ಬಹಿರ್ದೆಸೆಗೆ ತೆರಳಿದ ವ್ಯಕ್ತಿ ಅನುಮಾನಾಸ್ಪದ ಸಾವು

Source: S.O. News Service | By Manju Naik | Published on 4th December 2017, 9:49 PM | Coastal News | Don't Miss |

ಭಟ್ಕಳ: ತಾಲೂಕಿನ ಬೈಲೂರಿನ ಸಮುದ್ರ ತೀರಕ್ಕೆ ಬಹಿರ್ದೆಸೆಗೆ ತೆರಳಿದ್ದ ವ್ಯಕ್ತಿಯೋರ್ವ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಬಗ್ಗೆ ಭಾನುವಾರದಂದು ಬೆಳಿಗ್ಗೆ ವರದಿಯಾಗಿದೆ.  
ಬೈಲುರಿನ ಸಾಮ್ರಾಜ್ಯ ಲಕ್ಷ್ಮೀನಾರಾಯಣ ದೇವಾಡಿಗ ಯಾನೆ ಭಂಡಾರಿ(32) ಎನ್ನುವ ವ್ಯಕ್ತಿ ಸಾವನ್ನಪ್ಪಿದ್ದು, ಶನಿವಾರದಂದು ರಾತ್ರಿ 7 ಗಂಟೆಗೆ ಸುಮಾರಿಗೆ ಬಹಿರ್ದೆಸೆಗೆ ತನ್ನ ಮನೆಯಿಂದ ತೆರಳಿದ್ದ ಎನ್ನಲಾಗಿದೆ. ಮೃತ ವ್ಯಕ್ತಿಯ ಮುಖದಲ್ಲಿ ಗಾಯವಾಗಿದ್ದು ನೀರಿನಲ್ಲಿ ಮುಗುಚಿ ಬಿದ್ದ ಪರಿಣಾಮ ಮುಖದ ತುಂಬೆಲ್ಲ ರೇತಿ ಇರುವುದು ಕಂಡು ಬಂದಿದ್ದು ಕೆಲವು ಅನುಮಾನಕ್ಕೆ ಕಾರಣ ಎನ್ನಲಾಗಿದೆ. ಈ ಬಗ್ಗೆ ಮುರ್ಡೇಶ್ವರ ಪೋಲೀಸ್ ಠಾಣೆಯಲ್ಲಿ ಬೈಲುರು ಗ್ರಾಮ ಪಂಚಾಯತ್ ಸದಸ್ಯ ಕೃಷ್ಣ ಮಂಜುನಾಥ ದೇವಾಡಿಗ ದೂರು ನೀಡಿದ್ದು, ದೂರು ದಾಖಲಿಸಿಕೊಂಡ ಅಪರಾಧ ವಿಭಾಗದ ಪಿಎಸೈ ಭೀಮ್‍ಸಿಂಗ್ ಲಮಾಣಿ ತನಿಖೆ ಮುಂದುವರೆಸಿದ್ದಾರೆ. ಮೃತ ವ್ಯಕ್ತಿಯ ಶವವನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತ ವ್ಯಕ್ತಿಯ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.   
     

 

Read These Next

ರಸ್ತೆ ಅಪಘಾತ : ಬೈಕ್ ಸವಾರ ಸಾವು

ಮುಂಡಗೋಡ : ಬೈಕ್ ಗೆ ಕಾರ ಹಾಗೂ ವೆಗೆನಾರ ವಾಹನ ಅಪಘಾತ ಪಡಿಸಿದ್ದರಿಂದ ಬೈಕ್ ಸವಾರ ಮೃತಪಟ್ಟ ಘಟನೆ ತಾಲೂಕಿನ ಕಾತೂರ ಗ್ರಾಮದ ಫಾರೆಸ್ಟ ...

ಅಣಬೆ ಬೇಸಾಯದ ಕುರಿತು ತೋಟಗಾರಿಕೆ ಇಲಾಖೆ ಯಿಂದ ಸ್ತ್ರೀ ಶಕ್ತಿ ಹಾಗೂ ಸ್ವಸಹಾಯ ಮಹಿಳಾ ಸಂಘಗಳಿಗೆ ಮಾಹಿತಿ 

ಮುಂಡಗೋಡ : ಪೌಷ್ಟಿಕಾಂಶದ ಪಡೆದು ಸದೃಡರಾಗಿ  ಹಾಗೂ ಅರ್ಥಿಕವಾಗಿ ಬಲಗೊಳ್ಳಲು ಅಣಬೆ ಬೇಸಾಯಕ್ಕೆ ಒತ್ತು ನೀಡುವಂತೆ ತೋಟಗಾರಿಕಾ ...