳಿಸಿ, ಮೃತ ಯೋಧನನ್ನು ಕೋಟೆಗುಡ್ಡೆಯ ಮಾಯಿಲ ಕೋಟೆ ಎಂಬ ಸ್ಥಳದಿಂದ ಯೋಧರು ಇಲ್ಲಿನ ಪುಟ್ಟಣ್ಣ ಗೌಡ ಅವರ ಮನೆ ಇದ್ದ ಸ್ಥಳಕ್ಕೆ ಸುಮಾರು 2 ಕಿ.ಮೀ ದೂರ ಹೊತ್ತುಕೊಂಡೇ ದಟ್ಟ ಕಾಡಿನ ಮಧ್ಯೆ ಧಾವಿಸಿದರು. ಅಲ್ಲಿಂದ 5 ಕಿ ಮೀ ಇಳಿಜಾರಿನಲ್ಲಿ ವಾಹನದಲ್ಲಿ ಸಾಗಿಸಿ, ಬಳಿಕ ಮಡಪ್ಪಾಡಿಯಿಂದ ಸುಳ್ಯ ಕೆವಿಜಿ ಆಸ್ಪತ್ರೆಗೆ ಕರೆ ತರಲಾಯಿತು. ಸುಳ್ಯ ಕೇಂದ್ರ ಸ್ಥಾನದಿಂದ ಮಡಪ್ಪಾಡಿಗೆ 35 ಕಿಮೀ ಇದ್ದು, ಶಂಕಿತ ನಕ್ಸಲ್ ಬಂದ ಹಾಡಿಕಲ್ಲಿಗೆ 6ಕಿಮೀ ಇದೆ.

ದ.ಕ., ಕೊಡಗು ಗಡಿಭಾಗದ ಕಿಲಾರ್‌ಮಲೆ ಮೀಸಲು ಅರಣ್ಯದ ಮಡಪ್ಪಾಡಿ ಗ್ರಾಮದ ಹಾಡಿಕಲ್ಲು ಜಯರಾಮ ಎಚ್.ಬಿ ಅವರಿಗೆ ಸೇರಿದ ತೋಟದ ಮನೆಯ ಶೆಡ್‌ನಲ್ಲಿ ಶುಕ್ರವಾರ ಶಂಕಿತ ನಕ್ಸಲರು ಕಂಡು ಬಂದಿದ್ದರು. ಬಳಿಕ ಕೂಂಬಿಂಗ್ ಕಾರ್ಯಾಚರಣೆ ತೀವ್ರಗೊಳಿಸಲಾಗಿತ್ತು. ಮಡಿಕೇರಿ-ದ.ಕ ಗಡಿಭಾಗದ ಅರಣ್ಯ ಪ್ರದೇಶವಾದ ಕಡಮಕಲ್ಲು, ಸಂಪಾಜೆ, ಹಾಡಿಕಲ್ಲು ಮತ್ತು ಕೋಟೆಗುಡ್ಡೆಗೆ 4 ತಂಡ ಕೂಂಬಿಂಗ್ ಕಾರ್ಯಾಚರಣೆಗೆ ಇಳಿದಿದ್ದು, ಕೋಟೆಗುಡ್ಡೆ ಕಡೆಗೆ ಹೋದ ತಂಡದಲ್ಲಿ ಯೋಧ ರಂಗಸ್ವಾಮಿ ಇದ್ದರು.

ಕಾರ್ಯಾಚರಣೆಯ ಸ್ಥಳದಟ್ಟ ಅರಣ್ಯ ಪ್ರದೇಶವಾಗಿದ್ದು, ಇಲ್ಲಿ ಅತೀ ದೊಡ್ಡ ಜಿಗಣೆ ಇದ್ದು, ಕಾರ್ಯಾಚರಣೆ ವೇಳೆ ಇದರ ಕಾಟ ಸಾಕಷ್ಟು ಇದ್ದು ಅದು ಕಾರ್ಯಾಚರಣೆಗೆ ಹಾಗೂ ಶವ ಸಾಗಿಸಲು ಅಡ್ಡಿ ಆಗಿತ್ತು. ಘಟನೆ ಸುದ್ದಿ ತಿಳಿದು ನೂರಾರು ಮಂದಿ ಮಡಪ್ಪಾಡಿ ಗ್ರಾಮದಲ್ಲಿ ಸೇರಿದ್ದರು.ಎಎನ್‌ಎಫ್ ಯೋಧ ರಂಗಸ್ವಾಮಿ ಭದ್ರಾವತಿ ಮೂಲದವರಾಗಿದ್ದು, ಕಾರ್ಕಳದಲ್ಲಿ ನಕ್ಸಲ್ ನಿಗ್ರಹದಳದಲ್ಲಿ ಯೋಧರಾಗಿ ಸೇವೆ ಸಲ್ಲಿಸುತ್ತಿದ್ದರು.

ಬೆಂಗಳೂರಿನಲ್ಲಿ ಸ್ವಂತ ಮನೆ ಇದ್ದು ಕುಟುಂಬ ಸಮೇತ ನೆಲೆಸಿದ್ದರು. ಯೋಧರಿಗೆ ಇಬ್ಬರು ಪುತ್ರಿಯರಿದ್ದು, ಓರ್ವ ಪುತ್ರಿ ಕಳೆದ ವರ್ಷ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇವರು ಓರ್ವ ಪುತ್ರಿ, ಪತ್ನಿಯನ್ನು ಅಗಲಿದ್ದಾರೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ ಪ್ರಶ್ನೆ

ಬಾಳೆಹೊನ್ನೂರು: ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಮಲೆನಾಡಿನ ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ...