ಡಿ.16 ರಂದು ಮುರುಢೇಶ್ವರ ಲಯನ್ಸ್ ಕ್ಲಬ್ ದಶಮಾನೋತ್ಸವ ಸಮಾರಂಭ

Source: sonews | By Staff Correspondent | Published on 15th December 2018, 7:51 PM | Coastal News |

ಭಟ್ಕಳ: ಮುರ್ಡೇಶ್ವರ ಲಯನ್ಸ್ ಕ್ಲಬ್ ದಶಮಾನೋತ್ಸವ ಆಚರಣೆ ಹಾಗೂ ಜಿಲ್ಲಾ ಗವರ್ನರ್ ಲಯನ್ ಮೋನಿಕಾ ಪಿ. ಸಾವಂತ್ ಅವರ ಭೇಟಿ ಕಾರ್ಯಕ್ರಮ ಡಿ.16ರಂದು ನಡೆಯಲಿದೆ.  

ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 10.30ಕ್ಕೆ ಕಣ್ಣಿನ ಪೊರೆ ಪರೀಕ್ಷೆ, ಕ್ಯಾಟರ್ಯಾಕ್ಟ್ ಅಪರೇಶನ್ ಬೇಂಗ್ರೆಯ ಸರಕಾರಿ ಪ್ರೌಢ ಶಾಲೆಯಲ್ಲಿ ನಡೆಯಲಿದೆ. ಲಯನ್ ಜಿಲ್ಲಾ ಗವರ್ನರ್ ಮೋನಿಕಾ ಪಿ. ಸಾವಂತ್ ಅವರು ಕಾರ್ಯಕ್ರಮ ಉದ್ಘಾಟಿಸುವರು. 11.30ಕ್ಕೆ ಭಟ್ಕಳ ನಗರದ ಸ್ನೇಹ ವಿಷೇಶ ಮಕ್ಕಳ ಶಾಲೆಗೆ ಭೇಟಿ ನೀಡಿ ಹಸಿವು ನಿವಾರಣಾ ಕಾರ್ಯಕ್ರಮದಡಿಯಲ್ಲಿ ಸಹಾಯ ಹಸ್ತ ನೀಡುವರು.  ಸಂಜೆ 5 ಗಂಟೆಗೆ ಮುರ್ಡೇಶ್ವರ ಲಯನ್ಸ್ ಕ್ಲಬ್‍ನ ನೂತನ ಕಚೇರಿಯಲ್ಲಿ ಮುರ್ಡೇಶ್ವರ ಮುಖ್ಯ ರಸ್ತೆಯಲ್ಲಿರುವ ಪಾಮ್ ಗ್ರೋವ್ ಹೋಟೇಲ್ ಕಾಂಪ್ಲೆಕ್ಸ್‍ನಲ್ಲಿ ಉದ್ಘಾಟಿಸುವರು. 

ಸಂಜೆ 5.15ಕ್ಕೆ ಲಯನ್ಸ್ ಮೀಟಿಂಗ್ ನಂತರ 6 ಗಂಟೆಗೆ ಅಂತರ್ ಜಿಲ್ಲಾ ಟ್ವಿನ್ನಿಂಗ್ ಕಾರ್ಯಕ್ರಮವು ಬೈಂದೂರು-ಉಪ್ಪುಂದ ಕ್ಲಬ್ ನೊಂದಿಗೆ ನಡೆಯುವುದು. ಸಂಜೆ 7 ಗಂಟೆಗೆ ದಶಮಾನೋತ್ಸವದ ಮುಖ್ಯ ಕಾರ್ಯಕ್ರಮ ಉದ್ಘಾಟನೆಗೊಳ್ಳುವುದು.  ಕಾರ್ಯಕ್ರಮದಲ್ಲಿ ಸೈಂಟ್ ಮಿಲಾಗ್ರೀಸ್ ಕ್ರೆಡಿಟ್ ಸೌಹಾರ್ಧ ಸಹಕಾರಿಯ ಸಂಸ್ಥಾಪಕ ಜಾರ್ಜ ಎಸ್. ಫೆರ್ನಾಂಡೀಸ್ ಅವರಿಗೆ ವಿಶೇಷ ಸನ್ಮಾನ ಹಮ್ಮಿಕೊಳ್ಳಲಾಗಿದೆ. 

ದಶಮಾನೋತ್ಸ್‍ವ ಸಂಭ್ರಮದ ಅಂಗವಾಗಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ರಾಧಾಕೃಷ್ಣ ಭಟ್ಟ, ಮಿಸ್ ಮಂಗಳೂರು ರನ್ನ್‍ರ್ಸ್‍ಅಪ್ ಕುಮಾರಿ ವಸುಧಾ ತಿಲಕ ರಾವ್ ಇವರುಗಳನ್ನು ಸನ್ಮಾನಿಸಲಾಗುವುದು ಎಂದೂ ಅಧ್ಯಕ್ಷ ನಾಗರಾಜ ಭಟ್ಟ, ಕಾರ್ಯದರ್ಶಿ ನಾಗೇಶ ಮಡಿವಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Read These Next