ಮುರುಡೇಶ್ವರ:“ಯುವ - ಸ್ಪಂದನ ಕಾರ್ಯಕ್ರಮ”

Source: sharthshchanrda kamath | By Arshad Koppa | Published on 15th July 2017, 8:18 PM | Coastal News | Guest Editorial |

ಮುರುಡೇಶ್ವರ ಗ್ರಾಮೀಣ ಶಿಕ್ಷಣ ಪ್ರತಿಷ್ಠಾನ (ರಿ.), ಮುರ್ಡೇಶ್ವರದ ವತಿಯಿಂದ, ಯುವಜನ ಸಬಲೀಕರಣ ಹಾಗೂ  ಕ್ರೀಡಾ ಇಲಾಖೆ, ಉತ್ತರ ಕನ್ನಡ, ಕಾರವಾರರವರ ಸಹಯೋಗದಲ್ಲಿ, “ಯುವ-ಸ್ಪಂದನ” ಕಾರ್ಯಕ್ರಮವನ್ನು, ಮುರುಡೇಶ್ವರ ಗ್ರಾಮೀಣ ಶಿಕ್ಷಣ ಪ್ರತಿಷ್ಠಾನ (ರಿ.) ದ “ವಿಸ್ಮಿತಾ” ಸಭಾಭವನದಲ್ಲಿ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ, ಮುರ್ಡೇಶ್ವರ ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಲಯನ್. ಮಂಜುನಾಥ ನಾಯ್ಕ ರವರು ಉದ್ಘಾಟಕರಾಗಿ ಆಗಮಿಸಿದ್ದರು. ಸಂಸ್ಥೆಯ ಯೋಜನಾ ನಿರ್ದೇಶಕಿಯರಾದ ಶ್ರೀಮತಿ ಆಶಾ ಕಾಮತ್‍ರವರು ಹಾಗೂ ಸಂಸ್ಥೆಯ ಇನ್ನೋರ್ವ ನಿರ್ದೇಶಕಿಯರಾದ ಚಂದ್ರಕಲಾ ಕಾಮತ್ ರವರ ವೇದಿಕೆಯಲ್ಲಿದ್ದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುರುಡೇಶ್ವರ ಗ್ರಾಮೀಣ ಶಿಕ್ಷಣ ಪ್ರತಿಷ್ಠಾನ (ರಿ.) ದ ಅಧ್ಯಕ್ಷರಾದ ಶ್ರೀ ಎಸ್. ಎಸ್. ಕಾಮತ್ ರವರು ವಹಿಸಿದ್ದರು. ಸಂಸ್ಥೆಯ ವಿದ್ಯಾರ್ಥಿನಿ ಶ್ರೀಮತಿ ವೀಣಾ ರವರ ಪ್ರಾರ್ಥನೆಯೊಂದಿಗೆ ಆರಂಭವಾದ ಈ ಕಾರ್ಯಕ್ರಮದಲ್ಲಿ, ಸಂಸ್ಥೆಯ ಅಧ್ಯಕ್ಷರಾದ ಶ್ರೀ ಎಸ್.ಎಸ್.ಕಾಮತ್ ರವರು, ತಮ್ಮ ಪ್ರಾಸ್ಥ್ತಾವಿಕ ನುಡಿಗಳಲ್ಲಿ “ಯುವ-ಸ್ಪಂದನ” ಕಾರ್ಯಕ್ರಮದ ಕುರಿತಾಗಿ, ಸಂಪೂರ್ಣ ವಿವರಗಳನ್ನು ನೀಡಿ, ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ, ಶಿಬಿರಾರ್ಥಿಗಳಿಗೆ ಕರೆ ನೀಡುವುದರ ಮೂಲಕ ಎಲ್ಲರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದರು. ನಂತರ ಉದ್ಘಾಟಕರೊಂದಿಗೆ, ಸಭಾ ಗಣ್ಯರೆಲ್ಲರೂ ಸೇರಿ, ಕಾರ್ಯಕ್ರಮವನ್ನು ಉದ್ಘಾಟಿಸಿದರು.  ಉದ್ಘಾಟನೆಯ ನಂತರ “ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ” ಯ ವತಿಯಿಂದ ಕು. ನಮಿತಾ ಎಂ. ಬಾಂದೇಕರ್ , ಯುವ ಸಮಾಲೋಚಕಿ ಹಾಗೂ ಕು. ಸೋನಿಯಾ ಆರ್. ಘೋಡ್ಕೆರವರು, ಆರೋಗ್ಯ, ಜೀವನಶೈಲಿ, ಭಾವನೆಗಳನ್ನು ನಿಭಾಯಿಸುವುದು, ಕುಟುಂಬ, ಸಮಾಜ ಹಾಗೂ ಸ್ನೇಹಿತರೊಂದಿಗಿನ ಸಂಬಂಧ, ಮಾರ್ಗದರ್ಶನ, ನೆರೆ-ಹೊರೆಯವರೊಡನೆ ಸಂಬಂಧ ಈ ಎಲ್ಲಾ ವಿಷಯಗಳ ಮೇಲೆ ಕೆಲವು ಮಾದರಿ ಆಟಗಳೊಂದಿಗೆ, ವಿದ್ಯಾರ್ಥಿಗಳಿಗೆ ತಿಳಿಯಪಡಿಸಿ, ಯುವ-ಸ್ಪಂದನ ಕೇಂದ್ರದ ಸಂಪೂರ್ಣ ವಿವರಗಳನ್ನು ವಿದ್ಯಾರ್ಥಿಗಳಿಗೆ ನೀಡಿದರು. ಬಹು ಸಂಖೆಯಲ್ಲಿ ವಿದ್ಯಾರ್ಥಿಗಳು ಈ ಕಾರ್ಯಕ್ರಮಕ್ಕೆ ಆಗಮಿಸಿ, ಸಲಹೆ-ಸೂಚನೆಗಳನ್ನು ಪಡೆದುಕೊಂಡು, ಈ ಬಗ್ಗೆ ತಮ್ಮ ಹರ್ಷವನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಕೆಲವು ವಿದ್ಯಾರ್ಥಿಗಳು, ಈ ಕಾರ್ಯಕ್ರಮದ ಕುರಿತಾಗಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ, ಕೇಂದ್ರದ ಸಂಪನ್ಮೂಲ ವ್ಯಕ್ತಿಗಳಿಗೆ ಅಭಿನಂದನೆ ಸಲ್ಲಿಸಿದರು. 

ಈ ಕಾರ್ಯಕ್ರಮವನ್ನು ಸಂಸ್ತೆಯ ಪ್ರಾಚಾರ್ಯೆ ಲತಾ ನಾಯ್ಕ ನಿರೂಪಿಸಿದರು. ಸಂಸ್ಥೆಯ ಶಿಕ್ಷಕಿ ಗುಲಾಬಿ ದೇವಾಡಿಗ ವಂದಿಸಿದರು. 
 

Read These Next

ಭಟ್ಕಳದಲ್ಲಿ ಭಾವೈಕ್ಯತೆ ಮತ್ತು ಧರ್ಮ ಸಮನ್ವಯತೆ ಸಾರುವ ಚೆನ್ನಪಟ್ಟಣ ಶ್ರೀಹನುಮಂತ ದೇವರ ರಥೋತ್ಸವ ಸಂಪನ್ನ

ಭಟ್ಕಳ: ತಾಲೂಕಿನ ಐತಿಹಾಸಿಕ ಚೆನ್ನಪಟ್ಟಣ ಶ್ರೀ ಹನುಮಂತ ದೇವರ ಭಾವೈಕ್ಯದ ಬ್ರಹ್ಮರಥೋತ್ಸವ ಬುಧವಾರ ಸಂಜೆ ಅತ್ಯಂತ ಸಡಗರ ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...