ಮುಸ್ಲಿಮ್ ನಿಷೇಧ ಮತ್ತು ಇಸ್ಲಾಂ ಭೀತಿ

Source: S O News service | By Staff Correspondent | Published on 14th March 2017, 5:28 PM | Special Report | Islam | Don't Miss |

@ ಖಾಲಿದ್ ಎಂ. ಬೆಯ್ದೂನ್

ಮುಸ್ಲಿಮರ ಅಮೆರಿಕ ಪ್ರವೇಶಕ್ಕೆ ತಡೆಯೊಡ್ಡಿ ಮಾರ್ಚ್ 6 ರಂದು ಡೊನಾಲ್ಡ್ ಟ್ರಂಪ್ ಘೋಷಣೆ ಹೊರಡಿಸಿದ್ದಾರೆ. ಮುಸ್ಲಿಮ್ ನಿಷೇಧದ ಕುರಿತು ಇದು ಟ್ರಂಪ್‍ರ ಎರಡನೆ ಘೋಷಣೆ. ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳ ಪಟ್ಟಿಯಿಂದ ಇರಾಕನ್ನು ಕೈಬಿಟ್ಟು ವೀಸಾ ಗ್ರೀನ್ ಕಾರ್ಡ್ ಇರುವವರನ್ನು ನಿಯಂತ್ರಿತ ರಾಷ್ಟ್ರಗಳ ಪಟ್ಟಿಯಿಂದ ದೂರ ನಿಲ್ಲಿಸಲಾಗಿದೆ. ಜೊತೆಗೆ ಅಮೆರಿಕನ್ ಸಂವಿಧಾನ ಪರವಾದ ಸವಾಲುಗಳು ಮತ್ತು ಎಲ್ಲ ಚಲನೆಗಳನ್ನು ತಡೆಯುವ ಕ್ರಮಗಳನ್ನು ಈ ಬಾರಿ ಅಳವಡಿಸಿಕೊಳ್ಳಲಾಗಿದೆ.
ಮಾರ್ಚ್ 5 ರಂದು ವಾಷಿಂಗ್ಟನ್‍ನಲ್ಲಿರುವ ತನ್ನ ಮನೆ ಮುಂದೆ ಒಬ್ಬ ಸಿಕ್ಖ್ ವ್ಯಕ್ತಿಗೆ ಗುಂಡೇಟು ಬಿತ್ತು. ದೀಪ್ ರಾಯ್ ಎಂದು ಅವರ ಹೆಸರು. ಗುಂಡುಹಾರಿಸಿದ ವ್ಯಕ್ತಿ ನೀನು ನಿನ್ನ ಸ್ವಂತ ದೇಶಕ್ಕೆ ಹೋಗು ಎಂದು ಘರ್ಜಿಸಿ ದ್ದಾನೆ. ಅದರ ನಂತರ ಭಾರತದ ಇನ್ನೊಬ್ಬ ವ್ಯಕ್ತಿಯನ್ನು ಕನ್ಸಾಸ್ ನಗರದಲ್ಲಿ ಗುಂಡಿಟ್ಟು ಕೊಲೆ ಮಾಡಲಾಗಿದೆ. ಅವನೊಡನೆ ಕೂಡಾ ಗುಂಡು ಹಾರಿಸುವ ಮೊದಲು ದೇಶ ತೊರೆದು ಹೋಗಲು ಹೇಳಲಾಗಿತ್ತು. ಫೆಬ್ರವರಿ 24ಕ್ಕೆ ಅವರು ಗುಂಡೇಟು ತಿಂದು ಮೃತರಾದರು.
ಟ್ರಂಪ್‍ರು ಆರಂಭದಲ್ಲಿ ಮುಸ್ಲಿಂ ನಿಷೇಧ ಘೋಷಿಸಿದ ಒಂದು ತಿಂಗಳ ಬಳಿಕ ಶ್ರೀನಿವಾಸ್ ಕುಚ್ಚಿಬೊಟ್ಟಲ ಕೊಲೆಯಾಗಿದ್ದರು. ಟ್ರಂಪ್‍ರ ಘೋಷಣೆ ಒಂದಷ್ಟು ಪ್ರತಿಭಟನೆಗಳಿಗೂ ಕಾನೂ ನಾತ್ಮಕ ಸವಾಲುಗಳಿಗೂ ದಾರಿ ಮಾಡಿಕೊಟ್ಟಿದೆ. ಟ್ರಂಪ್‍ರ ಕ್ರಮಕ್ಕೆ ಭಾರೀ ವಿರೋಧ ಅಗಿತ್ತು. ನಂತರ ಸೋಮವಾರ ಪುನಃ ಟ್ರಂಪ್ ಮುಸ್ಲಿಂ ವಿಷಯದಲ್ಲಿ ಬದಲಾವಣೆಗಳನ್ನು ತಂದು ಹೊಸ ನಿಷೇಧವನ್ನು ಘೋಷಿಸಿದ್ದಾರೆ.
ಒಂದೇ ನೋಟದಲ್ಲಿ ಮುಸ್ಲಿಮರ ವಿರುದ್ಧದ ದ್ವೇಷದ ಮುಂದುವರಿಕೆಯಾಗಿ ರಾಯ್ ಮತ್ತು ಕುಚ್ಚಿಬೋಟ್ಟರಿಗೆ ಗುಂಡುಹಾರಿಸಲಾಗಿದೆ ಮತ್ತು ಈ ಘಟನೆಗಳಿಗೂ ಮುಸ್ಲಿಂ ದ್ವೇಷಕ್ಕೂ ಸಂಬಂಧ ಇಲ್ಲ ಎಂದು ಅಥವಾ ಬಹುದೊಡ್ಡ ಪ್ರಮಾಣದಲ್ಲಿ ಸಂಬಂಧ ಇದೆ ಎಂದು ಹೇಳಬ ಹುದಾದ ಘಟನೆಗಳಿವು.
ಮುಸ್ಲಿಂ ನಿಷೇಧ ಒಂದು ದೇಶದ ನೀತಿ ಯೆಂದಾದರೆ ರಾಯ್‍ರಂತಹವರು ದಾಳಿಗೊಳ ಗಾಗಿದ್ದು ಕೆಲವು ಖಾಸಗಿ ವ್ಯಕ್ತಿಗಳ ತಲೆಕೆಟ್ಟ ಮನೋ ಭಾವದ ಚಟುವಟಿಕೆಗಳಿಂದಾಗಿದೆ. ಇಸ್ಲಾಮ್ ಮತ್ತು ವಲಸೆ ವಿರೋಧಿ ಭಯವು ಸೇರಿ ರಾಜಕಾರಣಿಗಳ ಹೇಳಿಕೆಗಳು ಜನರಲ್ಲಿ ಕೋಪವನ್ನು ಹುಟ್ಟು ಹಾಕು ತ್ತಿದೆ. ಅದೇ ವೇಳೆ ಸರಕಾರದ ನೀತಿ ನಿಲುವುಗಳು ಮತ್ತು ಹುಚ್ಚು ವಿಶ್ಲೇಷಣೆಗಳನ್ನು ಒಪ್ಪುವುದೆಂದಾದರೆ ಮುಸ್ಲಿಮರ ಮೇಲೂ, ಮುಸ್ಲಿಮರೆಂದು ಭಾವಿಸುವ ಸಾಧ್ಯತೆ ಇರುವವರ ಮೇಲೂ ಅಕ್ರಮಗಳಾಗುವ ಸಾಧ್ಯತೆ ಹೆಚ್ಚಿದೆ.
ಈ ವೈರುದ್ಧ್ಯ ಸ್ಥಿತಿಗಳಿಂದ ಸರಕಾರ ಮುಸ್ಲಿ ಮರ ಅಸ್ತಿತ್ವವನ್ನು ಕ್ರಿಮಿನಲೀಕರಣ ಗೊಳಿಸಿ ಕಾನೂನಿನ ಅಡಿಗೆ ಮತ್ತು ಸಂದೇಹದ ಮೊನೆ ಯಲ್ಲಿ ಇಟ್ಟಿದೆ. ಜೊತೆಗೆ ತಮ್ಮ ಪ್ರಜೆಗಳನ್ನು ತಮ್ಮ ದೇಶದಿಂದ ಹೊರಗೆ ಹೋಗಬೇಕಾದ ವ್ಯಕ್ತಿಗಳನ್ನು ಅಥವಾ ಭಯೋತ್ಪಾದಕರನ್ನು ಗುರು ತಿಸಿ ಶಿಕ್ಷಿಸಲು ಸರಕಾರ ಕರೆ ಕೊಟ್ಟಂತಾಗುತ್ತದೆ.
ಸರಕಾರ ಮತ್ತು ಜನರು ಜತೆಗೂಡಿ ಮುಸ್ಲಿಮರ ವಿರುದ್ಧ ಹೊರಿಸುವ ಅಪರಾಧಿ ಪ್ರಜ್ಞೆ ಅಥವಾ ಮನೋಭಾವ ಇಸ್ಲಾಮ್ ಭೀತಿಯನ್ನು ಹರಡುತ್ತಿದೆ. ಮುಸ್ಲಿಂ ನಿಷೇಧ ಮತ್ತು ಭಯೋತ್ಪಾದ ವಿರೋಧಿ ನೀತಿ ಇವುಗಳ ಮೂಲಕ ಮುಸ್ಲಿಮರನ್ನು ಭಯೋತ್ಪಾದಕರಂತೆ ಕಂಡು ಜೊತೆಗೆ ಮುಸ್ಲಿಮರ ವಿರುದ್ಧ ಪ್ರಜೆಗಳ ಮೂಲಕ ದ್ವೇಷ ಸಾಧಿಸಿ ದಾಳಿಗೆ ಪ್ರೇರೇಪಿಸುವ ಕೆಲಸ ಅಮೆರಿಕದಲ್ಲಿ ಆಗುತ್ತಿದೆ.
ಅದ್ದರಿಂದ ಮುಸ್ಲಿಂ ನಿಷೇಧ ದಂತಹ ಇಸ್ಲಾಮೋಫೋಬಿಯ ನೀತಿಗಳು ದೇಶದ ಭದ್ರತಾ ನೀತಿಯನ್ನು, ವಲಸೆಯನ್ನು ಮಾತ್ರವಲ್ಲ ಬಾಧಿಸು ವುದು. ಅದರ ಕಾನೂನಾತ್ಮಕ ಪ್ರತಿಫಲನವು ದುರಂತದ ಒಂದು ಪಾಶ್ರ್ವ ಕೂಡಾ ಆಗಿದೆ. ಮುಸ್ಲಿಮರ ಅಸ್ತಿತ್ವವವೇ ಭಯೋತ್ಪಾದನೆಯಾಗಿದೆ ಮತ್ತು ಬೆದರಿಕೆಯಾಗಿದೆ ಎನ್ನುವಂತಹ ನೀತಿ ನಿಯಮ ಕಾರ್ಯಕ್ರಮಗಳು ನಾಶಕರ ಮಾದರಿ ಯನ್ನೇ ಹುಟ್ಟು ಹಾಕುತ್ತದೆ. ಅದೇ ರೀತಿ ಮುಸ್ಲಿಮರನ್ನು ಮಾತ್ರವಲ್ಲ. ಮುಸ್ಲಿಮರೆಂದು ಭಾವಿಸುವ ಸಮುದಾಯಗಳನ್ನು ಬೆದರಿಸುವ ಜನರನ್ನು ಸರಕಾರ ಬೆಂಬಲಿಸುತ್ತದೆ.
ಟ್ರಂಪ್‍ರ ಕಾಲದಲ್ಲಿ ಇದು ಈಗ ಮುಖ್ಯವಾಗಿ ನಡೆಯುತ್ತಿದೆ. ಅವರ ರಾಜಕೀಯ ಆಟಾಟೋಪ ಗಳೂ, ಮುಸ್ಲಿಮ್ ವಿರೋಧಿ ಆಕ್ರಮಣಗಳು ಹೆಚ್ಚಲು ಕಾರಣವಾಗಿವೆ. ಜನರು ನಡೆಸುವ ಮುಸ್ಲಿಮ್ ಭೀತಿ ಮುಸ್ಲಿಮರನ್ನು ಮಾತ್ರ ಕಾಡುತ್ತಿಲ್ಲ. ಬದಲಾಗಿ ಸಿಕ್ಖರು, ಅರಬ್ ಮಧ್ಯ ಪ್ರಾಚ್ಯದ ಕ್ರೈಸ್ತರು, ದಕ್ಷಿಣ ಏಷ್ಯದ ಹಿಂದೂಗಳು, ಪೂರ್ವ ಆಫ್ರಿಕದ ಮುಸ್ಲಿಮೇತರರು ಮುಂತಾದ ಸಮುದಾಯಗಳೆಲ್ಲವೂ ಇಸ್ಲಾಮೋ ಫೋಬಿಯ ಅಥವಾ ಇಸ್ಲಾಮ್ ಭೀತಿಯ ಬಲಿಪಶು ಗಳಾಗಿದ್ದಾರೆ.
ಆದ್ದರಿಂದ ಮುಸ್ಲಿಮರ ವಿರುದ್ಧ ಕೈಗೊಂಡ ನೀತಿ ಮುಸ್ಲಿಮರನ್ನು ಮಾತ್ರವಲ್ಲ ಇತರ ದೇಶ ಗಳಿಂದ ಬರುವ ಮುಸ್ಲಿಮ್ ಅಲ್ಲದವರನ್ನೂ ಕಾಡುತ್ತಿದೆ. ಅಮೆರಿಕಕ್ಕೆ ಲಿಬಿಯ, ಇರಾನ್ ಸೋಮಾಲಿಯ, ಸುಡಾನ್, ಸಿರಿಯ, ಯಮನ್ ಮುಂತಾದ ರಾಷ್ಟ್ರಗಳಿಂದ ಬಂದ ವಲಸೆಗಾರರನ್ನು ಮಾತ್ರ ಕಾಡುವುದಲ್ಲ. ಬದಲಾಗಿ ಬಹಳಷ್ಟು ಸಮುದಾಯಗಳಿಗೆ ಅಮೆರಿಕದಲ್ಲಿ ಅದು ವಿಪತ್ಕಾರಿಯಾಗಿದೆ.
ಮಸೀದಿ ದಾಳಿ, ಮಫ್ತಾ ಧರಿಸುವ ಮುಸ್ಲಿಂ ಮಹಿಳೆಯರ ಮೇಲೆ ದಾಳಿ, ಮುಸ್ಲಿಮ್ ವಿರೋಧಿ ವ್ಯವಹಾರಗಳು ರಾಯ್‍ಗೆ ಗುಂಡೇಟು, ಕುಚ್ಚಿ ಬೋಟ್ಟ ಕೊಲೆ ಮುಂತಾದ ಪ್ರಕರಣಗಳಿಗೆ ಅಮೆರಿಕದ ಸರಕಾರವವೇ ಪ್ರಚೋದನೆಯನ್ನು ನೀಡಿದೆ. ಮುಸ್ಲಿಮ್ ದ್ವೇಷವು ವಿಮಾನ ನಿಲ್ದಾಣ ಗಳಲ್ಲಿ ಮಾತ್ರ ಬೆದರಿಕೆ ಸೃಷ್ಟಿಸಲು ಸೀಮಿತವಾಗಿಲ್ಲ ಬದಲಾಗಿ ಕೊಲೆ, ಹಗೆತನಗಳಿಗೆ ಕಾರಣವಾಗುತ್ತಿದೆ. ಟ್ರಂಪ್ ಇದಕ್ಕೆ ಕಾರಣರಾಗುತ್ತಿದ್ದಾರೆ.

ಕೃಪೆ:ಸನ್ಮಾರ್ಗ

Read These Next

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಭಟ್ಕಳ: ಕುರಾನ್ ಕಂಠಪಾಠ ಮಾಡಿದ ಮರ್ಕಝಿ ಖಲಿಫಾ ಜಮಾಅತುಲ್ ಮುಸ್ಲಿಮೀನ್ ಚೀಫ್ ಖಾಝಿ

ಭಟ್ಕಳ: ಇಲ್ಲಿನ ಖಲಿಫಾ ಮರ್ಕಝಿ ಜಮಾಅತುಲ್ ಮುಸ್ಲಿಮೀನ್ ನ ಚೀಫ್ ಖಾಜಿ ಹಾಗೂ ಜಾಮಿಯಾ ಇಸ್ಲಾಮಿ ಶಿಕ್ಷಣ ಸಂಸ್ಥೆಯ ಪ್ರಾಧ್ಯಾಪಕ ಮೌಲಾನ ...

ಜಿಲ್ಲಾಮಟ್ಟದ ಸೀರತ್ ಪ್ರಬಂಧ ಸ್ಪರ್ಧೆ ಫಲಿತಾಂಶ; ಹೊನ್ನಾವರದ ಜಿ.ಎಸ್.ಹೆಗಡೆ ಪ್ರಥಮ

ಭಟ್ಕಳ: ‘ಪ್ರವಾದಿ ಮುಹಮ್ಮದ್(ಸ) ಎಲ್ಲರಿಗಾಗಿ’ ಸೀರತ್ ಅಭಿಯಾನದ ಅಂಗವಾಗಿ ‘ಪ್ರವಾದಿ ಮುಹಮ್ಮದ್(ಸ) ಮತ್ತು ಸಮಾನತೆ’ ಎಂಬ ವಿಷಯದಲ್ಲಿ ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...