ಮುರುಢೇಶ್ವರ ಲಯನ್ಸ್ ಕ್ಲಬ್ ನಿಂದ ಸಮಾಜಮುಖಿ ಕಾರ್ಯಕ್ರಮ

Source: S O News service | By Staff Correspondent | Published on 26th March 2017, 10:47 PM | Coastal News | Don't Miss |

ಭಟ್ಕಳ: ಲಯನ್ಸ್ ಕ್ಲಬ್ ಮುರ್ಡೇಶ್ವರದಿಂದ ಸಮಾಜಮುಖಿ ಕಾರ್ಯಕ್ರಮಗಳು ಶ್ಲಾಘನೀಯ ಎಂದು ಲಯನ್ಸ್ ಕ್ಲಬ್‌ನ ಜಿಲ್ಲಾ ಗವರ‍್ನರ್ ಲಯನ್ ವೀರಣ್ಣ ಹಿರೇಗೌಡರ್ ಹೇಳಿದರು.  
ಅವರು ಲಯನ್ಸ್ ಕ್ಲಬ್ ಮುರ್ಡೇಶ್ವರಕ್ಕೆ ಸಂದರ್ಶನ ನೀಡಿ ಕ್ಲಬ್‌ನ ಇಡೀ ವರ್ಷದ ೫೦ಕ್ಕೂ ಹೆಚ್ಚಿನ ಕಾರ್ಯ ಚಟುವಟಿಕೆಗಳನ್ನು ಪರಿಶೀಲಿಸಿ ಪ್ರಸಂಶೆಯನ್ನು ವ್ಯಕ್ತಪಡಿಸಿದರು. 
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ತಾಲೂಕಿನ ಉತ್ತಮ ಪ್ರೌಢಶಾಲೆಯಾದ ಸರಕಾರಿ ಪ್ರೌಢಶಾಲೆ ತೆರ‍್ನಮಕ್ಕಿಗೆ "ವಾಜಂತ್ರಿ ಪ್ರಶಸ್ತಿ", ಉತ್ತಮ ಪ್ರೌಢಶಾಲಾ ಶಿಕ್ಷಕರಾದ ನ್ಯೂ ಇಂಗ್ಲೀಷ ಶಾಲೆಯ ಎಮ್.ಎಚ್.ನಾಯ್ಕರವರಿಗೆ "ಉಡುಪ ಪ್ರಶಸ್ತಿ"ಯನ್ನು ಪ್ರದಾನ ಮಾಡಲಾಯಿತು. ಮೋಸ್ಟ ಪೊಪ್ಯುಲರ್ ಸ್ಪೀಕರ್ ಪ್ರಶಸ್ತಿ ವಿಜೇತ ಪ್ರಶಾಂತ ನಾಯ್ಕ ಅವರುಗಳನ್ನು  ಸನ್ಮಾನವನ್ನು ಮಾಡಲಾಯಿತು. ಇದೇ ಸಂದರ್ಭದಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬಂಗಾರಮಕ್ಕಿ ಹಾಗೂ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಸುಳೇಬೀಳು ಶಾಲೆಗಳಿಗೆ ಗೋದ್ರೇಜ್ ಕಪಾಟುಗಳನ್ನು ಕ್ಲಬ್ ವತಿಯಿಂದ ದೇಣಿಗೆಯಾಗಿ ನೀಡಲಾಯಿತು. 
ಕಾರ್ಯಕ್ರಮದಲ್ಲಿ   ಹೊನ್ನಾವರದ ಶಿವಾನಿ ಬುಕ್ ಸ್ಟಾಲ್‌ನ ಲಯನ್ ಕೃಷ್ಣಮೂರ್ತಿ ಭಟ್ ಅವರಿಂದ  ಸಭಾತಿ, ಬಿದ್ರಮನೆ, ಹರಿಕಾಂತಕೇರಿ ಅಂಗನವಾಡಿ ಕೇಂದ್ರಗಳಿಗೆ ತಲಾ ೪೦೦೦ರೂಪಾಯಿ ಮೌಲ್ಯದ ಕಲಿಕಾ ಪರಿಕರಗಳನ್ನು ದೇಣಿಗೆಯಾಗಿ ನೀಡಲಾಯಿತು. 
ಲಯನ್ಸ್ ಕ್ಲಬ್‌ನ ಜಿಲ್ಲಾ ಗವರ‍್ನರ್  ಲಯನ್ ವೀರಣ್ಣ ಹಿರೇಗೌಡರ್ ಅವರ ಧರ್ಮಪತ್ನಿ, ಲಯನ್ಸ್ ಕ್ಲಬ್ ಮುರ್ಡೇಶ್ವರದ ಅಧ್ಯಕ್ಷರಾದ ಡಾ.ವಾಧಿರಾಜ ಭಟ್ಟ, ಅವರ ಧರ್ಮಪತ್ನಿ ಡಾ.ವಿಜಯಶ್ರೀ ಭಟ್ಟ, ಕಾರ್ಯದರ್ಶಿ ಸುರೇಶ ನಾಯ್ಕ, ಖಜಾಂಚಿ ಮೋಹನ ನಾಯ್ಕ ವೇದಿಕೆಯಲ್ಲಿದ್ದರು. 
ಡಾ.ವಾಧಿರಾಜ ಭಟ್ಟ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಲಯನ್ ಸದಸ್ಯರಾದ ಫಿಲಿಫ್ ಅಲ್ಮೇಡಾ ವಂದಿಸಿದರು. ಲಯನ್ ಸದಸ್ಯ ನಾಗೇಶ ಮಡಿವಾಳ ಹಾಗೂ ಕೃಷ್ಣ ಹೆಗಡೆ ನಿರೂಪಿಸಿದರು.

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...